ಶ್ರೀಶ್ರೀಆತ್ಮೇಂದ್ರತೀರ್ಥರಿಗೇ ಜಯವಾಗಲಿ
*ಶ್ರೀಶ್ರೀಆತ್ಮೇಂದ್ರತೀರ್ಥರಿಗೇ ಜಯವಾಗಲಿ ಜಯವಾಗಲಿ* ಉತ್ತರಾದಿಮಠದ ಶ್ರೀಪಾದಂಗಳವರಾದ ಶ್ರೀಶ್ರೀಸತ್ಯಾತ್ಮತೀರ್ಥರಿಗೆ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಶ್ರೀಸುಭುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಜಯವಾಗಲಿ ಜಯವಾಗಲಿ. *ಜಯ ಇರುವದು ಅಧರ್ಮದ ವಿರುದ್ಧವೇ. ಅಪಜಯ ಇರುವದು ಧರ್ಮದ ಎದುರೇ.* ಸೂರ್ಯಚಂದ್ರರಷ್ಟೇ ಸತ್ಯ. ಎಲ್ಲದರಮೇಲಾಗಿ *ಪ್ರಜೆಗಳ ಜಗತ್ತಿನ ಸಮಾಜದ ಸಂತೋಷವೇ ಮಹಾನ್ ಜಯ* ಈ ವಿಶೇಷವಾದ ದಿಗ್ವಿಜಯಕ್ಕೆ ನಾಂದಿ ಹಾಡಿದವರು ನಮ್ಮ ಈರ್ವರು ಶ್ರೀಪಾದಂಗಳವರು. "ಈ ಮಹಾಗುರುಗಳುಗಳು ಒಂದಾದ ಕ್ಷಣದಲ್ಲಿಯೇ ನೂರಾರು ಅಧಾರ್ಮಿಕ ವಿಚಾರ ಹಾಗೂ ಧರ್ಮವಿರೋಧಿ ಚಟುವಟಿಗಳಿಗೆ ಇತಿಶ್ರೀಹಾಡಿದಂತಾಯಿತು" ಇದುವೇ ಪೂರ್ಣಿಮಾ ದಿನದ ಪೂರ್ಣ ವಿಜಯ. ಇಂದಿನಿಂದ ಈರ್ವರು ಒಂದಾದ ಈ ಕ್ಷಣದಲ್ಲಿ ಪ್ರಾದುರ್ಭವಿಸಿದ ಮಹಾನ್ ಚಿನ್ಮೂರ್ತಿಗಳು ನಮ್ಮ *ಶ್ರೀಶ್ರೀಆತ್ಮೇಂದ್ರತೀರ್ಥರು.* ಎಂದು ಹೆಮ್ಮೆಯಿಂದ ಎದೆತಟ್ಟಿ ಹೆಳಿಕೊಳ್ಳಬಹುದು. ಯಾರಿವರು *ಶ್ರೀಆತ್ಮೇಂದ್ರತೀರ್ಥರು ??* ಸುಲಭವಾಗಿ ತಿಳಿಯುವದು ಶ್ರೀಸತ್ಯಾತ್ಮರು ಹಾಗೂ ಶ್ರೀಸುಭುದೇಂದ್ರರು ಎಂದು. ಆದರೆ ಇವರು ಇಬ್ಬರಲ್ಲ ಒಬ್ಬರೇ. ಈ ಕ್ಷಣದಿಂದ ಮುಂದಿನ ಲಕ್ಷಲಕ್ಷವರ್ಷಗಳವರೆಗೂ ಒಬ್ಬರೇ. ಇವರೀರ್ವರ ಅಭೂತಪೂರ್ವ ಅತ್ಯಮೂಲ್ಯ ಐತಿಹಾಸಿಕ ನಿರ್ಧಾರ ಇನ್ನು ಮುಂದೆ ಬರುವ ಲಕ್ಷಲಕ್ಷವರ್ಷಗಳು ಕಳೆದರೂ ಒಂದೇ ಆಗಿರುತ್ತದೆ ಎಂಬ ದೃಢಮೂಡಿಸಿದ ಮ...