*ಸ್ವಾಭಾವಿಕ ಭಕ್ತರಿಗೆ ಭರವಸೆಕೊಡುವದು - ಈ ಬಲಿಪ್ರತಿಪದಾ*
*ಸ್ವಾಭಾವಿಕ ಭಕ್ತರಿಗೆ ಭರವಸೆಕೊಡುವದು - ಈ ಬಲಿಪ್ರತಿಪದಾ*
ದೇವ ಆ ಆ ದೇಶ ಆ ಕಾಲಗಳಲ್ಲಿ ನಮ್ಮ ನಮ್ಮ ಕರ್ಮಾನುಸಾರ ಎಲ್ಲ ವಿಧದಿಂದಲೂ ರಕ್ಷಿಸುವ ಜವಬ್ದಾರಿ ಹೊತ್ತು ರಕ್ಷಿಸುತ್ತಾನೆ.
ರಕ್ಷಣೆಮಾಡು ಎಂದು ಕೋರಿದ್ದು ನಾಲ್ಕು ಆದರೆ ದೇವ ರಕ್ಷಣೆ ಮಾಡುವದು ನೂರಾರು ತರಹದಿಂದ. ನಮಗೆ ಆಪತ್ತು ಏನಿದೆ ಎಂದು ನಮಗೆ ಗೊತ್ತಾಗದಿರುವ ಹಾಗೆ ನಮ್ಮ ರಕ್ಷಣೆಯ ಜವಾಬ್ದಾರಿ ಹೊತ್ತವ ದೇವ. ಆ ದೇವನ ಸ್ಮರಣೆ ಚಿಂತನೆ ನಮಗೆ ಅನಿವಾರ್ಯ.
*ಬಲಿ ಪ್ರತಿಪದಾ*
ಇಂದು ವಾಮನರೂಪದಿಂದ ಬಂದು ಭಕ್ತ ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ಅಟ್ಟಿದ ದಿನ *ಬಲಿ ಪ್ರತಿಪದಾ* ನಮ್ಮಲ್ಲರಿಗೂ ಒಂದು ಹಬ್ಬದ ದಿನ.
*ಬಲಿ ಚಕ್ರವರ್ತಿಯ ಪಾರಮ್ಯ*
ಹುಟ್ಟು ದೈತ್ಯ. ಸ್ವಾಭಾವಿಕ ಭಕ್ತ. ದೈತ್ಯಚಕ್ರವರ್ತಿಯಾಗಿ ಬಾಳಬೇಕಾದರೆ ದೇವತೆಗಳ ಭಕ್ತರ ವಿರೋಧ ಅನಿವಾರ್ಯ. ಹಾಗಾಗಿ ದೇವತಾ ವಿರೋಧದ ಪರಾಕಾಷ್ಠೆ ಬಲಿಯಲ್ಲಿ ಬೆಳದಿತ್ತು. ಅಂತೆಯೇ ಇಂದ್ರನನ್ನು ಸೋಲಿಸಿದ. ಇಂದ್ರನನ್ನು ಓಡಿಸಿದ. ಆ ಇಂದ್ರಪದವಿಯಮೇಲೆ ಕಣ್ಣು ಹಾಕಿದ. ಆ ಇಂದ್ರ ಪದವಿ ಸ್ಥಿರವಾಗಿ ಉಳಿಯಲು ನೂರು ಅಶ್ವಮೇಧಯಾಗ ಮಾಡಲು ಹೊರಟ.
*ವಾಮನವತಾರ....*
ಈಚೇ ದೇವರಿಗೆ ದೇವತೆಗಳಲ್ಲರು ಶರಣು ಹೋದರು. ಅಭಯವನ್ನಿತ್ತ ದೇವ. ಕಶ್ಯಪ ಅದಿತಿಯರಲ್ಲಿ ಪ್ರಾದುರ್ಭವಿಸಿದ. ಪುಟ್ಟ ರೂಪ. ಅನಂತ ಸೂರ್ಯರ ಪ್ರಕಾಶ. ಅನಂತ ಚಂದ್ರರಕಾಂತಿ. ಜಗತ್ತನ್ನೇ ಸೋಲಿಸುವ ಮುಗುಳ್ನಗೆ. ಆ ಕೂಸೇ *ವಾಮನ.*
*ಹರಿಚಿತ್ತ ಸತ್ಯ ಹರಿಚಿತ್ತ*
ಉಪಾಯಗಳನ್ನು ಹೂಡುವದರಲ್ಲಿ ದೇವ ಅಗ್ರಗಣ್ಯ. ಹೊಸ ಉಪಾಯ ಹೂಡುವ ಪ್ರಸಂಗ.
ದುಷ್ಟರಲ್ಲಿ ಹುಟ್ಟಿದವ. ದುಷ್ಕೃತ್ಯ ಎಸಗುತ್ತಿರುವ. ಇಂದ್ರನಮೇಲೂ ದಬ್ಬಾಳಿಕೆ ಮಾಡಿದವ ಬಲಿ. ಆದರೆ ಸ್ವಾಭಾವಿಕ ಭಕ್ತ. ಸ್ವರೂಪತಃ ಇಂದ್ರಪದವಿಗೆ ಯೋಗ್ಯ. ಈ ಬಲಿಯನ್ನು ಹಿರಣ್ಯಕಶಿಪು, ಹಿರಣ್ಯಾಕ್ಷ, ವಿರೋಚನ ಇವರನ್ನು ಸಂಹಾರ ಮಾಡಿದಂತೆ ಈ ಬಲಿಯನ್ನೂ ಸಂಹರಿಸುತ್ತಾನೆಯಾ ???? ಅಥವಾ ಸ್ವಾಭಾವಿಕ ಭಕ್ತನಾದದ್ದರಿಂದ ರಕ್ಷಿಸುತ್ತಾನೆ... ?? ದೇವನೇನು ಮಾಡುತ್ತಾನೆ ಎಂದು ಯೋಚಿಸುತ್ತಾ ಮಗ್ನರಾದರು ದೇವತೆಗಳು. ಸಂಹಾರ ಮಾಡಿದರೆ ಭಕ್ತನನ್ನು ಸಂಹರಿಸಿದ ಎಂಬ ಅಪಕೀರ್ತಿ. ರಕ್ಷಿಸಿದರೆ ಭಕ್ತರಾದ ನಮಗೆ ಸಮಸ್ಯೆ. ಹೀಗೆ ಯೋಚಿಸುತ್ತಾ ಮಗ್ನರಾದರು ದೇವತೆಗಳು.
*ಸನ್ಯಾಯವಂತ ನಮ್ಮ ಸ್ವಾಮಿ*
ಮಯಾರೂಪವನ್ನು ತಾಳಿದ ವಾಮನ ನೇರವಾಗಿ ಬಲಿಯ ಬಳಿ ಬಂದು ಮೂರುಪಾದ ಭೂಮಿ ದಾನ ಬೇಡಿದ. ಒಂದು ಪಾದದಿಂದ ಮೇಲ್ಲೋಕಗಳನ್ಬು ಆಕ್ರಮಿಸಿದ. ಇನ್ನೊಂದು ಪಾದದಿಂದ ಸಮಸ್ತ ಭೂಮಿಯನ್ನು ಆಕ್ರಮಿಸಿದ. ಮತ್ತೊಂದು ಪಾದ ಎಲ್ಲಿಡಲಿ ಎಂದು ಕೇಳಿದಾಗ ಬಲಿ ತನ್ನ ತಲೆಯನ್ನು ತೋರಿಸಿದ. ತಲೆಯ ಮೇಲೆ ಪಾದವಿಟ್ಟ. ಪಾತಾಳಕ್ಕೆ ಅಟ್ಟಿದ.
ಬಲಿಚಕ್ರವರ್ತಿಗೆ ತಲೆಯಮೇಲೆ ಪಾದವಿಟ್ಟು ಅಟ್ಟುವ ಮುಖಾಂತರ ಶಿಕ್ಷೆಕೊಟ್ಟ. ಸಂಹಾರ ಮಾಡಲಿಲ್ಲ. ತಲೆಯಮೇಲೆ ಪಾದವಿಟ್ಟು ಅನುಗ್ರಹಿಸಿದ. ಶಕ್ಷೆಕೊಟ್ಟು ಪಾತಾಳಕ್ಜೆ ಅಟ್ಟುವ ಮುಖಾಂತರ ದೇವತೆಗಳಿಗೆ ಒದಗಿದ ಕಂಟಕ ಕಿತ್ತು ಒಗೆದ. ಮುಂದುನ ಕಲ್ಪದಲ್ಲಿ ಇಂದ್ರನಾಗುವಂತೆಯೂ ನೋಡಿಕೊಂಡ. ಇಂದಿಗೂ ಬಲಿಯ ಮನಿಯ ಕಾಯುತ್ತಾ ನಿತ್ಯ ಬಲಿಗೆ ದರ್ಶನವನ್ನೀಯುತ್ತಾ ಅವನ ಮನೆಯ ಬಾಗಿಲಿಗೇ ಹೋಗಿ ನಿಂತ. *ಇದು ಸ್ವಾಭಾವಿಕ ಭಕ್ತರ ವೈಭವ.*
ತಪ್ಪುಗಳೇ ಇರುವ ಸ್ಥಳದಲ್ಲಿ, ಏನು ಮಾಡಿದರೂ ತಪ್ಪೇ ಆಗುವ ಸ್ಥಳದಲ್ಲಿ ಒದ್ದಾಡುವ ನಮ್ಮಿಂದಲೂ ತಪ್ಪುಗಳು ನಮ್ಮ ಅರಿವಿಗೆ ಬರುವದರಲ್ಲಿಯೇ ಘಟಿಸಿಹೋಗಿಬಿಡುತ್ತವೆ. ಸ್ವಾಭಾವಿಕ ಭಕ್ತಿ ಮಾಡುತ್ತಿದ್ದರೆ ಮಾತ್ರ ದುಷ್ಟರಿಗೆ ಆದಂತಹ ಶಿಕ್ಷೆ ಆಗದೆ, ಆ ಶಿಕ್ಷೆ ಅನುಗ್ರಹಕಾರಿಯೂ ಆಗಿ ಆಗುತ್ತದೆ. ಎಲ್ಲ ಮಾರ್ಗಗಳಿಂದಲೂ ರಕ್ಷಣೆಗೆ ದೇವನೇ ಬಂದು ನಿಲ್ಲುತ್ತಾನೆ. ಅಂತಹ ವಾನ ರೂಪಿ ಹರಿಗೆ ಬಲಿಯಂತೆ ನಮ್ಮನು ಕಾಯುವ ಜವಬ್ದಾರಿ ನೀನು ಹೊತ್ತುಕೊಂಡಿದ್ದೀಯ. ಅದರಂತೆಯೇ ರಕ್ಷಿಸುತ್ತಿದ್ದೀಯ. *ಭಕ್ತಿ ಕಡಿಮೆ ಮಾಡುವದಿಲ್ಲ. ಕೃತಜ್ಙತೆ ಸಲ್ಲಿಸುವದರಲ್ಲಿ ಎಡವುದಿಲ್ಲ* ಇವೆರಡು ನಮ್ಮ ಕೆಲಸ.......
*ಬಲಿಪ್ರತಿಪದಾ ಹಬ್ಬದ ನಮಸ್ಕಾರಗಳು - ಶುಭಾಷಯಗಳು*
*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ ಸಿರವಾರ.
Comments