Posts

Showing posts from September, 2021

_*ಸಾಂಕರ್ಯದ ದೊಡ್ಡ ಅಪಾಯ ಬ್ರಾಹ್ಮಣ ಸಮಾಜದ ಮುಂದಿದೆ*_

 _*ಸಾಂಕರ್ಯದ ದೊಡ್ಡ ಅಪಾಯ ಬ್ರಾಹ್ಮಣ ಸಮಾಜದ ಮುಂದಿದೆ*_ ಬ್ರಾಹ್ಮಣ ಯುವಕರು ಕನ್ಯಾ ಸಿಗುತ್ತಿಲ್ಲ ಎಂದು ಅನ್ಯಜಾತಿ ವಿವಾಹ ಆಗುವುದು ಮತ್ತು ಬ್ರಾಹ್ಮಣ ಯುವತಿಯರು ಪ್ರೇಮಿಸಿ ಅನ್ಯಜಾತಿ ವಿವಾಹ ಆಗುತ್ತಿರುವುದು ಮುಖ್ಯಕಾರಣ. ಯಾರೋ ಒಬ್ಬ ವ್ಯಕ್ತಿ ಕನ್ಯಾ ಸಿಗದಿದ್ದರೆ ಅನ್ಯಜಾತಿ ವಿವಾಹ ಆಗಿ ತಪ್ಪೇನಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ. ಅದನ್ನು ಅನುಮೋದಿಸಿ ಹಲವಃ ಬ್ರಾಹ್ಮಣರು ಕಮೆಂಟ್ ಕೂಡ ಮಾಡಿದ್ದಾರೆ. ಆದರೆ ಇದು ಹೇಗೆಂದರೆ  ನಿರುದ್ಯೋಗ ನಮಗೆ ಸಮಸ್ಯೆ ಅಂತ ಹೇಳಿ  ಕಳ್ಳತನ , ಸುಲಿಗೆ, ರೌಡಿಯಿಸಂ ಮಾಡಲು ತೊಡಗಿದರೆ ತಪ್ಪು ಹೇಗೋ ಹಾಗೇ ಕನ್ಯಾ ಸಿಗುವುದಿಲ್ಲ ಎಂದು ಅನ್ಯಜಾತಿ ವಿವಾಹ ಆಗುವುದೂ ತಪ್ಪು.  ಸಮಸ್ಯೆಗೆ ಪರಿಹಾರ ತಪ್ಪು ಮಾಡುವುದಲ್ಲ ಸಮಸ್ಯೆಯನ್ನೆ ಸರಿಮಾಡುವುದು.  ಗೀತೆಯಲ್ಲಿ ಅರ್ಜುನ ಕೃಷ್ಣನಿಗೆ ಹೇಳುತ್ತಾನೆ ''ಯುದ್ಧ ಬೇಡ ಏಕೆಂದರೆ ಯುದ್ಧದಲ್ಲಿ ಅಪಾರ ಸೈನಿಕರು ಸಾಯುವುದರಿಂದ ಅವರ ಹೆಂಡತಿ ಮಕ್ಕಳು ಅನಾಥರಾಗುತ್ತಾರೆ ವರ್ಣ ಸಾಂಕರ್ಯ ಉಂಟಾಗಿ ಜನರು ಪತಿತರಾಗುತ್ತಾರೆ ನರಕಕ್ಕೆ ಗುರಿಯಾಗುತ್ತಾರೆ ಮತ್ತು ಅವರ ಪಿತೃಗಳು ಶ್ರಾದ್ಧಾದಿ ಕರ್ಮಗಳು ಇಲ್ಲದೆ ಸದ್ಗತಿ ಹೊಂದುವುದಿಲ್ಲ'' ಎಂದು ಹೇಳುತ್ತಾನೆ. ಮೇಲ್ನೋಟಕ್ಕೆ ಅರ್ಜುನನ ಮಾತು ಸರಿ ಎನಿಸಿದರೂ ಅವನದು ಅಜ್ಞಾನವೇ. ಏಕೆಂದರೆ ದುರ್ಯೋಧನ ರಾಜನಾಗಿದ್ದರೆ ಆ ರಾಜ್ಯವು ಎಲ್ಲಾ ರೀತಿಯಲ್ಲೂ ಪಾಪಗಳಿಂದ ತುಂಬಿಹೋಗಿ ಧರ್ಮವು ಪತನವಾಗಿ ಸರ್ವವೂ ನಾಶ...

"ಕಂಡ ಅತಿಥಿಗಳ ಮುಂದೆ ಸಂಕಟಬಿಚ್ಚಿಡುವದು ತರವಲ್ಲ..... "

Image
 "ಕಂಡ ಅತಿಥಿಗಳ ಮುಂದೆ ಸಂಕಟಬಿಚ್ಚಿಡುವದು ತರವಲ್ಲ..... " "ದುಃಖಕ್ಕೆ ಮೊದಲ ಮದ್ದು ಕಣ್ಣೀರು" ಕಣ್ಣೀರು ಹರಿಸಿದಾಗ ಮನಸ್ಸು ಹೃದಯ ಶಾಂತವಾಗುವದು. ಆ ಕಣ್ಣೀರು ಹರಿಸುವ ಅಥವ ಸಂಕಟ ತೋಡಿಕೊಳ್ಳುವದೇನಿದೆ ಕಂಡ ಅತಿಥಿಗಳು ಮುಂದಾದರೆ ನಮ್ಮನ್ನು ನಾವು ಸಣ್ಣವರನ್ನಾಗಿ ಮಾಡಿಕೊಂಡಂತೆಯೇ.... ನಮ್ಮನ್ನು ಇನ್ನೊಬ್ಬರು ಸಣ್ಣವನನ್ನಾಗಿ ಮಾಡಲಿ ಆದರೆ ನಾನೇ ಸಣ್ಣವನಾಗುವದು ಬೇಡ. ಅತಿಥಿಗಳು ಬಂದಿರ್ತಾರೆ,  ಬಂದ ಅತಿಥಿಗೆ ನಮ್ಮಕಡೆಯೇ ಹಾಗು ನಮ್ಮ ಅಭಿಮಾನದ ಕಡೆ ಲಕ್ಷ್ಯ ವಿರುತ್ತದೆ. ನಾವೇನು ಮಾಡಿರುತ್ತೇವೆ ಅಂದರೆ ನಮ್ಮ ನ್ಯೂನತೆಗಳನ್ನು ತೊರಿಸಿಕೊಡುತ್ತಾ ಸಾಗಿರುತ್ತೇವೆ. "ಮಕ್ಕಳ ಕೆಲಸ ನೋಡ್ರಿ ಒಟ್ಟು ಸ್ವಚ್ಛವಿಡಲು ಆಗುವದೇ ಇಲ್ಲ" " ಪಾನೀಯ ಕೊಟ್ಟಿರುತ್ತೇವೆ  ಉಪ್ಪು ಖಾರ ಕಮ್ಮಿ ಆಗಿರಬೇಕು ಅಂತ ದೀನವಾಗಿ ಮಾತಾಡಿ ಅದರ ಕಡೆ ಅವರ ಗಮನ ಹರಿಸುವಂತೆ ಮಾಡುವದು" "ಉಪನ್ಯಾಸ ಆದಕೂಡಲೆ ನಾವೇನ್ರೀಪಾ, ನಿಮ್ಮಷ್ಟೆಲ್ಲಿಂದ ಆಗ್ತದ" ಅಡಗಿ ಪೂಜಾ ಜಪ ಹೀಗೆ ಯಾವದೇ ಹಂತವಿದ್ದರೂ ನಮ್ಮ ದೈನ್ಯತೆ ಎತ್ತಿ ತೋರಿಸುವದು ನಮ್ಮ ಸಂಕಟ ತೋಡಿಕೊಳ್ಳುವದು ಇದು ಒಂದಾದರೆ ವಿನಾಕಾರಣ ಕಂಡವರ ಮುಂದೆ ಕಣ್ಣೀರು ಹಾಕುವದು ಇದು ಮತ್ತೊಂದು .  ಹೀಗೆ ಮಾಡುವದರಿಂದ ಕ್ಷಣಿಕ ಶಾಂತಿ, ಒಂದೇ ಕ್ಷಣದ ಸುಖ ಆಸೆ ಅಷ್ಟೆ. "ಭಹಳ ಸ್ವಚ್ಛ ಅದರೀ ಮನಿ. ಭಾರೀ ರುಚಿರುಚಿ ಆಗಿದೆ, ಅದ್ಭುತ ಉಪನ್ಯಾಸ, ಅರ್ಭಾಟ ಅಡಿಗಿ...

ಮನಸ್ಸಿನಲ್ಲಿ ಕಸವಿದೆಯಾ....*

Image
 *ಮನಸ್ಸಿನಲ್ಲಿ ಕಸವಿದೆಯಾ....* ಮನಸ್ಸು ಒಂದ ಅಗಾಧವಾದ ವಸ್ತು.  ಇಂದಿನ internet ಅನ್ನು ನೂರುಪಟ್ಟು ಮೀರಿಸುವ ಪದಾರ್ಥ ಎಂದರೆ  ಅದು ಮನಸ್ಸು. ಮನಸ್ಸಿನ ವೇಗ ಊಹಾತೀತ. ವಾಯುವೇಗಕ್ಕೆ ಸಮ. ಮನಸ್ಸಿನಲ್ಲಿ ಎಷ್ಟಾದರೂ store ಮಾಡಿಡಬಹುದು. ಲಕ್ಷ tb ಮೀರಿಸುವ hard disk ಎಂದರೆ ಅದೂ ಸಣ್ಣದಾಗಬಹುದು.  ಕುಳಿತಲ್ಲಿಯೇ ಕಣ್ಣಿಗೆ ಕಾಣದ ಕಾಲ ದೇಶದ ಅನುಭವಕ್ಕೆ ತಂದುಕೊಳ್ಳಬಹುದು ಅದು ಕೇವಲ ಮನಸ್ಸಿನಿಂದ. ಮುಂದೇನಾಗಬಹುದು ಎನ್ನುವದನ್ನು ಮನಸ್ಸು ಗ್ರಹಿಸುತ್ತದೆ. ಹಿಂದೆ ಆಗಿಹೋದ ತಪ್ಪನ್ನು ಮತೆ ಆಗದಂತೆ ಎಚ್ಚರಿಸುತ್ತದೆ. ಒಂದು ದಿವನ ದೇವರ ದರ್ಶನವಾಗುವದೂ ಈ ಮನಸ್ಸಿನಲ್ಲಿಯೇ.  ಇಚ್ಛೆ ಕಾಮ ಹಪಹಪಿ ದ್ವೇಶ ಮತ್ಸರ ಪ್ರೀತಿ ಪ್ರೇಮ ಸುಖ ದುಃಖ ಜ್ಙಾನ ಅಜ್ಙಾನ ಭಯ ಭೀತಿ ಭಕ್ತಿ ಸ್ನೇಹ ಸಿಟ್ಟು ನೆನಪು ಮರೆವು ಬೇಕುಬೇಡಗಳ ಗೊಂದಲ  ನಿರ್ಣಯ  ಇತ್ಯಾದಿ ಇತ್ಯಾದಿ ಆಗುವದು ಮನಸ್ಸಿನಿಂದಲೇ.  "ಜೀವನ ಜೀವನಕ್ಕೆ ಮನಸ್ಸು ತುಂಬ ಮುಖ್ಯ" ಮನಸ್ಸಿಲ್ಲವೋ ಅವ ಜಡಕ್ಕೆ ಸಮ. ಮನಸ್ಸಿದೆ ಎಂದಾದರೆ ಅವ ಜೀವ ಚೇತನ ಎಂದು ಕರೆಸಿಕೊಳ್ಳುತ್ತಾನೆ.  ಈ ಮನಸ್ಸು ಜನಿಸಿದ್ದು ವಾಯು ಬ್ರಹ್ಮರಿಂದ. ಈ ಮನಸ್ಸನ್ನು ನಿಯಮಿಸುವ ದೇವತೆ ವಿಷ್ಣು.  ಅಭಿಮಾನಿ ದೇವತೆ ಲಕ್ಷ್ಮೀ, ಬ್ರಹ್ಮ, ಗರುಡ ಶೇಷ   ಶಿವ ಶಿವಾಣೀ ಇಂದ್ರ ಚಂದ್ರ ಇತ್ಯಾದಿ ಅನೇಕರು. ಮುಖ್ಯವಾಗಿ ಶಿವಮ. ಮನಸ್ಸಿನಿಂದಲೇ ದುಃಖ. ಮನಸ್ಸಿನ...

*ನಾಳೆಯಿಂದ ಹೇಗೆ ಬದಲಾಗಿರುತ್ತೇನೇ ನೋಡು......

Image
 *ನಾಳೆಯಿಂದ ಹೇಗೆ ಬದಲಾಗಿರುತ್ತೇನೇ ನೋಡು......* ಅವಮಾನಿತನಿಂದ, ಸೋತವನಿಂದ, ಸಹಜವಾಗಿ  ಬರುವ ಮಾತು "ನಾಳೆಯಿಂದ ಹೇಗೆ ಬದಲಾಗುತ್ತೇನೆ ನೋಡು..." ಎಂದು. ಅವಮಾನವಾಗಿದೆ, ಅಪಹಾಸ್ಯಕ್ಕೆ ತುತ್ತಾಗಿದಾನೆ,  ಸೋತು ಹೋಗಿದಾನೆ,  ಮನೆಯಲ್ಲಿ ಬೈದಿದ್ದಾರೆ ಎಂದಾದಾಗ ರಾತ್ರಿ ಮಲಗುವ ಮುಂಚೆ ಒಂದರ್ಧ ಘಂಟೆ ವಿಚಾರ ಮಾಡಿ ನಿರ್ಣಯ ತೆಗೆದುಕೊಳ್ಳುತ್ತಾನೆ. "ನಾನು ಬದಲಾಗಬೇಕು. ಅದೂ ಎಂದೋ ಅಲ್ಲ. ನಾಳೆ ಬೆಳಿಗ್ಗೆ ಆಗುವದರೊಳಗೆ" ಎಂದು.  ಈ ವಿಚಾರ ಬರುವದು ಸಹಜ. ಈ ವಿಚಾರ ಕಾರ್ಯರೂಪದಲ್ಲಿ ಬಂದರೆ ಅವನಷ್ಟು ಉನ್ನತಿ ಇನ್ಯಾರಿಗೂ ಇರದು.  ಬೆಳಿಗ್ಗೆ ಆಯಿತು. ಸ್ವಲ್ಪ ಗಂಭೀರ. ಎಲ್ಲರಲ್ಲಿ ಬೆರೆಯುವದು ನಿಲ್ಲಿಸಿದ. ಏಕಾಂತ ಬಯಸಿದ. Strict ಆಗಿ ಓದಲಾರಂಭಿಸಿದ. ಹಲ್ಲು ಕಿಸಿಯೊದು ನಿಲ್ಲಿಸಿದ. ಹೀಗೆ ಒಂದೆರಡು ದಿನಗಳುರುಳಿತು ..... ಅಷ್ಟರಲ್ಲಿ ನಾಲ್ಕು ಜನ ಬಂದು "ಭಾಳ ಚೇಂಜ್ ಆಗಿಬಿಡಪ್ಪ" ಎಂದು ಹೇಳಿ ಹೊಗಳಿದರೋ ಮುಗಿತು  ಮತ್ತ ನಾಯಿ ಬಾಲ ಡೊಂಕೆ..... ಇದೊಂದು ಬದಲಾವಣೆಯಾ? ?  ಸರ್ವಥಾ ಅಲ್ಲ. ನನ್ನಲ್ಲಿ ಬದಲಾವಣೆ ಆಗಲಿಲ್ಲ. ನನ್ನ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಬಂತು ಅಷ್ಟೆ. ಇದು ನೈಜ ಬದಲಾವಣೆ ಎಂದು ಕರೆಯಲಾರದು. ನಮ್ಮ ಗುರುಗಳು ಒಂದು ಮಾತು ಹೇಳಬೇಕು " ನಿನ್ನಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂದಾದರೆ ಅರ್ಧ ಘಂಟೆಯ ಸಮಯ. ಅರ್ಧಘಂಟೆಯ ಸುದೀರ್ಘ ವಿಚಾರ ಆಗ ತೆಗೆದುಕೊಂಡ ನಿರ್ಣಯಗಳು ...

*ಧರ್ಮೇ ಏವ ದೀಯತಾಂ ಬುದ್ಧಿಃ....*

Image
 *ಧರ್ಮೇ ಏವ ದೀಯತಾಂ ಬುದ್ಧಿಃ....* ಧರ್ಮ ಅಧರ್ಮಗಳು ಎಲ್ಲ ಕಾಲಕ್ಕೂ ಇರುವಂತಹವುಗಳು.  ಧರ್ಮ ಸ್ವಾಭಾವಿಕ ಸದೃಢ , ಮಹಾ ಬಲಿಷ್ಠ. ಅಂತೆಯೇ ಎಲ್ಲರ ಸಂರಕ್ಷಕ.  ಅಧರ್ಮ ಸ್ವಯಂ ದುರ್ಬಲ. ಆದರೆ "ಬಲಿಷ್ಠರಂತೆ ವರ್ತಿಸಲು ನೂರಾರು ಸಾವಿರಾರು ಜನರ ಸಹಾಯವನ್ನು ಬಯಸುತ್ತದೆ" ಕೊನೆಗೆ  ಎಲ್ಲರನ್ನೂ ಹಾಳು ಮಾಡುತ್ತದೆ.  ತಾನೂ ನಶಿಸುತ್ತದೆ.  ಅಧರ್ಮ‌ ತಾನು ರುಚಿ ತೋರಿಸಿ, ಎಮ್ಮನ್ನು ಆಕರ್ಷಿಸಿ, ತನ್ನತ್ತ ಸೆಳೆದುಕೊಂಡು, ನಮ್ಮ ತಲೆಯಮೇಲೆ ನಿಂತೆ ತಾ ಬದುಕುತ್ತದೆ. ನಮ್ಮನ್ನು ತುಳಿದೇ ತಾಂಡವ ಆಡುತ್ತದೆ. ಕೊನೆಗೆ ನಮ್ಮನ್ನು ಮಣ್ಣುಪಾಲೂ ಮಾಡುತ್ತದೆ, ಮಹಾ ಅಪಕೀರ್ತಿ ದುಃಖ ದುಮ್ಮಾನಗಳಿಗೆ ಕಾರಣವಾಗುತ್ತದೆ."  "ಆದರೆ ಧರ್ಮ ಹಾಗಲ್ಲ. ತಾನಿದ್ದಲ್ಲೇ ಇದ್ದು. ತಾನು ಯಾರಿಗೆ ಅನಿವಾರ್ಯವೋ ಅವರು ಮಾತ್ರ ತನ್ನತ್ತ ಬರುವಂತೆ ಮಾಡಿಕೊಳ್ಳುತ್ತದೆ‌. ಯಾರು ತನ್ನನ್ನು ನಂಬಿ  ಬಂದಿದ್ದಾರೆಯೋ, ಧರ್ಮವನ್ನು ರಕ್ಷಿಸಲು ಪಣತೊಟ್ಟಿದ್ದಾರೆಯೋ ಅವರನ್ನು ತನ್ನ ತಲೆಯಮೇಲೆ ಹೊತ್ತಿಕೊಂಡಾದರೂ ನಮ್ಮನ್ನು ರಕ್ಷಿಸುತ್ತದೆ." ಮಹೋನ್ನತಿಯನ್ನು ತಂದು ಕೊಡುತ್ತದೆ. ಮೋಕ್ಷಾದಿ ಪುರುಷಾರ್ಥಗಳಲ್ಲಿ ಒಂದಾಗಿ ದೇವರ ಅತ್ಯಂತ ಸನಿಹ ಕರೆದೊಯ್ಯುತ್ತದೆ. ಇಹದಲ್ಲಿ ಬೇಕಾದ ಎಲ್ಲ ಇಷ್ಟಾರ್ಥಗಳನ್ನೂ ಒದಗಿಸುತ್ತದೆ. ಒದಗಿದ ಇಷ್ಟಾರ್ಥಗಳು ಸಾರ್ಥಕವಾಗುವಂತೆ ನೋಡಿಕೊಳ್ಳುತ್ತದೆ.  ಧರ್ಮ ಉತ್ತಮ,  ಉತ್ಕೃಷ್ಟ , ಸ್ವಚ್ಛ , ನ...

ಮನಸ್ಸು ಹಿಂಸಾತ್ಮಕ ಏಕೆ..?*

 * ಮನಸ್ಸು ಹಿಂಸಾತ್ಮಕ ಏಕೆ..?* ಭಾವನೆ ಬತ್ತಿದ, ನಿಯಂತ್ರಣ ಮಾಡಲು ಅಸಾಧ್ಯವಾದ ಅತಿಯಾದ ವಿಚಾರ ಕ್ರಮವೇ ಮನಸ್ಸು  ಹಿಂಸಾತ್ಮಕವಾಗಲು ಕಾರಣ.  *ಭಾವನೆ ಇರುವಲ್ಲಿ ಹಿಂಸೆ ಇಲ್ಲ, ಭಾವನೆಯನ್ನೊಳಗೊಂಡ ಮನಸ್ಸು ಅತಿಯಾದ ವಿಚಾರಕ್ಕೆ ತೊಡಗುವದಿಲ್ಲ. ಅತಿಯಾದ ವಿಚಾರವೇ ಮನಸ್ಸಿನ ಅನಿಯಂತ್ರಣಕ್ಕೆ ಕಾರಣ.*  ಗುರುಗಳು : ಪಾಠಕ್ಕೆ ಬಂದ ವಿದ್ಯಾರ್ಥಿಗಳಲ್ಲಿ "ಈಡಿಯಟ್ ಯಾರಿದ್ದೀರೋ ಅವರು ಎದ್ದು ನಿಲ್ಲಿ" ಎಂದು ಹೇಳಿದರು.  ಯಾರೂ ಎದ್ದೇಳಲಿಲ್ಲ. ಒಬ್ಬ ವಿದ್ಯಾರ್ಥಿ ಎದ್ದು ನಿಂತ.  ಗು: ಏನೋ ನಿನ್ನನ್ನು ನೀನು ಒಬ್ಬನೇ ಈಡಿಯಟ್ ಎಂದು ಯಾಕೆ ಭಾವಿಸಿದಿ.. ?? ವಿ: ನಾ ಒಬ್ಬನೆ ಅಲ್ಲ ಸಾರ್ ! *ಈಗಾಗಲೇ ಎದ್ದೇ ನಿಂತ ಈಡಿಯಟ್ ಗುರುಗಳ ಜೊತೆಗೆ ನಾನೂ ಒಬ್ಬ ಎದ್ದು ನಿಂತೆ* ಸರಳವಾಗಿ ಉತ್ತರಿಸಿದ. ಇದು ಕೇವಲ ಉದಾಹರಣ ಮಾತ್ರ. ಇಂತಹದ್ದು ಈಗಿನ ಹುಡಗರಲ್ಲಿ ನಿತ್ಯ ನೂರಾರು ಕಾಣುತ್ತೇವೆ.  ಯಾಕೆ ಹೀಗೆ .. ?? ಆ ವಿದ್ಯಾರ್ಥಿಗೆ ಭಾವನೆ ಇಲ್ಲ. ಭಾವನೆ ಇಲ್ಲದ ವ್ಯಕ್ತಿಗೆ ಗುರು ಆದರೇನು ತಂದೆಯಾದರೇನು ತಾಯಿ ಗೆಳೆಯನಾದರೇನು ದೇವರಾದರೇನು ??  ಅವನಿಗೆ ಕೇವಲ ತನ್ನ ಬುದ್ಧಿವಂತಿಕೆ ಹಾಗೂ ಹಠ ಪ್ರದರ್ಶನ ಮುಖ್ಯವಾಗಿರುತ್ತದೆಯೇ ಹೊರತು, ಇನ್ನೇನೂ ಇರುವದಿಲ್ಲ.  ಅದರಲ್ಲಿ ಸಿಗುವದು ಕ್ಷುದ್ರ ಆನಂದ ಮಾತ್ರ.  ಭಾವನೆ ಶೂನ್ಯವಾದಾಗ, ವಿಚಾರ ಅತಿಯಾಗತ್ತೆ. ವಿಚಾರಗಳನ್ನು ನಮ್ಮ ನಿಯಂತ್ರಣಕ್ಕೆ ತರುವದೇ ಭಾ...

*ವರಾಹ ಜಯಂತಿ - ತಿಳಿಯುವ ಪುಟ್ಟ ಪ್ರಯತ್ನ*

Image
  *ವರಾಹ ಜಯಂತಿ -  ತಿಳಿಯುವ ಪುಟ್ಟ ಪ್ರಯತ್ನ* ಭಗವಂತನ ಅನೇಕ ವ್ಯೂಹಗಳಲ್ಲಿ ಒಂದು ವ್ಯೂಹ ದಶಾವತಾರಗಳ ವ್ಯೂಹ. ಆ ದಶಾವತಾರಗಳಲ್ಲಿ ಒಂದಾದ "ವರಾಹ ದೇವರ" ಜಯಂತಿ ಇಂದು.  ವರಾಹದೇವರ ಪ್ರಸಾದದಿಂದ ಕೋಟಿ ವಿಘ್ನಗಳ ಪರಿಹಾರ ಒಂದೆಡೆಯಾದರೆ, ವರಾಹದೇವರ ನಿಗ್ರಹದಿಂದ ನರಕಾಸುರನಂಥವರೂ ನಮ್ಮನ್ನು ಆಳಬಹುದು. ಭೂವರಾಹ ದೇವರ ಪ್ರಸಾದವೊ ನಿಗ್ರಹವೋ ನಮ್ಮ ಪಾಲಿಗೆ ಇರುವದು.  ಅವತಾರ ವರಾಹದೇವರು ಎರಡುಬಾರಿ ಅವತಾರವನ್ನು ಮಾಡಿದ್ದಾರೆ.  ಬ್ರಹ್ಮದೇವರ ಮೂಗಿನಿಂದ ಅವತರಿಸಿ, ಭೂಮಿಯನ್ನು ರಸಾತಲಕ್ಕೇ ಸಾಗಿಸಿದ ಆದಿ ಹಿರಣ್ಯಾಕ್ಷನನ್ನು ಸಂಹರಿಸಿ ಭೂಮಿಯನ್ನು ಉದ್ಧರಿಸಿದ ಮಹಾನ್ ಕಾರ್ಯ ಇದು ಒಂದು ಅವತಾರದ ಮಹಿಯಾದರೆ. ಹಿರಣ್ಯಕಶಿಪು ಹಿರಣ್ಯಕ್ಷರಲ್ಲಿ ಹಿರಣ್ಯಾಕ್ಷನನ್ನು ಸಂಹರಿಸಲು ಅವತಾರ ಮಾಡಿರುವದು ಮತ್ತೊಂದು ಅವತಾರ.  ಅಖಿಲ ಮಂತ್ರ ದೇವತಾ ಅನಂತ ವೇದಗಳಿಗೆ ಪ್ರತಿಪಾದ್ಯ ಸ್ವಾಮಿ ಶ್ರೀವರಾಹದೇವರು. ಭೂವರಾಹ ಮಂತ್ರದ ಸಾಕ್ಷಾತ್ ಪ್ರತಿಪಾದ್ಯ ಸ್ವಾಮಿ. ಭೂಮಿ ಒಲೆಯಬೇಕು, ಭೂಮಿಯಲ್ಲಿ ಸುಖವೂ ಬೇಕು, ಭೂಮಿಯಲ್ಕಿ ಸಾಧನೆಯೂ ಆಗಬೇಕು, ಭೂಮಿಯಲ್ಲಿ ಬಂದಿದ್ದಕ್ಕೆ ಸಂಪೂರ್ಣ ಸಾಧನೆಯೂ ಆಗಬೇಕು ಎಂಬ ಬಯಕೆ ಏನಾದರೂ ಇದ್ದರೆ "ಭೂವರಾಹ ಮಂತ್ರವನ್ನು ಜಪಿಸಿ ಅನುಗ್ರಹ ಪಡೆಯಲೇಬೇಕು" ಎಂದು ಶಾಸ್ತ್ರ ತಿಳಿಸುತ್ತದೆ.  ಅಜಿತ !! ಯಜ್ಙಭಾವನ !! ಜಿತಂ ಜಿತಂ ತೇ ನಮ್ಮ ಸಾಧನೆಗೆ ಇರುವಂತಹವುಗಳು ಯಜ್ಙಗಳು. ಆ ಯಜ್ಙಕ್ಕೆ ಬಳಿಸುವ...

*ಎನ್ನ ಗುರುಗಳ ಅಡೆದಾವರೆಗಳಿಗೆ ಎನ್ನ ಅನಂತ ನಮನಗಳು*

 *ಎನ್ನ ಗುರುಗಳ ಅಡೆದಾವರೆಗಳಿಗೆ ಎನ್ನ ಅನಂತ ನಮನಗಳು* *ಎನ್ನದು ಅಜ್ಙಾನಾಂಧಕಾರವಾದರೆ, ಜ್ಙಾನ ಪ್ರಕಾಶರು ಎನ್ನ ಗುರುಗಳು.....* ಬೆಳಕು ಕತ್ತಲನ್ನು ನಾಶಮಾಡುವದರ ಜೊತೆಗೆ ತನ್ನ  ವರ್ತುಲದಲ್ಲಿ  ಬಂದ ಎಲ್ಲ ಪದಾರ್ಥಗಳನ್ನೂ ಬೆಳಗುತ್ತದೆ. ಹಾಗೆಯೇ ಗುರುಗಳೂ ಸಹ. ನಂಬಿದ ಶಿಷ್ಯರನ್ನೂ ತಮ್ಮ ಪ್ರಕಾಶದಿಂದಲೇ, ಒಂದಲ್ಲ ನೂರಾರುತರಹದ ಪ್ರಕಾಶಗಳನ್ನು ಕೊಟ್ಟು ಬೆಳಗಿಸುತ್ತಾರೆ. ಜ್ಙಾನಜ್ಯೋತಿಗಳಾಗಿಸುತ್ತಾರೆ.  ನಂಬಿದ ತನ್ನ ಶಿಷ್ಯರ ಅಜ್ಙಾನವನ್ನೂ ಕಳೆಯುತ್ತಾರೆ ಜೊತೆಗೆ ನಂಬಿದ ಶಿಷ್ಯನಿಗೆ ಜ್ಙಾನಪ್ರಕಾಶವನ್ನೂ ಒದಗಿಸುತ್ತಾರೆ. ಅವನೂ ಜಗತ್ತಿನಲ್ಲಿ ತಮ್ಮಂತೆಯೇ, ತನ್ನ ಯೋಗ್ಯತಾನುಸಾರ ಬೆಳಗುವಂತೆ ಮಾಡುತ್ತಾರೆ‌. ಇದುವೇ ಗುರುವಿನ ಮಹತಿ. ಅಂತೆಯೇ ದಾಸರಾಯರು "ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ" ಎಂದರು.   ಇಂದಿನ ಸಮಾಜ  ಬುದ್ಧಿವಂತರಾದ, ಧನವಂತರಾದ,  ಸ್ವಯಂ ಪ್ರಕಾಶವಂತರನ್ನೇ ಹುಡುಕುತ್ತದೆ,  ಅಷ್ಟೇ ಅಲ್ಲದೆ ಪ್ರಕಾಶವಂತರನ್ನೇ ಬೆಳಕಿಗೆ ತರುತ್ತದೆ. ಆದರೆ ಎನ್ನ ಗುರುಗಳು ಹಾಗಲ್ಲ . ಅಜ್ಙ ಬಧಿರ ಧಡ್ಡ ಏನೆ ಆಗಿದ್ದರೂ, ತಮ್ಮ ಛತ್ರಛಾಯಯಲ್ಲಿ ಇಟ್ಟು  ಪ್ರಕಾಶವಂತ, ಬುದ್ಧಿವಂತರ ನಡುವಿನಲ್ಲಿ ಸೇರಿಸಿ (ನಪಾಸ್ ಮಾಡದೆ, ಕೆಳಗಿಳಿಸದೇ) ಅವನಿಗೂ ತಮ್ಮ ಕರುಣೆ ದಯೆಗಳನ್ನೊಳಗೊಂಡ ತಪಸ್ಸಿನಿಂದ ಒಂದು ಅದ್ಭುತಪ್ರಕಾಶವನ್ನು ಕೊಟ್ಟು ಜಗತ್ತಿನಲ್ಲಿ ತನ್ನ ಯೋಗ್ಯತಾನುಸಾರ ಬೆ...