ಮನಸ್ಸಿನಲ್ಲಿ ಕಸವಿದೆಯಾ....*
ಮನಸ್ಸು ಒಂದ ಅಗಾಧವಾದ ವಸ್ತು. ಇಂದಿನ internet ಅನ್ನು ನೂರುಪಟ್ಟು ಮೀರಿಸುವ ಪದಾರ್ಥ ಎಂದರೆ ಅದು ಮನಸ್ಸು. ಮನಸ್ಸಿನ ವೇಗ ಊಹಾತೀತ. ವಾಯುವೇಗಕ್ಕೆ ಸಮ. ಮನಸ್ಸಿನಲ್ಲಿ ಎಷ್ಟಾದರೂ store ಮಾಡಿಡಬಹುದು. ಲಕ್ಷ tb ಮೀರಿಸುವ hard disk ಎಂದರೆ ಅದೂ ಸಣ್ಣದಾಗಬಹುದು. ಕುಳಿತಲ್ಲಿಯೇ ಕಣ್ಣಿಗೆ ಕಾಣದ ಕಾಲ ದೇಶದ ಅನುಭವಕ್ಕೆ ತಂದುಕೊಳ್ಳಬಹುದು ಅದು ಕೇವಲ ಮನಸ್ಸಿನಿಂದ. ಮುಂದೇನಾಗಬಹುದು ಎನ್ನುವದನ್ನು ಮನಸ್ಸು ಗ್ರಹಿಸುತ್ತದೆ. ಹಿಂದೆ ಆಗಿಹೋದ ತಪ್ಪನ್ನು ಮತೆ ಆಗದಂತೆ ಎಚ್ಚರಿಸುತ್ತದೆ. ಒಂದು ದಿವನ ದೇವರ ದರ್ಶನವಾಗುವದೂ ಈ ಮನಸ್ಸಿನಲ್ಲಿಯೇ.
ಇಚ್ಛೆ ಕಾಮ ಹಪಹಪಿ ದ್ವೇಶ ಮತ್ಸರ ಪ್ರೀತಿ ಪ್ರೇಮ ಸುಖ ದುಃಖ ಜ್ಙಾನ ಅಜ್ಙಾನ ಭಯ ಭೀತಿ ಭಕ್ತಿ ಸ್ನೇಹ ಸಿಟ್ಟು ನೆನಪು ಮರೆವು ಬೇಕುಬೇಡಗಳ ಗೊಂದಲ ನಿರ್ಣಯ ಇತ್ಯಾದಿ ಇತ್ಯಾದಿ ಆಗುವದು ಮನಸ್ಸಿನಿಂದಲೇ.
"ಜೀವನ ಜೀವನಕ್ಕೆ ಮನಸ್ಸು ತುಂಬ ಮುಖ್ಯ" ಮನಸ್ಸಿಲ್ಲವೋ ಅವ ಜಡಕ್ಕೆ ಸಮ. ಮನಸ್ಸಿದೆ ಎಂದಾದರೆ ಅವ ಜೀವ ಚೇತನ ಎಂದು ಕರೆಸಿಕೊಳ್ಳುತ್ತಾನೆ.
ಈ ಮನಸ್ಸು ಜನಿಸಿದ್ದು ವಾಯು ಬ್ರಹ್ಮರಿಂದ. ಈ ಮನಸ್ಸನ್ನು ನಿಯಮಿಸುವ ದೇವತೆ ವಿಷ್ಣು. ಅಭಿಮಾನಿ ದೇವತೆ ಲಕ್ಷ್ಮೀ, ಬ್ರಹ್ಮ, ಗರುಡ ಶೇಷ ಶಿವ ಶಿವಾಣೀ ಇಂದ್ರ ಚಂದ್ರ ಇತ್ಯಾದಿ ಅನೇಕರು. ಮುಖ್ಯವಾಗಿ ಶಿವಮ. ಮನಸ್ಸಿನಿಂದಲೇ ದುಃಖ. ಮನಸ್ಸಿನಿಂದಲೇ ಸುಖ. ಸುಖದುಃಖಗಳಿಗೆ ಮನಸ್ಸೇ ಮೂಲ. "ಮನಸ್ಸು ಒಂದುಥರಹ clay. ಇದ್ದ ಹಾಗೆ" ಯಾವುದೇ ತರಹದ ಪರಿಣಾಮಕ್ಕೂ ಸಿದ್ದ. ಸಂಸಾರದಲ್ಲಿ ನೂಕಲೂ ಸಿದ್ಧ, ಮುಕ್ತನನ್ನಾಗಿಸಲೂ ಸಿದ್ಧ.
*ಇಂತಹ ಅಪರೂಪದ ಮನಸ್ಸನಲ್ಲಿ ಕಸವಿದೆಯಾ...??*
ಕಸ ಬೇಡವಾದ ವಸ್ತುವಿನಿಂದ. ಸ್ವಚ್ಛತೆ ಬೇಡವಾದ ವಸ್ತುವನ್ನು ಹೊರಚೆಲ್ಲುವದರಿಂದ.
ಮನೆಯಲ್ಲಿ ಎಲ್ಲಿನೋಡಿದಲ್ಲಿ ಬೇಡವಾದ plasticks - papers ತುಂಬಿ ಹೋಗಿವೆ. ಆ ಕಾರಣದಿಂದಲೇ ಬೇಕಾದ ಬೆಳ್ಳಿ ಭಂಗಾರ ವಜ್ರ ಮೂಲೆಗುಂಪು ಆಗಿವೆ, ಹಾಗೆಯೆ ಈ ಮನಸ್ಸಿನಲ್ಲಿ ಹೊರಗಿನದಾದ ಬೇಡವಾದ ಇನ್ನೊಬ್ಬರ ವಿಚಾರಗಳೇ ತುಂಬಿ ಹೋಗಿವೆ. ಅತ್ಯವಶ್ಯಕವಾದ ಬೆಳ್ಳಿ ಬಂಗಾರ ವಜ್ರಗಳಂತಹ ನನ್ನದೇ ಆದ "ನಾನು, ನನ್ನ ಹಿತ , ನನ್ನ ದೇವರು , ನನ್ನ ಧರ್ಮ, ನನ್ನ ಗುಣಗಳು, ನನ್ನ ದೇವರ ಪ್ರೀತಿ ಇವೆಲ್ಲ ಮೂಲೆಗುಂಪಾಗಿವೆ.
ಬೇಡವಾದ Plastic paper ಗಳ ರೂಪ ಕಸ ತುಂಬಿದ ಮನೆ ಸ್ವಚ್ಛವಿರಲು ಸಾಧ್ಯವಿಲ್ಲ. ಬೆರೆವಿಚಾರಗಳೇ ತುಂಬಿದ ಈ ಮನಸ್ಸಿನಲ್ಲಿ ದೇವರು ಶಾಸ್ತ್ರ ಧರ್ಮ ಭಕ್ತಿ ಪ್ರೇಮ ಅಂತಃಕರಣ ವಿಶ್ವಾಸವೆಂಬ ಸ್ವಚ್ಛತೆ ಬರಲು ಸಾಧ್ಯವಿಲ್ಲ. "ದುರ್ವಿಚಾರಗಳನ್ನು ಹೊರ ಹಾಕದ ಹೊರತು, ದುರ್ಗುಣಗಳನ್ನು ದೂರಿಕರಿಸಲಾಗದು, ದುರ್ಗುಣಗಳನ್ನು ಹೊರಹಾಕದ ಹೊರತು ಸದ್ಗುಣಗಳ ಅಭಿವ್ಯಕ್ತಿ ಆಗದು."
"ಸಿಹಿನೀರಿನ ಗಂಗೆ ಶಾಂತವಾಗಿ ಹರೆದರೆ, ಉಪ್ಪುನೀರಿನ ಸಮುದ್ರ ಅಲ್ಲೋಲಕಲ್ಲೋಲವಾದ ಅಲೆಗಳನ್ನು ಎಬ್ಬಿಸುತ್ತಿರುತ್ತದೆ" ಹಾಗೆ ಎನ್ನ ಮನಸು.
ಮನೆಯಲ್ಲಿ ಕಸವಿದ್ದಾಗ ಸ್ವಚ್ಛವಿಲ್ಲ. ಮನಸ್ಸಿನಲ್ಲಿ ದುರ್ವಿಚಾರಗಳು ಸೇರಿಕೊಂಡಾಗ ಶಾಂತಿ ಸಮೃದ್ಧಿಗಳಿಲ್ಲ. ಮನೆ ಸ್ವಚ್ಛತೆಗಿಂತಲೂ ಮನಸ್ಸಿನ ಸ್ವಚ್ಛತೆ ತುಂಬ ಮುಖ್ಯ. ಸ್ವಚ್ಛವಾದ ಮನಸ್ಸು ದೇವರನ್ನೇ ತೋರಿಸಲು ಹಿಂದು ಮುಂದು ನೋಡುವದಿಲ್ಲ. ಸಚ್ಚವಾದ ಮನಸ್ಸು ಶಾಸ್ತ್ರವನ್ನೇ ಹಪಹಪಿಸುತ್ತದೆ. ಸ್ವಚ್ಛವಾದ ಮನಸ್ಸು ಏನು ಮಾಡಿದರೆ ಸುಖ ಶಾಂತಿ ಸಮೃದ್ಧಿ ಇದೆ ಆ ಕಡೆ ಗಮನಹರಿಸುತ್ತದೆ. ಸ್ವಚ್ಛವಾದ ಮನಸ್ಸು ಮುಂದೆ ಬರುವ ಕೆಡಕನ್ನು ಗುರುತಿಸಿ ಎಚ್ಚರಿಸುತ್ತದೆ. ಸ್ವಚ್ಛಮನಸ್ಸೇ ನಮಗೆ ಅಂತಿಮ ಹಿತೈಷಿ.
ಕುದುರೆಯಂತಿದೆ ಎನ್ನ ಮನಸ್ಸು. ಲಗಾಮು ಇದ್ದರೆ ಎನ್ನ ಹಿಡಿತದಲ್ಲಿರತ್ತೆ. ಲಗಾಮು ಬಿಟ್ಟರೆ ಕಂಡಲ್ಲಿ ಓಡುತ್ತದೆ. ಸಾಕುವ ಸವಾರನನ್ನೂ ಕೆಳಗೆ ಬೀಳಿಸಿ ಘಾಸಿ ಮಾಡುತ್ತದೆ. ಮತ್ತೆ ಅವನ ಸನಿಹವೇ ಬಂದು ಕೂಡುತ್ತದೆ. ಅವನಿಲ್ಲದೇ ಕುದರೆಯನ್ನು ಸಾಕುವರ್ಯಾರಿಲ್ಲ ಹೇಗೋ ಹಾಗೆಯೇ ನಾನಿಲ್ಲದೇ ಮನಸ್ಸೂ ಇಲ್ಲ. ಮನಸ್ಸಿಗೆ ನನ್ನ ಅವಶ್ಯಕತೆಯೂ ಅಷ್ಟು ಇದೆ.
ಇಂತಹ ಮನಸ್ಸನ್ನು inbilt ಆಗಿ ಉಚಿತವಾಗಿ ದಯಪಾಲಿಸಿದವ ನಮ್ಮ ಹೆಮ್ಮೆಯ ಒಡೆಯ ನಾರಾಯಣ. ಮನಸ್ಸೊಂದನ್ನು ಸರಿಯಾಗಿ ಇಟ್ಟ ಕಾರಣವೇ ನಾವು ಬುದ್ಧಿವಂತರು ಹುಚ್ಚರಲ್ಲ ಎಂದಾಗಿರೋದು. ಮನಸ್ಸು ಜಾರಿದ್ದರೆ ನಾನು ಯಾವ ಪ್ರಪಾತಕ್ಕೆ ಹೋಗಿ ಸೇರುತ್ತಿದ್ದೆನೋ ಊಹೆ ಮಾಡಲಾಗುತ್ತಿಲ್ಲ.
ಮನಸ್ಸು ಹೇಗೆ ಮೇಲೊಯ್ಯುತ್ತದೆಯೋ ಹಾಗೆ ಪ್ರಪಾತಕ್ಕೆ ಜಾರಿಸುತ್ತದೆ. ಜಾರದಿರುವ ಹಾಗೆ ನೋಡಿಕೊಂಡ ಆ ದೊರೆಗೆ ಅನಂತ ನಮನಗಳು. ಮನಸ್ಸನ್ನು ದಯಪಾಲಿಸಿದ ದೊರೆಗೆ ಮತ್ತೆ ಅನಂತ ನಮನಗಳು. ಮನಸ್ಸನ್ನು ಉಪ್ಪುನೀರಿನ ಸಮುದ್ರ ಮಾಡದೆ ಶಾಂತ ನದಿಯಂತೆ ಹರಿಸುವ ನಿನಗೆ ಎನ್ನ ನಮನಗಳು. ಎನ್ನ ಮನಸ್ಸಿನ ಕಸಗೂಡಿಸಲು ಮತ್ತೆ ಅನಂತ ನಮನಗಳು.
*✍🏽✍🏽..ನ್ಯಾಸ*
ಗೋಪಾಲ ದಾಸ
ವಿಜಯಾಶ್ರಮ,
Comments