Posts

*ಅಸಾಧ್ಯವಾದದ್ದನ್ನೇ ಬಯಸು......*

*ಅಸಾಧ್ಯವಾದದ್ದನ್ನೇ ಬಯಸು......* "ಅಸಾಧ್ಯವಾದದ್ದನ್ನೇ ಬಯಸು" ಇದು ಭೀಮಸೇನದೇವರ ನೇರ ಹಾಗೂ ದಿಟ್ಟ ಮಾತು. ಯಥಾಸ್ಥಿತವಾದ ಮಾತು. ಅಸಾಧ್ಯವಾದದ್ದನ್ನು ಬಯಸು ಎಂದರೆ, ಯಾವದು ಅಪ್ರಾಪ್ಯವೋ ಅದನ್ನು ಬಯಸು ಎಂದರ್ಥ. ಪ್ರಾಪ್ಯವಾದದ್ದು ಯಾವುದೋ ಸಾಧ್ಯವಾದದ್ದು ಯಾವದೋ ಅದನ್ನು ಬಯಸಬೇಕು ನಿಜ.  ಯಾವದು ಸಿಗಬಹುದೋ ಅದನ್ನು ಏನೆಂದು ಬಯಸುವದು... ??? ಯಾವುದು ಸಿಕ್ಕೇಬಿಡುವದು ಅದನ್ನು ಬೇಡುವದಾದರೂ ಏತಕ್ಕೆ.... ?? ಬೇಡಲೇ ಬೇಕೆಂದರೆ, ಬಯಸಲೇ ಬೇಕೆಂದರೆ ಯಾವದು ಅಸಾಧ್ಯವೋ ಯಾವದು ಅಪ್ರಾಪ್ಯವೋ ಅದನ್ನೇ ಬೇಡಿ ಬಯಸಬೇಕು. ನಿಮ್ಮ ವಾದ ಬಲು ವಿಚಿತ್ರವಾಗಿದೆ ಅಲ್ವೆ.... ಏಕೆಂದರೆ ಯಾವದು ಸಿಗುವದೇ ಇಲ್ಲ ಅದನ್ನು ಬೇಡುವದರಲ್ಲಿ ಅರ್ಥವೇನಿದೆ ?? ನಿಶ್ಚಿತವಾಗಿಯೂ ಸಿಗದಿರುವದಾಗಿದ್ದರೆ, ಅದನ್ನು ಇಚ್ಛಿಸಿ ಪ್ರಯೋಜನವಾದರೂ ಏನು.. ?? ಎಲ್ಲ ನಿಜ. ನಮ್ಮಿಂದ ಸಾಧಿಸಲ್ಪಡುವಂತಹ ವಸ್ತುಗಳು ಸಾಮಾನ್ಯವಾಗಿ ನಮಗೆ ಸುಲಭ ರೀತಿಯಲ್ಲಿ ಖಂಡಿತವಾಗಿಯೂ ಸಿಗುವಂತಹವುಗಳೇ ಆಗಿರುತ್ತವೆ. ಯಾಕೆಂದರೆ ಅವುಗಳನ್ನು ಪಡೆದುಕೊಂಡೇ ಹುಟ್ಟಿರುತ್ತೇವೆ. ಅನ್ನ ನೀರು ಘಾಳಿ ಸೂರು ಕುಟುಂಬ ರೋಗ ಆರೋಗ್ಯ ಧನ ಕನಕ ಹೆಂಡತಿ ಮಕ್ಕಳು ಇತ್ಯಾದಿ ಇತ್ಯಾದಿ ..... ಯಾವದು ನಮಗೆ ಸಿಗುವದೇ ಇಲ್ಲವೋ ಅದಕ್ಕಾಗಿ ಎಷ್ಟು ಶ್ರಮಪಟ್ಟರೂ ಎಷ್ಟು ಇಚ್ಛಿಸಿದರೂ ಅದು ಸಿಗುವದೇ ಇಲ್ಲ.ಅದು ಅಪ್ರಾಪ್ಯವೇ. ಅದುವೂ ಅಷ್ಟೇ ನಿಶ್ಚಿತ. ಇದರಲ್ಲಿಯೂ ಸಂದೇಹವಿಲ್ಲ.  ಬ್ರಹ್ಮ ಪದ...

*ಪಡೆದು ಮರೆಯುವರು ಆಗದೆ, ಕೊಟ್ಟು ಮರೆಯುವರು ಆಗಬೇಕು.....*

*ಪಡೆದು ಮರೆಯುವರು ಆಗದೆ, ಕೊಟ್ಟು ಮರೆಯುವರು ಆಗಬೇಕು.....* ಮರೆವು ಸಾಮಾನ್ಯ. ಮರೆವುನಲ್ಲಿಯೂ ಮನುಷ್ಯ ತಾ ಎಡವಟ್ಟು ಮಾಡಿಕೊಳ್ಳತ್ತಾನೆ. "ಹೆಚ್ಚು ಪಡೆದೇ ಮರೀತಾನೆ. ಅದಾಗದೆ ಕೊಟ್ಟು ಮರೀಬೇಕು." ಕೊಟ್ಟದ್ದು ನೆನಪು ಉಳಿಸಿಕೊಳ್ಳುತ್ತಾನೆ. ನಾ ಅದು ಕೊಟ್ಟೆ. ಇದು ಕೊಟ್ಟೆ ಹೀಗೆ. ಕೊಟ್ಟಿದ್ದೇನಾದರೂ ಬಹಳಷ್ಟಿದೆಯಾ... ??? ಅದೂ ಇರದು. ಒಂದು ಸೀರೆ ಧೋತ್ರ ಕೊಟ್ಟಿರುತ್ತಾನೆ. ಅದನ್ನು ನೆನಪಿಟ್ಟು ಕುಳಿತರೆ, ಆಧೊತ್ರ ಸೀರಿ ಇಷ್ಟರಲ್ಲಿ ಎಷ್ಟು ಕೈ ಬದಲಾಗಿರುತ್ತದೆಯೋ ಆ ಭಗವಾನ್ ಜಾನೆ.... ಆದರೆ ನಾ ಕೊಟ್ಟೀನಿ ನಾ ಕೊಟ್ಟೀನಿ ಅಂತ ಮಾತ್ರ ಇದ್ದೇ ಇರುತ್ತದೆ. ತುಂಬ ಚಿಕ್ಕವರು. ಒಂದು ಪ್ರಸಿದ್ಧ ಕ್ಷೇತ್ರಕ್ಕೆ ಹೊಗಿದ್ದೆವು. ಅಲ್ಲಿ ನಮ್ದೆಲ್ಲ  ಏನೋ ಜೋರು ಖಾರುಬಾರು ನಡದಿತ್ತು. ಆಗ ಒಬ್ಬರು ಬಂದು "ಏ ಮರಿಗಳೆ ಈ ಬಿಲ್ಡಿಂಗ್ ಅದಲಾ, ಅದನ್ನ ನಾನೇ ಕಟ್ಲಿಕ್ಕ ಹಣ ಕೊಟ್ಟಿದ್ದು" ಎಂದು. ನಮಗೋ ಆಶ್ಚರ್ಯ.. ಗೌರವ.. ಇವರಿಗೆ ನಮ್ಮಿಂದೇನರೆ ಅಪಚಾರವಾಯಿತೋ ಏನೋ ಎಂದು ಭಯ... ಅಷ್ಟರಲ್ಲಿ ವ್ಯವಸ್ಥಾಪಕರು ಬಂದರು. ನಾವು ಹೋಗಿ ಕೇಳಿದೆವು, ಬಿಲ್ಡಿಂಗ್ ಕಟ್ಟಲು ಪೂರ್ಣ ಹಣ ಅವರೇ ಕೊಟ್ಟಿದಾರೆ ಅಂತ ಅಲಾ... ನಮ್ಮಿಂದ ಏನರೆ ಅವಮಾನ ಆಯ್ತೇನೋ ಅಂತ ಘಾಬರಿಯಿಂದ ಹೇಳಿದವು. ಆಗ ವ್ಯವಸ್ಥಾಪಕರು ಹೇಳಿದರು, "ಅವರು ಅಂದು ಕೊಟ್ಟಿದ್ದು ಕೇವಲ ೦೫ ರೂ ಗಳನ್ನು ಮಾತ್ರ" ಎಂದು. ಒಂದೇ ಕ್ಷಣದಲ್ಲಿ ವ್ಯಕ್ತಿಯ ಬಗ್ಗೆ ...

*ಮನಸ್ಸನ್ನು ಧ್ಯಾನದ ಚಾಪೆಯಲ್ಲಿ ಸ್ಥಾಪಿಸಿ.....*

Image
*ಮನಸ್ಸನ್ನು ಧ್ಯಾನದ ಚಾಪೆಯಲ್ಲಿ ಸ್ಥಾಪಿಸಿ.....* ಸ್ವಯಂ ಚಂಚಲ, ಸ್ಥಿರ ಹಿತೈಷಿಯಾದ ಬುದ್ಧಿಯ ಮಾತೂ ಕೇಳದು, ಅಂತಹದ್ದೊಂದು ಪದಾರ್ಥ ಅಂದರೆ ಅದುವೇ ಮನಸ್ಸು. ಈ ಮನಸ್ಸಿನ ಜೊತೆಗೆ ಇರುವಾಗ ತಾಳ್ಮೆ ತುಂಬ ಮಹತ್ವ. ಮನಸ್ಸಿನ ಸಂಘರ್ಷಗಳು ಸಾವಿರಾರು. ಸಂಘರ್ಷದಿಂದ ವಿಷವೂ ಹುಟ್ಟಬಹುದು. ಅಮೃತವೂ ಹುಟ್ಟಬಹುದು. ಆರೋಗ್ಯಪೂರ್ಣ ಧನ್ವಂತರಿಯೂ ಹುಟ್ಟಬಹುದು. ಸುಖಪೂರ್ಣ ಲಕ್ಷ್ಮಿಯೂ ಹುಟ್ಟಬಹುದು. *ಮನಸ್ಸಿಗೊಂದು ಗುರಿ ಇರಬೇಕು....* ಗುರಿ ಇದ್ದರೆ ಕೆಲಸ ಮಾಡತ್ತೆ. ಇಲ್ಲವೋ ಕೆಟ್ಟ ಆಲಸಿ. ಬೇಗ ಏಳಲು ನಿರ್ದಿಷ್ಟ ಕಾರಣಗಳಿಲ್ಲದಿದ್ದರೆ, ಹನ್ನೊಂದಾದರೂ ಏಳಲು ಮನಸ್ಸೇ ಮಾಡದು. ಅಂತಹ ಆಲಸಿ ಮನಸ್ಸು. ಆ ಮನಸ್ಸಿಗೆ ಆತರಹದ ಟ್ರೈನಿಂಗ ಅಂತೂ ನಾವೇ ಕೊಟ್ಟಿದ್ದೇವೆ ಅಂದರೆ ತಪ್ಪಾಗದು. *ಈ ಆಲಸೀ ಮನಸದಸನ್ನು ಬದಲಾಯಿಸುವದು ಹೇಗೆ.... ???* ವ್ಯೋಮನೌಕೆ ಇಡೀ ಭೂಮಿಯನ್ನು ಸುತ್ತಲು ಬೇಕಾದ ಇಂಧನವನ್ನು ಪಯಣದ ಆರಂಭದ ನಿಮಿಷಗಳಲ್ಲಿ ಬಳಿಸುತ್ತದೆ.  ಏಕೆಂದರೆ ಆರಂಭದಲ್ಲಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಧಿಕ್ಕರಿಸಿ  ಮೇಲೇರಲು ಹೆಚ್ಚೆಚ್ಚು ಶಕ್ತಿ ಬೇಕಾಗುತ್ತದೆ. ಒಂದುಬಾರಿ ಮೇಲೇಹೋದರೆ ಯೃಏಚ್ಛ ವಿಹಾರ ಮಾಡುತ್ತದೆ.  ಹಾಗೇಯೇ.... ಮನಸ್ಸನಲ್ಲೂ ಸಹ. ಬದಲಾವಣೆಯ ಪ್ರಕ್ರಿಯೆ ಆರಂಭದಲ್ಲಿ ತುಂಬ ಕಷ್ಟ. ಅದು ಒಂದೇ ದಿನದಲ್ಲಿ ಸಂಭಿವಿಸದು. *ಹಳೆಯ ಅಭ್ಯಾಸದ ಸೆಳೆತವನ್ನು ಧಿಕ್ಕರಿಸಿ ಕೆಕ್ಕರಿಸಿ ಮೇಲೇಳಲು ಸಾಕಷ್ಟು ಸಮಯ...

*ಶ್ರೀ ಶ್ರೀ ಯಾದವಾರ್ಯರ ಆರಾಧನಾ ಮಹೋತ್ಸವ

Image
*ಶ್ರೀ ಶ್ರೀ ಯಾದವಾರ್ಯರ ಆರಾಧನಾ ಮಹೋತ್ಸವ* ಜ್ಙಾನಿಶ್ರೇಷ್ಠರಾದ, ವಿರಕ್ತಶಿಖಾಮಣಿಗಳಾದ, ವೇದವ್ಯಾಸದೇವರನ್ನೇ ಒಲಿಸಿಕೊಂಡ, ಪೀಠಾಧಿಪತಿಗಳಿಂದಲೂ ವಂದ್ಯರಾದ, ಮಹಾನ್ ಟಿಪ್ಪಣೀಕಾರರಾದ, *ಶ್ರೀ ಶ್ರೀಯಾದವಾರ್ಯರ* ಆರಾಧನಾ ಮಹೋತ್ಸವ ಇಂದು. ಒಂದು ಕಾಲದ ಭಂಗಾರದ ದೊಡ್ಡವ್ಯಾಪರಸ್ಥರು ಅಂತೆಯೇ ಚಿನಿವಾರರು ಎಂದೇ ಪ್ರಸಿದ್ಧರು.  ಯಾದವಾರ್ಯರ ಪೂರ್ವಾಶ್ರಮದ ಅಣ್ಣಂದಿರು ಮಹಾಜ್ಙಾನಿಗಳು, ಟಿಪ್ಪಣೀಕಾರರು, ವಿರಕ್ತಪುರುಷರು *ಶ್ರೀವೇದೇಶತೀರ್ಥರು.*  ಆ ವೇದೇಶತೀರ್ಥರಲ್ಲಿ ಅಧ್ಯನ ಮಾಡಿದ ಮಹಾನ್ ಮೇಧಾವಿಗಳು ಶ್ರೀ ಯಾದವಾರ್ಯರು. *ಶ್ರೀಮನ್ಯಾಯಸುಧಾ ವ್ಯಾಖ್ಯಾತೃಗಳು* ಶ್ರೀಮನ್ಯಾಯಸುಧ ಗ್ರಂಥಕ್ಕೆ ನಾಲಕನೆಯ ಅಥವಾ ಐದನೆಯ ವ್ಯಾಖ್ಯಾನವೇ *ಯಾದುಪತ್ಯ.* ಶ್ರೀಗುರುಸಾರ್ವಭೌಮರಾದ ರಾಯರ ಸಮಕಾಲೀನರು ಯಾದವಾರ್ಯರು. ಶ್ರೀರಾಯರು ಪರಿಮಳ ಸಹಿತ ಶ್ರೀಮನ್ಯಾಯಸುಧಾ ಮಂಗಳ ಮಾಡುವಾಗ *ಯಾದಪ್ಪ ಇದ್ದಿದ್ರೆ ಚೊಲೊ ಆಗ್ತಿತ್ತು* ಎಂದು ಹೇಳಿದರು. ಆಗ ದೂರದಲ್ಲಿ ಕಂಬಲ ಹೊದ್ದು ಕುಳಿತ ವ್ಯಕ್ತಿ *ನಿಮ್ಮ ಯಾದಪ್ಪ  ಇಲ್ಲೇ ಇದ್ದಾನೆ* ಎಂದು ಕೈ ಎತ್ತಿ ಉತ್ತರಿಸಿದರು ಅಂತೆ ಕಥೆ ಕೇಳ್ತೇವೆ. ಇದು ಯಾದುಪತ್ಯ ಟಿಪ್ಪಣಿಯ ಒಂದು ವೈಭವ. *ಶ್ರೀಮದ್ಭಾಗವತ ಟೀಕಾ* ಶ್ರೀಮದ್ಭಾಗವತಕ್ಕೆ ವಿಜಯಧ್ವಜರತೀರ್ಥರ ತರುವಾಯ ಟೀಕೆ ಬರೆದ ಮಹಾನುಭಾವರು ಯಾದವಾರ್ಯರು. ಕೇವಲ ಐದು ಸ್ಕಂಧಗಳಿಗೆ ಬರೆದರೂ, ಸಮಗ್ರ  ಭಾಗವತ ಹೇಗೆ ಅಧ್ಯಯನ ಮಾಡಬಹುದು ಎನ್ನ...

*ದೇವರಲ್ಲಿ ನಂಬಿಕೆ, ವಿಶ್ವಾಸಗಳಿದ್ದರೆ ಭಕ್ತಿ ಸಾರ್ಥಕ..*

Image
*ದೇವರಲ್ಲಿ ನಂಬಿಕೆ, ವಿಶ್ವಾಸಗಳಿದ್ದರೆ ಭಕ್ತಿ ಸಾರ್ಥಕ..* ದೇವರ ಅಸ್ತಿತ್ವವನ್ನು ಒಪ್ಪಿಕೊಂಡವ ಆಸ್ತಿಕ. ಅಂತೆಯೇ ದೇವರನ್ನು ನಂಬದವರಿಗಿಂತಲೂ ನಂಬಿದವ ಅತ್ಯಂತ ಯೋಗ್ಯ. ನಂಬಿಕೆಗೆ ಮೂಲ ವಿಶ್ವಾಸ. ವಿಶ್ವಾಸಕ್ಕೆ ಯೋಗ್ಯ ನಂಬಿಕೆ. ಆಸ್ತಿಕರಾದ ನಾವು ಭಕ್ತಿ ಇಂದಲೇ ದೇವರ ಪೂಜೆ ಮಾಡುತ್ತೇವೆ. ಆದರೆ ಏನನ್ನೂ ಪಡೆಯಲು ಆಗುವದಿಲ್ಲ. "ಈ ದೇವರಲ್ಲಿ ಯಾಕಪ್ಪಾ ಭಕ್ತಿ ಮಾಡಿದೆ" ಎಂದು ಹತಾಶನಾಗುವ ಸಂಭವ ಹೆಚ್ಚಾಗಿ ಕಾಣುತ್ತದೆ. ಅನುಭವಿಸುದ್ದೇವೆ. ಹತಾಶೆ ಭಕ್ತಿಯನ್ನು ಕ್ಷೀಣಿಸುತ್ತದೆ. *ಭಕ್ತಿಯ ರಕ್ಷಣೆ ಹೇಗೆ... ?? ಭಕ್ತಿ ದೃಢವಾಗಲು ಏನು ಮಾಡಬೇಕು... ??* ಭಕ್ತಿ ದೃಢವಾಗಲು ಮೂಲ ನಂಬಿಕೆ ವಿಶ್ವಾಸಗಳೇ.  *ದೇವ ರಕ್ಷಣೆ ಮಾಡುವ* ಎಂಬ ನಂಬಿಕೆ ಇಲ್ಲದೇ ಇರುವದರಿಂದಲೋ ಏನೋ, ದೇವರಿಗೆ ಬೇಡುತ್ತೇವೆ. ಅಥವಾ ನಮ್ಮ ರಕ್ಷಣೆಗೆ ನಾವೇ ಹೊಣೆಗಾರರು ಎಂಬಂತೆ ಹೋರಾಡುತ್ತೇವೆ. ಶ್ರೀಮದ್ಭಾಗವತ ತಿಳಿಸುತ್ತದೆ *ನಿಯತಾರ್ಥೋ ಭಜೇತ* ಮಾಡುವ ಭಗವತ್ಕಾರ್ಯದಲ್ಲಿ  ರಕ್ಷಣೆ ಮಾಡಿಯೇ ಮಾಡುತ್ತಾನೆ, ಫಲ ಸಿದ್ಧ ಎಂದು ದೃಢವಾದ ವಿಶ್ವಾಸದಿಂದಲೇ ಪೂಜೆ ಮಾಡು ಎಂದು. *ಕ್ಷುದ್ರವಿಷಯಗಳಲ್ಲಿಯೇ ನಂಬಿಕೆ ಹೆಚ್ಚು.....* ತುಂಬ ವಿಚಿತ್ರ ಬೆಕ್ಕು ಅಡ್ಡ ಹೋದರೆ ಎಷ್ಟು ನಂಬುತ್ತೇವೆ, ಅಷ್ಟು ಬೇಡ, ಆ ನಂಬಿಕೆಯ ಶತಾಂಶ  " *ದೇವರ ನಾಮ* ಈ ತರಹದ ಅಪಶಕುನಗಳಿಂದ ಸೂಚಿತವಾದ ಎಲ್ಲಾ ದೋಷಗಳನ್ನು  ಪಾಪಗಳನ್ನೂ ಪರಿಹರಿಸುತ್ತದೆ" ...

*ದೇವರು ಕೊಟ್ಟದ್ದು ಎಂದು ಎಲ್ಲವನ್ನೂ ಉಣ್ಣುವದು ಸರಿಯೇ..... ???*

*ದೇವರು ಕೊಟ್ಟದ್ದು ಎಂದು ಎಲ್ಲವನ್ನೂ ಉಣ್ಣುವದು ಸರಿಯೇ..... ???* ಜಗತ್ಸೃಷ್ಟಿಕಾರಕ ನಾರಾಯಣ. ಜಗತ್ತಿನ ಎಲ್ಲ ಪದಾರ್ಥಗಳೂ ದೇವರು ಕೊಟ್ಟಿರುವದೆ. ರೂಪ ಲಾವಣ್ಯ, ಮನೆ ಮಠ, ವಸ್ತ್ರ ವಸತಿ, ಅನ್ನ ನೀರು, ದೇಹ ಇಂದ್ರಿಯ, ಜ್ಙಾನ ಬುದ್ಧಿ, ನಡತೆ, ಆಸೆ ಸಿಟ್ಟು , ವಿಧಿ ನಿಷೇಧ, ಟೀವಿ ಪುಸ್ತಕ, ಮೋಬೈಲು ಪೂಜೆ, ಗುರು ಶಿಷ್ಯ, ತಂದೆ ತಾಯಿ, ಹೆಂಡತಿ ಮಗ,  ಹೀಗೆ ಪ್ರತಿಯೊಂದೂ ದೇವರು ಕೊಟ್ಟಿರುವದೇ. ಈ ಎಲ್ಲ ಪದಾರ್ಥಗಳೂ ದೇವರು ಕೊಟ್ಟಿದ್ದಾನೆ, ಎಂದು ಬೀಗಿ, ಎಲ್ಲ ಭೋಗ್ಯವಸ್ತುಗಳನ್ನೂ ಭೋಗಿಸುವದು ಸರಿಯೇ ??? ಶಾಸ್ತ್ರ ತುಂಬ ಚೆನ್ಬಾಗಿ ವಿವರಿಸುತ್ತದೆ. ಎಲ್ಲ ಪದಾರ್ಥಗಳೂ ದೇವರೇ ಕೊಡುವವ, ದೇವರಿಂದಲೇ ಹುಟ್ಟಿದ್ದು, ದೇವರೇ ಕೊಟ್ಟೂ ಇದ್ದಾನೆ ಇದು ನೂರಕ್ಕೆ ನೂರರಷ್ಟು ನಿಜ. ಅಂತ ಹೇಳಿ ದೊರೆತ ಎಲ್ಲವನ್ನೂ ಉಣ್ಣುವೆ, ಭೋಗಿಸುವೆ ಎನ್ನುವದು ಶುದ್ಧತಪ್ಪೇ...... *ಹಿತವಾದದ್ದನ್ನೇ ಭೋಗಿಸು* *ಕೊಟ್ಟದ್ದು ಸಾವಿರ. ಹಿತವಾದದ್ದು ನೂರು.* ಹಿತಾಹಿತ ವಿವೇಕ ಇರೋದರಿಂದ ಎಲ್ಲವನ್ನೂ ಭೋಗಿಸುವದು ಧಡ್ಡತನದ ಪರಮಾವಧಿ ಎಂದಾಗಬಹುದು. ಅತ್ಯಂತ ದೀರ್ಘಕಾಲೀನವಾಗಿ ಯಾವದು ಅತ್ಯಂತ ಹಿತವೋ ಅದನ್ನೇ ಭೋಗಿಸುವದು ಸೂಕ್ತ. *ಹಿತವಾಗಿದ್ದರೂ ಮಿತವೇ ಆಗಿರಬೇಕು*  ಹಿತ ಎಂದು ಹೇಳಿ ಎಲ್ಲವನ್ನೂ ಭೋಗಿಸುವದು ಭಾಗವತದ ದೃಷ್ಟಿಯಲ್ಲಿ  ತಪ್ಪೂ ಎಂದಾಗಬಹುದು. ಅಂತೆಯೇ ಹಿತವಾದದ್ದರಲ್ಲಿಯೂ ಮಿತವಾಗಿಯೇ ಭುಂಜಿಸು.  ಆದ್ದರಿಂದ ...

*ವೈಭವದ ನವರಾತ್ರೋತ್ಸವ ಹಾಗೂ ಪ್ರೋಷ್ಠಪದೀ ಶ್ರೀಮದ್ಭಾಗವತ*

Image
*ವೈಭವದ ನವರಾತ್ರೋತ್ಸವ ಹಾಗೂ ಪ್ರೋಷ್ಠಪದೀ ಶ್ರೀಮದ್ಭಾಗವತ* ಭೂ ವೈಕುಂಠಕ್ಷೇತ್ರವಾದ ಶ್ರೀತಿರುಮಲ ಕ್ಷೇತ್ರದಲ್ಲಿ, ಸರ್ವೋತ್ತಮ, ಸರ್ವವೇದಪ್ರತಿಪಾದ್ಯ, ಅನಂತಗುಣಪೂರ್ಣ, ಅನಂತ, ಸತ್ ಚಿದಾನಂದ ಮೂರ್ತಿಯಾದ *ಶ್ರೀಭೂ ಸಹಿತ ಶ್ರೀಶ್ರೀನಿವಾಸದೇವರ ದಿವ್ಯ ಸನ್ನಿಧಿಯಲ್ಲಿ,*  ವೇದಕ್ಕೆ ಸಮವಾದ ಅಂತೆಯೇ ಗ್ರಂಥರಾಜವಾದ ಶ್ರೀಮದ್ಭಾಗವತದ ಪಾಠರೂಪದ ಉಪನ್ಯಾಸ ದಿನಕ್ಕೆ ಕನಿಷ್ಠ ಎಂಟು ಗಂ... ಯಂತೆ ಅತ್ಯಂತ ವೈಭವೋಪೇತವಾಗಿ, *ಅಭಿನವ ಯಾದವಾರ್ಯರಂದೇ ಪ್ರಸಿದ್ಧರಾದ, ಪರಮ ಪೂಜ್ಯ ಮಾಹುಲೀ (ಪಂ.ವಿದ್ಯಾಸಿಂಹಾಚಾರ್ಯ) ಪರಮಾಚಾರ್ಯ* ರಿಂದ ಶ್ರೀಮದುತ್ತರಾದಿಮಠದಲ್ಲಿ ಜರುಗಿತು. *ಶ್ರೀಮದ್ಭಾಗವತ* ವಿಜಯಧ್ವಜೀಯ, ಯಾದುಪತ್ಯ, ಶ್ರೀನಿವಾಸತೀರ್ಥೀಯ ಮುಂತಾದ ಅನೇಕ ಟಿಪ್ಪಣೀ ವಿಷಯಗಳಿಂದ ಯುಕ್ತವಾದ, ಶ್ರೀಮಟ್ಟೀಕಾಕೃತ್ಪಾದರು ಟೀಕಾಗ್ರಂಥಗಳಲ್ಲಿ  ಸೂಚಿಸಿದ ಮಾರ್ಗದಲ್ಲಿ, ಶ್ರೀಮದ್ಭಾಗವತ ತಾತ್ಪರ್ಯ ಸಹಿತವಾಗಿ ಶ್ರೀಮದ್ಭಾಗವತದ ಉಪನ್ಯಾಸದ ವೈಭವ, ಊಹೆಗೆ ನಿಲುಕದು‌.  ನನಗೆ ಹೇಳಲು ಅಸಾಧ್ಯ ಇಷ್ಟು ನಾನು ಹೇಳಬಹುದು. *ಉಪನ್ಯಾಸದ ವೈಭವ* ಪೂ ಆಚಾರ್ಯರ ಜ್ಙಾನದಾನೋದ್ಯಶ್ಯಕವಾದ ಈ ಜ್ಙಾನಸತ್ರ ಕೆಳುಗರಿಗೆ *ಒಂದು ದಿವ್ಯ ಜ್ಙಾನ ಹಬ್ಬದಂತೆ* ಇತ್ತು. ಬಂದ ಪ್ರಮೇಯಗಳು ಕನಿಷ್ಠ ಸಾವಿರಾರು. ಸಾವಿರಾರು ಭಗವದ್ಗುಣಗಳು. ಅನೇಕಾನೇಕ ಭಗವನ್ಮಹಿಮೆಗಳು ಅದಲ್ಲದೇ ಭಗವದ್ಭಕ್ತರಾದ ದೇವತೆಗಳ, ಋಷಿಮುನಿಗಳ, ಚಕ್ರವರ್ತಿಗಳ ಸಂಬಂಧಿಸಿದ ...