_*ಸಾಂಕರ್ಯದ ದೊಡ್ಡ ಅಪಾಯ ಬ್ರಾಹ್ಮಣ ಸಮಾಜದ ಮುಂದಿದೆ*_
_*ಸಾಂಕರ್ಯದ ದೊಡ್ಡ ಅಪಾಯ ಬ್ರಾಹ್ಮಣ ಸಮಾಜದ ಮುಂದಿದೆ*_
ಬ್ರಾಹ್ಮಣ ಯುವಕರು ಕನ್ಯಾ ಸಿಗುತ್ತಿಲ್ಲ ಎಂದು ಅನ್ಯಜಾತಿ ವಿವಾಹ ಆಗುವುದು ಮತ್ತು ಬ್ರಾಹ್ಮಣ ಯುವತಿಯರು ಪ್ರೇಮಿಸಿ ಅನ್ಯಜಾತಿ ವಿವಾಹ ಆಗುತ್ತಿರುವುದು ಮುಖ್ಯಕಾರಣ.
ಯಾರೋ ಒಬ್ಬ ವ್ಯಕ್ತಿ ಕನ್ಯಾ ಸಿಗದಿದ್ದರೆ ಅನ್ಯಜಾತಿ ವಿವಾಹ ಆಗಿ ತಪ್ಪೇನಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ. ಅದನ್ನು ಅನುಮೋದಿಸಿ ಹಲವಃ ಬ್ರಾಹ್ಮಣರು ಕಮೆಂಟ್ ಕೂಡ ಮಾಡಿದ್ದಾರೆ. ಆದರೆ ಇದು ಹೇಗೆಂದರೆ
ನಿರುದ್ಯೋಗ ನಮಗೆ ಸಮಸ್ಯೆ ಅಂತ ಹೇಳಿ ಕಳ್ಳತನ , ಸುಲಿಗೆ, ರೌಡಿಯಿಸಂ ಮಾಡಲು ತೊಡಗಿದರೆ ತಪ್ಪು ಹೇಗೋ ಹಾಗೇ ಕನ್ಯಾ ಸಿಗುವುದಿಲ್ಲ ಎಂದು ಅನ್ಯಜಾತಿ ವಿವಾಹ ಆಗುವುದೂ ತಪ್ಪು.
ಸಮಸ್ಯೆಗೆ ಪರಿಹಾರ ತಪ್ಪು ಮಾಡುವುದಲ್ಲ ಸಮಸ್ಯೆಯನ್ನೆ ಸರಿಮಾಡುವುದು.
ಗೀತೆಯಲ್ಲಿ ಅರ್ಜುನ ಕೃಷ್ಣನಿಗೆ ಹೇಳುತ್ತಾನೆ ''ಯುದ್ಧ ಬೇಡ ಏಕೆಂದರೆ ಯುದ್ಧದಲ್ಲಿ ಅಪಾರ ಸೈನಿಕರು ಸಾಯುವುದರಿಂದ ಅವರ ಹೆಂಡತಿ ಮಕ್ಕಳು ಅನಾಥರಾಗುತ್ತಾರೆ ವರ್ಣ ಸಾಂಕರ್ಯ ಉಂಟಾಗಿ ಜನರು ಪತಿತರಾಗುತ್ತಾರೆ ನರಕಕ್ಕೆ ಗುರಿಯಾಗುತ್ತಾರೆ ಮತ್ತು ಅವರ ಪಿತೃಗಳು ಶ್ರಾದ್ಧಾದಿ ಕರ್ಮಗಳು ಇಲ್ಲದೆ ಸದ್ಗತಿ ಹೊಂದುವುದಿಲ್ಲ'' ಎಂದು ಹೇಳುತ್ತಾನೆ.
ಮೇಲ್ನೋಟಕ್ಕೆ ಅರ್ಜುನನ ಮಾತು ಸರಿ ಎನಿಸಿದರೂ ಅವನದು ಅಜ್ಞಾನವೇ. ಏಕೆಂದರೆ ದುರ್ಯೋಧನ ರಾಜನಾಗಿದ್ದರೆ ಆ ರಾಜ್ಯವು ಎಲ್ಲಾ ರೀತಿಯಲ್ಲೂ ಪಾಪಗಳಿಂದ ತುಂಬಿಹೋಗಿ ಧರ್ಮವು ಪತನವಾಗಿ ಸರ್ವವೂ ನಾಶವಾಗುತ್ತದೆ ಆ ಅಪಯ ಇದಕ್ಕಿಂತ ಅತ್ಯಂತ ಭೀಕರ.
ಇಲ್ಲಿ ಕೃಷ್ಣನು 'ನೀನು ಯುದ್ಧ ಮಾಡು ಧರ್ಮ ಸಂಸ್ಥಾಪನೆ ನಾನು ಮಡಿಸುತ್ತೇನೆ' ಎಂದು ಹೇಳುತ್ತಾನೆ.
ಇಲ್ಲಿ ಶ್ರೀಕೃಷ್ಣನು ವರ್ಣಸಾಂಕರ್ಯ ಆದರೆ ಆಗಲಿ ಬಿಡು ಎನ್ನುವುದಿಲ್ಲ. ಅವನಿಗೆ ಅಜ್ಞಾನ ಹೋಗಲಾಡಿಸಿ 'ತಸ್ಮಾತ್ ಯುದ್ಧಸ್ವ ಭಾರತ' ಎಂದಷ್ಟೇ ಹೇಳುತ್ತಾನೆ. ಏಕೆಂದರೆ ಕೃಷ್ಣನಿಗೆ ಗೊತ್ತಿತ್ತು ಪಾಂಡವರರಾಜ್ಯದಲ್ಲಿ ಧರ್ಮ ಕೆಡುವುದಿಲ್ಲ ಅದು ಸತ್ಯಯುಗದಂತೆ ಸತ್ಯ, ದಯಾ, ತಪಸ್ಸು ಮತ್ತು ಶೌಚ ಎಂಬ ನಾಲ್ಕು ಕಾಲುಗಳ ಮೇಲೆ ನಿಲ್ಲುತ್ತದೆ ಎಂದು.ಅದು ಸತ್ಯವೇ ಆಯಿತು ಇಂದಿಗೂ ನಾವು ಪಾಂಡವರ ವೀರಗಾಥೆಯನ್ನು 'ಈ ಕಥೆ ಸಂಗ್ರಾಮವು ವಿಶ್ವದ ಕಲ್ಯಾಣವು' ಅಂತ ಹಾಡಿ ಕೊಂಡಾಡುತ್ತೇವೆ.
ನಾವೂ ಕೂಡ ಪಾಂಡವರಂತೆ ಧರ್ಮ ಮಾಡುವುದು ಮಾತ್ರ ನಮ್ಮ ಕರ್ತವ್ಯ ಉಳಿದದ್ದು ದೇವರು ನೋಡ್ಕೊತಾನೆ. ನಾವು ಯೋಧರಾಗಿ ಕಲಿಕಲ್ಮಷದ ವಿರುದ್ಧ ಯುದ್ಧ ಮಾಡಬೇಕು. ನಾವು ಅದನ್ನು ಬಿಟ್ಟು ಅಧರ್ಮಾಚರಣೆ ಮಾಡಲು ತೊಡಗಿದರೆ ದುರ್ಯೋಧನಾದಿ ಕೌರವರಂತೆ ದುರ್ಗತಿಗೀಡಾಗುವುದರಲ್ಲಿ ಸಂಶಯವಿಲ್ಲ.
◆◆◆◆◆◆◆◆◆◆◆◆◆◆◆◆◆◆◆
ಹೇಗೆಂದು ಅದರ ಬಗ್ಗೆ ತಿಳಿಯೋಣ ಬನ್ನಿ.
ಈಗಿನ ಕಾಲಘಟ್ಟದಲ್ಲಿ ಬ್ರಾಹ್ಮಣ ಯುವಕರಿಗೆ ಯುವತಿಯರು ಸಿಗುತ್ತಿಲ್ಲ ಕಾರಣ ಏನು?
● ಹೆಚ್ಚು ಓದಿದ ಹೆಣ್ಣುಮಕ್ಕಳು.
● ಇರುವವರು ಪ್ರೇಮವಿವಾಹದಿಂದ ಅನ್ಯಜಾತಿ ಯುವಕರೊಂದಿಗೆ ಮದುವೆಯಾಗುವುದು.
● ವೈದಿಕ ವೃತ್ತಿಯ ಪುರುಷರಿಗೆ ಹೆಣ್ಣು ಕೊಡದಿರುವುದು.
● ಬ್ರಾಹ್ಮಣರು ಧಾರ್ಮಿಕ ಪ್ರಜ್ಞೆ ಹೋಗಿ ಪ್ರಗತಿಪರರಾಗಿ ಸ್ವಧರ್ಮ ಮರೆತಿರುವುದು.
● ವೈದಿಕವೃತ್ತಿಯಲ್ಲಿರುವವರೂ ಕೂಡ ವೈದಿಕ ವೃತ್ತಿಯವರಿಗೆ ಕನ್ಯಾ ಕೊಡದಿರುವುದು.
● ಅನ್ಯಜಾತಿಯ ಯುವಕರನ್ನು ಅಥವಾ ಯುವತಿಯರನ್ನು ಮದುವೆ ಆದರೂ ಕೂಡ ನಾವು ಮೊದಲಿನಂತೆಯೇ ಬ್ರಾಹ್ಮಣರಂತೆ ಇರಬಹುದು ಎಂಬ ತಪ್ಪು ಕಲ್ಪನೆ.
● ಯುವಕರು ಗ್ರಾಮಾಂತರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವುದು.
● ಯುವತಿಯರಿಗೆ ಮತ್ತು ಅವರ ಪೋಷಕರಿಗೆ ಪಟ್ಟಣದ ವ್ಯಾಮೋಹ ಅತಿಶಯವಾಗಿರುವುದು.
● ಧಾರ್ಮಿಕ ಜಾಗೃತಿ ಇಲ್ಲದಿರುವುದು
ಹೀಗಿರುವಾಗ ಸಹಜವಾಗಿ ಅನಿಸುವುದು ಅನ್ಯಾಜಾತಿಯ ಯುವತಿಯರನ್ನು ವಿವಾಹ ಆಗಬಹುದಲ್ಲವೆ ಎಂದು. ಆದರೆ ಅದರ ವಿಪರಿಣಾಮಗಳ ಅರಿವು ,ಧಾರ್ಮಿಕ ತೊಡಕುಗಳು ಲವಲೇಶವೂ ಇಲ್ಲದೆ ಜನ ಅಧರ್ಮದಲ್ಲಿ ಪ್ರವೃತ್ತಿ ಮಾಡುತ್ತಾರೆ. ಈಗಾಗಲೇ ಈ ರೀತಿ ಮಾಡಿದವರಂತೂ ಇವರಿಗೆ ಹುರಿದುಂಬಿಸುತ್ತಾರೆ ಕೂಡ. "ಅಯ್ಯೋ ಈಗಿನ ಕಾಲದಲ್ಲಿ ಅವೆಲ್ಲಾ ನೋಡಕ್ಕಾಗುತ್ತೇನ್ರೀ ತಂದ್ಕೊಬೋದು ಏನಂತೆ ನಮ್ಮ ಇವ್ರ್ ಮನೇಲೇ ತಂದ್ಕೊಂಡಿಲ್ವ? ಅವ್ರು ಚನಾಗೇ ಇದಾರಪ್ಪ " ಎಂದೆಲ್ಲಾ ಹೇಳಿ ಪ್ರೋತ್ಸಾಹ ಕೊಡುವವರು ಬೇರೆ.ಇದು ತಪ್ಪು ಎಂದು ಅವರ ಅರಿವಿಗೆ ಬರುವುದು ಯಾವಾಗ?
ಬ್ರಾಹ್ಮಣ ಯುವತಿಯರು ಅನ್ಯಜಾತಿಯ ಯುವಕರೊಂದಿಗೆ ವಿವಾಹ ಆಗಲು ಕಾರಣವೇನು?
●ಆಧುನಿಕ ಯುಗದ ಜೀವನ ಶೈಲಿ
● ಮನೆಯಲ್ಲಿ ಅಂತರ್ಜಾತೀಯ ವಿವಾಹಗಳ ವಿಪರಿಣಾಮದ ಬಗ್ಗೆ ಜಾಗೃತಿಯ ಕೊರತೆ.
● ಬ್ರಾಹ್ಮಣ್ಯದ ಕುರಿತು ಸ್ವಾಭಿಮಾನ ಮರೆತು ಅಸಡ್ಡೆ ಬೆಳಸಿಕೊಂಡಿರುವುದು.
● ಪೋಷಕರೇ ಅವ್ಯಾಹತವಾಗಿ ಒಪ್ಪಿ ಇಂತಹಾ ಮದುವೆ ಮಾಡಿಸುವುದು.
● ಜನ ಮನೆಯಲ್ಲಿ ಅನ್ಯಜಾತಿ ವಿವಾಹ ಆಗಿದ್ದರೂ ಅದರ ವಿಪರಿಣಾದ ಎಚ್ಚರಿಕೆ ಇತರರಿಗೆ ಕೊಡುವ ಬದಲು ಮದುವೆ ಆಗುವಂತೆ ಕುಮ್ಮಕ್ಕು ಕೊಡುವುದು.
● ಸಿನಿಮಾ ಸೀರಿಯಲ್ ವೆಬ್ ಸೀರಿಸ್ಗಳ ಪ್ರಭಾವ.
● ಕಾಲೇಜು ಅಥವಾ ಆಫೀಸ್ನಲ್ಲಿ ಅವ್ಯಾಹತವಾಗಿ ನಡೆಯುವ ಅಂತರ್ಜಾತಿ ವಿವಾಹಗಳಿಂದ ಪ್ರೇರಣೆಗಳು.
● ಕೆಲವು ವೈದಿಕರ ಮನೆಯಲ್ಲಿ ಸಂಪ್ರದಾಯದ ಹೆಸರಲ್ಲಿ ಸ್ತ್ರೀಯರನ್ನು ಶೋಷಣೆ ಮಾಡುವುದು.
● ಧಾರ್ಮಿಕ ಜಾಗೃತಿ ಇಲ್ಲದಿರುವುದು
ಈ ಕಾರಣಗಳಿಂದ ತಪ್ಪು ಎಂದು ತಿಳಿದೂ ಕೆಲವರು ತಾಯಿ ತಂದೆಯರಿಗೆ ನೋಯಿಸಿಯಾದರೂ ಅಧರ್ಮ ಮಾಡಲು ಉತ್ಸುಕರಾಗಿರುತ್ತಾರೆ ಎಂಬುದು ವಿಷಾದನೀಯ.
ಬ್ರಾಹ್ಮಣರು ಯಾಕೆ ಇತರ ಜಾತಿಯವರನ್ನು ಮದುವೆ ಆಗಬಾರದು?
● ಬ್ರಾಹ್ಮಣರು ಇತರ ಜಾತಿಯವರನ್ನು ಮದುವೆ ಆದರೆ ಪಾತಿತ್ಯವನ್ನು ಪೆಡೆಯುತ್ತಾರೆ.
● ಅವರ ಮಕ್ಕಳಾಗಲಿ ಅವರಾಗಲಿ ಬ್ರಾಹ್ಮಣರಾಗಿ ಉಳಿಯುವುದಿಲ್ಲ.
● ಅವರಿಗೆ ಯಾವ ಧಾರ್ಮಿಕ ಕರ್ಮದಲ್ಲೂ ಅಧಿಕಾರ ಇರುವುದಿಲ್ಲ.
●ಶ್ರಾದ್ಧ ಮಾಡಲು ಮಾಡಿಸಿಕೊಳ್ಳಲೂ ಅಧಿಕಾರ ಇರೋಲ್ಲ.
●ಅವರ ಮಕ್ಕಳೂ ವರ್ಣಬಾಹಿರರಾಗ್ತಾರೆ.
●ಅವರು ಯಾವ ಪ್ರಾಯಶ್ಚಿತ್ತ ಕೂಡ ಮಾಡಲು ಬರುವುದಿಲ್ಲ. ಶಾಸ್ತ್ರದಲ್ಲಿ ಸಾಂಕರ್ಯಕ್ಕೆ ಪ್ರಾಯಶ್ಚಿತ್ತವನ್ನೇ ಹೇಳಿಲ್ಲ.
●ಈ ಪಾಪ ಮಾಡಿದವರಿಗೆ ನರಕಾದಿ ಅನರ್ಥಗಳು ಅಷ್ಟೇ ಅಲ್ಲದೆ
●ಈ ಪಾಪ ಮಾಡಿದವರ ಪಿತೃಗಳಿಗೂ ಸದ್ಗತಿ ಆಗುವುದಿಲ್ಲ.
●ಸಂಧ್ಯಾವಂದನೆ,ಬ್ರಹ್ಮಯಜ್ಞ,ದೇವತಾರ್ಚನೆ, ಹೋಮ,ದಾನ,ಪ್ರತಿಗ್ರಹ, ಒಧ್ಯಯನ ,ಅಧ್ಯಾಪನ ಮುಂತಾದ ಎಲ್ಲಾ ಧರ್ಮಗಳಲ್ಲೂ ಅನಧಿಕಾರ ಬರುತ್ತದೆ.
ಇದಷ್ಟೂ ನನ್ನ ಮತ್ತಲ್ಲ ಮನು ಪರಾಶರ ಯಾಜ್ಞವಲ್ಕ್ಯ ಮುಂತಾದ ಸ್ಮೃತಿಕಾರರು ಹೇಳಿದ್ದಾರೆ ಅಲ್ಲದೆ ಗರುಡಪುರಾಣಾದಿ ಹಲವು ಪುರಾಣಗಳಲ್ಲಿ ಕೂಡ ಹೇಳಿದ್ದಾರೆ. ಬಾಹುಳ್ಯಕಾರಣದಿಂದ ಪ್ರಮಾಣಗಳನ್ನು ಇಲ್ಲಿ ಹಾಕಿಲ್ಲ.. ಇದರ ಮೇಲೂ ಸಾಂಕರ್ಯ ಮಾಡಬೇಕಿದ್ದರೆ ನೀವು ಬೇಕಾದ್ದು ಮಾಡಬಹುದು.
ಇದು ಧಾರ್ಮಿಕ ಕಾರಣಗಳು .
◆◆◆◆◆◆◆◆◆◆◆◆◆◆◆◆◆◆◆◆
ಅದನ್ನು ನಾವು ಪಕ್ಕಕ್ಕೆ ಇಟ್ಟರೂ ಸಾಮಾಜಿಕವಾಗಿ ಯೋಚಿಸಿದಾಗ ಸಾಂಕರ್ಯದಿಂದ ಆಗುವ ಸಮಸ್ಯೆಗಳೇನು?
●ಬ್ರಾಹ್ಮಣರು ಅನ್ಯಜಾತಿ ವಿವಾಹ ಆಗುತ್ತಾ ಹೋದರೆ ಕೆಲವೇ ವರ್ಷಗಳಲ್ಲಿ ಶುದ್ಧವಾದ ವೈದಿಕ ಬ್ರಾಹ್ಮಣ ಪರಂಪರೆ ನಾಶವಾಗುತ್ತದೆ.
●ಜಾತಿಯೊಂದಿಗೆ ಆಚಾರಗಳೂ ನಾಶವಾಗುತ್ತದೆ.
ಬ್ರಾಹ್ಮಣ್ಯದೊಂದಿಗೆ ವೈದಿಕ ಸಂಸ್ಕೃತಿಯೂ ನಾಶವಾಗುತ್ತದೆ.
●ಬ್ರಾಹ್ಮಣ ಜನಾಂಗವು ತನ್ನ ಸ್ವರೂಪದೊಂದಿಗೆ ಅಸ್ತಿತ್ವವನ್ನೂ ಕಳೆದುಕೊಂಡು ಹಾನಿಗೊಳಗಾಗುತ್ತದೆ.
●ವೈದಿಕ ವೃತ್ತಿಗೆ ಬೆಲೆ ಇಲ್ಲದಂತಾಗಿ ಈಗಾಗಲೇ ಅರಾಜಕವಾಗಿದ್ದು ಮತ್ತೆ ಸಾರ್ವತ್ರಿಕವೂ ಆಗುತ್ತದೆ. ●ಇದರಿಂದ ನಷ್ಟ ಪಡುವವರಂತೂ ನಿಜವಾದ ವೈದಿಕರೇ.
● ನಿಜವೈದಿಕರು, ವೇದ ವೇದಾಂತ ಆಗಮಾದಿ ಶಾಸ್ತ್ರಗ್ರಂಥಗಳ ಅಧ್ಯಯನ ಮಾಡಿದವರನ್ನು ಇತಿಹಾಸದ ಪುಟಗಳಲ್ಲಿ ಮಾತ್ರ ಕಾಣಬಹುದು.
● ಬ್ರಾಹ್ಮಣರು ಈಗಾಗಲೇ ಅಲ್ಪ ಸಂಖ್ಯಾತರಾಗಿದ್ದಾರೆ ಮುಂದೆ ವಿಶ್ವಸಂಸ್ಥೆಯವರು ಅಳಿವಿನಂಚಿನಲ್ಲಿರುವ ಪ್ರಬೇಧಗಳ ಸಾಲಿಗೆ ನಿಜವೈದಿಕಬ್ರಾಹ್ಮಣರನ್ನು ಸೇರಿಸಲು ಸರ್ಕಾರ ಶಿಫಾರಸ್ಸು ಮಾಡಬಹುದು.
◆◆◆◆◆◆◆◆◆◆◆◆◆◆◆◆◆◆◆◆
ಪರಿಹಾರ ಏನು?
● ಯುವಕ ಯುವತಿಯರು ಅವರ ಪೋಷಕರು ಎಲ್ಲರಲ್ಲೂ ಧಾರ್ಮಿಕ ಜಾಗೃತಿ,ಧಾರ್ಮಿಕ ಜಾಗೃತಿ, ಧಾರ್ಮಿಕ ಜಾಗೃತಿ.
◆◆◆◆◆◆◆◆◆◆◆◆◆◆◆◆◆◆◆◆
ಧಾರ್ಮಿಕ ಜಾಗೃತಿ ಇದ್ದವರು ಏನು ಮಾಡುತ್ತಾರೆ?
● ವೈದಿಕರಿಗೆ ಹೆಣ್ಣು ಕೊಡಲು ಹಿಂಜರಿಯುವುದಿಲ್ಲ.
● ಹಳ್ಳಿಗಳಿಗೆ ಹೆಣ್ಣು ಕೊಡಲು ಹಿಂಜರಿಯುವುದಿಲ್ಲ.
● ಯುವತಿಯರು ಅನ್ಯಜಾತಿಯವರ ಹಿಂದೆ ಹೋಗುವುದಿಲ್ಲ.
● ಯುವಕರು ಅನ್ಯಜಾತಿಯ ವಿವಾಹಕ್ಕೆ ಒಪ್ಪುವುದಿಲ್ಲ
● ಎಲ್ಲರೂ ಬ್ರಾಹ್ಮಣ್ಯ ಸರಿಯಾಗಿ ಪಾಲಿಸುತ್ತಾರೆ.
● ಅನ್ಯಜಾತಿಯ ವಿವಾಹ ಒಂದೇ ಪರಿಹಾರ ಎಂಬ ತಪ್ಪು ಕಲ್ಪನೆ ಬಿಟ್ಟು ಹೊಸ ಹೊಸ ಪರಿಷ್ಕಾರಗಳನ್ನು ಹುಡುಕುತ್ತಾರೆ.
● ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಕೊಟ್ಟು ಈ ವಿಷಯಕವಾಗಿ ಜಾಗೃತಿ ಮೂಡಿಸುತ್ತಾರೆ.
● ಕಂಡವರ ಹೇಳಿಕೆ ಮಾತು ಕೇಳಿ ಕೆಡುವುದಿಲ್ಲ
● ವಿಪರಿಣಾಮಗಳ ಬಗ್ಗೆ ತಿಳಿದು ಜನರಿಗೂ ತಿಳಿಸುತ್ತಾರೆ.
● ಎಷ್ಟೇ ಓದಿದ್ದರೂ ಧಾರ್ಮಿಕರಿಗೆ ಮತ್ತು ಧಾರ್ಮಿಕತೆಗೆ ಆದ್ಯತೆ ಕೊಡುತ್ತಾರೆ.
● ತಮಗೆ ಪರಿಚಯ ಇರುವ ವಧು ವರರ ಮಾಹಿತಿ ಕೊಟ್ಟು ಮುಂದೆ ನಿಂತು ಸಹಾಯ ಮಾಡ್ತರೆ.
● ಬ್ರಾಹ್ಮಣರಿಗೆ ಸಂಬಂಧಿಸಿದ ಸರ್ಕಾರಿ ಅಥವಾ ದತ್ತಿ ಸಂಘ ಸಂಸ್ಥೆಗಳ ಮೂಲಕ ವೈದಿಕರನ್ನು ಮದುವೆ ಆಗುವವರಿಗೆ ಪ್ರೋತ್ಸಾಹ ರೂಪವಾಗಿ ನೆರವು ನೀಡುತ್ತಾರೆ.
● ಬ್ರಾಹ್ಮಣರು ಹೆಣ್ಣು ಮಗು ಹುಟ್ಟಿದಾಗ ಅಸಡ್ಡೆ ಮಾಡುವುದಿಲ್ಲ.
● ಸಾಮರ್ಥ್ಯ ಇರುವಷ್ಟು ಮಕ್ಕಳನ್ನು ಹೆರುತ್ತು ಪ್ರಾಜಾಪತ್ಯವನ್ನು ಮಾಡ್ತಾರೆ . ಒಂದೇ ಮಗು ಸಾಕು ಎಂದು ಕೂರುವುದಿಲ್ಲ.
◆◆◆◆◆◆◆◆◆◆◆◆◆◆◆◆◆
ಧಾರ್ಮಿಕ ಜಾಗೃತಿ ಹೇಗೆ?
● ಮನೆಯಿಂದ ಆರಂಭವಾಗಲಿ
● ಸಂಧ್ಯಾವಂದನೆ ಪೂಜೆ ನಿತ್ಯ ನಡೆಯಲಿ ದೇವರ ಕೃಪೆಯ ಮುಂದೆ ಯಾವ ಸಮಸ್ಯೆಯ ಸಮಸ್ಯೆ ಅಲ್ಲ
● ಬ್ರಾಹ್ಮಣ ಮಠಾಧಿಪತಿಗಳು ,ಪಂಡಿತರು , ವೈದಿಕ ವೃತ್ತಿಯವರು ಧಾರ್ಮಿಕ ಜಾಗೃತಿ ಮೂಗಿಸುವಲ್ಲಿ ಪ್ರವೃತ್ತಿ ಮಾಡಿದರೆ ಸಾಲದು ಕ್ರಾಂತಿಯನ್ನೇ ಮಾಡಬೇಕು.
● ಪಾಠ ಪ್ರವಚನಗಳ ಮೂಲಕ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಜಾಗೃತಿ ನಿರಂತರ ನಡೆಯಬೇಕು
● ಧಾರ್ಮಿಕ ಆಚಾರ ವಿಚಾರ ಕಲಿಸುವ ಶಿಬಿರಗಳನ್ನು ಆನ್ಲೈನ್ ಅಥವಾ ಅಫ್ಲೈನ್ ಮೂಲಕ ಆಬಾಲವೃಂದ್ಧರತನಕ ಮಾಡಬೇಕು.
● ದೇವಸ್ಥಾನದ ಹುಂಡಿ ಕಾಸು ದುರುಪಯೋಗವಾಗುವ ಬದಲು ಧಾರ್ಮಿಕ ಜಾಗೃತಿಗಾಗಿ ಉಪಯೋಗವಾಗಬೇಕು.
● ಐಟಿ ಕಂಪನಿಗಳ ಉದ್ಯೋಗಿಗಳಿಗೆ ವಿಶೇಷವಾಗಿ ಧಾರ್ಮಿಕ ಜಾಗೃತಿ ಶಿಬಿರಗಳು ಮಾಡಬೇಕು.
● ಸಾಂಕರ್ಯಕ್ಕೆ ಅಧರ್ಮಾಚರಣೆಗಳಿಗೆ ಪ್ರೇರಣೆ ನೀಡುವ ಜನರಿಗೆ ಬುದ್ಧಿ ಹೇಳಬೇಕು. ಕೇಳದಿದ್ದರೆ ಯಾರೇ ಆಗಿರಲಿ ವಿರೋಧ ಮಾಡಬೇಕು.
◆◆◆◆◆◆◆◆◆◆◆◆◆◆◆◆◆◆
ಹೀಗೆ ಬ್ರಾಹ್ಮಣ್ಯ ತನ್ಮೂಲಕ ಹಿಂದೂ ಅಸ್ಮಿತೆ ಉಳಿಯಬೇಕಾದರೆ ಒಬ್ಬೊಬ್ಬ ಬ್ರಾಹ್ಮಣ ಕೂಡ ಯೋಧನಾಗಬೇಕು. ತಾವು ಜ್ಞಾನ ಪಡೆದುಕೊಂಡು ಇಡೀ ಹಿಂದೂ ಸಮಾಜಕ್ಕೆ ಬೆಳಕ ನೀಡಬೇಕು ಲೋಕಕ್ಕೆ ಉಪಕಾರ ಮಾಡಬೇಕು.
"ಲೋಕಾಃ ಸಮಸ್ತಾಃ ಸುಖಿನೋ ಭವಂತು" ಎಂದು ಹೇಳುವವನು ನಿಜವಾದ ಬ್ರಾಹ್ಮಣ.
ಆದರೆ ಅವನು ಬ್ರಾಹ್ಮಣ್ಯ ಉಳಿಸಿಕೊಂಡ ನಿಜವಾದ ಬ್ರಾಹ್ಮಣ ಆಗಿರಬೇಕು 'ಕೇವಲ ಜನಿವಾರದಿಂದ ಬ್ರಾಹ್ಮಣ' ಆಗಿರಬಾರದು.
ಹೇಳಲು ಸಾವಿರ ಇದೆ ಆದರೆ ಓದುವ ತಾಳ್ಮೆ ಎಲ್ಲಾ ಜನರಲ್ಲಿ ಇಲ್ಲದಿರುವ ಕಾರಣ ನಾನು ಇಲ್ಲಿಗೇ ಲೇಖನ ಮೊಟಕುಗೊಳಿಸುತ್ತಿದ್ದೇನೆ.
ಮುಂದೆ ಈ ಕುರಿತಾಗಿ ಎಲ್ಲಾ ಲೇಖನಗಳ ಒಂದು ಕಿರುಹೊತ್ತಿಗೆಯನ್ನು ತರುವ ಇಚ್ಛೆ ಇದೆ. ನನ್ನ ವ್ಯಾಪ್ತಿಯಲ್ಲಿ ಧಾರ್ಮಿಕ ಜಾಗೃತಿಗಾಗಿ ಎಷ್ಟು ಸಾಧ್ಯವೋ ಅಷ್ಟೂ ಪ್ರಯತ್ನ ಶಕ್ತಿಮೀರಿ ಮಾಡುತ್ತೇನೆ. ನೀವೂ ನಮ್ಮೊಂದಿಗೆ ಕೈಜೋಡಿಸಿ ಬ್ರಾಹ್ಮಣ್ಯ ಉಳಿಸಿ.
ಇದನ್ನು ಓದಿದ ಘಳಿಗೆ ಮರಳಿ ಬ್ರಾಹ್ಮಣ್ಯದೆಡೆಗೆ.
Comments