*ನರಕ ಚತುರ್ದಶೀ*
*ನರಕ ಚತುರ್ದಶೀ*
ಶ್ರೀಕೃಷ್ಣ ಭೀಮರು ಬರುವದಕ್ಕೂ ಪೂರ್ವದಲ್ಲಿ ಮಧ್ಯಭಾರತದ ಮೂರುದಿಕ್ಕನ್ನು ಆಕ್ರಮಿಸಿಕೊಂಡು ಇರುವವರು ಮೂರು ಜನರು. ಒಬ್ಬ ಶಿಶು ಹಂತಕ - ಮತ್ತೊಬ್ಬ ರಾಜ ಘಾತುಕ - ಮುಗದೊಬ್ಬ ಸ್ತ್ರೀ ಘಾತುಕ ಹೀಗೆ. ಮಥುರೆಯಲ್ಲಿ ಶಿಶುಹಂತಕ ಕಂಸ. ಮಗಧ ಇಂದಿನ ಪಾಟ್ನಾದಲ್ಲಿ ರಾಜ ಘಾತುಕ ಜರಾಸಂಧ. ಅಸ್ಸಾಂ ದೇಶದಲ್ಲಿ ಸ್ತ್ರೀ ಘಾತುಕ ನರಕಾಸುರ. ಹೀಗೆ ಈ ಮೂರು ಜನ ಕೈಯಲ್ಲಿ ಸಮಗ್ರ ಭಾರತವಿತ್ತು.
ಇಂದಿನ ಪ್ರಸಂಗ ನರಕಾಸುರ...
ನರಕಾಸುರ ಮಹಾ ಬಲಿಷ್ಠ. ವರಾಹದೇವರ ಮಗ. ಇಂದ್ರಾದಿಗಳಿಗೇ ಭಯ ಹುಟ್ಟಿಸಿದ ಪರಾಕ್ರಮಿ. ವರುಣ ಕುಬೇರ ಮೊದಲಾದ ದಿಕ್ಪಾಲಕರಿಂದ ಅವರ ವಾಹನ ಗಳಾದ ಆನೆ ಕುದುರೆ ಮೊದಲಾದವುಗಳನ್ನು ಅಪಹರಿಸೊಕೊಂಡು ಬಂದಿದ್ದ. ದೇವಲೋಕದ ಅಪರೂಪ ವಸ್ತುಗಳು ಇವನಬಳಿ ಇದ್ದವು. ಅದಿತಿಯ ಕರ್ಣಕುಂಡಲಗಳನ್ನೂ ಅಪಹರಿಸಿಕೊಂಡು ಬಂದಿದ್ದ. ಇಷ್ಟು ಸಾಲದೆ ಹದಿನಾರು ಸಾವಿರದ ನೂರು ಜನ ಸ್ತ್ರೀರತ್ನವನ್ನೂ ಅಪಹರಿಸಿಕೊಂಡು ಬಂದಿದ್ದ. ಇದು ನರಕಾಸುರನ ಪರಾಕ್ರಮದ ಝಳಕು...
*ಕೃಷ್ಣನ ರಾಜ ಸಭೆ.....*
ಕೃಷ್ಣ ರಾಜನಾಗಿರಲಿಲ್ಲ ನಿಜ. ಆದರೆ ರಾಜ್ಯ ಹಾಗೂ ರಾಜ್ಯದ ಜನತೆ ಕೃಷ್ಣನ ಕೈಲೆ ಇದ್ದರು ಇದುವೂ ಅಷ್ಟೇ ನಿಜ. ಒಂದುದಿನ ಇಬ್ಬರು ದೂತರು ಏಕಕಾಲಕ್ಜೆ ಕೃಷ್ಣನ ಸನಿಹ ಬರುತ್ತಾರೆ. ಒಬ್ಬ ಸ್ವರ್ಗದಿಂದ ಇನ್ನೊಬ್ಬ ಪ್ರಾಗ್ಜ್ಯೋತಿಷ ಪುರದಿಂದ.
ಸ್ವರ್ಗದಿಂದ ಇಂದ್ರ ಕಳುಹಿಸಿರುತ್ತಾನೆ. ತನ್ನ ತಾಯಿಯ ಕರಗಣಕುಂಡಲ ನರಕಾಸುರ ಅಪಹರಿಸಿದ್ದಾನೆ. ಅವುಗಳನ್ನು ತಂದುಕೊಡಲು ನೀನೇ ಸಮರ್ಥ ಆದ್ದರಿಂದ ಅನುಗ್ರಹಿಸು ಎಂದು. ಇನ್ನೊಬ್ಬ ನರಕನ ಬಂಧನದಲ್ಲಿ ಇದ್ದ ಹದಿನಾರು ಸಾವಿರ ಸ್ತ್ರೀಯರು ಕಳುಹಿಸಿದ "ನಮ್ಮನ್ನು ರಕ್ಷಿಸುವ ಹೊಣೆಕಾರಿಕೆ ನಿನ್ನದೇ ದಯಮಾಡಿ ರಕ್ಷಿಸು ಎಂದು" ಮತ್ತೊಬ್ಬ ದೂತ ಬಂದು ತಿಳಿಸುವ.
*ನರಕಾಸುರನ ವಧೆಗೆ ಮುಹೂರ್ತ ನಿಶ್ಚಯ*
ಇಬ್ಬರ ದೂತರ ಸಂದೇಶವನ್ನು ಆಲಿಸಿದ ಶ್ರೀಕೃಷ್ಣ ಸತ್ಯಭಾಮೆಯ ಜೊತೆಗೆ ಗರುಡಾರೂಢನಾಗಿ ಪ್ರಾಗ್ಜೋತಿಷಪುರ (ಅಸ್ಸಾಂ) ಗೆ ಹೊರಟೇ ಬಿಟ್ಟ.
*ನರಕನ ವೈಭವ*
ನರಕಾಸುರ ತಾನು ದೇವನಂತೆ ವೈಭವವನ್ನು ರೂಡಿಸಿಕೊಂಡವ. ತನ್ನ ಪಟ್ಟಣಕ್ಕೆ ಬರಬೇಕಾದರೆ ಮೊದಲು ಮೂರು ದುರ್ಗಗಳನ್ನು ದಾಟಿ ಬರಬೇಕು.
೧) ಗಿರಿ ದುರ್ಗ. ಘನಘೋರವಾದ, ದಾಟಲು ಅಸಾಧ್ಯವಾದ, ಗಿರಿದುರ್ಗ.
೨) ಜಲದುರ್ಗ. ಅಲ್ಲೋಲಕಲ್ಲೋಲವಾದ ವಿಷಭರಿತವಾದ, ಮೊಸಳೆ ತಿಮಿಂಗಲು ಮೊದಲಾದ ಕ್ರೂರ ಜಲಚರಗಳಿಂದು ಯುಕ್ತವಾದ ಜಲದುರ್ಗ.
೩ ) ಪಾಶದುರ್ಗ. ರುದ್ರದೆವರ ವರದಿಂದ ಇರುವ ಸಂಪೂರ್ಣ ಪಟ್ಟಣದ ಸುತ್ತ ಸುತ್ತಿರುವ ಹಗ್ಗಗಳು. ಅವುಗಳು ವಿಷಯುಕ್ತವಾದವಗಳ. ಅತ್ಯಂತ ಚೂಪು. ಮುಟ್ಟಿದರೆ ದೇಹವನ್ಬೇ ಎರಡು ಭಾಗ ಮಾಡುವಷ್ಟು ಚೂಪು ಪಾಶ ದುರ್ಗ. ಈ ಮೂರು ದುರ್ಗಗಳನ್ನು ದಾಟಿ ವಳಗೆ ಬಂದರೆ...
ದೇವರು ಅಷ್ಟ ದಿಕ್ಪಾಲಕರನ್ನು ಇಟ್ಟುಕೊಂಡ ಹಾಗೆ, ಈ ನರಕ ತನ್ನ ಅನೇಕ ಮಂತ್ರಿಗಳನ್ನು ದಿಕ್ಪಾಲಕರನ್ನಾಗಿ ನಿಯಮಿಸಿಟ್ಟುಕೊಂಡಿದ್ದ. ಈ ತರಹದ ಪ್ರಚಂಡ ನರಕಾಸರು. ಸ್ವಯಂ ತಾ ಬ್ರಹ್ಮ ದೇವರ ಹಾಗೂ ರುದ್ರದೇವರ ವರದಿಂದ, ವರಾಹದೇವರು ಕೊಟ್ಟ ಅಸ್ತ್ರದಿಂದ ಮಹಾ ಬಲಿಷ್ಠ.
*ಅನಂತ ಬಲಶಾಲಿ ಶ್ರೀಕೃಷ್ಣ*
ಗರುಡಾರೂಢನಾಗಿ ಬಂದ ಶ್ರೀಕೃಷ್ಣ ತನ್ನ ಗದೆಯನ್ನು ಬೀಸಿದ. ಗದೆಯ ಪ್ರಭಾವದಿಂದ ಗಿರಿದುರ್ಗ ಪುಡಿಪುಡಿ ಮಾಡಿದ. ವಾಯು ಆಸ್ತ್ರವನ್ನು ಬಿಟ್ಟು ಜಲದುರ್ಗವನ್ನು ವಣಗಿಸಿದ. ತನ್ನ ಕೈಲಿರುವ ಖಡ್ಗವನ್ನು ಬೀಸಿ ಪಾಶವನ್ನು ಕತ್ತರಿಸಿ ಹಾಕಿದ. ಮಂತ್ರಿಗಳನ್ನು ಒಂದೊಂದು ಬಾಣದಿಂದ ಸಂಹರಿಸಿದ. ಇದು ಕೃಷ್ಣನ ಬಲದ ಝಳಕು.
*ನರಕ ಕೃಷ್ಣರ ಯುದ್ಧ.*
ಯುದ್ಧ ಆರಂಭವಾಯಿತು. ರಾಮ ರಾವಣರ ಯುದ್ಧದಂತೆ ಘನಘೋರ ಯುದ್ಧ ಪ್ರಂಭವಾಯಿರು. ಅಸ್ತ್ರಪ್ರತ್ಯಸ್ತ್ರಗಳ ಭರಾಟೆ ಜೊರಾಗಿ ನಡಿಯುತ್ತಾ ಇದೆ.
*ಕೃಷ್ಣ ಮೂರ್ಛೆ ಹೋದ*
ಒಂದು ಪ್ರಸಂಗದಲ್ಲಿ ನರಕಾಸುರ ಬಾಣ ಬಿಟ್ಟಾಗ ಅಸ್ತ್ರದ ಪ್ರಭಾವದಿಂದ ಕೃಷ್ಣ ಮೂರ್ಛೇಯೇ ಹೊದ. ಆಗ ಸತ್ಯ ಭಾಮೆ ಸ್ವಯಂ ತಾ ಶಾಂರ್ಗ ಧನಸದಸನ್ನು ಹಿಡಿದು ಯುದ್ದವಾಡಿ ನರಕನನ್ನು ಮೂರ್ಛೆಗೊಳಿಸುತ್ತಾಳೆ.
ಹಾಗಾದರೆ ನರಕನಿಗೆ ಆ ಸಾಮರ್ಥ್ಯವಿತ್ತೆ... ???
ಬ್ರಹ್ಮದೇವರ ವರಕ್ಕೆ ಬೆಲೆ ಕೊಡುವದಕ್ಕಾಗಿ ಗೌರವ ಕೊಡುವದಕ್ಕಾಗಿ, ಸತ್ಯಭಾಮೆಯ ಪರಾಕ್ರಮವನ್ನೂ ಜಗತ್ತುಗೆ ತೋರಿಸುವದಕ್ಕಾಗಿ ಶ್ರೀಕೃಷ್ಣ ಮೂರ್ಛೆಹೊದಂತೆ ನಟಿಸುತ್ತಾನೆ. ಕೃಷ್ಣನನ್ನು ಮೂರ್ಛೆಗೊಳಿಸುವದು ಅಲ್ಲ ಒಂದು ರೋಮವನ್ನು ಕಿತ್ತುವ ಸಾಮರ್ಥ್ಯವೂ ನರಕನಿಗೆ ಇಲ್ಕ. ಬ್ರಹ್ಮ ರುದ್ರಾದಿ ದೇವತೆಗಳಿಗೂ ಇಲ್ಲ.
*ನರಕಾಸುರನ ಸಂಹಾರ*
ಪುನಃ ಯುದ್ದ ಆರಂಭವಾಯಿತು. ಅತ್ಯಂತ ಉಗ್ರವಾದ ಯುದ್ಧ. ಸಂಹಾರದ ಸಮಯ ಬಂದಾಗ ಕೃಷ್ಣ ತನ್ನ ಕೈಯಲಿ ಇರುವ ಸುದರ್ಶನ ಚಕ್ರವನ್ನು ಬೀಸಟು, ನರಕಾಸುರನ ತಲೆಯನ್ನು ಕತ್ತರಿಸಿ ಹಾಕುತ್ತಾನೆ. ಸಂಹಾರ ಮಾಡುತ್ತಾನೆ.
ನರಕನನ್ನು ಸಮಹರಿಸಿದ ಕೃಷ್ಣ ರಾಜ್ಯವನ್ನು ತಾನು ಸ್ವೀಕರಿಸದೇ ನರಕನ ಮಗನಾದ ಭಗದತ್ತನಿಗೆ ರಾಜದಯ ಕಟ್ಟುತ್ತಾನೆ. ದೇವತೆಗಳ ವಸ್ತುಗಳನ್ನು ದೇವತೆಗಳಿಗೆ ಒಪ್ಪಿಸುತ್ತಾನೆ. ನಾಲ್ಕುದಂತವಿರುವ ಆನೆಗಳನ್ನು ಕುಬೇರನಿಗೆ ಒಪ್ಪಿಸುತ್ತಾನೆ. ದೇವತಾ ತಾಯಿಯಾದ ಅದಿತಿಯ ಕರ್ಣಕುಂಡಲಗಳನ್ನು ಅದಿತೆ ಒಪ್ಪಿಸುತ್ತಾನೆ. ಆ ಹದಿನಾರುಸಾವಿರ ಸ್ತ್ರೀಯರ ಕೋರಿಕೆಯಂತೆ ಸ್ವಯಂ ತಾ ಮದುವೆ ಮಾಡಿಕೊಂಡು ಅವರಿಗೂ ರಕ್ಷಣೆ ಇದಗಿಸುತ್ತಾನೆ.
ನರಕಾಸುರನನ್ನು ಸಂಹರಿಸಿದ ದಿನವೇ *ನರಕ ಚತುರ್ದಶೀ* ಎಂದು ಪ್ರಸಿದ್ಧವಾಯಿತು. ಅಂದಿನಿಂದ ಇಂದು ವೈಭವದ ವಿಜಯೋತ್ಸವದ ಆಚರಣೆ ಆರಂಭವಾಯಿತು. ದೈವ ಭಕ್ತರೆಲ್ಲರಿಗೂ ಇಂದು ಒಂದು ಹಬ್ಬವಾಗಿ ದೊಡ್ಡದಿವಾಯಿತು.
*ಇಂದಿನ ದಿನ ತುಂಬ ವಿಚಿತ್ರ...*
ಸ್ತ್ರೀಘತುಕ, ದೆವತಾ ದೇವರ ದ್ರವ್ಯಾಪಹಾರಿ, ಕಳ್ಳ ನರಕಾಸುರ ರಾವಣ ಇಂತಹವರಿಗೆ ಇಂದು ಸ್ವಾಗತ ಸತ್ಕಾರವಿದೆ. ಇಂತಹ ದುಷ್ಟರನ್ನು ಸಂಹಾರ ಮಾಡಿದ ಕೃಷ್ಣ ರಾಮರ ವಿಜಯದ ದಿನಾಚರಣೆಗೆ ವಿರೋಧವಿದೆ. ತುಂಬ ವಿಚಿತ್ರ. ರಾಮಕೃಷ್ಣರಿಗೆ ಬಮಬಲವೋ ನರಕ ರಾವಣರಿಗೆ ಬೆಂಬಲವೋ ನಮ್ಮ ವಿವೇಚನೆಗೆ ಬಿಟ್ಟಿರುವದು.... ರಕ್ಷಕ ರಾಮ ಕೃಷ್ಣರು ಒಂದೆಡೆ ಕಳ್ಳ ಕಾಕರಾದ ನರಕ ರಾವಣರು ಒಂದೆಡೆ. ಯಾವಕಡೆ ನಮ್ಮ ದಾರಿ ಯೋಚಿಸಿ ನಾಳೆಯಿಂದ ಮುಂದಡಿ ಇಡೋಣ.
*✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments