*ಧರ್ಮೇ ಏವ ದೀಯತಾಂ ಬುದ್ಧಿಃ....*


 *ಧರ್ಮೇ ಏವ ದೀಯತಾಂ ಬುದ್ಧಿಃ....*


ಧರ್ಮ ಅಧರ್ಮಗಳು ಎಲ್ಲ ಕಾಲಕ್ಕೂ ಇರುವಂತಹವುಗಳು.  ಧರ್ಮ ಸ್ವಾಭಾವಿಕ ಸದೃಢ , ಮಹಾ ಬಲಿಷ್ಠ. ಅಂತೆಯೇ ಎಲ್ಲರ ಸಂರಕ್ಷಕ. 


ಅಧರ್ಮ ಸ್ವಯಂ ದುರ್ಬಲ. ಆದರೆ "ಬಲಿಷ್ಠರಂತೆ ವರ್ತಿಸಲು ನೂರಾರು ಸಾವಿರಾರು ಜನರ ಸಹಾಯವನ್ನು ಬಯಸುತ್ತದೆ" ಕೊನೆಗೆ  ಎಲ್ಲರನ್ನೂ ಹಾಳು ಮಾಡುತ್ತದೆ.  ತಾನೂ ನಶಿಸುತ್ತದೆ. 


ಅಧರ್ಮ‌ ತಾನು ರುಚಿ ತೋರಿಸಿ, ಎಮ್ಮನ್ನು ಆಕರ್ಷಿಸಿ, ತನ್ನತ್ತ ಸೆಳೆದುಕೊಂಡು, ನಮ್ಮ ತಲೆಯಮೇಲೆ ನಿಂತೆ ತಾ ಬದುಕುತ್ತದೆ. ನಮ್ಮನ್ನು ತುಳಿದೇ ತಾಂಡವ ಆಡುತ್ತದೆ. ಕೊನೆಗೆ ನಮ್ಮನ್ನು ಮಣ್ಣುಪಾಲೂ ಮಾಡುತ್ತದೆ, ಮಹಾ ಅಪಕೀರ್ತಿ ದುಃಖ ದುಮ್ಮಾನಗಳಿಗೆ ಕಾರಣವಾಗುತ್ತದೆ." 


"ಆದರೆ ಧರ್ಮ ಹಾಗಲ್ಲ. ತಾನಿದ್ದಲ್ಲೇ ಇದ್ದು. ತಾನು ಯಾರಿಗೆ ಅನಿವಾರ್ಯವೋ ಅವರು ಮಾತ್ರ ತನ್ನತ್ತ ಬರುವಂತೆ ಮಾಡಿಕೊಳ್ಳುತ್ತದೆ‌. ಯಾರು ತನ್ನನ್ನು ನಂಬಿ  ಬಂದಿದ್ದಾರೆಯೋ, ಧರ್ಮವನ್ನು ರಕ್ಷಿಸಲು ಪಣತೊಟ್ಟಿದ್ದಾರೆಯೋ ಅವರನ್ನು ತನ್ನ ತಲೆಯಮೇಲೆ ಹೊತ್ತಿಕೊಂಡಾದರೂ ನಮ್ಮನ್ನು ರಕ್ಷಿಸುತ್ತದೆ." ಮಹೋನ್ನತಿಯನ್ನು ತಂದು ಕೊಡುತ್ತದೆ. ಮೋಕ್ಷಾದಿ ಪುರುಷಾರ್ಥಗಳಲ್ಲಿ ಒಂದಾಗಿ ದೇವರ ಅತ್ಯಂತ ಸನಿಹ ಕರೆದೊಯ್ಯುತ್ತದೆ. ಇಹದಲ್ಲಿ ಬೇಕಾದ ಎಲ್ಲ ಇಷ್ಟಾರ್ಥಗಳನ್ನೂ ಒದಗಿಸುತ್ತದೆ. ಒದಗಿದ ಇಷ್ಟಾರ್ಥಗಳು ಸಾರ್ಥಕವಾಗುವಂತೆ ನೋಡಿಕೊಳ್ಳುತ್ತದೆ. 


ಧರ್ಮ ಉತ್ತಮ,  ಉತ್ಕೃಷ್ಟ , ಸ್ವಚ್ಛ , ನಿರ್ಮಲ, ನಿರ್ದುಷ್ಟ, ಅಂತೆಯೇ ಮಹಾತ್ಮರೆಲ್ಲರೂ ಆ ಧರ್ಮವನ್ನೇ ಬಯಸುತ್ತಾರೆ. ಅದರಲ್ಲಿ ವಿಷ್ಣು ಪ್ರೀತಿಯೇ ಇದೆ. ಧರ್ಮದಲ್ಲಿ ಎಲ್ಲವೂ ಇದೆ. 


ಆ ಕಾರಣ ಎಲ್ಲರೂ ದೇವರಲ್ಲಿ ದೇವರಿಂದ  ಬಯಸುವದು *ಧರ್ಮೇ ಮೇ ದೀಯತಾಂ ಬುದ್ಧಿಃ*  ಧರ್ಮದಲ್ಲಿಯೇ ಎನ್ನ ಬುದ್ಧಿ ಇರಲಿ ಎಂದು. ಜೊತೆಗೆ ದೇವತೆಗಳಿಂದ ಬಯಸುವದೂ ದೇವತೆಗಳಲ್ಲು ಪ್ರಾರ್ಥಿಸುವದೂ *ಧರ್ಮ ಮಾರ್ಗೇ ಪ್ರೇರಯಂತು* ಧರ್ಮ ಮಾರ್ಗದಲ್ಕೇ ಪ್ರೇರಿಸಿ ಎಂಬುವದಾಗಿ. 

ನಾವೂ ಇಂದು ಯಮುನಾ ಶೇಷ ಅನಂತ ಹಾಗೂ ನಾಡದ್ದಿಂದ ಆರಧ್ಯವರಾದ ಪಿತೃ ದೇವತೆಗಳಲ್ಲಿ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸೋಣ. ಬಿದ್ದರೂ ಎದ್ದರೂ  ಧರ್ಮದಲ್ಲಿಯೇ ಇರುವಂತಾಗಲಿ ಎಂದೇ ಪ್ರಾರ್ಥಿಸೋಣ.


*ಧರ್ಮೋ ರಕ್ಷತಿ ರಕ್ಷಿತಃ*


ಧರ್ಮವನ್ನು ಯಾರು ಉಳಿಸಿ ಬೆಳಿಸಿ ರಕ್ಷಿಸುತ್ತಾರೆಯೋ ಅವರನ್ನು ಧರ್ಮ ಎಂತಹಕಷ್ಟಕಾಲದಲ್ಲಿಯೂ ಬಿಡುವದಿಲ್ಲ. ರಕ್ಷಿಸುತ್ತದೆ. ಸಂರಕ್ಷಿಸುತ್ತದೆ. ಇದು ಶ್ರೀಕೃಷ್ಣನ ದೃಢವಾದ ಸಿದ್ಧಾಂತ. 


*✍🏼✍🏼✍🏼ನ್ಯಾಸ.*

ಗೋಪಾಲ ದಾಸ

ವಿಜಯಾಶ್ರಮ ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*