Posts

ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!*

Image
*ತ್ರಿಕಾಲ ಜ್ಙಾನಿಗಳು ಹಾಕಿದ ಮಾರ್ಗ ಎಷ್ಟು ಸೂಕ್ತ.... !!* ಜಗತ್ತಿನ ಹಿತಕ್ಕಾಗಿ ಅನೇಕ ಜ್ಙಾನಿಗಳು ಜಗತ್ತಿನ ಎಲ್ಲ ಜನರಿಗೂ ಅನ್ವಯಿಸುವಂತೆ  ಲಕ್ಷ ಲಕ್ಷ ಆಚಾರ ವಿಚಾರಗಳನ್ನು ರೂಢಿಸಿದರು. ಕಾಲದ ಪ್ರಭಾವದಿಂದ ಆಚಾರ ವಿಚಾರಗಳು ಬ್ರಾಹ್ಮಣರಲ್ಲಿ ಮಾತ್ರ ಉಳಿದುಕೊಂಡವು. ಈಗಿನ ಕಾಲದಲ್ಲಿ ಅನೇಕ ಬ್ರಾಹ್ಮಣರೂ ಆ ಆಚಾರ ವಿಚಾರಗಳನ್ನು ಕಳೆದುಕೊಂಡರು ಎನ್ನುವದಕ್ಕಿಂತ ಹಠ ಮಾಡಿ ಬಿಟ್ಟರು. ಆಚಾರ ವಿಚಾರ ಧರ್ಮಗಳನ್ನು ಬಿಡುವದೇ ಒಂದು fassion ಆಗಿ ಹೋಯಿತು.  *ಆಚಾರವಂತ ಬ್ರಾಹ್ಮಣನ ಅವಸ್ಥೆ.....* ಆಚಾರ ವಿಚಾರ ಮಡಿ ಮೈಲಿಗೆ social distince ಇದು ಇಂದಿನದು  ಅಲ್ಲ. ಅನಾದಿ ಸತ್ಸಂಪ್ರದಾಯದಿಂದ ಬಂದವು. ಈ social distince ಬ್ರಾಹ್ಮಣರು ಮಾಡಿದರೆ ಅನ್ನುವದಕ್ಕೆ, ನಿಂದಿಸಲು, ಅವಮಾನ ಮಾಡಲು ಅದರ ಮಹತ್ವವನ್ನು ಅರಿಯದ, ತಿಳಿಯದ  ನೂರು ಜನ ಸಿದ್ಧ.  *ಅಂದು -- ಇಂದು* ಇಂದು ಇಪ್ಪತ್ತು ಸೆಕೆಂದು ಕೈ ತೊಳಿ ಎಂದು ಹೇಳಿದರೆ ಸಿದ್ಧ. ಹೊರ ಓಡಾಡಿ ಬಂದರೆ ಸ್ನಾನ ಮಾಡಲೂ ಸಿದ್ಧ. ಈ ಎಲ್ಲ ತರಹದ ಆಚಾರಗಳನ್ನೂ  ಅನುಸರಿಸುತ್ತಿದೆ. ಜಗತ್ತು ಒಪ್ಪಿಕೊಂಡಿತು.  ಶುದ್ಧಿಗಾಗಿ ಮೃತ್ತಿಕಾ ಶೌಚ ಮಾಡಿದ ಬ್ರಾಹ್ಮಣನ ಅವಸ್ಥೆ ಬೈಸಿಕೊಳ್ಳುವದೆ ಆಯ್ತು. ಬ್ರಾಹ್ಮಣ ಮುಟ್ಟದೇ ದೂರ ನಡೆದರೆ, ದೂರದಿಂದ ಇಸಕೊಂಡರೆ ಮೂಗು ಮುರಿವ ಜನರೇ....  ಇವತ್ತು ಯಾರನ್ನೂ ಮುಟ್ಟದೆ ದೂರ ದೂರ ಇರುವದು...

*corona virus ಕಣ್ಣಿಗೆ ಕಾಣ್ಸಲ್ಲವೇ...??*

*corona virus ಕಣ್ಣಿಗೆ ಕಾಣ್ಸಲ್ಲವೇ...??* "corona virus ಕಣ್ಣಿಗೆ ಕಾಣ್ಸಲ್ಲವೇ...??" ನನ್ನಂತಹ ಪೆದ್ದುಗಳ ಅನೇಕರ ಪ್ರಶ್ನೆ.  ಕಣ್ಣಿಗೆ ಕಾಣಿಸುತ್ತಿಲ್ಲ ಅಂತೆಯೇ ಇಪ್ಪತ್ತೊಂದು ದಿನಗಳ ಕಾಲ ನೂರಮೂವತ್ತು ಕೋಟಿ ಜನರ ದಿಗ್ಬಂಧನ. ಇದರಿಂದ ಎಷ್ಟು ನಷ್ಟವಿದೆ ಎಂದು ಊಹಿಸಲೂ ಅಸಾಧ್ಯ.  ಹೀಗೆ ದಿಗ್ಬಂಧನ ಮಾಡುವದರಿಂದ ಕಣ್ಣಿಗೆ ಕಾಣಿಸಲ್ಲ ಎಂದು ಉತ್ತರ ಹೇಳುವದು ತುಂಬ ಕಷ್ಟ. ಏನಕ್ಕೆ..... "corona virus ಕಣ್ಣಿಗೆ ಕಾಣ್ಸಲ್ಲ ಅಂದ್ರೆ ನಗು ಬರತ್ತೆ......  *ಕೊರೊನಾ ವೃರಸ್ಸಿನ ಅಡ್ರೆಸ್ಸೂ ನಮ್ಮ ದೇಶದ ಕಡೆ ಇದೆ.* ಯಾರು ಹೊರದೇಶದಿಂದ ಬಂದರೋ ಅಂತಹವರಿಂದಲೇ ಈ ವೈರಸ್ಸು ಹರಡಿರುವದು. ಇದು ಆವಿಪಾಲ ಗೋಪಾಲನಿಂದ ಮೊದಲು ಮಾಡಿ ಪ್ರಧಾನಿಯವರೆಗೆ ಎಲ್ಲರಿಗೂ ನಿಶ್ಚಿತ. ಆ ಹತ್ತಿಪ್ಪತ್ತು ಸಾವಿರ ಜನರನ್ನು ಹುಡುಕಿ, ಅವರನ್ನು ದಿಗ್ಬಂಧನಗೊಳಿಸಿ, ಅವರ ಕುಟುಂಬವನ್ನೂ ದಿಗ್ಬಂಧಿಸಿ, ಅವರೆಲ್ಲರ ಸಂಪರ್ಕದಲ್ಲಿ ಬಂದವರನ್ನೂ ಪರೀಕ್ಷೆಗೆ ಒಳಪಡಿಸಿದರೆ ಆಯ್ತು,  ಅವರ ಮನೆಯನ್ನೇ ಹಾಸ್ಪಿಟಲ್ ಮಾಡಿದರೆ ಮುಗಿದೇ ಹೋಗತ್ತೆ. ನಾವೆಲ್ಲ ಅರಾಮವಾಗಿ ಇರಬಹುದು.  *ಕೋತಿ ತಾ ಕೆಡೋದಲ್ಲದೇ ವನವನ್ನೇ ಕೆಡಿಸಿತು ಅಂತೆ* ಈ ಗಾದೆ ಈ ಪ್ರಸಂಗದಲ್ಲಿ ತುಂಬ ಉಪಯೋಗಕ್ಕೇ ಬರತ್ತೆ. ಕೋತಿಗಳನ್ನು ವಿದೇಶದಿಂದ ಸ್ವಾಗತ ಮಾಡಿ, ರೆಡ್ ಕಾರ್ಪೇಟ್ ಹಾಸಿ ಬರಮಾಡಿಕೊಂಡು, ಅವರನ್ನು ಊರೆಲ್ಲ ದೇಶವೆಲ್ಲ ತಿರುಗಲು ಅ...

ನಿನ್ಹೊರೆತು ಪೊರವರನು ನಾನರಿಯೇ ಹರಿಯೇ......*

Image
*ನಿನ್ಹೊರೆತು ಪೊರವರನು ನಾನರಿಯೇ ಹರಿಯೇ......* "ನಿನ್ಹೊರೆತು ಪೊರವರನು ನಾನರಿಯೇ ಹರಿಯೇ" ಎಂದು ದಾಸರ ಪೂರ್ಣವಿಶ್ವಾಸದ ಮಾತು. ನಮಗೆ ಬಂದ ಬರುವ ಸಕಲ ಆಪತ್ತುಗಳಿಗೂ ದೇವರೇ ಬಂದು ರಕ್ಷಿಸಬೇಕು. ದೇವರಿಲ್ಲದ ಗತಿ ಮತ್ತೊಬ್ಬರಿಲ್ಲ. ಅವನೇ ಸ್ವತಂತ್ರ ಕರ್ತಾ. ಈರೀತಿಯಾಗಿ ನಂಬಿದವರೂ ನಾವೆಲ್ಲರು. ರಕ್ಷಿಸುವ ಹೊಣೆ  ದೇವರಿಗೇ ಇದೆ. *ರಕ್ಷಿಸುವ ದೇವರು ಯಾರು....???* ಅನಂತರೂಪಿ ದೇವರು ನಿಜ. ಆದರೆ ಭೂಮಿಗೆ ಬಂದ ಆಪತ್ತುಗಳನ್ನು ಪರಿಹರಿಸಲು ನಮ್ಮನ್ನು ರಕ್ಷಿಸಲು ಎಲ್ಲ ರೂಪಗಳೂ ಬರುವದಿಲ್ಲ.  ರಕ್ಷಿಸುವ ಸಾಮರ್ಥ್ಯ ಎಲ್ಲ ಭಗವದ್ರೂಪಗಳಿಗಿದ್ದರೂ ವಿಶಿಷ್ಟವಾದ ಒಂದು ರೂಪ. ಆ ರೂಪದ ಪ್ರಾರ್ಥನೆಯಿಂದ ಆ ರೂಪವೇ ಭೂಮಿಗೆ ಬಂದು ರಕ್ಷಿಸುತ್ತಾನೆ. ಆ ಭಗವದ್ರೂಪ *ಶ್ವೇತದ್ವೀಪಪತಿ ವಾಸುದೇವ ರೂಪ.*  ದೇವರು ತಾನು ವಾಸಿಸಲು ತಾನಾರಿಸಿಕೊಂಡ ಸ್ಥಾನಗಳು ವೈಕುಂಠ ಅನಂತಾಸನ ಶ್ವೇತದ್ವೀಪ ಎಂದು ಮೂರು ಸ್ಥಾನಗಳು. ಆ ಮೂರು ಸ್ಥಾನಗಳಲ್ಲಿ ಭೂಮಿಗೆ ಸಂಬಂಧ ಪಟ್ಟ ಎಲ್ಲ ದೂರು (complaint) ಗಳನ್ನು ಸಲ್ಲಿಸಲು ಇರುವ ಠಾಣೆ ಎಂದರೆ ಅದು ಕ್ಷೀರಸಾಗರದ ತಟದಲ್ಲಿ ಇರುವ *ಶ್ಚೇತದ್ವೀಪ.* ದೂರು ಅಲಿಸಿ ರಕ್ಷಿಸುವ ರೂಪ, ರಕ್ಷಿಸಲು ಧಾವಿಸಿ ಬರುವ ರೂಪ *ಶ್ವೇತದ್ವೀಪ ಪತಿ ವಾಸುದೇವ.* ಆದ್ದರಿಂದ ಶ್ವೇತದ್ವೀಪ ಪತಿ ವಾಸುದೇವನನ್ನೇ ಅನನ್ಯಗತಿಕವಾಗಿ ಪ್ರಾರ್ಥಿಸೋಣ. *ಯಾವ ಸ್ತುತಿಯಿಂದ ಪ್ರಾರ್ಥಿಸುವದು...??* ಹಿರಣ್...

*ಓ ಶರ್ವರೀಕರ !!!! ನಿನಗೆ ನಮಃ*

Image
*ಓ ಶರ್ವರೀಕರ !!!! ನಿನಗೆ ನಮಃ* ವಿಷ್ಣು ಸಹಸ್ರನಾಮದ ಸಾವಿರ ನಾಮಗಳಲ್ಲಿ ಒಂದು ನಾಮ *ಶರ್ವರೀಕರ* ಎಂಬ ನಾಮ. ಯುಗಾದಕೃತ್ ಆದ ಶ್ರೀಹರಿಯೇ *ಶರ್ವರೀ ನಾಮ ಸಂವತ್ಸರದ* ನಿಯಾಮಕನೂ ಆಗಿರುವ. ಆ ಭಗವದ್ರೂಪದ ಹೆಸರೇ *ಶರ್ವರೀಕರ.* ಶರ್ವರೀಕರ ರಾತ್ರಿ ನಿಮನ ಮಾಡುವ ಚಂದ್ರ. ಚಂದ್ರಾಂತರ್ಯಾಮಿ ಭಗವದ್ರೂಪ ಶರ್ವರೀಕರ. ಚಂದ್ರ ರಾತ್ರಿ ಹೊತ್ತಿನಲ್ಲಿ ತನ್ನ ಕಿರಣಗಳಿಂದ ಓಷಧಿ ವನಸ್ಪತಿಗಳನ್ನು ಬೆಳಿಸುತ್ತಾನೆ. ಆ ಓಷಧಿ ವನಸ್ಪತಿಗಳ ಮುಖಾಂತರ ಆರೋಗ್ಯವನ್ನು ದಯಪಾಲಿಸುತ್ತಾನೆ.  *ಇಂದಿನ ಸ್ಥಿತಿ...* ಕಳೆದ ವರ್ಷದಲ್ಲಿ ಧರ್ಮ ವಿಮುಖರು ಆಗಿರುವದರಿಂದ, ಸಹನೆ ಕಳೆದುಕೊಂಡಂತೆ ಆದ  ವಿಕಾರಿ ಸಂವತ್ಸರ, ಬಹಳ ಮುನಿಸಿಕೊಂಡಂತೆ ದೊಡ್ಡ ಶಿಕ್ಷೆಗೆ ಗುರಿ ಮಾಡಿ ತಾನು ಹೊರಟು ಹೋಗಿದೆ. ಕಳೆದ ವರ್ಷ ಮಾಡಿದ ತಪ್ಪು ಈ ವರ್ಷವೂ ಮಾಡಿದರೆ ಇನ್ನೂ ಘೋರ ಮಾರಿಗಳು ನಮ್ಮ ಬೆನ್ನಿಗೇ ಬಂದು ಬೀಳಲಿವೆ.  *ಪ್ರಾಣಿ ಪಶು ಪಕ್ಷಿಗಳ ಶಾಪ...* ಮಾನವನ ತಂಟೆಗೇ ಬಾರದಂತೆ ಕಾಡಿನಲ್ಲೇ ಇರುವ ಪ್ರಾಣಿ ಪಶು ಪಕ್ಷಿಗಳನ್ನು ಮನಸೋ ಇಚ್ಛೆ ಕೊಂದು ತಿಂದದ್ದರ ಶಾಪ ಇಂದು ಇಪ್ಪೊಂದು ದಿನ ಮನೆಯಲ್ಲಿ ಬೀಳುವ ಪ್ರಸಂಗ ಬಂದಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು ಪ್ರಾಣಿ ಪಶು ಪಕ್ಷಿಗಳನ್ನು ಕೊಂದು ತಿನ್ನಬೇಕೆರ ಬೇಡವೇ ಎಂದು... ಅದರಂತೆಯೇ ಗಿಡಗಳನ್ನು ಕತ್ತರಿಸುವಾಗಲೂ ಯೋಚಿಸಬೇಕು, ಮುಂದೊಂದು ದಿನ ಹೆಗಲಿಗೆ ಆಮ್ಲಜನಕ (ಆಕ್ಸಿಜನ್) ಹೊತ್ತುಕೊಂ...

*ಆತ್ಮೀರೆಲ್ಲರಿಗೂ "ಶಾರ್ವರೀ ನಾಮ" ಸಂತ್ಸರದ ಪ್ರೀತಿಯ ಶುಭಾಷಯಗಳು......🌹🌹*

Image
*ಆತ್ಮೀರೆಲ್ಲರಿಗೂ "ಶಾರ್ವರೀ ನಾಮ" ಸಂತ್ಸರದ ಪ್ರೀತಿಯ ಶುಭಾಷಯಗಳು......🌹🌹* ವಿಕಾರಿ ನಾಮ ಸಂವತ್ಸರ ತನ್ನ ಪೂರ್ಣ ಇರುವಿನಲ್ಲಿ ಅತ್ಯುತ್ತಮ ಸಹಸ್ರ ಸಹಸ್ರ ವಿಕಾರಗಳನ್ನು ಭಕ್ತರಿಗೆ ಭಕ್ತಿ ಮಾರ್ಗ ತೋರಿಸಿ ಭಕ್ತಿ ಮಾರ್ಗದಲ್ಲಿ ಇರಿಸಿ ಆನಂದವಿಕಾರವಾನ್ನು ಮಾಡಿ, ಧಾರ್ಮಿಕರಿಗೆ ಧರ್ಮಬೋಧಿಸಿ ಧಾರ್ಮಿಕತೆಯ ವಿಕಾರ ಒದಗಿಸಿ,  ಕೊನೆಭಾಗದಲ್ಲಿ ದುಷ್ಟರಿಗೆ ಅಧಾರ್ಮಿಕರಿಗೆ ತನ್ನ ಕರಾಳಮುಖದ ಪ್ರಭಾವದ ಮಹಾರೋಗದ  ವಿಕಾರವನ್ನು  ತೋರಿಸಿಕೊಟ್ಟು ಭಯಭೀತರನ್ನಾಗಿ ಮಾಡಿದೆ. ಈಗ ಪುನಃ ಹೊಸ ವರ್ಷವಾದ *ಶಾರ್ವರಿ ನಾಮ ಸಂವತ್ಸರ*  ತನ್ನ ಭಕ್ತಿ ಧರ್ಮ ಜ್ಙಾನ ಶುದ್ಧತೆ ಆರೋಗ್ಯ ಸಮೃದ್ಧಿ ಐಶ್ವರ್ಯ ಇತ್ಯಾದಿಗಳನ್ನು ಒದಗಿಸಿ ನಮ್ಮನ್ನು ನಿರಾಳಗೊಳಿಸಬೇಕಿದೆ.   *ಕರಾಳ ದಿನಗಳಲ್ಲಿಯೂ ನಿರಾಳಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು.....* ರಾಹುವಿನ ಕರಿನೆರಳಿನ ಪ್ರಭಾವದಿಂದ, ಲಕ್ಷಲಕ್ಷ ಕೋಟಿ ಕೋಟಿ ಜನರುಗಳು ತಮ್ಮ ತಮ್ಮ  ಪ್ರಾರಬ್ಧದಿಂದ ಇಂದು ಮಹಾ ಕರಾಳದಿನಗಳನ್ನು ಎದರಿಸುತ್ತಿದ್ದಾರೆ. ನಾವೂ ಎದುರಿಸುತ್ತಿದ್ದೇವೆ.  ನಮ್ಮ ಕಳೆದ ಜೀವನದಲ್ಲಿಯೇ ಈ ತರಹದ ಮರೆಯಲಾರದ ಕರಾಳ ದಿನಗಳನ್ನು ಅನುಭವಿಸಿಲ್ಲ.  ಇಂದು ಅನುಭವಿಸುತ್ತಿದ್ದೇವೆ. *ಓ ಪವಮಾನ !!! ಕರಣಿಸು ದಯೆ ತೋರು...*  "ಸಂಸಾರಾತ್ಪಾವಯಿತ್ವಾ ಯತ್ ಮಹಾನಂದೇ ಮಿನೋತ್ಯಯಂ" ಸಂಸಾರದಲ್ಲಿ ಬರುವ ನೂರಾರು ಸಾವ...

*ಜನವಿದೂರ ಜ್ವರ ವಿದೂರ....*

Image
 *ಜನವಿದೂರ ಜ್ವರ ವಿದೂರ....* ಜನರಿಂದ ದೂರ ಇರುವದು ನಮ್ಮ ಪದ್ಧತಿ. ಜನರಿಂದ ದೂರ ಇದ್ದಷ್ಟು ಜ್ವರ ವಿದೂರ. ಜ್ವರಗಳು ಅನೇಕ ವಿಧ. ಆ ಎಲ್ಲ ತರಹದ ಜ್ವರಗಳಿಗೂ ಜನವಿದೂರತೆಯೇ ಮೊದಲ ಮದ್ದು. ಜ್ವರಗಳು ಎಂದರೆ ರೋಗ.‌ ಆರೋಗಗಳು ದೇಹ ಇಂದ್ರಿಯ ಮನಸ್ಸು ಇವುಗಳಿಗೆ ಬರುವಂತಹದ್ದು.  ಆ ರೋಗಗಳ ಉಪಶಮನ ಎಲ್ಲದರಿಂದ ದೂರಾಗಿ ತಾನಿರುವದರಿಂದಲೇ. "ಪಾಪ" ಎಂಬ ಜ್ವರ ಬರದಿರಲೀ ಎಂಬ ಉದ್ದೇಶ್ಯದಿಂದ ಬ್ರಾಹ್ಮಣ ತಾ ಮಡಿ ಮಡಿ ಎಂದು ಯೋಚಿಸುತ್ತಾ ಇರುತ್ತಾನೆ. ತಾನು ಮಡಿಯಿಂದ ಇರುವಾಗಲೂ, ಅದೇ ಮಡಿಯಲ್ಲಿ ಇದ್ದ ತನ್ನವರನ್ನೂ ತಾ ಮುಟ್ಟಲಾರ. ಪಾಪ ಜ್ವರ ಬರಬಾರದು ಎಂದು. ಇದು ಬ್ರಾಹ್ಮಣರ ಪದ್ಧತಿ. ಈ ಪದ್ಧತಿಗೆ ಬೈದವರೇ ಹೆಚ್ಚು. ಆದರೆ  ಇವತ್ತು ಇದೇ ಸ್ಥಿತಿ ಸಮಸ್ತ ದೇಶಕ್ಕೂ, ದೇಶದ ಜನರಿಗೂ,  ವಿದೇಶದ ಸಕಲರಿಗೂ ಒದಗಿಬಂದಿದೆ.  ತನ್ನವರನ್ನೂ ತಾನು ಮುಟ್ಟದಂತೆ ಒಂದು ಜ್ವರ ತಾನು ಮಾಡಿಟ್ಟಿದೆ. ಈ ಜ್ವರದ ಪರಿಹಾರ "ಯಾರನ್ಬೂ ಮುಟ್ಟದೆ, ಎಲ್ಲದರಿಂದಲೂ ದೂರಾಗಿ ತಾನು ಇರುವದು" ಈ ನಿಯಮವೇ ಅತ್ಯಂತ ಪರಿಪಾಲನೀಯ ಎಂದಾಗಿದೆ. *ಜನವಿದೂರತೆಯೇ ಜನಾರ್ದನನ ಒಲುಮೆಗೆ ಮೆಟ್ಟಲು...* ಜನರ ಎಲ್ಲ ರೋಗಗಳನ್ನು ಅರ್ದನ ಮರ್ದನ ಮಾಡುವ *ಜನಾರ್ದನ* ನ ಆರಾಧನೆಗೆ ಇಂದು ಜನರ ಅಸಡ್ಢೆ. ಅಸಡ್ಢೆ ತೋರಿದ ಎಲ್ಲ ಜಗತ್ತನ್ನೇ ತಲ್ಲಣಿಸಿ ಇಟ್ಟಿದೆ ಸಣ್ಣ ಜ್ವರ. ಈ ಜ್ವರದ ಹರಡುವಿಕೆಯನ್ನು ನಿಲ್ಲಿಸಲು ಜನವಿದೂರತೆ ಬೇಕು. ಜ್ವರವನ್...

*ಓ ಭಯ ಸಂಹರನೇ ನಿನಗೇ ನಮಃ...*

Image
*ಓ ಭಯ ಸಂಹರನೇ ನಿನಗೇ ನಮಃ...* "ಇಂದೂ ಕಾಡುವ ಮುಂದೆಯೂ ಕಾಡದೇ ಬಿಡದ ಒಂದು ವಿಶಿಷ್ಟ ಪದಾರ್ಥ ಎಂದರೆ ಅದು ಭಯಗಳು" ಮಾತ್ರ. ಕೆಲವೊಂದು ಸಲ ಭಯ ನಮ್ಮ ನ್ಯೂನತೆಗಲಿಂದ ಬರುತ್ತವೆ. ಮತ್ತೆ ಹಲವು ಸಲ ನಮ್ಮ ತಪ್ಪಿನಿಂದ ಬರುತ್ತವೆ. ಮತ್ತೆ ಇನ್ಯಾರದೋ ತಪ್ಪಿನಿಂದ ಬರುತ್ತವೆ. ಇನ್ನನೇಕ ಸಲ ಯಾಕೆ ಭಯಗಳು ಬಂದಿವೆ ಎನ್ನುವದೇ ಗೊತ್ತಾಗುವದಿಲ್ಲ ಹಾಗೆ ಭಯಗಳು ನಮ್ಮನ್ನು ಆವರಿಸಿರುತ್ತವೆ. ಭಯಗಳಿಂದ ಮೇಲೆಳಲೇ ಬೇಕು. ನಿರ್ಭೀತ ಮುನ್ನುಗ್ಗಿ ಸಾಧಿಸುತ್ತಾನೆ. ಭಯಭೀತ ಏನನ್ನೂ ಸಾಧಿಸಲಾರ. ಅಂತೆಯೇ ಭಯಗಳು ಪರಿಹರಿಸಿಕೊಳ್ಳಲೇಬೇಕು.  *ಭಯಗಳು ಇದ್ದರೆ ಆಗುವ ಅನರ್ಥಗಳೇನು...??* ಮೊದಲಿಗೆ ಭಯಗಳು ಜೀವನ ಪ್ರಗತಿಗೆ ಮಾರಕ. ಈಗೆ ಭಯ ಪಡುವ ಅಗತ್ಯವಿಲ್ಲದಿದ್ದರೂ ಭಯಗ್ರಸ್ತರಾಗಿಯೇ ಜೀವನ ನಡೆಸುತ್ತಾ ಇದ್ದೇವೆ. ಪ್ರಚಲಿತವಾದ *ಕೊರೋನಾ* ಎಂಬ ರೋಗ. ಈ ರೋಗ ನಮ್ಮತನ ಬಂದಮೇಲೆ ಭಯಪಡುವದು ಒಂದಾದರೆ ನಮ್ಮತನ ಎಲ್ಲಿ ಬರತ್ತೋ ಎಂಬ ಭಯದಲ್ಲಿಯೇ ದಿನ  ಕಳೆಯುವಂತಾಗಿದೆ. ಇನ್ನೊಬ್ಬರು ಖೇಮ್ಮಿದಾಗ ಭಯ ಪಡುವದು ಒಂದಾದರೆ, *ನಾನೇ ಖೆಮ್ಮಿದಾಗಲೂ ನನಗೇ ಎಲ್ಲಿ ಕೊರೊನಾ ಬಂದುಬಿಡ್ತೋ* ಎಂದು  ಭಯಪಡುವ ದಿನ ಇಂದಾಗಿದೆ. ಇದು ಒಂದು ನಿದರ್ಶನ ಇಂತಹ ನೂರಾರು ಸಾವಿರಾರು ಭಯಗಳು.  *ಈ ಭಯಗಳ ಪರಿಹಾರ ಹೇಗೇ....??* ವೈಷ್ಣವರಾದ ನಾವು ನಿತ್ಯ ವಿಷ್ಣು ಸಹಸ್ರನಾಮ ಪಠೀಸುತ್ತೇವೆ. ಈ ವಿಷ್ಣು ಸಹಸ್ರನಾಮವೇ ಎಲ್ಲತರಹದ ಭಯಪರಿಹಾರಗಳ...