*"ಸ್ಥಗಿತ ಮನಸ್ಸು" ಮಹಾ ಹಾನಿಕಾರಕ...*


 *"ಸ್ಥಗಿತ ಮನಸ್ಸು" ಮಹಾ ಹಾನಿಕಾರಕ...*


ಮನಸ್ಸು ತುಂಬ ಕುಶಲಿ. ನಿರಂತರ ಕ್ರಿಯಾಶೀಲ.  ಶ್ರಾಂತವಾಗುವದು ತುಂಬ ವಿರಳ. ದೇಹ ಬಲು ಬೇಗ ಶ್ರಾಂತವಾಗುತ್ತದೆ. ದೇಹಕ್ಕಿಂತಲೂ ಬಲಶಾಲಿ  ಇಂದ್ರಿಯಗಳು ಸ್ವಲ್ಪತಡವಾಗಿ ಶ್ರಾಂತವಾಗುತ್ತವೆ. ಮನಸ್ಸು ಮಾತ್ರ ಮಹಾ ಬಲಿಷ್ಠ. ಅತ್ಯಲ್ಪಕಾಲದಲ್ಲಿ ವಿಶ್ರಾಂತಯನ್ನು ಬಯುಸುವದು. ನಿದ್ರೆಯಲ್ಲಿಯೂ ಸ್ವಪ್ನರೂಪದಿಂದ ವ್ಯಾಪಾರ ನಟಿಸುತ್ತಾ ಇರುತ್ತದೆ. ಅತ್ಯಲ್ಪಸಮಯದ ವಿಶ್ರಾಂತಿ ಮನಸ್ಸಿಗೆ ಸಾಕು. 


ಮನಸ್ಸು ಕ್ರಿಯಾಶೀಲವಾಗಿ ಒಂದುಬಾರಿ ಉದ್ಯುಕ್ತವಾದರೆ ಎಲ್ಲವನ್ನೂ ಸಾಧಿಸಿಯೇ ತೀರುತ್ತದೆ. ಮನಸ್ಸಿಗೆ ಅಸಾಧ್ಯವಾಗಿರುವದು ಯಾವದೂ ಇಲ್ಲ. ಈ ರೀತಿಯಲ್ಲಿ ಕ್ರಿಯಾಶೀಲವಾದ ಮನಸ್ಸು ಒಂದೇ ಬಾರಿ ಸ್ಥಗಿತ ಗೊಂಡಿತು ಎಂದಾದರೆ ಮಾನವನ ಏಳಿಗೆ ತುಂಬ ಕಠಿಣ. 


ನಿರಂತರ ಓಡುವ ಅಥವಾ ನಿಂತೇ ಇರುವ ಕುದುರೆ ಮಲಗಿರುವದು ಎಂದಾದರೆ ಅದರ ಸಾವು ಸನ್ನಿಹಿತ ಎಂದೇ ಅರ್ಥ. ಹಾಗೆಯೆ ನಿರಂತರ ಕೋಟಿ ಕೋಟಿ ವ್ಯಾಪಾರ ಮಾಡುವ ಮನಸ್ಸು ಸ್ಥಗಿತಗೊಂಡಿತು ಎಂದಾದರೆ ಸತ್ತಂತೆಯೇ ಸರಿ.  ಮನಸ್ಸು ಜಡ ಮಾಡಿಕೊಂಡವ ಜಡನೇ ಆಗುವ.


ಒಂದು ಪುಟ್ಟ ಉದಾಹರಣೆ..

ಆನೆ ಮಹಾ ಬಲಿಷ್ಠ. ನಮಗೆಲ್ಲ ಗೊತ್ತಿರುವ ವಿಚಾರವೇ. ಆದರೆ

ಆನೆಯನ್ನು ಪಳಗಿಸುವ ಮಾವುತಗೆ ಹೆದರಿ ಸಾಯುತ್ತದೆ. ಗಜ ತನ್ನ ಬಲವನ್ನೇ ಕಳೆದುಕೊಂಡಾಗಿರುತ್ತದೆ. ಬೆಕ್ಕಿನಂತೆ ದುರ್ಬಲವಾಗಿ ಇರುತ್ತದೆ. 


ಆನೆ ಹುಟ್ಟಿದಾಗ ಪಳಗಿಸುವ ಮಾವುತ ಅದನ್ನು ಸರಪಳಿಗಳಿಂದ ಕಟ್ಟಿ ಹಾಕುತ್ತಾನೆ. ನಿಂತಲ್ಲೇ ನಿಲ್ಲುವ ಹಾಗೆ ಮಾಡುತ್ತಾನೆ. ಆನೆಯ "ಮನಸ್ಸಿನಲ್ಲಿ ಈ ಸರಪಳಿ ಇದ್ದರೆ ನಾನು ಕಟ್ಟಿ ಬಿದ್ದೆ" ಎಂಬ ಭಾವ ತಳ ಊರುವಂತೆ ಮಾಡಿಬಿಟ್ಟಿರುತ್ತಾನೆ. ಸಣ್ಣ ಗೂಟದ ಸಹಿತ ಸರಪಳಿಯನ್ನು ಕಿತ್ತು ಬಿಸಾಡುವದೂ ಕಷ್ಟವೇನಲ್ಲ. ಈ ತನ್ನ ಮಾವುತರಂತಹ ನೂರು ಜನರನ್ನು ಕ್ಷಣದಲ್ಲಿ ತುಳಿದು ಸಂಹಾರ ಮಾಡು ಮಹಾ ಸಾಮರ್ಥ್ಯವಿದ್ದರೂ ಏನೂ ಇಲ್ಲದ ಹಾಗೆ ತೆಪ್ಪಗೆ ಬಿದ್ದಿರುತ್ತದೆ ಆನೆ. ಹಾಗೆಯೇ ಆಗಿದೆ ಎಮ್ಮಯ ಸ್ಥಿತಿಗಳು.


ಕಾನ್ವೆಂಟ ಸ್ಕೂಲಿನಿಂದ ಆರಂಭಿಸಿ ಎಲ್ಲಡೆಯೂ ನಾಸ್ತಿಕವಾದ ಅಧಾರ್ಮಿಕತೆ. ಅವುಗಳ ಸಂಕೋಲೆಯಲ್ಲಿ ಬಿದ್ದ ಮಕ್ಕಳ ಮನಸ್ಸು ಸ್ಥಗಿತಗೊಂಡಿದೆ. ಮಹಾ ಧರ್ಮದ ಕಡೆ ಮನಸ್ಸು ಮಾಡಲೂ ಆಗದಷ್ಟು ದುರ್ಬಲವಾಗಿ ಹೋಗಿದೆ. 


ನಮ್ಮ ಮನಸ್ಸನ್ನು ದುರ್ಬಲ ಮಾಡಿಕೊಳ್ಳುವದು ಬೇಡ. ಧರ್ಮದ ಮಾರ್ಗದಲ್ಲಿ ಮಹೋನ್ನತಿಪಡೆಯುವ ಸಾಮರ್ಥ್ಯವಿದೆ. ಸಾರ್ಥಕ ಮಾಡಿಕೊಳ್ಳೋಣ. ಸಾಧನೆಯ ವಿಷಯದಲ್ಲಿ ಮಹಾ ಸಮರ್ಥ ನಮ್ಮ ಮನಸ್ಸು. ಆದರೆ ಸಾಧನೆಯ ವಿಷಯದಲ್ಲಿ ಆನೆಯಂತೆ ದುರ್ಬಲವಾಗಿದೆ. ಮಾವುತ ಹೇಳಿದಂತೆ ಆನೆಯು ಕೇಳುವ ಹಾಗೆ ಇಂದ್ರಿಯಗಳು ಹೇಳಿದಂತೆ ಮನಸ್ಸು ಕುಣಿಯುತ್ತಿದೆ. ಬಲಶಾಲಿಯಾದ ಮನಸದಸು ಸುದೃಢವಾಗಿ ಎದ್ದು ನಿಂತಿತು ಎಂದಾದರೆ ಸಾಧನೆಗಳು‌ ಅತ್ಯಂತ ಸಹವಾಗಿ ನಡೆದು ಹೋಗುತ್ತವೆ. 


*✍🏽ನ್ಯಾಸ...*

ಗೋಪಾಲ ದಾಸ

ವಿಜಯಾಶ್ರಮ, ಸಿರಿವಾರ

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*