*ಸ್ವಾಭಾವಿಕ ಭಕ್ತರಿಗೆ ಭರವಸೆಕೊಡುವದು - ಈ ಬಲಿಪ್ರತಿಪದಾ*
*ಸ್ವಾಭಾವಿಕ ಭಕ್ತರಿಗೆ ಭರವಸೆಕೊಡುವದು - ಈ ಬಲಿಪ್ರತಿಪದಾ* ದೇವ ಆ ಆ ದೇಶ ಆ ಕಾಲಗಳಲ್ಲಿ ನಮ್ಮ ನಮ್ಮ ಕರ್ಮಾನುಸಾರ ಎಲ್ಲ ವಿಧದಿಂದಲೂ ರಕ್ಷಿಸುವ ಜವಬ್ದಾರಿ ಹೊತ್ತು ರಕ್ಷಿಸುತ್ತಾನೆ. ರಕ್ಷಣೆಮಾಡು ಎಂದು ಕೋರಿದ್ದು ನಾಲ್ಕು ಆದರೆ ದೇವ ರಕ್ಷಣೆ ಮಾಡುವದು ನೂರಾರು ತರಹದಿಂದ. ನಮಗೆ ಆಪತ್ತು ಏನಿದೆ ಎಂದು ನಮಗೆ ಗೊತ್ತಾಗದಿರುವ ಹಾಗೆ ನಮ್ಮ ರಕ್ಷಣೆಯ ಜವಾಬ್ದಾರಿ ಹೊತ್ತವ ದೇವ. ಆ ದೇವನ ಸ್ಮರಣೆ ಚಿಂತನೆ ನಮಗೆ ಅನಿವಾರ್ಯ. *ಬಲಿ ಪ್ರತಿಪದಾ* ಇಂದು ವಾಮನರೂಪದಿಂದ ಬಂದು ಭಕ್ತ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ಅಟ್ಟಿದ ದಿನ *ಬಲಿ ಪ್ರತಿಪದಾ* ನಮ್ಮಲ್ಲರಿಗೂ ಒಂದು ಹಬ್ಬದ ದಿನ. *ಬಲಿ ಚಕ್ರವರ್ತಿಯ ಪಾರಮ್ಯ* ಹುಟ್ಟು ದೈತ್ಯ. ಸ್ವಾಭಾವಿಕ ಭಕ್ತ. ದೈತ್ಯಚಕ್ರವರ್ತಿಯಾಗಿ ಬಾಳಬೇಕಾದರೆ ದೇವತೆಗಳ ಭಕ್ತರ ವಿರೋಧ ಅನಿವಾರ್ಯ. ಹಾಗಾಗಿ ದೇವತಾ ವಿರೋಧದ ಪರಾಕಾಷ್ಠೆ ಬಲಿಯಲ್ಲಿ ಬೆಳದಿತ್ತು. ಅಂತೆಯೇ ಇಂದ್ರನನ್ನು ಸೋಲಿಸಿದ. ಇಂದ್ರನನ್ನು ಓಡಿಸಿದ. ಆ ಇಂದ್ರಪದವಿಯಮೇಲೆ ಕಣ್ಣು ಹಾಕಿದ. ಆ ಇಂದ್ರ ಪದವಿ ಸ್ಥಿರವಾಗಿ ಉಳಿಯಲು ನೂರು ಅಶ್ವಮೇಧಯಾಗ ಮಾಡಲು ಹೊರಟ. *ವಾಮನವತಾರ....* ಈಚೇ ದೇವರಿಗೆ ದೇವತೆಗಳಲ್ಲರು ಶರಣು ಹೋದರು. ಅಭಯವನ್ನಿತ್ತ ದೇವ. ಕಶ್ಯಪ ಅದಿತಿಯರಲ್ಲಿ ಪ್ರಾದುರ್ಭವಿಸಿದ. ಪುಟ್ಟ ರೂಪ. ಅನಂತ ಸೂರ್ಯರ ಪ್ರಕಾಶ. ಅನಂತ ಚಂದ್ರರಕಾಂತಿ. ಜಗತ್ತನ್ನೇ ಸೋಲಿಸ...