ಓ ಮಹಾಬುದ್ಧಯೇ ನಿನನಗೆ ನಮಃ*
*ಓ ಮಹಾಬುದ್ಧಯೇ ನಿನನಗೆ ನಮಃ* ವಿಷ್ಣುವಿನ ಸಹಸ್ರ ನಾಮಗಳಲ್ಲಿ ಒಂದಾಗಿರುವದು *ಮಹಾಬುದ್ಧಿ* ಎಂಬ ನಾಮವೂ ಆಗಿದೆ. ದೇವರಲ್ಲಿ ಯಾವಗುಣಗಳನ್ನು ಕಾಣುತ್ತೇವೆ, ಯಾವಗುಣದ ಉಪಾಸನೆ ಮಾಡುತ್ತೇವೆ ಆ ಗುಣ ಉಪಸನೆ ಮಾಡುವವನಿಗೆ ಅಥವಾ ಕಂಡವನಿಗೆ ಬರುತ್ತವೆ. ಇದು ಶಾಸ್ತ್ರದ ನಿಯಮ. ನಮಗೆ ದೇವರು ಹೇಗೆ ಬಿಂಬನಾಗಿದ್ದಾನೆ ಹಾಗೆಯೇ ನಮ್ಮ ಗುಣಗಳಿಗೂ ಬಿಂಬನಾಗಿದ್ದಾನೆ. ಆ ಬಿಂಬನ ಗುಣವಾದ *ಮಹಾಬುದ್ಧಿ* ಎಂಬ ಗುಣದ ಪ್ರತಿಬಿಂಬ ಗುಣ ನಮ್ಮಲ್ಲಿ ಅಭಿವ್ಯಕ್ತಗೊಳಿಸುವದಕ್ಕಾಗಿಯೂ ಈ ಗುಣದ ಚಿಂತನೆ ಅವಷ್ಯವಾಗಿಬೇಕು. ಕೃಷ್ಣ ಗೀತೆಯಲ್ಲಿ ತನ್ನ ವಿಭೂತಿರೂಪಗಳನ್ನು ಹೇಳುವಾಗ *ಬುದ್ಧಿರ್ಬುದ್ಧಿಮತಾಮಸ್ಮಿ* ಬುದ್ಧಿವಂತರ ಬುದ್ಧಿಯಲ್ಲಿ ನಾನು ಇದ್ದೇನೆ. ನನ್ನ ವಿಭೂತಿರೂಪವಿದೆ ಎಂದು ಹೇಳುತ್ತಾನೆ. ಬುದ್ಧಿವಂತರಾದ ನಮ್ಮ ಬುದ್ಧಿಯಲ್ಲಿ, ಮಹಾಬುದ್ಧಿರೂಪವಾದ ದೇವರೇನಾದರೂ ಬಂದು ನೆಲಿಸಿದರೆ ನಮ್ಮ ಬುದ್ಧಿವಂತೆಕೆ ಎಂದಿಗೂ ವಿಫಲವಾಗುವದೇ ಇಲ್ಲ. *ಬುದ್ಧಿಯ ಅವಷ್ಯಕತೆಯೆ ಇದೆಯೇ....* ಬುದ್ಧಿಯ ಆವಷ್ಯಕತೆ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಹು ಊಹು, ಬೇಕು ಬೇಡ, ಮಾಡುವೆ ಮಾಡುವದಿಲ್ಕ ಇತ್ಯಾದಿ ಇತ್ಯಾದಿ ನೂರಾರು ಸಾವಿರಾರು ವಿಚಾರಗಳ ಗೂಡು ಮನಸ್ಸು. ಇದನ್ಬೇ ಮಾಡಬೇಕು. ಇದನ್ನು ಮಾಡುವದೇ ಇಲ್ಲ. ಎಂದು ಪ್ರತಿಹಂತದಲ್ಲಿಯೂ ನಿರ್ಣಯಿಸುವದು ಬುದ್ಧಿ. ಜೊತೆಗೆ ಹಿತ ಅಹಿತಗಳ ನಿಶ್ಚಯಮಾಡುವದೂ ಬುದ್ಧಿಯೆ. ಕಾರ...