*ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ*
 
         *ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ*     ನಿರಂತರ ಉಗ್ರ ತಪಸ್ಸನ್ನು ಮಾಡುವ ಮಹಾತಪಸ್ವಿಗಳ ನಿರಂತರ ಸಾಧನೆಯ ಫಲವೇನಿದೆ, ಆ ಫಲ ಅನೇಕ ಮಡಿ ಹೆಚ್ಚಿನ ಫಲ ಶ್ರೀಮನ್ಯಾಯಸುಧಾಗ್ರಂಥದ  ಒಂದು ವಾಕ್ಯವನ್ನು ಯಥಾರ್ಥವಾಗಿ, ಗುರುಮುಖದಿಂದ ತಿಳಿಯುವದರಿಂದ ಬರುತ್ತದೆ ಎಂದು *ವಿಷ್ಣುತೀರ್ಥರು* ಕೊಂಡಾಡುತ್ತಾರೆ. ಒಂಒಂದು ವಾಕ್ಯಗಳಲ್ಲಿಯೂ ಅನೇಕಾರ್ಥಗಳು ಒಳಗೊಂಡಿದೆ ಶ್ರೀಮನ್ಯಾಯಸುಧಾ ಎಂದು ರಾಘವೇಂದ್ರಪ್ರಭುಗಳು ಕೊಂಡಾಡುತ್ತಾರೆ. ಅಂತೆಯೇ ಅಂದಿನಿಂದ ಇಂದನವರೆಗೂ, ಮುಂದೆಂದೆಯೂ  ಜೀವಮಾನದ ಸಾಧನೆ ಎಂದರೆ *ಶ್ರೀಮನ್ಯಾಯಸುಧಾ* ಅಧ್ಯಯನ ಅಧ್ಯಾಪನ ಪರೀಕ್ಷೆ ಅನುವಾದ ಇವುಗಳೇ ಸಾಧನೆ ಎಂದಾಗಿದೆ.      ಶ್ರೀಸತ್ಯಧ್ಯಾನವಿದ್ಯಾಪೀಠದ ಉಪಕುಲಪತಿಗಳಾದ *ಪಂ. ವಿಶ್ವಪ್ರಜ್ಙಾಚಾರ್ಯ ಮಾಹಲೀ* ಇವರು ನೆರೆವೇರಿಸುತ್ತಿರುವ ಈ ಭವ್ಯ ಮಂಗಳ ಮಹೋತ್ಸವದಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ನೋಡುವದೇ ಒಂದದ್ಭುತ. ಆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಪರಿಶ್ರಮ, ಗುರುಗಳ ಪಾಠಕ್ರಮ, ಆ ವಿದ್ಯಾರ್ಥಿಗಳ ದೀಕ್ಷೆ, ಗುರುಭಕ್ತಿ ಗುಋವನುಗ್ರಹದ ಲಾಭ, ಶ್ರೀಗಳವರ ಪ್ರೋತ್ಸಾಹ ಹಾಗೂ ಅನುಗ್ರಹ ಇವೆಲ್ಲವೂ ಕ್ಷಣ ಕ್ಷಣಕ್ಕೂ ಎದ್ದು ಕಾಣುತ್ತದೆ.      *ವಿರಾಟ್ ವಿಶ್ವ*     ಜಿಜ್ಙಾಸಾಧಿಕರಣ ಪ್ರಕೃತ್ಯಧಿಕರಣ ಹಾಗೂ ವೈಶೇಶಿಕಾಧಿಕರಣ ಈ ಮೂರು ಅಧಿಕರಣದಲ್ಲಿ ಹೇಗೆ ಕೇಳಿದರೂ, ಎಲ್ಲಿ ಕೇಳಿದರೂ, ಎಷ್ಟು ಜನ ಕೇಳಿದರೂ ತಡಬಡಿಸದೇ ಕನಿಷ್ಠ ನೂರು ಪಂಡಿತರುಗಳಿಂತಲ...
 
 
 
 
