*ಬೆಸರವೇ ನಿನ್ನ ಮಹಿಮೆ ಬಣ್ಣಿಸಳವಯ್ಯ.,....*

*ಬೆಸರವೇ ನಿನ್ನ ಮಹಿಮೆ ಬಣ್ಣಿಸಳವಯ್ಯ.,....*

ನಮಗೆ ಬೇಕಾದ ಪದಾರ್ಥ, ವ್ಯಕ್ತಿ,  ಆತ್ಮೀಯ ಇವರಲ್ಲಿಯೇ ಬೇಸರ ಮೂಡುವದು....

ಬೇಸರವನ್ನು ಆ ಕ್ಷಣಕ್ಕೇ ಚಿವುಟುವದು ಅತ್ಯಂತ ಸೂಕ್ತ. ಇಲ್ಲವಾದಲ್ಲಿ ಆತ್ಮೀಯತೆಯನ್ನೇ ಕದಡಿಸಿಬಿಡುತ್ತದೆ.

ಬೇಸರ ಎರಡು ದಿನ ಯೋಗ್ಯ. ಎರಡನೆಯ ದಿನ ದಾಟಿ ಮೂರನೇಯ ದಿನಕ್ಕೆ ವಿಸ್ತರಿಸಿತೂ ಎಂದಾದರೆ, ಒಂದು ವಾರದ ವರೆಗೆ ಬೇಸರದ್ದೇ ಸಾಮ್ರಾಜ್ಯ. ಹತ್ತನೇಯ ದಿನಕ್ಕೆ ಕಾಲಿಟ್ಟರೆ ಒಂದು ತಿಂಗಳು ನಿಶ್ಚಿತ. ತಿಂಗಳು ಮೀರಿದರೆ ನಮ್ಮನ್ನು ತಂಗಳು ಮಾಡಿಬಿಡುತ್ತದೆ ಅದುವೂ ಅಷ್ಟೇ ನಿಶ್ಚಿತ. ಹಾಗಾಗಿ ಆ ಬೇಸರವನ್ನು ಮರಿ ಇದ್ದಾಗಲೇ ಚೂಟಿಬಿಡುವದು ಅತ್ಯಂತ ಸೂಕ್ತ. 

ಬೇಸರದ ಪರಿಹಾರ ಹೇಗೆ.... ??

ಪದಾರ್ಥಗಳೊಟ್ಟಿಗೆ ಬೇಸರವಾದಾಗ ಮರೆತುಬಿಟ್ಟು ಬೇರೆಯೊಂದರಲ್ಲಿ ವ್ಯಸ್ತ ಬ್ಯುಸಿ ಆಗುವದು ಯೋಗ್ಯ. ವ್ಯಕ್ತಿಗಳೊಟ್ಟಿಗೆ ಬೇಸರವಾದಾಗ  ನಕ್ಕು ನಗಿಸುವ ಪುಸ್ತಕ ಓದುವದೋ ನಾಟಕ ನೋಡುವದೋ ಉತ್ತಮ ಉಪಾಯ. 

ಆತ್ಮೀಯರೊಟ್ಟಿಗೆ ಬೇಸರವಾದಾಗ *ಒಂದು ನಗು - ಒಂದೇ ಒಂದು ಮಾತು ಸಾಕು* ಬೇಸರ ಕ್ಷಣದಲ್ಕಿಯೇ ಇಳಿದು ಹೋಗಿಬಿಡತ್ತೆ.  ಆದರೆ.....

ಬೀಡುಬಿಟ್ಟ ಬೇಸರ, ತನಗೆ ಬೇಸರ ಬರಬಾರದು ಎಂದು ತನ್ನೊಟ್ಟಿಗೆ ಒಬ್ಬ ಗೆಳಯನನ್ನು ಸಾಕುತ್ತದೆ ಆ ಗೆಳೆಯ *ಅಹಂ - ego.* ಇವನೂ ಸೇರಿಬಿಟ್ಟರೆ ನಗಲೂ ಆಗದು. ಮಾತಾಡಲೂ ಆಗದು. ಪರಿಣಾಮ ಇನ್ನೆಂದಿಗೂ ಸುಧಾರಿಸದಷ್ಟು ಕೆಟ್ಟು ಹೋಗಿರುತ್ತದೆ... 

ಸಹನೆ ಸಂಯಮ ಇರುವವನು ಆಗಿದ್ದರೆ ಭೀಕರ ಮೌನದಲ್ಲಿ ಪರದಯವಸಾನವಾಗುತ್ತದೆ, ಇಲ್ಲವಾದಲ್ಕಿ ದ್ವೇಶದಲ್ಕಿಯೇ ಕೊನೆಗೊಳ್ಳುತ್ತದೆ....  

ಬೇಸರವನ್ನೇ ಕೊನೆಗಾಣಿಸಬೇಕೋ ಅಥವಾ ಬೇಸರವನ್ನೇ ಪೋಶಿಸಬೇಕೋ ನಮಗೆ ಬಿಟ್ಟಿದ್ದು....

*✍🏽ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ.  ಸಿರವಾರ

Comments

Anonymous said…
Waaaahhhhh... 10000% correct :)

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*