*ಗೀತಾಚಾರ್ಯನಿಗೆ ಗೀತೆಯ ಅರ್ಚನೆ..*

*ಗೀತಾಚಾರ್ಯನಿಗೆ ಗೀತೆಯ ಅರ್ಚನೆ*

ಪರ್ಯಾಯ ಫಲಿಮಾರು *ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ* ಆಶೀರ್ವಾದ ಆಜ್ಙೆಯೊಂದಿಗೆ, ಅವರ ಆತಿಥ್ಯದಲ್ಲಿ,  ಅನ್ನ‌ಬ್ರಹ್ಮ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸಾಗಿದ ನಡೆದ *ಭಗವದ್ಗೀತಾ -  ಭಾಷ್ಯ - ಪ್ರಮೇಯ ದೀಪಿಕಾ* ಜ್ಙಾನ ಸತ್ರ. 

ಆದಿಗುರುಗಳಾದ ಜಗದ್ಗುರುಗಳಾದ  ಶ್ರೀಮದಾಚಾರ್ಯರು ತಿಳಿಸಿದಂತೆ "ವೈಷ್ಣವಂ ವಿಷ್ಣುಗೀತಾ ಚ ಜ್ಙೇಯಂ ಪಾಠ್ಯಂ ಚ ತದ್ವಯಮ್" ವಿಷ್ಣು ಸಹಸ್ರನಾಮ ಮತ್ತು ಭಗವದ್ಗೀತೆ ಇವುಗಳನ್ನು ತಿಳಿಯುವದು  ಪಠಿಸುವದು ಅನಿವಾರ್ಯ. 

ಶ್ರೀಕೃಷ್ಣನಿಗೆ ಅಚ್ಚುಮೆಚ್ಚಾದ, ಅತ್ಯಂತ ಪ್ರೀತ್ಯಾಸ್ಪದ ಗ್ರಂಥ ಗೀತೆ. ಗೀತೆ ತುಂಬ ಕಠಿಣ. ಕೃಷ್ಣ ಪರಮಾತ್ಮನ ಮರ್ಮ ಸಾಮಾನ್ಯ ಜನರ ಅರಿವಿಗೇ ಬರದು. ಅಂತೆಯೇ ಕೃಷ್ಣನ ಮನೋರಥದ ಸಂಪೂರ್ಣ ಅರಿವು ಇರುವ ಶ್ರೀಮದಾಚಾರ್ಯರೇ ಭುವಿಗಿಳಿದು *ಗೀತೆಯ ಅರ್ಥವನ್ನು , ಆಳವನ್ನು, ಗಾಂಭೀರ್ಯವನ್ನು, ನೂರುರಾರು ವಿಷಯಗಳನ್ನು, ತತ್ವ ಪ್ರಮೇಯ ಸಿದ್ಧಾಂತ ಇವುಗಳನ್ನೂ ವಿಶದವಾಗಿ  ತಿಳಿಸಬೇಕಾಯ್ತು. 

*ಗೀತಾಭಾಷ್ಯ*

ಶ್ರೀಮದಾಚಾರ್ಯರು ಮೊಟ್ಟಮೊದಲು ಬಾರಿಗೆ ವೇದವ್ಯಾಸ ದೇವರ ಬಳಿ ತೆರಳುತ್ತಿರುವಾಗವ, ಉಪಾಯನ ರೂಪದಲ್ಲಿ *ಗೀತಾಭಾಷ್ಯ* ಎಂಬ ಉದ್ಗ್ರಂಥವನ್ನು ರಚಿಸಿ ಸಮರ್ಪಿಸಿದರು. ಗೀತೆಯ ದಿವ್ಯ ವ್ಯಾಖ್ಯಾನವನ್ನು ನೋಡಿದ  ಸ್ವಯಂ ನಾರಾಯಣ *ಅತ್ಯದ್ಭುತ !! ಭಲೇ ಭೇಶ್ !! ಉದ್ಗಾರ ತೆಗೆದ. ನಿಮ್ಮ ಅಪಾರ ಜ್ಙಾನದ ಭಾಂಡಾರದಲ್ಲಿಯ ಲೇಶ ಮಾತ್ರ ಬಳಿಸಿದ್ದೀರಾ ಎಂದೂ ತಿಳಿಸಿ ಹರಿಸಿದ ಶ್ರೀಮನ್ನಾರಾಯಣ. ಇದು ಗೀತಾಭಾಷ್ಯದ ವೈಭವ.

*ದ್ವಿತೀಯಾಧ್ಯಾಯ...*

ಶ್ರೀಮದಾಚಾರ್ಯರು "ಆಶೋಚ್ಯಾನನ್ವ ಶೋಚಸ್ತ್ವಂ" ಎಂಬ ಶ್ಲೋಕದ ವ್ಯಾಖ್ಯಾನದೊಂದಿಗೆ ಗೀತೇಗೆ ವ್ಯಾಖ್ಯಾನ ಆರಂಭಿಸಿದರು. 

ಗೀತೆಯಲ್ಲಿ ಇರುವ ಕೃಷ್ಣನ ಅಂತರಾಳವನ್ನು ತೆಗೆದು ತೋರಿಸಲು ಆರಂಭಿಸಿದರು ಆಚಾರ್ಯರು. *ಜೀವನಿತ್ಯತ್ವ - ಬಿಂಬ ಪ್ರತಿಬಿಂಬ ಭಾವ - ವಿಷ್ಣುವಿನ ದಿವ್ಯ ಭವ್ಯ ಮಹಿಮೆ - ಕರ್ಮದ ಸಂಕೋಲೆ- ಕರ್ಮದ ನಾಶ- ಮುಕ್ತಿಯ ಸ್ವರೂಪ- ಮುಕ್ತಿ ಇದೆ ಎಂದು ಪ್ರತಿಪಾದನೆ - ಮುಕ್ತಿಯಲ್ಲಿ ಅನಂತ ಆನಂದವಿದೆ ಎಂದು ಸಮರ್ಥನೆ- ದೇವರ ದರ್ಶನದಿಂದಲೇ ಮುಕ್ತಿ - ಅಪರೊಕ್ಷ ದರ್ಶನಕ್ಕಾಗಿ ಅವಶ್ಯಕವಾದ ಸಾಧನೆ* ಹೀಗೆ ಇಲ್ಲಿ ಬಂದ ವಿಷಯಗಳು‌ನೂರಾರು ಸಾವಿರಾರು. 

*ಶ್ರೀಮಟ್ಟೀಕಾಕೃತ್ಪಾದರು*

ಮೇಲೇ ತಿಳಿಸಿದ ಶ್ರೀಮದಾಚಾರ್ಯರ ದಿವ್ಯ ವ್ಯಾಖ್ಯಾನಕ್ಕೆ ಭವ್ಯ ಟೀಕೆ ಎಂದರೆ *ಪ್ರಮೇಯದೀಪಿಕೆ.* ಇದನ್ನು ರಚಿಸಿದವರು ಶ್ರೀಮಟ್ಟೀಕಾಕೃತ್ಪಾದರು. ಪ್ರತ್ಯಕ್ಷರ ಪದ ವಾಕ್ಯಗಳಿಗೆ ಅತ್ಯಂತ ಸೂಕ್ತ ಟೀಕೆಯನ್ನು ರಚಿಸಿ, ಕೃಷ್ಣ - ಆಚಾರ್ಯರ ಮಾತುಗಳಿಗೆ ವ್ಯಾಖ್ಯಾನಮಾಡಿ  ಕರುಣಿಸಿದರು. 

ಅತ್ಯಂತ ಸಕ್ಷಿಪ್ತ ಹಾಗೂ ಅಪಾರ ಅರ್ಥಗಳನ್ನೊಳಗೊಂಡ ಟೀಕಾರಾಯರೇ ಶ್ರೀಮದಾಚಾರ್ಯರ ಮಾತಿಗೆ ವ್ಯಾಖ್ಯಾನ ಮಾಡಲು ಸಮರ್ಥರು.  ಇದನ್ನು ಪ್ರತಿ ವಾಕ್ಯ ಪದ ಶಬ್ದಗಳಿಂದ ತಿಳಿದು ಬರುತ್ತದೆ. ಟೀಕಾರಾಯರ ಟೀಕೆ ಇಲ್ಲದಿರೆ, ಆಚಾರ್ಯರ ಭಾಷ್ಯ ಹಾಗೂ ಕೃಷ್ಣನ ಮಾತು ಅರ್ಥವಾಗಲು ಅಸಾಧ್ಯದ ಮಾತು. ಇದು ಟೀಕೆಯನ್ನು ಅಧ್ಯನ ಮಾಡಿದ ಎಲ್ಲರ ಅಂತರಾಳವೂ ಹೌದು. 

*ಪೂಜ್ಯ ಮಾಹುಲೀ ಆಚಾರ್ಯರು..*

ಕಲಿಯಗಕ್ಕೆ ಸನಿಹ ದೇವನಾದ, ಪೂಜ್ಯ ಆಚಾರ್ಯರ ಆರಾಧ್ಯ ದೈವನೂ ಆದ, ಉಡಪಿಯ ಶ್ರೀಕೃಷ್ಣನ ಸನ್ನಿಧಾನದಲ್ಲಿ ಆರವತ್ತರ ಸನಿಹದಲ್ಲಿರುವ *ಪೂಜ್ಯ ಆಚಾರ್ಯರು*, ಕೃಷ್ಣ ಹಾಗೂ ಶ್ರೀಮದಾಚಾರ್ಯರ  ಸೇವೆ, ತಮ್ಮ ಸಾಧನೆ, ಶಿಷ್ಯಹಿತ ಇತ್ಯಾದಿ ಅನೇಕ ಉದ್ದೇಶ್ಯಗಳೊಂದಿಗೆ *ಏಳು ದಿನಗಳ ಉತ್ಕೃಷ್ಟ ತಪಸ್ಸು* ಎಂದೇ ಯೋಚಿಸಿ ನಿತ್ಯವೂ ಬೆಳಗ್ಗೆ ಐದು ಗಂಟೆ ಇಂದ ಮಧ್ಯಾಹ್ನ  ಹನ್ನೆರಡು ಗಂಟೆಯ ವರೆಗೆ *ಗೀತಾ - ಭಾಷ್ಯ - ಪ್ರಮೇಯದೀಪಿಕೆ* ಇವುಗಳ ಅಕ್ಷರಕ್ಷರ ವಾಕ್ಯ ಪ್ರತಿಪಂಕ್ತಿಯ ಪಾಠ ಮಾಡಬೇಕು. 

*ವಿಶಿಷ್ಟ ಶೈಲಿಯ ಪಾಠಕ್ರಮ...*

ಅನೇಕ ವಿದ್ವಾಂಸರು, ನೂರಾರು ವಿದ್ಯಾರ್ಥಿಗಳು ಸೇರಿರುವ ಈ ಪಾಠದಲ್ಲಿ,  *ವಿಷಯ ತಿಳಿಸಿ - ತಿಳಿತೋ ಇಲ್ಲೋ ವಿಚಾರಿಸಿ - ಮಹತ್ವದ ವಿಷಯಗಳನ್ನು  ತಿಳಿಸಿ - ಆ ವಿಷಯಗಳನ್ನು  ಚೆನ್ನಾಗಿ ಅನಿಸಿ - ಅನುವಾದ ಕೇಳಿ* ಪಾಠ ಮಾಡುವ ಕ್ರಮ ಅತ್ಯದ್ಭುತ. ಈ ಕ್ರಮದಲ್ಲಿ ನಿತ್ಯವೂ *ಗೀತಾಚಾರ್ಯನಿಗೆ ಗೀತಾರ್ಚನೆ* ಮಾಡಿದರು ಪೂಜ್ಯ ಆಚಾರ್ಯರು...

*✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಾಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*