*ಮಾನ್ಯರ ಅವಮಾನ ಬಿರುಗಾಳಿ ಕೇಳೆಚ್ಚರಿಕೆ......*
*ಮಾನ್ಯರ ಅವಮಾನ ಬಿರುಗಾಳಿ ಕೇಳೆಚ್ಚರಿಕೆ......*
"ಮಾನ್ಯರ ಅವಮಾನ ಬಿರುಗಾಳಿ ಕೇಳೆಚ್ಚರಿಕೆ" ಪುರಂದರ ದಾಸರ ಒಂದು ಎಚ್ಚರಿಕೆಯ ಸಂದೇಶ.
ವಿದ್ವಾಂಸ, ಸದಾಚಾರಿ, ವಿಷ್ಣುಭಕ್ತ, ತತ್ವಜ್ಙಾನಿ, ವೃದ್ಧ, ಕುಲೀನ ಮುಂತಾದ ಮಾನ್ಯರು ಮನೆಗೆ ಬಂದಾಗ ಸತ್ಕಾರ, ಆದರ, ಆಸನ, ನಮಸ್ಕಾರ, ಹಾರ್ದವಾದಮಾತು ಇವುಗಳನ್ನು ಸಲ್ಲಿಸುವ ಆತಿಥೇಯನಿಗೆ ಉತ್ತಮ ಅಭಿವೃದ್ಧಿಯನ್ನು ತಂದು ಕೊಡುತ್ತದೆ. ಇದಕ್ಕೇ ವಿಪರೀತವಾಗಿ ಅಂದರೆ *ಅನಾದರ, ಅಸತ್ಕಾರ, ಹೊರಗಿಂದ ಹೊರಗೇ ಹೊತ್ತು ಹಾಕೋದು, ನಿಂದಿಸುವದು, ದ್ವೇಶಿಸುವದು* ಇತ್ಯಾದಿಯಾಗಿ ನಡೆದು ಕೊಂಡಲ್ಲಿ ಅನಾಹುತ ತಪ್ಪದ್ದಲ್ಲ.
ಮನೆಗ ಆಗಮಿಸಿ, ಅವಮಾನಿತ ಬ್ರಾಹ್ಮಣ ಅಗ್ನಿಯಂತೆ ಸುಟ್ಟುಹಾಕುವ, ನೀರಿನಂತೆ ಕೊಚ್ಚುಕೊಂಡು ಒಯ್ಯುವ, ಭೂಕಂಪನದಲ್ಲಿ ಹೂತುಹೋಗುವಂತೆ ಭೂಮಿಯಾಗಿ ಹೂಳಿಡುವ, ಬಿರುಗಾಳಿಯಾಗಿ ಕೊಚ್ಚಿ ಒಯ್ಯುವ ಏನೂ ಮಾಡಲು ಸಿದ್ಧ. "ಬ್ರಾಹ್ಮಣನಲ್ಲಿ ಇರುವ ದೇವ ಈ ರೀತಿಯಾಗಿ ಪಣ ತೊಟ್ಟಿರುವ." ಕಾಠಕೋಪನಿಷತ್ತೂ ಸಹ ಈ ಮಾತನ್ನೇ ದೃಢವಾಗಿ ಪ್ರತಿಪಾದಿಸುತ್ತದೆ. ಮಾನ್ಯನಾದ ಬ್ರಾಹ್ಮಣನನ್ನು ಯಾವ ಕಾರಣಕ್ಕೂ ಲಘುವಾಗಿ ಸ್ವೀಕರಿಸುವ ಹಾಗಿಲ್ಲ ಎಂಬ ಎಚ್ಚರಿಕೆಯನ್ನು ದಾಸರಾಯರು ಕೊಡುತ್ತಾರೆ....
*✍🏽ನ್ಯಾಸ....*
Comments