ಮನಸ್ಸು ಹಿಂಸಾತ್ಮಕ ಏಕೆ..?*
*ಮನಸ್ಸು ಹಿಂಸಾತ್ಮಕ ಏಕೆ..?*
ಭಾವನೆ ಬತ್ತಿದ, ನಿಯಂತ್ರಣ ಮಾಡಲು ಅಸಾಧ್ಯವಾದ ಅತಿಯಾದ ವಿಚಾರ ಕ್ರಮವೇ ಮನಸ್ಸು ಹಿಂಸಾತ್ಮಕವಾಗಲು ಕಾರಣ.
*ಭಾವನೆ ಇರುವಲ್ಲಿ ಹಿಂಸೆ ಇಲ್ಲ, ಭಾವನೆಯನ್ನೊಳಗೊಂಡ ಮನಸ್ಸು ಅತಿಯಾದ ವಿಚಾರಕ್ಕೆ ತೊಡಗುವದಿಲ್ಲ. ಅತಿಯಾದ ವಿಚಾರವೇ ಮನಸ್ಸಿನ ಅನಿಯಂತ್ರಣಕ್ಕೆ ಕಾರಣ.*
ಗುರುಗಳು : ಪಾಠಕ್ಕೆ ಬಂದ ವಿದ್ಯಾರ್ಥಿಗಳಲ್ಲಿ "ಈಡಿಯಟ್ ಯಾರಿದ್ದೀರೋ ಅವರು ಎದ್ದು ನಿಲ್ಲಿ" ಎಂದು ಹೇಳಿದರು.
ಯಾರೂ ಎದ್ದೇಳಲಿಲ್ಲ. ಒಬ್ಬ ವಿದ್ಯಾರ್ಥಿ ಎದ್ದು ನಿಂತ.
ಗು: ಏನೋ ನಿನ್ನನ್ನು ನೀನು ಒಬ್ಬನೇ ಈಡಿಯಟ್ ಎಂದು ಯಾಕೆ ಭಾವಿಸಿದಿ.. ??
ವಿ: ನಾ ಒಬ್ಬನೆ ಅಲ್ಲ ಸಾರ್ ! *ಈಗಾಗಲೇ ಎದ್ದೇ ನಿಂತ ಈಡಿಯಟ್ ಗುರುಗಳ ಜೊತೆಗೆ ನಾನೂ ಒಬ್ಬ ಎದ್ದು ನಿಂತೆ* ಸರಳವಾಗಿ ಉತ್ತರಿಸಿದ. ಇದು ಕೇವಲ ಉದಾಹರಣ ಮಾತ್ರ. ಇಂತಹದ್ದು ಈಗಿನ ಹುಡಗರಲ್ಲಿ ನಿತ್ಯ ನೂರಾರು ಕಾಣುತ್ತೇವೆ.
ಯಾಕೆ ಹೀಗೆ .. ??
ಆ ವಿದ್ಯಾರ್ಥಿಗೆ ಭಾವನೆ ಇಲ್ಲ. ಭಾವನೆ ಇಲ್ಲದ ವ್ಯಕ್ತಿಗೆ ಗುರು ಆದರೇನು ತಂದೆಯಾದರೇನು ತಾಯಿ ಗೆಳೆಯನಾದರೇನು ದೇವರಾದರೇನು ??
ಅವನಿಗೆ ಕೇವಲ ತನ್ನ ಬುದ್ಧಿವಂತಿಕೆ ಹಾಗೂ ಹಠ ಪ್ರದರ್ಶನ ಮುಖ್ಯವಾಗಿರುತ್ತದೆಯೇ ಹೊರತು, ಇನ್ನೇನೂ ಇರುವದಿಲ್ಲ.
ಅದರಲ್ಲಿ ಸಿಗುವದು ಕ್ಷುದ್ರ ಆನಂದ ಮಾತ್ರ.
ಭಾವನೆ ಶೂನ್ಯವಾದಾಗ, ವಿಚಾರ ಅತಿಯಾಗತ್ತೆ. ವಿಚಾರಗಳನ್ನು ನಮ್ಮ ನಿಯಂತ್ರಣಕ್ಕೆ ತರುವದೇ ಭಾವನೆಗಳು. ವಿಚಾರಗಳ ಮೇಲಿನ ನಿಯಂತ್ರಣ ಕಳೆದುಕೊಂಡ ವ್ಯಕ್ತಿ ಹಿಂಸೆಗೆ ಇಳಿದೇ ಬಿಡುತ್ತಾನೆ. ಇದು ಹಿಂಸಾತ್ಮವಾಗಿ ಮನಸ್ಸನ್ನು ಬೆಳಿಸಿಕೊಂಡ ಎಲ್ಲರ ಸ್ಥಿತಿಯೂ ಹೀಗೆ.
ಹೀಗೆಂದ ಮಾತ್ರಕ್ಕೆ ಕೇವಲ ಭಾವನೆಯೊಂದೇ ಮುಖ್ಯ ಎಂದಾಗಲ್ಲ. ಕೇವಲ ಭಾವನೆ ಕುರುಡ ಭಕ್ತಿಯನ್ನು ಹುಟ್ಟಿಸುತ್ತದೆ. ಕೇವಲ ಯುಕ್ತಿಯುಕ್ತವಾದ ಭಾವುಕತೆ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡಲು ಸಮರ್ಥ. ಯುಕ್ತಿಯುಕ್ತವಾದ ಭಾವುಕತೆಯಿಂದ ಶೂನ್ಯವಾದ ವಿಚಾರ ಹಿಂಸೆಯಯಲ್ಲಿಯೇ ಪರ್ಯವಸಾನವಾಗುತ್ತದೆ. ಆದ್ದರಿಂದ ಕೇವಲ ತೀಕ್ಷ್ಣ ಬುದ್ಧಿಯೂ ಅನುಪಯುಕ್ತ. ಕೇವಲ ಭಾವುಕತೆಯೂ ಅನುಪಯುಕ್ತ. ಯುಕ್ತಿಯುಕ್ತವಾದ ಭಾವುಕತೆ ಸಾರ್ಥಕ.
ಭಾವುಕತೆಯಿಂದ ಭಾವನೆಗಳಿಂದ ಕೂಡಿದ ವೈಚಾರಿಕತೆಯ ಮನಸ್ಸು ಪರರನ್ನು ಹಿಂಸಿಸಲಾರದು. ಪರರ ಕಷ್ಟಕ್ಕೆ ಸ್ಪಂದಿಸುವಂತಹದ್ದಾಗುತ್ತದೆ.
ಇಂದು ಭಾವನೆಗಳು ಮಹತ್ವ ಕಳೆದುಕೊಂಡ ಕಾಲ. ಅಂತೆಯೇ ದೇವರು ಧರ್ಮ ತಂದೆ ತಾಯಿ ಗೆಳೆಯ ಗೆಳತಿ ಎಲ್ಲ ಕಡೆಯೂ ಬಾಯಿ ಮುಚ್ಚುಸುವ ವಿಧಾನವೇ ಹೆಚ್ಚಾಗಿದೆ. ಹಾಗಾಗಿ ನಮ್ಮ ಮನಸ್ಸು ಹಾಗೂ ಪರರ ಮನಸ್ಸು ಎರಡೂ ಹಿಂಸಾತ್ಮಕವಾಗಿವೆ. ಇದರಿಂದ ಇಂದು ಹೊರಬರಲೇಬೇಕಾದ ಅನಿವಾರ್ಯತೇ ಇದ್ದೆ ಇದೆ. ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡುವ ಹೊಣೆಗಾರಿಕೆ ತಂದೆ ತಾಯಿ ಗುರು ಇವರುಗಳಿಗೆ ಅತಿ ಮುಖ್ಯವಾಗಿದೆ......
ನನ್ನಂತೆ ನೂರಾರು ಜನರ ಮನಸ್ಸು ಹಿಂಸಾತ್ಮಕವಾಗಿ ಭುವಿಗಿಳಿದರೆ ಭುವಿಯೇ ರಣರಂಗವಾಗಿಬಿಡುತ್ತದೆ. ರಣರಂಗವಾಗದೆ ಇರುವಂತೆ ಮಾಡಿ ಸ್ನೇಹರಂಗವನ್ನು ಮಾಡಬೇಕು.....
*✍🏼✍🏼✍🏼ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ.
Comments