*ದೃಷ್ಟಿಕೋನ ಸ್ವಲ್ಪ ಬದಲಾಯಿಸಿ ನೋಡೋಣ.......



 *ದೃಷ್ಟಿಕೋನ ಸ್ವಲ್ಪ ಬದಲಾಯಿಸಿ ನೋಡೋಣ.......

ನಮ್ಮ ದೃಷ್ಟಿ ಎಂದಿಗೂ ನಮ್ಮ ಮೂಗಿನ ನೇರವೇ. ಈ ದೃಷ್ಟಿಯನ್ನು ಬದಲಾಯಿಸಿಕೊಂಡಾಗ ಕಾಣುವದು ಭವ್ಯ ಮತ್ತು ಅದ್ಭುತವೇ ಆಗಿರುತ್ತದೆ. 


ಒಬ್ಬ ಮನುಷ್ಯರನ್ನು ನೋಡಿದಾಗ ಅವನೇನು ಮಹಾ !! ಎಂಬ ಭಾವನೆ ಸಹಜವಾಗಿ ಚಿಮ್ಮುತ್ತದೆ. ಯಾಕೆ ಅಂದರೆ "ನಾನು ಮಹಾನ್ ಅಲ್ಲ, ನನ್ನಲ್ಲಿ ದೋಷಗಳು ತುಂಬಿವೆ, ನನ್ನ ದೃಷ್ಟಿ ನನ್ನ ಮೂಗಿನ ನೇರ, ಹಾಗಾಗಿ ಅವರಲ್ಲಿಯೂ ದೋಷಗಳೇ ಕಾಣುವದು, ದೋಷಗಳೇ ಕಂಡಾಗ ಅವರೇನು ಮಹಾ !!" ಎಂಬ ಉದ್ಗಾರ ಸಹಜ.  ಆದರೆ ನಮ್ಮ ದೃಷ್ಟಿಕೋನ ತುಸು ಬದಲಾದಾಗ *ಅವರೇ ಮಹಾ  !!*  ಎಂಬುವದು ಸುಸ್ಪಷ್ಟವಾಗುತ್ತದೆ. 


ಒಂದು ಪುಟ್ಟ ಕಥೆ.... 

ತಾಯಿ ತನ್ನ ಒಂದು ಬಟ್ಟೆಯಮೇಲೆ ಕೈ ಕಸೂತಿ ಕೆಲಸವನ್ನು ಮಾಡುತ್ತಾ ಇರುತ್ತಾಳೆ. ದೂರದಿಂದ ಓಡಿ ಬಂದ ಮಗ ವಿಚಾರಿಸುತ್ತಾನೆ 'ಅಮ್ಮ ಇದೇನಿದು..... 🙄 ಬರೆ ಬಣ್ಣ ಬಣ್ಣದ ಧಾರಗಳು ಇಳಿಬಿದ್ದಿವೆ....?? ಗದ್ದಲವೋ ಗದ್ದಲ, ಕೆಟ್ಟ ಅಸಹ್ಯವಾಗಿದೆ... ನಂಗೇನೂ ತಿಳಿವಲ್ತು ನೋಡು..... ' ಆಗ ಆ ತಾಯಿ ಎದುರಿಗಿದ್ದ ಮಗನನ್ನ ಕರೆದು ತನ್ನ ತೊಡೆಯಮೇಲೆ ಕುಡಿಸಿಕೊಳ್ಳುತ್ತಾಳೆ *ಇಗೋ ಈಚೆ ನೋಡು.....* ಎಂದು ತೋರಿಸಿದಾಗ, ಆ ಕೂಸಿಗೆ ಆಶ್ಚರ್ಯ.. ವೈವಿಧ್ಯಮಯ ಆರ್ಟ... ಒಳ್ಳೊಳ್ಳೆ ಬಣ್ಣಬಣ್ಣದ ಪಕ್ಷಿಗಳು.... ಆ ಒಂದು ಸುಂದರ ಪ್ಲಾನ್ ... ಅಲ್ಲಿಯ ಶಿಸ್ತು... ಅದನ್ನು ನೋಡಿ ಬೆಪ್ಪಾದ... ಆಶ್ಚರ್ಯಪಟ್ಟ.... ಹಿಗ್ಗಿದ ಸಂತೋಷವಾಯಿತು...  ಅಮ್ಮನ ಮೆಲೆ ಮೆಚ್ಚುಗೆಯೂ ಬಂತು......

ಹೀಗೇಕಾಯ್ತು.... ???

ಮೊದಲಿಗೆ ತಾಯಿಗೆ ಅಭಿಮುಖವಾಗಿ ನಿಂತ ಮಗನಿಗೆ ಹಿಂದಿನ ದಾರಗಳೇ ಕಾಣಿಸಿತ್ತು. ಯಾವಾಗ ತಾಯಿ ತನ್ನತ್ತ ಸೆಳೆದು ಆ ಕಾರ್ಯದ ಅಭಿಮುಖಗೊಳಿಸಿದಳೋ ಆಗ ಆಶ್ಚರ್ಯವಾಯಿತು. ಅದ್ಭುತತೆ ತೋರಿತು..... *ತಾಯಿ ಮಾಡಿದ ಕೆಲಸವಿಷ್ಟೆ ಮಗನ ದೃಷ್ಟಿಕೋನವನ್ನು ಬದಲಾಯಿಸಿದಳು....*ಹಾಗೆ ಪ್ರತಿಯೊಬ್ಬ ಜೀವನನ್ನು ನೋಡಿದಾಗಲೂ ನಮ್ಮ ದೃಷ್ಟಿಕೋನ ಬದಲಾಗಬೇಕು. ಆ ಬದಲಾಗಿಸುವ ಕಾರ್ಯವನ್ನು ನಮ್ಮ ಶ್ರೀಮದಚಾರ್ಯರೇ ಮೊದಲಾದ ಮಹಾ ಜ್ಙಾನಿಗಳೆಲ್ಲರೂ ಮಾಡುತ್ತಾರೆ....

ಜೀವನ ದೇಹದಲ್ಲಿ ಇರುವ ಕೋಟಿ ಕೋಟಿ ರೋಮಕೂಪಗಳಲ್ಲಿ, ಜಗತ್ತಿನ ಸಕಲ ಭಾವಿ, ಸರೋವರ, ತೀರ್ಥ, ಪುಷ್ಕರಣಿ ಇವುಗಳ ಅಭಿಮಾನಿ ದೇವತೆಗಳು ಅಭಿಮಾನಿಗಳಾಗಿ ನೆಲೆನಿಂತಿದಾರೆ.... ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ಗಂಗಾದಿ ಸಕಲ ನದಿ ನದಗಳ ಅಭಿಮಾನಿಗಳು ನೆಲೆ ನಿಂತಿದಾರೆ.... ಆ ಎಲ್ಲ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ವಾಯುದೇವರು ಇದ್ದಾರೆ.... ಅಂತೆಯೆ ಮೂವತ್ತಾರು ಸಾವಿರ ಭಗವಂತನ ದಂಪತಿರೂಪಗಳು ಈ ದೇಹದಲ್ಕಿ ನೆಲೆಗೊಂಡಿವೆ... ಆ ಕಾರಣದಿಂದಲೋ ಏನೋ ಈ ಶರೀರ ಭಗವಂತನ ಪ್ರತಿಮೆಯಾಗಿದೆ.... ಈ ನಮ್ಮ ಹಾಗೂ ನಮ್ಮೆದುರಿರುವ ಶರೀರವು ಮೂವತ್ತಾರು ಸಾವಿರ ಭಗವದ್ದಂಪತಿಗಳಿಗೆ ವಿಹಾರಕ್ಕೆ ಯೋಗ್ಯವಾದ ತಾಣವಾಗಿದೆ.... ಈ ಶರೀರದಲ್ಲೇ  ಮೂವತ್ತಾರು ಸಾವಿರ ರೂಪಗಳಿಂದ ಮೂವತ್ತಾರು ಸಾವಿರ ಮುಖ್ಯಪ್ರಾಣದೇವರನ್ನು ಮಗನನ್ನಾಗಿ ಪಡೆಯುತ್ತಾನೆ ಆ ಕಾರಣದಿಂದಾಗಿಯೇ *ಅನಕಾಮಮಾರ* ಎಂದು ಶ್ರೀಹರಿ ಹಸರಾಗಿದ್ದಾನೆ ಇತ್ಯಾದಿ ಇತ್ಯಾದಿ ಅಂಶಗಳನ್ನು ಉಪನಿಷತ್ತು ಮೊದಲಾದವಗಳಿಂದ ತಿಳಿಹಿಸಿಕೊಡುತ್ತಾರೆ. ಆಗ ಎದುರಿಗೆ ಯಾರನ್ನು ನೋಡಿದಾಗಲೂ "ಇವನೇನು ಮಹಾ...!!" ಎಂಬ ಭಾವನೆ ಬರದೇ *ಇವನೇ ಮಹಾನ್....* ಎಂಬ ಭಾವನೆ ಮೂಡುತ್ತದೆ. ಹೀಗೆ ಅತ್ಯಂತ ಸರಳವಾದ ಉಪಾಯಗಳಿಂದ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಮುಖಾಂತರ ಒಂದು ಅದ್ಭುತ ಜಗತ್ತನ್ನೇ ತೋರಿಸಿಕೊಡುತ್ತಾರೆ ಶ್ರೀಮದಾಚಾರ್ಯರು.... ಮಗು ತಾಯಿಯ ಮಡಿಲು ಸೇರಿದಂತೆ, ಇಂದು ಶ್ರೀಮದಾಚಾರ್ಯರ ಮಡಿಲು ಸೇರಿದರೆ ಯಾವೊಬ್ಬವ್ಯಕ್ತಿಯ ಮೇಲೆಯೂ ಅಗೌರವದ ಭಾವ ಮೂಡದ ಹಾಗೆ ಆಗುತ್ತದೆ, ಅಷ್ಟೇ ಅಲ್ಲದೇ ಮಹಾನ್ ಗೌರವಾನ್ವಿತನೂ ಆಗುತ್ತಾನೆ. ಅದರ ಮುಖಾಂತರ ಭಗವಂತ ತನ್ನ ಅತ್ಯದ್ಭುತ ಮಹಿಮೆಯನ್ನೂ ಅರುಹಿಸಿ ತೋರಿಸುತ್ತಾನೆ.  ಹಾಗಾಗಿ...


*ಪ್ರತಿಯೊಂದರಲ್ಲಿಯೂ ನಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳೋಣ, ಅತ್ಯದ್ಭುತತೆ, ಭವ್ಯತೆಯನ್ನು ಅನುಭವಿಸೋಣ......* ಹರೇ ಶ್ರೀನಿವಾಸ...


*✍🏽✍🏽✍🏽✍ನ್ಯಾಸ......*

ಗೋಪಾಲ ದಾಸ. 

(ವಿಜಯಾಶ್ರಮ, ಸಿರವಾರ.)

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*