Posts

Showing posts from July, 2026

*ನೀನೊಲೆದೆಮ್ಮ ಕೃಪಾವಲೋಕನದಿ ಪಾವನ ಮಾಡುವ ಶ್ರೀಗುರುವರೇಣ್ಯ - ಬಾ ಮನ್ಮನಕೆ*

Image
 *ನೀನೊಲೆದೆಮ್ಮ ಕೃಪಾವಲೋಕನದಿ ಪಾವನ ಮಾಡುವ ಶ್ರೀಗುರುವರೇಣ್ಯ - ಬಾ ಮನ್ಮನಕೆ* ಕೃಪಾಪೂರ್ಣ ನೋಟದಿಂದಲೇ ನಮ್ಮನ್ನು ಪಾವನಗೊಳಿಸುವ ಹೇ ಗುರುವರೇಣ್ಯ ಬಾ ನಮ್ಮ ಮನೆಗೆ ಹಾಗೂ ಮನಕ್ಕೆ.  *ಮನೆಗೆ ಬರಲೇಬೇಕು - ಮನಸ್ಸಿಗೆ ಬಾರದೇ ಇರಬಾರದು* ಅನಾದಿ ಸತ್ಸಂಪ್ರದಾಯ ಪರಂಪರಾಪ್ರಾಪ್ತ ಮಧ್ವಸಿದ್ಧಾಂತದ ತತ್ವನ್ನಸುಧೆಎಂಬ ಶಾಸ್ತ್ರಾರ್ಥಗಳನ್ನು ಪಾಠಹೇಳಿ, ಸಂಸಿದ್ಧಸಪ್ತಕೋಟಿ ಮಂತ್ರಗಳ ಸಿದ್ಧಿಯನ್ನು ಪಡೆದ ಶ್ರೀಮದಾಚಾರ್ಯರ ಉದ್ಧರಿಸಿದ ಅನೂಚಾನ ಪರಂಪರೆಯಿಂದ ಬಂದ ಅನೇಕ ಮಂತ್ರಗಳನ್ನು ಉಪದೇಶಿಸಿ ಕರುಣೆ ಮಾಡಿದ ಹೇ ಗುರುವರೇಣ್ಯ !! ಮನೆಗೆ ಬರಲೇಬೇಕು ಸತ್ಯ. ಮನೆಗೆ ಬಾರದಿದ್ದರೂ ಮನಸ್ಸಿನಲ್ಲಿ ತಪ್ಪದೇ ನಿತ್ಯವೂ ಬರಬೇಕು.  ಮನೆಗೆ ಕರೆಯುವದು ನನ್ನ ಶಕ್ತಿ ಸಾಮರ್ಥ್ಯಗಳನ್ನು ಅವಲಂಬಿಸಿದೆ, ಮನಸ್ಸಿಗೆ ಬರುವದು ಕೇವಲ ನಿಮ್ಮ ಕೃಪೆಯನ್ನೇ ಅವಲಂಬಿಸಿದೆ. ಮನೆಗೆ ಬಂದು ಮನಸ್ಸಿಗೆ ಬಾರದಿದ್ದರೆ ಮಹಾ ಹಾನಿ ಅನರ್ಥವೂ, ಮನಸ್ಸಿಗೆ ಬಂದಮೇಲೆ ಮನೆಗೆ ಬಾರದಿದ್ದರೂ ಹಾನಿಯಂತೂ ಇಲ್ಲವೇ ಇಲ್ಲ. ಮನಸ್ಸಿಗೆ ದೇವರೂ ಬರುತ್ತಾನೆ ಇದರಲ್ಲಿ ಸಂಶಯವೂ ಇಲ್ಲ.  *ಗುರುಪೂರ್ಣಿಮಾ*  ಗುರುಗಳನ್ನು ಆರಾಧಿಸುವದು ದೈನಿಂದನ ಕರ್ತವ್ಯಗಳಲ್ಲಿ ಪ್ರಧಾನವಾದದ್ದು. ಆದರೂ ಈ ಗುರು ಪೌರ್ಣಿಮಾ ದಿನದಂದು ಇನ್ನೂ ಹೆಚ್ಚಿನ ವಿಶೇಷವಾದ ಆರಾಧೆನೆಗೆ ಮಹಾಫಲವಿದೆ.  *ಗುರುರೇಕಃ ಸದಾ ಸೇವ್ಯಃ ಸಂಸಾರೋದ್ಧರಣಕ್ಷಮಃ*  ಅನುದಿನ ಅನುಕ್ಷಣ ಗುರು ಸ್ಮರಣೆ ಅ...

ಶ್ರೇಷ್ಠತೆಯ ವ್ಯಸನದಿಂದ ಮಠಗಳು ಹಾಗೂ ಮಠದ ಪಂಡಿತರು ಹೊರಗೆ (ಕೇವಲ ಮಾಧ್ವರಿಗೆ ಮಾತ್ರ) ಬರಬೇಕಾಗಿದೆ* ಇದು ಇಂದಿನ ಟ್ರೆಂಡ್.

 *ಶ್ರೇಷ್ಠತೆಯ ವ್ಯಸನದಿಂದ ಮಠಗಳು ಹಾಗೂ ಮಠದ ಪಂಡಿತರು ಹೊರಗೆ (ಕೇವಲ ಮಾಧ್ವರಿಗೆ ಮಾತ್ರ) ಬರಬೇಕಾಗಿದೆ* ಇದು ಇಂದಿನ ಟ್ರೆಂಡ್. ದ್ವೈತಿಗಳು ಅದ್ವೈತವನ್ನು ಹಾಗೂ ಅದ್ವೈತಿಗಳನ್ನು ವಿಮರ್ಷೆ ಮಾಡಿದ್ದು ಇದೆ. ಅದೇರೀತಿಯಾಗಿ ಅದ್ವೈತಿಗಳು ದ್ವೈತವನ್ನು ಹಾಗೂ ದ್ವೈತಿಗಳನ್ನು ವಿಮರ್ಷೆ ಮಾಡಿದ್ದು ಇದೆ. ಇದು ಇಂದಿನ ವಿಷಯಗಳಲ್ಲ. ತಲತಲಮಾರುಗಳಿಂದಲೂ ಬಂದ ವಿಷಯ. ಶಾಸ್ತ್ರಗ್ರಂಥಗಳಲ್ಲಿ ನಿಬಂಧಿತವಾದ ವಿಷಯಗಳು.  ಮಾಧ್ವರಲ್ಲಿಯ ಕೆಲ ಆಧುನಿಕ ವಿಚಾರವಾದಿಗಳು *ಮಾಧ್ವಗ್ರಂಥದ ಅಥವಾ ಅದ್ವೈತಗ್ರಂಥಗಳ ಅರಿವೇ ಇಲ್ಲದ ಗ್ರಂಥಗಳ ಪರಿಚಯವಿಲ್ಲದ, ಗ್ರಂಥಗಳನ್ನು ಗುರುಮುಖಾಂತರ ಅಧ್ಯಯನ ಮಾಡದ*  ಕೆಲ ವಿಚಾರಿಕರು *"ಶ್ರೇಷ್ಠತೆಯ ವ್ಯಸನದಿಂದ ಮಠಗಳು ಹಾಗೂ ಮಠದ ಪಂಡಿತರು ಹೊರಗೆ (ಕೇವಲ ಮಾಧ್ವರಿಗೆ ಮಾತ್ರ) ಬರಬೇಕಾಗಿದೆ" ಈ ತರಹದ ಸ್ಟೇಟ್ಮೆಂಟಗಳನ್ನು ಕೊಟ್ಟು ಹಾಕುತ್ತಾರೆ.  ಅವರಿಗೆ ಕೇಳುವದಿಷ್ಟೆ ??  ರಾಜಾಂಗಣದಲ್ಲಿ ಆ ಬಲಕಿಯರ ಮಾತಿನಿಂದ ನಿಮಗೆಷ್ಟು ನೋವು ಆಗಿದೆಯೋ ಅಷ್ಟು ನೋವು ಅದ್ವೈತ ಪೀಠಾಧಿಪತಿಗಳಿಂದ ವ್ಯಾಸರಾಜರಿಗೆ ಆಡಿದ ಮಾತುಗಳಿಂದ ನಿಮಗೆ ಆಗಿದೆಯಾ ??  ಅದರ ಹತ್ತಂಶರಷ್ಡಾದರೂ ಆಗಿದೆಯಾ ??   ಅದ್ವೈತ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿಯೇ *ದ್ವೈತಹಾಲಾಹಲ* ಎಂಬ ಶ್ಲೋಕವನ್ನು ಸ್ವಾಗತ ಶ್ಲೋಕದಲ್ಲಿ ಹೇಳಿದ್ದು ಕೇಳುತ್ತೇವೆ ಇದರಿಂದ ನಿಮಗೆಷ್ಟು ನೋವಾಗಿದೆ ??  ನೀವು *ಶ್ರೇಷ್ಠತೆಯ ವ್ಯ...