"ಕಂಡ ಅತಿಥಿಗಳ ಮುಂದೆ ಸಂಕಟಬಿಚ್ಚಿಡುವದು ತರವಲ್ಲ..... "
"ದುಃಖಕ್ಕೆ ಮೊದಲ ಮದ್ದು ಕಣ್ಣೀರು" ಕಣ್ಣೀರು ಹರಿಸಿದಾಗ ಮನಸ್ಸು ಹೃದಯ ಶಾಂತವಾಗುವದು. ಆ ಕಣ್ಣೀರು ಹರಿಸುವ ಅಥವ ಸಂಕಟ ತೋಡಿಕೊಳ್ಳುವದೇನಿದೆ ಕಂಡ ಅತಿಥಿಗಳು ಮುಂದಾದರೆ ನಮ್ಮನ್ನು ನಾವು ಸಣ್ಣವರನ್ನಾಗಿ ಮಾಡಿಕೊಂಡಂತೆಯೇ.... ನಮ್ಮನ್ನು ಇನ್ನೊಬ್ಬರು ಸಣ್ಣವನನ್ನಾಗಿ ಮಾಡಲಿ ಆದರೆ ನಾನೇ ಸಣ್ಣವನಾಗುವದು ಬೇಡ.
ಅತಿಥಿಗಳು ಬಂದಿರ್ತಾರೆ, ಬಂದ ಅತಿಥಿಗೆ ನಮ್ಮಕಡೆಯೇ ಹಾಗು ನಮ್ಮ ಅಭಿಮಾನದ ಕಡೆ ಲಕ್ಷ್ಯ ವಿರುತ್ತದೆ. ನಾವೇನು ಮಾಡಿರುತ್ತೇವೆ ಅಂದರೆ ನಮ್ಮ ನ್ಯೂನತೆಗಳನ್ನು ತೊರಿಸಿಕೊಡುತ್ತಾ ಸಾಗಿರುತ್ತೇವೆ. "ಮಕ್ಕಳ ಕೆಲಸ ನೋಡ್ರಿ ಒಟ್ಟು ಸ್ವಚ್ಛವಿಡಲು ಆಗುವದೇ ಇಲ್ಲ" " ಪಾನೀಯ ಕೊಟ್ಟಿರುತ್ತೇವೆ ಉಪ್ಪು ಖಾರ ಕಮ್ಮಿ ಆಗಿರಬೇಕು ಅಂತ ದೀನವಾಗಿ ಮಾತಾಡಿ ಅದರ ಕಡೆ ಅವರ ಗಮನ ಹರಿಸುವಂತೆ ಮಾಡುವದು" "ಉಪನ್ಯಾಸ ಆದಕೂಡಲೆ ನಾವೇನ್ರೀಪಾ, ನಿಮ್ಮಷ್ಟೆಲ್ಲಿಂದ ಆಗ್ತದ" ಅಡಗಿ ಪೂಜಾ ಜಪ ಹೀಗೆ ಯಾವದೇ ಹಂತವಿದ್ದರೂ ನಮ್ಮ ದೈನ್ಯತೆ ಎತ್ತಿ ತೋರಿಸುವದು ನಮ್ಮ ಸಂಕಟ ತೋಡಿಕೊಳ್ಳುವದು ಇದು ಒಂದಾದರೆ ವಿನಾಕಾರಣ ಕಂಡವರ ಮುಂದೆ ಕಣ್ಣೀರು ಹಾಕುವದು ಇದು ಮತ್ತೊಂದು .
ಹೀಗೆ ಮಾಡುವದರಿಂದ ಕ್ಷಣಿಕ ಶಾಂತಿ, ಒಂದೇ ಕ್ಷಣದ ಸುಖ ಆಸೆ ಅಷ್ಟೆ.
"ಭಹಳ ಸ್ವಚ್ಛ ಅದರೀ ಮನಿ. ಭಾರೀ ರುಚಿರುಚಿ ಆಗಿದೆ, ಅದ್ಭುತ ಉಪನ್ಯಾಸ, ಅರ್ಭಾಟ ಅಡಿಗಿ" ಇಂತಹ ಮೆಚ್ಚುಗೆಯ ಮಾತಿನ ಕ್ಷಣಿಕ ಸುಖಕ್ಕಾಗಿ ಹಪಹಪಿ. ನಾನು ಸ್ವಲ್ಪ ವಿಶಿಷ್ಟ ಇರಬೇಕು ಎಂದು ಭಾವಿಸಿ ಅನುಗ್ರಹ ಮಾಡಿ ಹೋಗ್ತಾನೆ. ನಾಳೆ ಅವನ್ಯಾರೋ ನಾನ್ಯಾರೋ.....
ಹೀಗೆ ವಿನಾಕಾರಣ ನಮ್ಮನ್ನು ನಾವು ಕಂಡವರಮುಂದೆ ಸಣ್ಣವರಾಗುವದು, ಅವರನ್ನು heero ಮಾಡಿ ನಾವು ಠಕ್ಕರಾಗುವದು ಬೇಡ. "ಅಂಗಳದ ಅತಿಥಿಗಳ ಮುಂದೆಲ್ಲ ನಮ್ಮ ದೌರ್ಬಲ್ಯಗಳನ್ನು ನಮ್ಮ ನ್ಯೂನತೆಗಳನ್ನು ತೋಡಿಕೊಳ್ಳುವದಲ್ಲ. ಅಂಗಳದಲ್ಲಿ ಅತಿಥಿ ಒಳಗೆ ಬರಲಿ. ತಾನೇನು ಎನ್ನವದು ಬಿಚ್ವಿಡಲಿ. ವಿಶ್ವಾಸಿಕ ಎಂದಾಗಲಿ. ಹಿತೈಶಿ ಎಂದು ಮನವರಿಕೆ ಆಗಲಿ . ಸಹನೆಯನ್ನು ತೋರ್ಪಡಿಸಲಿ" ಆಗ ನಮ್ಮ ಸಂಕಟ ದುಃಖ ತೋಡಿಕೊಂಡಾಗ ನಮ್ಮ ನ್ಯೂನತೆಗಳಿಗೂ ಸಂಕಟಗಳಿಗೂ ಒಂದು ಮಹತ್ವ ಸಿಗುತ್ತದೆ. ಸಮಾಧಾನದ ಸಾಂತ್ವನದ ನಾಲ್ಕು ಮಾತುಗಳು ಸಿಗಬಹುದು, ಸ್ವಲ್ಪಮಟ್ಟಿಗೆ ಸಹಾಯವೂ ದೊರೆಯಬಹುದು. ಏನೂ ಇಲ್ಲ ಎಂದಾದರೂ ಅವರ ದೃಷ್ಟಿಯಲ್ಲಿ ನಾವು ಎಂದೂ ದೀನ ಕೀಳು ಎಂದಾಗುವದೇ ಇಲ್ಲ.
ಹೃದಯಾಂಗಣದ ಅತಿಥಿಯಾದ ಸರ್ವಸ್ವವನ್ನೂ ನಮಗೆ ಧಾರೆ ಎರೆದು ಕೊಡುವ. ನಮಗಾಗಿ ಭಿಕ್ಷೆ ಬೇಡಲೂ ಸಿದ್ಧನಾದ. ನಮಗಾಗಿ driver ಕೆಲಸವನ್ನೂ ಮಾಡುವ. ನಮಗಾಗಿ ನನ್ನ ಮನೆ ಕಾಯುವ. ನನ್ನ ಅತ್ಯಂತ ವಿಶ್ವಾಸಿಕನಾದ. ನನ್ನನ್ನೇ heero ನನ್ನಾಗಿ ಮಾಡುವ. ತಾನು ಕೀಳಾಗುವ ಆದರೆ ನನ್ನನ್ನು ಎಂದೂ ಕೀಳು ಮಾಡದ ನಮ್ಮ ಬಿಂಬ ರೂಪಿಯ ಮುಂದೆ ಕುಳಿತು ನಮ್ಮ ದೌರ್ಲ್ಯಗಳನ್ನು ಹೇಳೋಣ , ಕಣ್ಣೀರು ಸುರಿಸೋಣ. ಅದರಿಂದ......
ದೌರ್ಬಲ್ಯಗಳು ಮಾಯವಾಗುವದು. ಸಂಕಟ ದೂರಾಗುವದು ಅತ್ಯಂತ ನಿಶ್ಚಿತ. ದುಃಖದ ಕಣ್ಣೀರು ಸುಖದ "ಆನಂದಭಾಷ್ಪ"ಗಳಾಗುವದರಲ್ಲಿಯೂ ಸಂದೇಹವಿಲ್ಲ. ನಾವೆಂದೂ ಸಣ್ಣವರಾಗುವದಿಲ್ಲ. ಆದರೆ ದಾಸರಾಗಿ ಇರುತ್ತೇವೆ. ಅರ್ಜುನ ಎಂದೂ ಕೀಳು ಮನುಷ್ಯನಾಗಿಲಿಲ್ಲ ರಾಜನೇ ಆದ.
ನಮ್ಮ ತುಟಿ ಯಾರಮುಂದೆ ಬಿಚ್ಚಿದರೆ ನಾವು ನಾವಾಗಿ ಉಳಿಯಲು ಸಾಧ್ಯ ಅವರಮುಂದೆ ಬಿಚ್ವೋಣ. ನಮ್ಮತನವನ್ನೇ ಕಳೆದುಕೊಳ್ಳುವ ಕಂಡವರ ಮುಂದೆ ಬಿಚ್ಚುವದು ಬೇಡ. ಹೃದಯ ಹಗುರಾಗುವ ಅಥವಾ ಶಾಂತಿಯ ಉನ್ನತಿಯ ನಾಲಕು ಮಾತುಗಳ ಅಪೇಕ್ಷೆ ಇದ್ದರೆ ಅತ್ಯಂತ ಆತ್ಮೀರಮುಂದೆ ಬಿಚ್ಚಿಡೋಣ. ಇಲ್ಲವಾದಲ್ಲಿ ದೇವರ ಮುಂದೆ ತೋಡಿಕೊಳ್ಳೋಣ. ನಮ್ಮ ಮಾನವೀಯ ಉಳಿಯುತ್ತದೆ. ನಾಲಕು ಜನರಮುಂದ ಸಣ್ಣವನೂ ಆಗಲಾರೆ. ಸಣ್ಣತನವನ್ಮು ಕಳೆದುಕೊಂಡು ದೊಡ್ಡವನು ಆಗಬಹುದು.
ನ್ಯಾಸ....😊 😊
Comments