*ವೈಭವದ ಆ ನಾಲ್ಕು ದಿನಗಳು*

*ವೈಭವದ ಆ ನಾಲ್ಕು ದಿನಗಳು*

ದೈವ ತುಂಬ ವಿಚಿತ್ರ. ಬಲು ಚಂಚಲ. ಜಿಂಕೆಯಂತೆ ಕ್ಷಣ ಒಂದೆಡೆ ನಿಲ್ಲದು. ಆದರೆ ಆ ಕ್ಷಣದ ಕಾಲದಲ್ಲಿಯೇ ಜೀವನದ ಮಹಾಫಲಕ್ಕೆ ಕಾರಣವಾದ ಅಥವಾ ಮಹಾ ಅನರ್ಥಕ್ಕೆ ಕಾರಣವಾದ ದಾರಿ ತೋರಿಸಿಟ್ಟು, ಆ ದಾರಿಯಲ್ಲಿ ಓಡಿಸಿಬಿಟ್ಟಿರುತ್ತದೆ. ಅಂತಹ ಬಲಶಾಲಿ ದೈವ. ಅದನ್ನು ಒಪ್ಪಿಕೊಳ್ಲುವದು ಅನಿವಾರ್ಯವೂ ಆಗುತ್ತದೆ. 

*ಗುರುಸ್ಮೃತಿಃ ಸರ್ವವಿಪದ್ವಿಮೋಕ್ಷಿಣೀ*

ಗುರುಗಳ ಸ್ಮರಣೆ ಸಕಲವಿಧ ಆಪತ್ತುಗಳಿಗೆ ಪರಿಹಾರ. ಅಂತಹ ಗುರು ಸ್ಮರಣೆ ನಿತ್ಯ ಕ್ಷಣಕಾಲವಾದರೂ ಮಾಡಿ ಆ ದಿನವನ್ನು ಸಾರ್ಥಕವನ್ನಾಗಿ ಮಾಡಿಕೊಂಡವರು ಹಲವರು‌. ಅದನ್ನು ಅನುಭವಿಸಿಯೇ ನಿತ್ಯದಲ್ಲೂ ಗುರುಸ್ಮರಣೆ ಮಾಡುವವರು ಅನೇಕರು. ಅಂತೆಯೇ *ಗುರು ಸ್ಮರಣೆಯಿಂದ ಆರಂಭವಾದ ಕಾರ್ಯ ಗುರು ಸಮರ್ಪಣಾಂತವಾದರೆ, ಆ ಕಾರ್ಯ  ಅತ್ಯಂತ ಯಶಸ್ವೀ ಕಾರ್ಯ* ಎಂದೇ ನಂಬಿದವರು ಅವರೆಲ್ಲರು.

*ಬಯಸದೇ ಬಂದ ಭಾಗ್ಯ*

ಈ ವಿಕಾರಿ ನಾಮ ಸಂವತ್ಸರದ ಪಕ್ಷಮಾಸದ ಕೊನೆಯ ನಾಲ್ಕು ದಿನಗಳ ಈ ಭಾಗ್ಯ ಅಹೋಭಾಗ್ಯ. ನಿತ್ಯ ಏದ್ದಾಕ್ಷಣದಿಂದ ಆರಂಭಿಸಿ ನಿತ್ಯವೂ ಹದಿನೆಂಟು ಗಂಟೆಗಳ ಕಾಲ ಅನೇಕ ಹಿರಿಯರ ಸಂಗವದಲ್ಲಿ, ನಮ್ಮ ಸ್ವರೂಪೋದ್ದಾರಕ ಗುರುಗಳ ಸನ್ಮುಖದಲ್ಲಿ *ಗುರು ಸ್ಮರಣೆ, ಗುರುಗಳ ನಾನಾವಿಧ ಗುಣಗಳು, ಉದ್ದೇಶ್ಯಗಳು, ಆದರ್ಶಗಳು, ನೀತಿಗಳು, ಗುರುಗಳ ವ್ಯಾಪಕ ಹಾಗೂ ಅಳ ಜ್ಙಾನ, ದೃಢಭಕ್ತಿ, ವ್ಯಾಪಕ ಸೂಕ್ಷ್ಮ ಧರ್ಮಾಚರಣೆ, ದೇವ ಗುರು ದೇವತಾ ಶಾಸ್ತ್ರಗಳಲ್ಲಿಯ ನಿಷ್ಠೆ, ಕಳಕಳಿ, ಪಾರದರ್ಶಕತೆ, ದಾನ, ಸುನೀತಿ, ವೈಭವ, ವಿದ್ಯಾರ್ಥಿ ವಾತ್ಸಲ್ಯ, ಪೋಷಣೆ* ಇತ್ಯಾದಿ ಇತ್ಯಾದಿ  ನೂರಾರು ಗುಣಗಳ ಕ್ಷಣ ಬಿಡದೆ ಮೆಲಕು ಹಾಕಿದ ಈ ದಿನಗಳು ಜೀವನದ ಸಾರ್ಥಕ ದಿನಗಳು 
ಎಂದು ಖಂಡಿತವಾಗಿಯೂ ಹೇಳಬಹುದು.

*ಗುರುಸ್ಮರಣೆಯಿಂದ ಆಪತ್ತು ಪರಿಹಾರ*

ಆಪತ್ತುಗಳ ಸುಳಿಯನ್ನೇ ಮನೆ ಮಾಡಿಕೊಂಡವರು ನಾವು. ಅವುಗಳಿಂದ ಹೊರ ತರುವವ ನಾಳೆಯಿಂದ ಅರಾಧ್ಯ ದೈವ ಶ್ರೀನಿವಾಸ. ಆ ಶ್ರೀನಿವಾಸನ ಕರುಣೆ ಅಗಲು ಬೇಕು ಗುರು ಸ್ಮರಣೆ. ಅಂತೆಯೇ "ಗುರುಃಸ್ಮೃತಿಃ ಸರ್ವ ವಿಪದ್ವಿಮೋಕ್ಷಿಣೀ" ಎಂದಿತು ಶಾಸ್ತ್ರ. 

ಗುರು ಸ್ಮರಣೆ ಒಂದಂತೂ ಭರವಸೆ ಮೂಡಿಸದೆ  ಇರದು. ಮುಂದೆ ಬರುವ ಆಪತ್ತುಗಳೆಲ್ಲವನ್ನೂ ನಿನ್ನೆಯೇ ಅಂದರೆ ಸ್ಮರಿಸಿದ ಕ್ಷಣದಲ್ಲಿಯೇ ಪರಿಹಾರ ಮಾಡಿಬಿಟ್ಟಿರುತ್ತದೆ. ಜೊತೆಗೆ ಮುಂದೆ ಸುದಿನಗಳೆ ಬರುತ್ತವೆ ಎಂದೂ ತಿಳಿಸುತ್ತದೆ. ಈ ಅದ್ಭುತ ಕಾರ್ಯ ಮಾಡಿರುವದು ಆ ಕ್ಷಣ ಕ್ಷಣಗಳ ದೈವ. ದೈವದಲ್ಲಿ ಒಂದೆ ಪ್ರಾರ್ಥನೆ *ನೀ ಚಂಚಲನೇ   ಆಗಿರು, ತರುವ ಕ್ಷಣಗಳು ಮಾತ್ರ ಉತ್ತಮೋತ್ತಮ ಕ್ಷಣಗಳನ್ನೇ ಒದಗಿಸು - ಅವುಗಳಿಂದ ಉತ್ತಮ ದಿನಗಳೆ ನಮಗೆ ಎದುರಾಗಿರಬೇಕು ? ಮಹಾಫಲ ಶಿಗುವ ಮಾರ್ಗದಲ್ಲಿಯೇ ಮುಂದಡಿ ಇಡುವಂತಾಗಿರಬೇಕು* ಎಂದು. ಈ ತರಹದ ವೈಭವದ ದಿನಗಳನ್ನು ಮೆಲಿಂದ ಮೇಲೆ ಒದಗಿಸಿಕೊಡುತ್ತೀಯಾ.......

*✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*