Posts

*ಪ್ರಾಣೋಪಸಾಕಾಃ ವಿಗತಪ್ರಾಣಾಃ - ವಿಶ್ವೇಶಾರ್ಯೇ ದಿವಂಗತೇ*

Image
*ಪ್ರಾಣೋಪಸಾಕಾಃ ವಿಗತಪ್ರಾಣಾಃ - ವಿಶ್ವೇಶಾರ್ಯೇ ದಿವಂಗತೇ* ಹತ್ತೊಂಭತ್ತು ಹಾಗೂ ಇಪ್ಪತ್ತನೆಯ ಶತತಮಾನದ *ಯುಗಪುರುಷರು ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಶ್ವೇಶತೀರ್ಥರು.*  *ಕೃಷ್ಣ ವಿಠ್ಠಲ - ಪ್ರಾಣರ ದಾಸಾನುದಾಸರು.* ಎಂಟನೇಯ ವರ್ಷಕ್ಕೆ ಆಶ್ರಮವನ್ನು ಸ್ವೀಕರಿಸಿದ ಪುಣ್ಯಾತ್ಮ. ಅಂದಿನಿಂದ ಇಂದಿನ ವರೆಗೂ ಶ್ರೀಮದಾಚಾರ್ಯರಿಂದ ಪ್ರತಿಷ್ಠಾಪಿತ, ತಮ್ಮ ಉಪಾಸ್ಯಮೂರ್ತಿ  *ಉಡಪಿಯ ಶ್ರೀಕೃಷ್ಣ* ಹಾಗೂ ಶ್ರೀಮದಾಚಾರ್ಯರಿಂದ ದತ್ತವಾದ ಪೂಜಿತವಾದ *ವಿಠ್ಠಲ ದೇವರ* ನಿರಂತರ ಆರಾಧಕರು.  ವಾಯುಸ್ತುತಿಯ ಪುರಶ್ಚರಣದ ಮುಖಾಂತರ *ಪ್ರಾಣದೇವರ* ಮಹಾ ಪೂಜಕರು ಆರಾಧಕರು. ಈ ಮಹಾದೇವರುಗಳು ಅಧಿಷ್ಠರು, ಇರುವ ಕೋಟಿ ಗುಣಗಳೆಲ್ಲವೂ ಈ ಮೂರ್ವರ ಗುಣಗಳ ಪ್ರತಿಬಿಂಬಗುಣಗಳೇ ಎಂದು ಭಾವಿಸಿದವರು, ಚಿಂತಿಸಿದವರು ಇವರು. ಇಂದಿನ ಸಕಲವೈಭವಗಳೂ ಈವರೆಲ್ಲರ ದತ್ತವಾದವುಗಳು. ಇವುರುಗಳ ಸೇವೆಗೆ ಮುಡುಪಾಗಿರಲಿ ಎಂದು ತಮ್ಮನ್ನು ತಾವು ಸಮರಗಪಿಸಿಕೊಂಡವರು ಇವರು.   *ಶ್ರೀಮಧ್ವಸಿದ್ಧಾಂತ ದೀಕ್ಷಾಬದ್ಧರು.* *ಅಂತೇ ಸಿದ್ಧಸ್ತು ಸಿದ್ಧಾಂತಃ ಮಧ್ವಸ್ಯಾಗಮ ಏವ ಹಿ" ಶ್ರೀಮದಾಚಾರ್ಯರ ಸಿದ್ಧಾಂತವೇ ಸಿದ್ಧಾಂತ. ಅದುವೇ ಮುಕ್ತಿ ಸಿದ್ಧಾಂತ. ಅಂತೆಯೇ *ಶ್ರೀಮನ್ಯಾಸುಧಾ ಪಾಠ* ಒಂದಿನವೂ ಬಿಟ್ಟವರಲ್ಲ. ಸಂಕೋಚಮಾಡಿದವರೂ ಅಲ್ಲ. ಅಂತೆಯೇ ಇಂದಿಗೆ ಮುವತ್ತೈದಕ್ಕೂ ಮಿಗಿಲಾಗಿ ಶ್ರೀಮನ್ಯಾಸುಧಾ ಮಂಗಳ ಮಹೋತ್ಸವ...

ಸೂರ್ಯ ಗ್ರಹಣ

Image
* ಸೂರ್ಯ ಗ್ರಹಣ * "ಸೂರ್ಯ ಗ್ರಹಣ" ಇದೊಂದು ಸಾಧಕರಿಗೆ ಯೋಗ್ಯವಾದ ದಿನ. ಇಂದು ಮಾಡಿದ ಪ್ರತೀ ಸಾಧನೆಗೂ ಕೋಟಿಪಟ್ಟು ಹೆಚ್ಚಿನ ಫಲ. ಅಂತೆಯೇ ಸಾಧಕರು ಇಂದಿನ ದಿನ ಹೆಚ್ಚೆಚ್ಚು ಸಾಧನೆಗೆ ಇಳಿಯುವವರು.  *ಕೃಷ್ಣ ಪರಮಾತ್ಮ....* ಸ್ವಯಂ ಶ್ರೀಕೃಷ್ಣ ಪರಮಾತ್ಮ "ಸೂರ್ಯಗ್ರಹಣ" ಬಂದಾಗ ಸಂಪೂರ್ಣ ದ್ವಾರಕಾ ಜನರನ್ನೆಲ್ಲ *ಕುರುಕ್ಷೇತ್ರ* ಕರೆದೊಯ್ದು, ಅಲ್ಲಿಯೇ ವೈಭವದ ಸೂರ್ಯಗ್ರಹಣ ಆಚರಿಸಿದ ಕಥೆಯನ್ನು ತಾತ್ಪರ್ಯನಿರ್ಣಯದಲ್ಲಿ ಕೇಳುತ್ತೇವೆ.  *ಆರು ಗ್ರಹಗಳಿಂದ ಯುಕ್ತವಾದ ಗ್ರಹಣ...* ನಾಳೆಯದಿನ ಬರುವ ಸೂರ್ಯಗ್ರಹಣದ ಆಮಾವಾಸ್ಯೆಯ ಈ ದಿನ ಆರು ಗ್ರಹಗಳಿಂದ ಯುಕ್ತವಾಗಿದೆ. ಸೂರ್ಯ, ಮಂಗಳ, ಬುಧ ಚಂದ್ರ,  ಶನಿ, ಕೇತು, ಹೀಗೆ ಆರು ಗ್ರಹಗಳಿಂದ ಯುಗ್ತವಾದ ಈ ಸಮಯ ಬಹಳ ಘೋರ ಮತ್ತು ಅಮಂಗಲ ದಿನ. ಈ ಪ್ರಸಂಗದಲ್ಲಿ‌ ನಾನಾವಿಧ ಉತ್ಪಾತಗಳು ಆಗಬಹುದು ಎಂದು ನಮ್ಮ ಗುರುಗಳು ಹಾಗೂ ಉಳಿದ ಅನೇಕ ಜ್ಯೋತಿಷಿಗಳು ತಿಳಿಸಿದ್ದಾರೆ. ಆದ್ದರಿಂದ ಉತ್ಕೃಷ್ಟವಾಗಿ  ಜಪ‌ ಪಾರಾಯಣ ಮಾಡುವದು ಅನಿವಾರ್ಯ.  *ಏನೇನು ಮಾಡಬಹುದು...* ಸೂರ್ಯಗ್ರಹಣದ ಈ ಪ್ರಸಂಗದಲ್ಲಿ ಅತೀ ಮುಖ್ಯವಾಗಿ  ಗ್ರಹಣದ ಆರಂಭದಲ್ಲಿ ಹಾಗೂ ಮುಗಿದ ನಂತರ ಎರಡೂ ಬಾರಿಯೂ ಸ್ನಾನ ಮಾಡುವದು.  ಪುರುಷರು  ಸಾವಿರದೆಂಟು ಸಕ ಗಾಯತ್ರೀಜಪ , ವಿಷ್ಣು ಸಹಸ್ರನಾಮ, ಏಕದಾಸಾಧ್ಯಾಯ ಗೀತೆ, ನಾರಾಯಣ ವರ್ಮ, ಇತ್ಯಾದಿಗಳನ್ನು ಅನಿವಾರ...

*ಪ್ರಪತ್ತಿಯೇ ಮಾಯಾ ತಾರಣಕ್ಕೆ ಸುಲಭೋಪಾಯ....*

Image
*ಪ್ರಪತ್ತಿಯೇ ಮಾಯಾ ತಾರಣಕ್ಕೆ ಸುಲಭೋಪಾಯ....* ಜೀವನನ್ನು ಅನಾದಿಯಿಂದ ಸಂಸಾರದಲ್ಲಿ ಇಡುವದು ಸತ್ವ ರಜ ತಮೋ ಗುಣಾತ್ಮಕ ಮಾಯಾ. ಅನಂತ ಕರ್ಮಗಳ ಸುಳಿಯೇ ಸಂಸಾರ. ಈ ಮಾಯಾ ತರಣವೇ ಸಂಸಾರದ ಕೊನೆ. ಸಂಸಾರದ ಕೊನೆಯಾದ ಮೇಲೆ ಮತ್ತೊಂದು ಮಾಯಾ. ಈ ಮಾಯಾ ಭಗವದಿಚ್ಛೆ.  ಆ ಮಾಯಾ ಸರಿದ ಮೇಲೆ ಮುಂದೆ ಬರುವದೇ ಅನಂತ ಆನಂದದ ಗಣಿ.   *ಈ ಎರಡು ಮಾಯೆಗಳನ್ನು ದಾಟುವದು ಹೇಗೆ... ?? ಇದು ಅರ್ಜುನನ ಪ್ರಶ್ನೆ.* "ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ ಮಾಮೇವ ಯೇ ಪ್ರಪದ್ಯಂತೇ ಮಾಯಾಮೇಷಾಂ ತರಂತಿ ತೇ" ತ್ರಿಗುಣಾತ್ಮಕ ಮಾಯಾ ಪ್ರಕೃತಿ ಒಂದು. ಈ ಪ್ರಕೃತಿ ಜೀವನಿಗೆ ನಾನಾ ವಿಧದಿಂದ ೧) ಜೀವಾಚ್ಛಾದಿಕಾ. ೨) ಪರಮಾಚ್ಛಾದಿಕಾ. ೩) ಕಾಮ. ೪) ಕರ್ಮ. ೫) ಲಿಂಗದೆಹ. ೬ ಪ್ರಕೃತಿ ಹೀಗೆ ಆರು ವಿಧದಿಂದ ಆವರಿಸಿದೆ. ಕೊನೆಯ ಆವರಣ ಭಗವದಿಚ್ಛಾ. ಒಂದೊಂದು ಮಾಯೆಯೂ ಅಚ್ಛೇದ್ಯ. ಅಭೇದ್ಯ. ಇವುಗಳನ್ನು ಭೇಧಿಸಲು ದೇವನಲ್ಲದೇ ಯಾರಿಂದಲೂ ಅಸಾಧ್ಯ. *ಒಂದೊಂದನ್ನೂ ಕ್ರಮವಾಗಿ ಗೆಲ್ಲುವದು.... ಗೆಲ್ಲುವದು ಹೇಗೆ...* ಎಲ್ಲ ಮಾಯೆಗಳನ್ನೂ ಗೆಲ್ಲಲು ಸುಲಭೋಪಾಯ ಎಂದರೆ *ಮಾಮೇವ ಯೇ ಪ್ರಪದ್ಯಂತೇ* ಯಾರು ನನಗೆ ಶರಣು ಬರುತ್ತಾರೆಯೋ, ಅವರು *ಮಾಯಾಮೇಷಾಂ ತರಂತಿ ತೇ* ಅವರೇ ಈ ಎಲ್ಲ ವಿಧದ ಮಾಯೆಗಳನ್ನೂ ಗೆಲ್ಲತ್ತಾರೆ. ಕೊನೆಗೆ ನನ್ನ ಇಚ್ಛೆಯನ್ನೂ ಪಾರು ಮಾಡಿ ಅನಂತ ಆನಂದವನ್ನು ಪಡೆಯುತ್ತಾರೆ.  ಅನಾದಿಯಿಂದ ನಿರ...

*ಎಂದಿಗೂ ತುಳಿಯುವವರು ಬಲಿಷ್ಟರಾಗಿಲ್ಲ, ಆಗುವದೂ ಇಲ್ಲ. ಆದರೆ......*

Image
*ಎಂದಿಗೂ ತುಳಿಯುವವರು ಬಲಿಷ್ಟರಾಗಿಲ್ಲ, ಆಗುವದೂ ಇಲ್ಲ. ಆದರೆ......* ಇನ್ನೊಬ್ಬರನ್ನು ತುಳಿಯುವವ ಸಾಮಾನ್ಯವಾಗಿ ದುರ್ಬಲನೇ ಆಗಿರುತ್ತಾನೆ. ತುಳಿತಕ್ಕೆ ಒಳಗಾದವರು ಸಾಮಾನ್ಯವಾಗು ಪ್ರಬಲನೇ. ಆದರೆ.... ಇಂದು ತುಳಿತಕ್ಕೆ ಒಳಗಾದವರೇ ದುರ್ಬಲರಾಗಿದ್ದಾರೆ" ತುಳಿತಕ್ಕ ಒಳಗಾದವ ಪ್ರಬಲ. ಆದರೆ ಇಂದು ದುರ್ಬಲನಾಗುತ್ತಾದ್ದಾನೆ. ಯಾಕೆ ಅಂದರೆ ತನ್ನಲ್ಲಿರುವ ಬಲವನ್ನು ಕಳೆದುಕೊಳ್ಳುತ್ತಿದ್ದಾನೆ. ಆದ್ದರಿಂದ ದುರ್ಬಲನಾಗುತ್ತಿದ್ದಾನೆ.  *ಈ ಅವಸ್ಥೆ ಬರುಲು ಕಾರಣ....*  ನಮ್ಮಲ್ಲಿ ಎಲ್ಲ ಬಲಗಳಿವೆ. ಧನ ಮನೆ ಐಶ್ವರ್ಯ ಇತ್ಯಾದಿ ನೂರಾರು ಬಲಗಳು ಇವೆ. ಆದರೆ ಈ ಎಲ್ಲ ಬಲಗಳಿಗೆ  ಮೂಲವಾದ, ಬಲ ತುಂಬುವ  ಬಲ ಮಾತ್ರ ಇಲ್ಲ. ಆ ಬಲವೇ ನಮ್ಮ ಮೂಲ ಬಲ,ಅದುವೇ ಆಧ್ಯಾತ್ಮಿಕ ಬಲ. ಆ ಬಲ ಬರುವದೇ  *ಗಾಯತ್ರೀ  ಜಪದಿಂದ.*  ಗಾಯತ್ರೀ ಸಿದ್ಧಿಯ ಮೂಲಬಲವಿಲ್ಲದೇ ಇರುವದರಿಂದಲೇ ಅತ್ಯಂತ ದುರ್ಬಲರಾಗಿದ್ದೇವೆ. ಎಲ್ಕರೂ ತುಳಿತಾ ಇದ್ದಾರೆ.... *ಧಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜೋ ಬಲಂ ಬಲಮ್* ಕ್ಷತ್ರಿಯ ರಾಜ ಚಕ್ರವರ್ತು ಬಲಿಷ್ಠ ವಿಶ್ವಾಮಿತ್ರ ವಸಿಷ್ಠರ ಬ್ರಹ್ಮಬಲದ ಮುಂದೆ ತಲೆಬಾಗಿದಾಗ ಹೇಳಿದ ಮಾತು ಇದು. ಯಾವ ಬಲದಿಂದ ಬಲಿಷ್ಠರಾಗಿ ಇದ್ದೆವು. ಜಗತ್ತು ತಲೆಬಾಗುತ್ತಿತ್ತು . ಇಂದು ಆ ಬಲವಿಲ್ಲದೆ ಇರುವದರಿಂದಲೇ ಅದೇ ಜಗತ್ತು ಇಂದು ನಮ್ಮನ್ನು ತುಳಿದು ಹಾಕುತ್ತಿದೆ. "ತುಳಿಯುವವರು ...

*ತಪ್ಪುಗಳಿಂದಲೇ ತಿಳುವಳಿಕೆ ಹೆಚ್ಚುವದು.....*

Image
*ತಪ್ಪುಗಳಿಂದಲೇ ತಿಳುವಳಿಕೆ ಹೆಚ್ಚುವದು.....* ನಾವು ಮಾಡಿದ ಕೆಲಸ ತಪ್ಪಾದಾಗ, ತಪ್ಪು ಕೆಲಸವನ್ನೇ ಮಾಡಿದಾಗ ಭಯ ಆವರಿಸುತ್ತದೆ. ನಮ್ಮ ಸಾಮರ್ಥ್ಯದ ಬಗ್ಗೆಯೇ ಸಂಶಯ ಮೂಡುತ್ತದೆ. ನಮ್ಮಿಂದ ಉತ್ತಮ‌ಕೆಲಸಗಳು ಅಸಾಧ್ಯವೇನೋ ಎಂಬ guilty ಕಾಡಲು ಆರಂಭಿಸುತ್ತದೆ. ಆ ಪರಿಸ್ಥಿತಿ ಬಹಳ ಬದಲು‌ಮಾಡುವ ಸ್ಥಿತಿ.  *ತಪ್ಪುಗಳೇ ದೊಡ್ಡ ಗುರು* ತಪ್ಪುಗಳು ಒಂದು ಗುರು ಇದ್ದ ಹಾಗೆ. ಏನನ್ನು ಪುನಹ ಮಾಡಬಾರದು ಎಂದು ತಿಳಿಸುವ ಹಿತೈಶಿಯೂ ಹೌದು. ಈ ತಿಳುವಳಿಕೆ ತಪ್ಪಾದಗಲೊಮ್ಮೆ ಹೆಚ್ಚುತ್ತಿದ್ದರೆ, ನಾವು ಸರಿ‌ಮಾರ್ಗಕ್ಕೆ ಸನಿಹ ಇದ್ದೇವೆ ಎಂದೇ ಅರ್ಥ.  ಸರಿ ಮಾರ್ಗದಲ್ಲಿ ಬಂದರೆ ಪುನಹ ತಪ್ಪುಗಳು ಘಟಿಸುವದು ಕಡಿಮೆ. ಘಟಿಸಿದ ತಪ್ಪುಗಳ ಅರಿವಿಂದ ಮೇಲೆದ್ದಬಂದವರನ್ನು ಇತಿಹಾಸದಲ್ಲಿ ತುಂಬ ಕಾಣುತ್ತೇವೆ ಅಜ್ಙಾನದಿಂದ, ಪ್ರಾರಬ್ಧದಿಂದ ಗುರುತರವಾದ ತಪ್ಪನ್ನು ಎಸಗಿದ್ದರೂ, ನಂತರ ಆ ತಪ್ಪನ್ನು ವಿಶ್ಲೇಸಿಸಿ ಸರಿ ಮಾಡಿಕೊಳ್ಳುವ ಬಗೆಯನ್ನು ತಿಳಿಸುವದೇ ಈ ಗುರುವಿನ ಕೆಲಸ.  *ವಿಫಲತೆಗಳಲ್ಲಿಯೇ ತಪ್ಪುಗಳು ಆಗುವದು ಹೆಚ್ಚು* ಹಣ ಘಳಿಸಲು ವಿಫಲನಾದ ವ್ಯಕ್ತಿ ಕದಿಯಲು ಆರಂಭಿಸುವ. ಹೀಗೆ ಯಾವದರಲ್ಲಿ ವಿಫಲನಾಗುತ್ತಾನೋ, ಅದನ್ನು ಪಡೆಯಲು ತಪ್ಪು ಮಾಡುವ. ಆದರೆ ಆ ತಪ್ಪು ತಿಳಿಸುತ್ತದೆ, "ಈ ತಪ್ಪು ಪುನಹ ಮಾಡಬೇಡ" ಎಂದು. ಆ ಗುರುವಿನ ಮಾತು ಕೇಳದೇ ಪುನಹ ಮತ್ತೆ ಮತ್ತೆ ತಪ್ಪು ಮಾಡಿದರೆ ಆ ತಪ್ಪೇ ಸರಿ ಎಂದು ಕಾಣಿಸುತ್...

*ಈಡೇರಿಸುವ ಸಾಮರ್ಥ್ಯವಿಲ್ಲದಿರೆ ಭರವಸೆಯನ್ನೇ ಕೊಡ ಬಾರದು...*

Image
*ಈಡೇರಿಸುವ ಸಾಮರ್ಥ್ಯವಿಲ್ಲದಿರೆ ಭರವಸೆಯನ್ನೇ ಕೊಡ ಬಾರದು...* ಭರವಸೆ ಇದು ತುಂಬ ಮಹತ್ವದ ಒಂದು ಅಂಶ. ಭರವಸೆ ಇರುವಲ್ಲಿ ಅಥವಾ ಭರವಸೆಕೊಟ್ಟಲ್ಲಿ  ಅರ್ಧವೇನು ಪೂರ್ಣ ಗೆದ್ದಂತೆಯೇ ಸರಿ. ಗೆಲ್ಲಿಸುವ ವಿಶ್ವಾಸವಿರುವಲ್ಲಿ ಭರವಸೆ ಕೊಡೋಣ. ಗೆಲ್ಲುವ ವಿಶ್ವಾಸವಿರುವಲ್ಲಿ ಭರವಸೆ ಇಡೋಣ. ಇಲ್ಲವಾದಲ್ಲಿ ತುಂಬ ನಿರಾಸೆ ಹತಾಶೆ ಇವುಗಳನ್ನು ಅನುಭವಿಸಬೇಕಾಗತ್ತೆ.  *ದೇವರಲ್ಲಿ ಭರವಸೆ...* ದೇವ ತಾ ಎಂದಿಗೂ ಭರವಸೆಯನ್ನು ಕೊಡುವದಿಲ್ಲ. ಕೊಟ್ಟಮೇಲೆ ರಕ್ಷಿಸದೇ ಸಂರಕ್ಷಿಸದೇ  ಇರುವದಿಲ್ಲ. ಇದು ದೇವನ ನಿಯಮ. ದೇವರಲ್ಲಿ ಭರವಸೆ ಇಟ್ಟವರು ಸೋತರು ಎಂದು ಆಗುವದೇ ಇಲ್ಲ. ಕೆಲವೊಮ್ಮೆ ಸೋತಂತೆ ಅನಿಸಿದರೂ, ತಾತ್ಕಾಲಿಕ‌ ಗೆದ್ದ ಶತ್ರುವಿನ ಮುಖಕ್ಕೆ ಆಜೀವನ ಮಸಿ ಹಚ್ಚುವಂತೆ ಮಾಡುವದಕ್ಕಾಗಿ ಗೆಲ್ಲಿಸಿರುತ್ತಾನೆ. ಕೊನೆಗೆ ಸಿಗುವ ಗೆಲುವು ಮಾತ್ರ ಭರವಸೆ ಇಟ್ಟವನಿಗೇ. ಪಾಂಡವರು ಕೌರವರು ಇದಕ್ಕೆ ಪರಿಪೂರ್ಣ ನಿದರ್ಶನ.  *ಪುಸಿ ಭರವಸೆಯಿಂ  ಆಗುವ ಹಾನಿ.....* ವ್ಯಕ್ತಿ ಹೇಗೋ ಜೀವನ ಸಾಗಿಸಿರುತ್ತಾನೆ. ಇರುವದರಲ್ಲಿ ತನ್ನ ದೇಹ ಇಂದ್ರಿಯ ಮನಸ್ಸು ಇವುಗಳನ್ನು ಹೊಂದಿಸಿ ಇರುತ್ತಾನೆ. ಕಷ್ಟಗಳನ್ನು ಮೈರೂಢಿಸಿರುತ್ತಾನೆ. ಎಲ್ಲದಕ್ಕೂ ಅಡ್ಜಸ್ಟ್ ಆಗಿರುತ್ತಾನೆ. ತನ್ನ ಜೀವನ ವೈಭವದಿಂದ ಸಾಗಿಸಿರುತ್ತಾನೆ.  ಈ ಪ್ರಸಂಗದಲ್ಲಿ ಯಾರೋ ಬಂದು ಅನವಶ್ಯಕ ಭರವಸೆಗಳ ಮಹಪೂರವನ್ಬೇ ಕೊಟ್ಟು  ಆಸೆ ಹಚ್...

ಗೀತಾ ಜಯಂತಿ ಗೀತೆಯ ಸಂದೇಶ

Image
ಗೀತಾ ಜಯಂತಿ ಗೀತೆಯ ಸಂದೇಶ* ಗೀತೆ ಕೃಷ್ಣನ ಪ್ರತಿರೂಪ. ಗೀತೆ ಜೀವನ  ಕೈಗನ್ನಡಿ. ಕನ್ನಡಿ ಹೇಗೆ ಸುಳ್ಳಾದದ್ದನ್ನು ತೋರಿಸುವದಿಲ್ಲವೋ ಗೀತೆಯೂ ಹಾಗೆ ಸುಳ್ಳಾದದ್ದನ್ನು ಹೇಳುವದಿಲ್ಲ. ಗೀತೋಪದೇಶಕ ಕೃಷ್ಣ ನೆರಳು ಇದ್ದಹಾಗೆ. ನೆರಳು ನೆನಪಲ್ಲಿದ್ದರೂ,  ಮರೆತರೂ ಕ್ಷಣ ಬಿಡದೆ ನಮ್ಮ ಜೊತೆ ಇರುವಂತೆ ಕೃಷ್ಣನೂ ಕ್ಷಣ ಬಿಡದೆ ರಕ್ಷಕನಾಗಿ ಇರುತ್ತಾನೆ.  *ಗೀತೆಯಲ್ಲಿ ತಪಸ್ಸು* ಮುಕ್ತಿಗೆ ಬೇಕಾದ "ಯೋಗ" ಉಪಾಯಗಳನ್ನು ಸಾವಿರ ಸಾವಿರ ತಿಳುಹಿಸಿಕೊಟ್ಟದ್ದಾನೆ ಶ್ರೀಕೃಷ್ಣ. ಅದರಲ್ಲಿ ತಪಸ್ಸೂ ಒಂದು.  *ತಪಸ್ಸಿನ ಮಹಿಮೆ* "ಯದ್ದುರಾಪಂ ದುರಾರಾಧ್ಯಂ ದುರಾಧರ್ಷಂ ದುರುಸ್ಸಹಮ್. ತತ್ಸರ್ವಂ ತಪಸಾ ಶಕ್ಯಂ  *ತಪೋ ಹಿ ದುರತಿಕ್ರಮಮ್*" ಅಸಾಧ್ಯವಾದದ್ದನ್ನು, ಅಶಕ್ಯವಾದದ್ದನ್ನು  ಪಡೆಯುವ ಹಂಬಲ ಇದ್ದರೆ "ತಪಸ್ಸೇ ಮೂಲ. ತಪಸ್ಸಿನಿಂದ ಏನನ್ನಾದರೂ ಪಡೆಯಬಹುದು. ಋಷಿ ಮುನಿಗಳು ದೇವತೆಗಳು ಏನನ್ನು ಪಡೆದಿದ್ದಾರೆ ಅದು ತಪಸ್ಸಿನಿಂದಲೇ... ಆದರೆ ಇಂದಿನ ಕಲಿಯುಗದಲ್ಲಿ ಅತ್ಯಂತ ಅಸಾಧ್ಯವಾದದ್ದು "ತಪಸ್ಸೇ" ಎಂದರೆ ತಪ್ಪಾಗದು. *ಗೀತೆಯಲ್ಲಿ ತಿಳಿಸಿದ ತಪಸ್ಸು* ದೇವ ಗುರು ಬ್ರಾಹ್ಮಣ ಪೂಜೆ, ಶೌಚಾಚಾರ, ಬ್ರಹ್ಮಚರ್ಯ, ಅಹಿಮನಸಾ ಇವುಗಳು ಶಾರೀರಿಕ ತಪಸ್ಸು. ಪರಪೀಡೆ ಕೊಡದ, ಸತ್ಯವಾದ, ಪ್ರಿಯಕರವಾದ, ನಿರಂತರ ಅಧ್ಯಯನ- ಅಧ್ಯಾಪನ ರೂಪವಾದದ್ದು  ವಾಚನಿಕ ತಪಸ್ಸು. ಶಾಂತ ಸಮಾಧಾ...