Posts

ಓ ಮಹಾಬುದ್ಧಯೇ ನಿನನಗೆ ನಮಃ*

Image
  *ಓ ಮಹಾಬುದ್ಧಯೇ ನಿನನಗೆ ನಮಃ* ವಿಷ್ಣುವಿನ ಸಹಸ್ರ ನಾಮಗಳಲ್ಲಿ ಒಂದಾಗಿರುವದು *ಮಹಾಬುದ್ಧಿ* ಎಂಬ ನಾಮವೂ ಆಗಿದೆ.  ದೇವರಲ್ಲಿ ಯಾವಗುಣಗಳನ್ನು ಕಾಣುತ್ತೇವೆ, ಯಾವಗುಣದ ಉಪಾಸನೆ ಮಾಡುತ್ತೇವೆ ಆ ಗುಣ ಉಪಸನೆ ಮಾಡುವವನಿಗೆ ಅಥವಾ ಕಂಡವನಿಗೆ ಬರುತ್ತವೆ. ಇದು ಶಾಸ್ತ್ರದ ನಿಯಮ.  ನಮಗೆ ದೇವರು ಹೇಗೆ ಬಿಂಬನಾಗಿದ್ದಾನೆ ಹಾಗೆಯೇ ನಮ್ಮ ಗುಣಗಳಿಗೂ ಬಿಂಬನಾಗಿದ್ದಾನೆ.  ಆ ಬಿಂಬನ ಗುಣವಾದ *ಮಹಾಬುದ್ಧಿ* ಎಂಬ ಗುಣದ ಪ್ರತಿಬಿಂಬ ಗುಣ ನಮ್ಮಲ್ಲಿ ಅಭಿವ್ಯಕ್ತಗೊಳಿಸುವದಕ್ಕಾಗಿಯೂ ಈ ಗುಣದ ಚಿಂತನೆ ಅವಷ್ಯವಾಗಿಬೇಕು.  ಕೃಷ್ಣ ಗೀತೆಯಲ್ಲಿ ತನ್ನ ವಿಭೂತಿರೂಪಗಳನ್ನು ಹೇಳುವಾಗ *ಬುದ್ಧಿರ್ಬುದ್ಧಿಮತಾಮಸ್ಮಿ* ಬುದ್ಧಿವಂತರ ಬುದ್ಧಿಯಲ್ಲಿ ನಾನು ಇದ್ದೇನೆ. ನನ್ನ ವಿಭೂತಿರೂಪವಿದೆ ಎಂದು ಹೇಳುತ್ತಾನೆ.  ಬುದ್ಧಿವಂತರಾದ ನಮ್ಮ ಬುದ್ಧಿಯಲ್ಲಿ, ಮಹಾಬುದ್ಧಿರೂಪವಾದ ದೇವರೇನಾದರೂ  ಬಂದು ನೆಲಿಸಿದರೆ ನಮ್ಮ ಬುದ್ಧಿವಂತೆಕೆ ಎಂದಿಗೂ ವಿಫಲವಾಗುವದೇ ಇಲ್ಲ. *ಬುದ್ಧಿಯ ಅವಷ್ಯಕತೆಯೆ ಇದೆಯೇ....* ಬುದ್ಧಿಯ ಆವಷ್ಯಕತೆ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಹು ಊಹು, ಬೇಕು ಬೇಡ, ಮಾಡುವೆ ಮಾಡುವದಿಲ್ಕ ಇತ್ಯಾದಿ ಇತ್ಯಾದಿ ನೂರಾರು ಸಾವಿರಾರು ವಿಚಾರಗಳ ಗೂಡು ಮನಸ್ಸು. ಇದನ್ಬೇ ಮಾಡಬೇಕು. ಇದನ್ನು ಮಾಡುವದೇ ಇಲ್ಲ. ಎಂದು ಪ್ರತಿಹಂತದಲ್ಲಿಯೂ ನಿರ್ಣಯಿಸುವದು ಬುದ್ಧಿ. ಜೊತೆಗೆ ಹಿತ ಅಹಿತಗಳ ನಿಶ್ಚಯಮಾಡುವದೂ ಬುದ್ಧಿಯೆ.  ಕಾರ...

*ಮಾನ್ಯರ ಅವಮಾನ ಬಿರುಗಾಳಿ ಕೇಳೆಚ್ಚರಿಕೆ......*

*ಮಾನ್ಯರ ಅವಮಾನ ಬಿರುಗಾಳಿ ಕೇಳೆಚ್ಚರಿಕೆ......* "ಮಾನ್ಯರ ಅವಮಾನ ಬಿರುಗಾಳಿ ಕೇಳೆಚ್ಚರಿಕೆ" ಪುರಂದರ ದಾಸರ ಒಂದು ಎಚ್ಚರಿಕೆಯ ಸಂದೇಶ.  ವಿದ್ವಾಂಸ, ಸದಾಚಾರಿ, ವಿಷ್ಣುಭಕ್ತ, ತತ್ವಜ್ಙಾನಿ, ವೃದ್ಧ, ಕುಲೀನ ಮುಂತಾದ ಮಾನ್ಯರು  ಮನೆಗೆ ಬಂದಾಗ ಸತ್ಕಾರ, ಆದರ, ಆಸನ, ನಮಸ್ಕಾರ, ಹಾರ್ದವಾದಮಾತು ಇವುಗಳನ್ನು ಸಲ್ಲಿಸುವ ಆತಿಥೇಯನಿಗೆ ಉತ್ತಮ ಅಭಿವೃದ್ಧಿಯನ್ನು ತಂದು ಕೊಡುತ್ತದೆ. ಇದಕ್ಕೇ ವಿಪರೀತವಾಗಿ ಅಂದರೆ *ಅನಾದರ, ಅಸತ್ಕಾರ, ಹೊರಗಿಂದ ಹೊರಗೇ ಹೊತ್ತು ಹಾಕೋದು, ನಿಂದಿಸುವದು, ದ್ವೇಶಿಸುವದು* ಇತ್ಯಾದಿಯಾಗಿ ನಡೆದು ಕೊಂಡಲ್ಲಿ ಅನಾಹುತ ತಪ್ಪದ್ದಲ್ಲ.  ಮನೆಗ ಆಗಮಿಸಿ, ಅವಮಾನಿತ ಬ್ರಾಹ್ಮಣ ಅಗ್ನಿಯಂತೆ ಸುಟ್ಟುಹಾಕುವ, ನೀರಿನಂತೆ ಕೊಚ್ಚುಕೊಂಡು ಒಯ್ಯುವ, ಭೂಕಂಪನದಲ್ಲಿ ಹೂತುಹೋಗುವಂತೆ ಭೂಮಿಯಾಗಿ ಹೂಳಿಡುವ, ಬಿರುಗಾಳಿಯಾಗಿ ಕೊಚ್ಚಿ ಒಯ್ಯುವ ಏನೂ ಮಾಡಲು ಸಿದ್ಧ. "ಬ್ರಾಹ್ಮಣನಲ್ಲಿ ಇರುವ  ದೇವ ಈ ರೀತಿಯಾಗಿ ಪಣ ತೊಟ್ಟಿರುವ." ಕಾಠಕೋಪನಿಷತ್ತೂ ಸಹ ಈ ಮಾತನ್ನೇ ದೃಢವಾಗಿ ಪ್ರತಿಪಾದಿಸುತ್ತದೆ. ಮಾನ್ಯನಾದ ಬ್ರಾಹ್ಮಣನನ್ನು ಯಾವ ಕಾರಣಕ್ಕೂ ಲಘುವಾಗಿ ಸ್ವೀಕರಿಸುವ ಹಾಗಿಲ್ಲ ಎಂಬ ಎಚ್ಚರಿಕೆಯನ್ನು ದಾಸರಾಯರು ಕೊಡುತ್ತಾರೆ.... *✍🏽ನ್ಯಾಸ....*

*"ಸ್ಥಗಿತ ಮನಸ್ಸು" ಮಹಾ ಹಾನಿಕಾರಕ...*

Image
 *"ಸ್ಥಗಿತ ಮನಸ್ಸು" ಮಹಾ ಹಾನಿಕಾರಕ...* ಮನಸ್ಸು ತುಂಬ ಕುಶಲಿ. ನಿರಂತರ ಕ್ರಿಯಾಶೀಲ.  ಶ್ರಾಂತವಾಗುವದು ತುಂಬ ವಿರಳ. ದೇಹ ಬಲು ಬೇಗ ಶ್ರಾಂತವಾಗುತ್ತದೆ. ದೇಹಕ್ಕಿಂತಲೂ ಬಲಶಾಲಿ  ಇಂದ್ರಿಯಗಳು ಸ್ವಲ್ಪತಡವಾಗಿ ಶ್ರಾಂತವಾಗುತ್ತವೆ. ಮನಸ್ಸು ಮಾತ್ರ ಮಹಾ ಬಲಿಷ್ಠ. ಅತ್ಯಲ್ಪಕಾಲದಲ್ಲಿ ವಿಶ್ರಾಂತಯನ್ನು ಬಯುಸುವದು. ನಿದ್ರೆಯಲ್ಲಿಯೂ ಸ್ವಪ್ನರೂಪದಿಂದ ವ್ಯಾಪಾರ ನಟಿಸುತ್ತಾ ಇರುತ್ತದೆ. ಅತ್ಯಲ್ಪಸಮಯದ ವಿಶ್ರಾಂತಿ ಮನಸ್ಸಿಗೆ ಸಾಕು.  ಮನಸ್ಸು ಕ್ರಿಯಾಶೀಲವಾಗಿ ಒಂದುಬಾರಿ ಉದ್ಯುಕ್ತವಾದರೆ ಎಲ್ಲವನ್ನೂ ಸಾಧಿಸಿಯೇ ತೀರುತ್ತದೆ. ಮನಸ್ಸಿಗೆ ಅಸಾಧ್ಯವಾಗಿರುವದು ಯಾವದೂ ಇಲ್ಲ. ಈ ರೀತಿಯಲ್ಲಿ ಕ್ರಿಯಾಶೀಲವಾದ ಮನಸ್ಸು ಒಂದೇ ಬಾರಿ ಸ್ಥಗಿತ ಗೊಂಡಿತು ಎಂದಾದರೆ ಮಾನವನ ಏಳಿಗೆ ತುಂಬ ಕಠಿಣ.  ನಿರಂತರ ಓಡುವ ಅಥವಾ ನಿಂತೇ ಇರುವ ಕುದುರೆ ಮಲಗಿರುವದು ಎಂದಾದರೆ ಅದರ ಸಾವು ಸನ್ನಿಹಿತ ಎಂದೇ ಅರ್ಥ. ಹಾಗೆಯೆ ನಿರಂತರ ಕೋಟಿ ಕೋಟಿ ವ್ಯಾಪಾರ ಮಾಡುವ ಮನಸ್ಸು ಸ್ಥಗಿತಗೊಂಡಿತು ಎಂದಾದರೆ ಸತ್ತಂತೆಯೇ ಸರಿ.  ಮನಸ್ಸು ಜಡ ಮಾಡಿಕೊಂಡವ ಜಡನೇ ಆಗುವ. ಒಂದು ಪುಟ್ಟ ಉದಾಹರಣೆ.. ಆನೆ ಮಹಾ ಬಲಿಷ್ಠ. ನಮಗೆಲ್ಲ ಗೊತ್ತಿರುವ ವಿಚಾರವೇ. ಆದರೆ ಆನೆಯನ್ನು ಪಳಗಿಸುವ ಮಾವುತಗೆ ಹೆದರಿ ಸಾಯುತ್ತದೆ. ಗಜ ತನ್ನ ಬಲವನ್ನೇ ಕಳೆದುಕೊಂಡಾಗಿರುತ್ತದೆ. ಬೆಕ್ಕಿನಂತೆ ದುರ್ಬಲವಾಗಿ ಇರುತ್ತದೆ.  ಆನೆ ಹುಟ್ಟಿದಾಗ ಪಳಗಿಸುವ ಮಾವುತ ಅದನ್ನು ಸರಪಳಿಗಳ...

ಕೆಡಿಸುವವನು ನೀನೆ, ಇಡಿಸುವವನು ನೀನೆ, ಕೊಡಿಸುವವನು ನೀನೆ, ಹಿಡಿಸುವವನು ನೀನೇ"*

Image
  " ಕೆಡಿಸುವವನು ನೀನೆ, ಇಡಿಸುವವನು ನೀನೆ, ಕೊಡಿಸುವವನು ನೀನೆ, ಹಿಡಿಸುವವನು ನೀನೇ"* ಕೊಡಿಸುವದು, ಕೆಡಿಸುವದು, ಇಡಿಸುವದು, ಹೀಡಿಸುವದು ಈ ನಾಲಕು ಬಿಟ್ಟು ಮತ್ತೊಂದಿಲ್ಲ. ಎಲ್ಲವೂ ಈ ನಾಲಕರಲ್ಲೇ.  ಯಾವುದೇ ಪದಾರ್ಥಗಳಾಗಿದ್ದರೂ ಈ ನಾಲಕರಲ್ಲೇ ಇರಬೇಕು. ಈ ನಾಲಕನ್ನೂ ನನ್ನಿಂದ ಪಡೆಯಲಾಗುವದಿಲ್ಲ. ಅದು ನನಗೆ ಅನುಭವ ಸಿದ್ಧ. "ನೀನೇ ಕೊಡಬೇಕು ನಿನ್ನಿಂದಲೇ ಆಗುವದು ನಿನ್ನಿಂದಲೇ ಸಿಗುವದು" ಎಂದು ಗೋಪಾಲದಾಸರ ಮಾತು.  ಹಣ ಹೊನ್ನು ಜ್ಙಾನ ಪ್ರೀತಿ ಸ್ನೇಹ ಹೊಲ ಮನೆ ಜನ್ಮ ಗುರು ದೇವರು ಏನೇ ಇದ್ದರೂ  ಇನ್ನೊಬ್ಬರು ಕೊಟ್ಟರೇ ಉಂಟು. ಅದು ನನ್ನಲ್ಲಿ ಇಲ್ಲ. ನಾನು ಪಡೆಯಬೇಕು ಎಂದರೂ ಇನ್ನೊಬ್ಬರೇ ಕೊಡಬೇಕು. ನಾನು ಪಡೆದಿದ್ದೇನೇ ಎಂದರೆ ಇನ್ನೊಬ್ಬರಿಂದಲೇ ಇದು ಸತ್ಯ.  ಯೋಗ್ಯವಾದ ಪದಾರ್ಥಗಳನ್ನು ಕೊಡಬೇಕು. ಅದೂ ಇನ್ನೊಬ್ಬರಿಂದಲೇ ಕೊಡಿಸಬೇಕು.  ಹಿತವಾದದ್ದನ್ನು ಇಡಬೇಕು. ಪಡೆದವುಗಳನ್ನು ಶಾಶ್ವತವಾಗಿ ಎನ್ನಿಂದ ಹಿಡಿಸಿಕೊಳ್ಳಬೇಕು.  ಇಷ್ಟೆಲ್ಲ ನಾನು ಮಾಡಿಕೊಂಡು ಪಡೆಯಲಾರೆ. ಎನಗೆ ಯಾವದು ಯೋಗ್ಯ ತಿಳಿದಿಲ್ಲ. ಹಿತ ಯಾವದು ಗೊತ್ತಿಲ್ಲ. ಯಾವದನ್ನು ಇಟ್ಟುಕೊಳ್ಳಬೇಕು ಯಾವದನ್ನು ಕೆಡಿಸಿಕೊಳ್ಳಬೇಕೂ ಅದೂ ಗೊತ್ತಿಲ್ಲ. ಈ ಅವಸ್ಥೆ ಎನ್ನದು. ಹೇ ದಯಾನಿಧೆ !!! ಯಾವದು ಯೋಗ್ಯವಾಗಿದೆ, ನನಗೆ ಯಾವದು ಹಿತ ಅದನ್ನು ನೆಲೆ ಊರುವಂತೆ ಮಾಡಿ ಎನ್ನಲ್ಲಿ ಇಡಿಸು. ಆ ಪದಾರ್ಥಗಳನ್ನೇ ಎನ್ನವರಲ್ಲಿ ಪ್ರೇರಿಸಿ ಅವರ ಮುಖ...

*ಹತ್ತಿರ ಬಂದವರಿಗೆ ಎಲ್ಲವನ್ನೂ ಸುರಿಸು, ದೂರ ಹೋದವರಿಗೆ ಎಲ್ಲವನ್ನೂ ಹರಿಸು*

Image
  *ಹತ್ತಿರ ಬಂದವರಿಗೆ ಎಲ್ಲವನ್ನೂ ಸುರಿಸು, ದೂರ ಹೋದವರಿಗೆ ಎಲ್ಲವನ್ನೂ ಹರಿಸು* "ಪರೋಪಕಾರಾರ್ಥಮಿದಂ ಶರೀರಮ್" ಈ ನಮ್ಮ ಶರೀರ ಪರೋಪಕಾರಕ್ಕಾಗಿ. ಪರೋಪಕಾರ ಜೀವನದ ಅನೇಕ ಧ್ಯೇಯಗಳಲ್ಲಿ ಒಂದು.  "ಪರೋಪಕಾರಃ ಪುಣ್ಯಾಯ" *ಪರೋಪಕಾರ ಇರುವದೇ ಮಹಾ ಪುಣ್ಯಕ್ಕಾಗಿ. ಪರೋಪಕಾರ ಅತೀಶ್ರೇಷ್ಠ ಸಾಧನೆ.  ಪುಣ್ಯ ಪಾಪಗಳ ಬಂಧ ಇಲ್ಲ. ಸ್ವಾರ್ಥ ಶೂನ್ಯ. ಯಾವ ಕೊರತೆಗಳೂ ಇಲ್ಲ. ಹಾಗಿದ್ದರೂ ನಿರಂತರ ಅನಂತಾನಂತ ಉಪಕಾರದಲ್ಲಿ ತೊಡಗುವ ನಮ್ಮ ಸ್ವಾಮಿ ಶ್ರೀಹರಿ. ಇದು ಅವನ ಕಾರುಣ್ಯ.  ಹಾಗೆಯೇ ದೆವತೆಗಳು, ಋಷಿಗಳು, ಮುನಿಗಳು, ಎಲ್ಲರೂ ತಮ್ಮ ನಂಬಿದ ಜನರಿಗೆ ಸಾಧ್ಯವಿರುವಷ್ಟು ಉಪಕಾರವನ್ನೇ ಮಾಡುತ್ತಾರೆ. ಉಪಕಾರ ಮಾಡುವದೇ ಅವರ ಉಸಿರು.  ಇಂದು ನಮ್ಮ ಪರಮ ಗುರುಗಳ ಜೀವನದಲ್ಲೂ ಅನೇಕ ನಿದರ್ಶನಗಳನ್ನು ಕೇಳುತ್ತೇವೆ. "ಜ್ಙಾನಕಾಗಿ ಅವರ ಶಿರವು, ದಾನಕಾಗಿ ಅವರ ಕರವು, ದಯೆಗಾಗಿ ಅವರ ದೃಷ್ಟಿಯು" ಎಂದು. ಹೀಗೆ ಸಜ್ಜನರ ಸಾತ್ವಿಕರ ಒಂದು ಧ್ಯೇಯ ಸಾಧ್ಯವಿರುವಷ್ಟು ಉಪಕಾರ ಮಾಡುವದೇ.  ನಮ್ಮವರಾಗಿ ನಮ್ಮ ಹತ್ತಿರ ಇದ್ದರಂತೂ ಉಪಕಾರ ಮಾಡುವದೇ. ಮಾತಿನಿಂದ , ಹಣದಿಂದ, ಜ್ಙಾನದಿಂದ, ಧರ್ಮದಿಂದ, ಧೈರ್ಯ ಹೇಳಿ, ಇತ್ಯಾದಿ ಇತ್ಯಾದಿ..  ನಮ್ಮವನಾದ ವ್ಯಕ್ತಿ ಕಾರಣಾಂತರಗಳಿಂದ ದೂರಾದರೂ ಅವನಿಗೆ *ಎಲ್ಲ ರೀತಿಯಿಂದ ಒಳ್ಳೆಯದಾಗಲಿ* ಎಂದಾದರೂ ಹರಿಸುವದೇ. ಹಾಗಾದಾಗ ಮಾತ್ರ ಅವನು ಸಜ್ಜನ. ಗುರು- ಶಿಷ್ಯ. ಶಿಷ್ಯ ಮಹಾ ಗುರು ಭಕ್ತ. ನಿರಂತರ...

*ಓ ಸುಲಭನೇ !!!! ನಿನ್ನಷ್ಟು ಸುಲಭರು ಯಾರು ಇರಲಿಕ್ಕಿಲ್ಲ ಅಲ್ವೇ....*

Image
  *ಓ ಸುಲಭನೇ !!!! ನಿನ್ನಷ್ಟು ಸುಲಭರು ಯಾರು ಇರಲಿಕ್ಕಿಲ್ಲ ಅಲ್ವೇ....* ಹಿತವಾದದ್ದು ಒಳಿತಾದದ್ದು ಅಂತ ಏನಿದೆ ಅದು ಎಂದಿಗೂ ದುರ್ಲಭವೇ. ಅಹಿತವಾದದ್ದು ಕೆಟ್ಟದ್ದು ಅಂತ ಏನೇನಿದೆ ಅದೆಲ್ಲವೂ ಅತ್ಯಂತ ಸುಲಭವೇ.  ಅಂತೆಯೇ ಧರ್ಮ ಅತ್ಯಂತ ದುರ್ಲಭ. ಸತ್ಯ ದುರ್ಲಭ. ದಯೆ ಕ್ಷಮೆ ದುರ್ಲಭವೇ. ಸಹನೆ ಅತೀ ದುರ್ಲಭ. ಜ್ಙಾನ ಇದುವೂ ದುರ್ಲಭವೇ. ಅಧರ್ಮ, ಅಜ್ಙಾನ, ದ್ವೇಶ, ಮಾತ್ಸರ್ಯ, ಮೊದಲಾದ ಎಲ್ಲವೂ ಅತ್ಯಂತ ಸುಲಭವೇ ಆಗಿದೆ ಇಂದಿನ ಕಾಲದಲ್ಲಿ..... ಇಂದಿನ ಕಾಲದಲ್ಲಿ ನಮ್ಮ ಬ್ರಾಹ್ಮಣ ಯುವಕರಿಗೆ ಓದು ದುರ್ಲಭ, ಕೆಲಸ ದುರ್ಲಭ, ಧರ್ಮ ದುರ್ಲಭ, ಮದುವೆ ದುರ್ಲಭ, ಸೌಖ್ಯ ದುರ್ಲಭ, ಹಣ ದುರ್ಲಭ, ಪ್ರತಿಷ್ಠೆ ಕೀರ್ತಿಗಳೂ ದುರ್ಲಭ,  ಶಾಂತಿ ಸಮಾಧಾನ ದುರ್ಲಭ, ಸಂಧ್ಯಾವಂದನೆ ಪೂಜೆ ಮಹಾದುರ್ಲಭ, ಪಾಠ ಉಪನ್ಯಾಸಗಳಂತೂ ಹೇಳತೀರದಷ್ಟು ದುರ್ಲಭ. ಹೀಗೆ ಇಂದಿನ ಯುವಕರು ಪಡೆಯಬೇಕಾದದ್ದು ಏನೇನಿದೆ ಅದೆಲ್ಲವೂ ದುರ್ಲಭವೇ ಆಗಿದೆ. ಉತ್ತಮ ಸ್ನೇಹಿತರು ಸಿಗುವದು ದುರ್ಲಭ. ಸ್ನೇಹ ಬೆಳಿಸಿಕೊಳ್ಳುವದು ಇನ್ನೂ ದುರ್ಲಭ. ಸ್ನೇಹ ಉಳಿಸಿಕೊಳ್ಳುವದಂತೂ ಮಹಾ ದುರ್ಲಭ. ಇದೇರೀತಿ ಬಂಧುಗಳು, ಕುಲ, ಸಮಾಜ, ಕುಲ ಗುರುಗಳು, ಆಪ್ತರು, ಹಿತೈಷಿಗಳು, ಮಾರ್ಗದರ್ಶಕರು, ಪ್ರತಿಯೊಂದೂ ದುರ್ಲಭವೇ..... *ಕೆಟ್ಟದ್ದನ್ನು ಹೇಳುವವರು ನೂರು ಜನರು ಸಿಗಬಹುದು, ಸಿಕ್ಕೇ ಸಿಗುತ್ತಾರೆ. ಒಳಿತನ್ನು ಹೇಳುವವರು ಸಿಗಲ್ಲ. ಸಿಕ್ಕರೂ ಮಾತು ಕೇಳಲು‌ ಮನಸ್ಸೇ ಆಗಲ್ಲ.... ಅನಾಯಾ...

*ದೃಷ್ಟಿಕೋನ ಸ್ವಲ್ಪ ಬದಲಾಯಿಸಿ ನೋಡೋಣ.......

Image
 *ದೃಷ್ಟಿಕೋನ ಸ್ವಲ್ಪ ಬದಲಾಯಿಸಿ ನೋಡೋಣ....... ನಮ್ಮ ದೃಷ್ಟಿ ಎಂದಿಗೂ ನಮ್ಮ ಮೂಗಿನ ನೇರವೇ. ಈ ದೃಷ್ಟಿಯನ್ನು ಬದಲಾಯಿಸಿಕೊಂಡಾಗ ಕಾಣುವದು ಭವ್ಯ ಮತ್ತು ಅದ್ಭುತವೇ ಆಗಿರುತ್ತದೆ.  ಒಬ್ಬ ಮನುಷ್ಯರನ್ನು ನೋಡಿದಾಗ ಅವನೇನು ಮಹಾ !! ಎಂಬ ಭಾವನೆ ಸಹಜವಾಗಿ ಚಿಮ್ಮುತ್ತದೆ. ಯಾಕೆ ಅಂದರೆ "ನಾನು ಮಹಾನ್ ಅಲ್ಲ, ನನ್ನಲ್ಲಿ ದೋಷಗಳು ತುಂಬಿವೆ, ನನ್ನ ದೃಷ್ಟಿ ನನ್ನ ಮೂಗಿನ ನೇರ, ಹಾಗಾಗಿ ಅವರಲ್ಲಿಯೂ ದೋಷಗಳೇ ಕಾಣುವದು, ದೋಷಗಳೇ ಕಂಡಾಗ ಅವರೇನು ಮಹಾ !!" ಎಂಬ ಉದ್ಗಾರ ಸಹಜ.  ಆದರೆ ನಮ್ಮ ದೃಷ್ಟಿಕೋನ ತುಸು ಬದಲಾದಾಗ *ಅವರೇ ಮಹಾ  !!*  ಎಂಬುವದು ಸುಸ್ಪಷ್ಟವಾಗುತ್ತದೆ.  ಒಂದು ಪುಟ್ಟ ಕಥೆ....  ತಾಯಿ ತನ್ನ ಒಂದು ಬಟ್ಟೆಯಮೇಲೆ ಕೈ ಕಸೂತಿ ಕೆಲಸವನ್ನು ಮಾಡುತ್ತಾ ಇರುತ್ತಾಳೆ. ದೂರದಿಂದ ಓಡಿ ಬಂದ ಮಗ ವಿಚಾರಿಸುತ್ತಾನೆ 'ಅಮ್ಮ ಇದೇನಿದು..... 🙄 ಬರೆ ಬಣ್ಣ ಬಣ್ಣದ ಧಾರಗಳು ಇಳಿಬಿದ್ದಿವೆ....?? ಗದ್ದಲವೋ ಗದ್ದಲ, ಕೆಟ್ಟ ಅಸಹ್ಯವಾಗಿದೆ... ನಂಗೇನೂ ತಿಳಿವಲ್ತು ನೋಡು..... ' ಆಗ ಆ ತಾಯಿ ಎದುರಿಗಿದ್ದ ಮಗನನ್ನ ಕರೆದು ತನ್ನ ತೊಡೆಯಮೇಲೆ ಕುಡಿಸಿಕೊಳ್ಳುತ್ತಾಳೆ *ಇಗೋ ಈಚೆ ನೋಡು.....* ಎಂದು ತೋರಿಸಿದಾಗ, ಆ ಕೂಸಿಗೆ ಆಶ್ಚರ್ಯ.. ವೈವಿಧ್ಯಮಯ ಆರ್ಟ... ಒಳ್ಳೊಳ್ಳೆ ಬಣ್ಣಬಣ್ಣದ ಪಕ್ಷಿಗಳು.... ಆ ಒಂದು ಸುಂದರ ಪ್ಲಾನ್ ... ಅಲ್ಲಿಯ ಶಿಸ್ತು... ಅದನ್ನು ನೋಡಿ ಬೆಪ್ಪಾದ... ಆಶ್ಚರ್ಯಪಟ್ಟ.... ಹಿಗ್ಗಿದ ಸಂತ...