ಕಲಿಯುಗದ ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)*
*"ಕಲಿಯುಗದ ಕುಂತಿ" (ಪ್ರಾತಃಸ್ಮರಣೀಯ ಕಾಕು ಅವರು)* ದ್ವಾಪರಯುಗದ ಕುಂತಿಗೆ ೫ ಮಕ್ಕಳು. ಆದರೆ ಈ ಕಲಿಯುಗದ ಕುಂತಿಗೆ ನಮ್ಮಂತಹ ನೂರಾರು ಮಕ್ಕಳು. ಕೌಂತೇಯರು ಎನ್ನುವದೇ ಪಾಂಡವರ ಹೆಮ್ಮೆ ಆಗಿತ್ತು. ಹಾಗೆಯೇ ಪೂ ಕಾಕು ಅವರ ಮಕ್ಕಳು ನಾವು ಎಂದಾಗುವದೇ ನಮ್ಮದೊಂದು ವೈಭವ. ಶ್ರೇಷ್ಠವಾದ ಶ್ರೀಸತ್ಯಕಾಮತೀರ್ಥರಂತಹ ಮಹಾನುಭಾವರು ಅವತರಿಸಿದ ಕುಲ. ವಿಶಾಲವಾದ ಕುಟುಂಬ. ತುಂಬ ಕಷ್ಟ. ಕಡುದಾರಿದ್ರ್ಯ. ಆಗಿನ ಕಾಲವೂ ತುಂಬ ಘೋರ. ಅದರಲ್ಲಿ ಸಾಧನೆಯ ವಿದ್ವನ್ಮಾರ್ಗ ಮುಳ್ಳುಹಾಸಿದ ದಾರಿಯಾಗಿತ್ತು. ಈ ತರಹದ ವಿಪರೀತವಾದ ಪ್ರತಿಕೂಲ ವಾತಾವರಣದಲ್ಲಿಯೂ ಪರಮಪೂಜ್ಯ ಮಹಾಚಾರ್ಯರರನ್ನು ವರೆಸಿದಿರು. *"ವಿದ್ಯಾಪೀಠವಿಧಾತೃ"ಗಳು ಪರಮಪೂಜ್ಯ ಆಚಾರ್ಯರಾದರೆ, ವಿದ್ಯಾಪೀಠದ "ಮಹಾತಾಯಿ* ಪೂಜ್ಯ ಕಾಕೂ ಅವರು ಆದರು. ನಿರಂತರ ಹರಿನಾಮಸ್ಮರಣ. ನಿರಂತರ ಹರಿನಾಮಸ್ಮರಣೆಯನ್ನು ಎಲ್ಲಿಯಾದರೂ ನೋಡಬೇಕು ಒಂದು ದೃಷ್ಟಾಂತ ಸಿಗಬೇಕು ಎಂದರೆ ಅದು ಪೂಜ್ಯರಲ್ಲಿ ಕಾಣುತ್ತಿತ್ತು. ನಿತ್ಯವೂ ಶ್ರೀಮದ್ಭಾಗವತ ಪಾರಾಯಣ ಅನೇಕ ವಿದ್ಯಾರ್ಥಿಗಳಿಂದ ಮಾಡಿಸಿದ್ದರು. ಕನಿಷ್ಟ ನೂರುಬಾರಿಯಾದರೂ ಶ್ರೀಮದ್ಭಾಗವತ ಪಾರಾಯಣ ಕೇಳಿರಬಹುದು. ಒಂದುಬಾರಿ ನನಗೂ ಎರಡು ಮೂರು ಸ್ಕಂಧಗಳ ಪಾರಾಯಣ ಮಾಡುವ ಸೌಭಾಗ್ಯ ಒದಗಿಸಿ ಅನುಗ್ರಹಿಸಿದ್ದರು. ಆ ಪಾರಾಯಣದ ಅನುಗ್ರಹದ ಕುರುಹು ಇಂದಿಗೂ ಮನೆಯಲ್ಲಿ ಇದೆ. *ಮಹಾ ಅನ್ನದಾನಿ* ಮದುವೆಯಾದ ಆರಂಭದ ಹತ್ತಾರುವರ...