*ಶ್ರೀಮನ್ಯಾಸುಧಾ ಮಂಗಳ ಮಹೋತ್ಸವ*




*ಶ್ರೀಮನ್ಯಾಸುಧಾ ಮಂಗಳ ಮಹೋತ್ಸವ*

ಸತ್ಯಧ್ಯಾನ ವಿದ್ಯಾಪೀಠ, ಮುಂಬಯಿ.

ಅನಾದಿ ಸತ್ಸಂಪ್ರದಾಯ ಪ್ರಂಪರಾಪ್ರಾಪ್ತ ಶ್ರೀಮದ್ವೈಷ್ಣವ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯ, ಶ್ರೀಮದಾನಂದತೀರ್ಥರಿಂದ ರಚಿತವಾದ *ಶ್ರೀಮದನುವ್ಯಾಖ್ಯಾನ* ಹಾಗೂ  ಶ್ರೀಮಟ್ಟೀಕೃತ್ಪಾದರಿಂದ ರಚಿತವಾದ *ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ*  ನಿಮಿತ್ತ ಸತ್ಯಧ್ಯಾನ ವಿದ್ಯಾಪೀಠದ ವಿದ್ಯಾರ್ಥಿಗಳ *ಅನುವಾದ ಹಾಗೂ ಪರೀಕ್ಷೆಗಳು*  ನಿನ್ನೆಯಿಂದ ಅತ್ಯಂತ ವೈಭವದಿಂದ ಆರಭವಾಗಿದೆ. 

*ಈ ಮುನಿ ಒಲಿದರೆ ಅವನೇ ಭಾಗ್ಯವಂತ* 

ಯಾವ ಗ್ರಂಥದ ಅಧ್ಯಯ ಸರ್ವವಿಧ ಮಂಗಳಕ್ಕೆ ಕಾರಣವಾಗಿದೆಯೋ ಅಂತಹ ಸರ್ವೋತ್ತಮ ಗ್ರಂಥ ಶ್ರೀಮನ್ಯಾಸುಧಾ ಗ್ರಂಥ. ಜಯಮುನಿಗಳು ಒಲಿಯುವದೇ ಶ್ರೀಮನ್ಯಾಸುಧಾ ಅಧ್ಯಯನದಿಂದ. ಶ್ರೀಮನ್ಯಾಯ ಸುಧಾಗ್ರಂಥವನ್ನು ಗುರುಮುಖದಿಂದ ಅಧ್ಯಯನ ಮಾಡಿದಾಗಲೇ ಶ್ರೀಮಜ್ಜಯತೀರ್ಥರ ಅನುಗ್ರಹವಾಗುವದು. 

*ಜೀವನದ ಮಹೋದ್ಯಶ್ಯವೇ ಸುಧಾಮಂಗಳ*

ಮಧ್ವಾಚಾರ್ಯರ ಭವ್ಯ ದಿವ್ಯ ಪರಂಪರೆಯಲ್ಕಿ ಬಂದ, ಅಲೌಕಿಕ ಸಾಧನೆಯ ಹೆಬ್ಬಯಕೆ ಇರುವ, ಗುರು ದೇವತಾ ದೇವರನ್ನು ಒಲಿಸಿಕೊಳ್ಳುವ ಅಪೇಕ್ಷೆ ಇರುವ, ಪರಿಶುದ್ಧಜ್ಙಾನದ ಹಪಹಪಿ ಇರುವ ಯಾವೊಬ್ಬ ಸಾಧಕನ  ಜೀವನದ ಮಹೋದ್ಯೇಶ್ಯ  ಎಂದರೆ *ಶ್ರೀಮನ್ಯಾಸುಧಾ ಅಧ್ಯಯನ.*

*ವಿದ್ಯಾರ್ಥಿಗಳು \ ಪರಿಶ್ರಮ*

ಶ್ರೀಮನ್ಯಾಯಸುಧಾ  ಅಧ್ಯಯನಕ್ಕಾಗಿ ಪಾಲಕರ ಪರಿತ್ಯಾಗ, ಸರ್ವವಿಧ ಭೋಗಗಳಿಂದ ಅಂತರ ಕಾಯ್ದುಕೊಂಡು, ಲೌಕಿಕ ಯಾವೆಲ್ಲ ಹವ್ಯಾಸಗಳಿಗೂ ತಿಲಾಂಜಲಿ ಇಟ್ಟು, ನಿರಂತರ ಗುರು ದೇವತಾ ಶುಶ್ರೂಶೆ ಹಾಗೂ ಸೇವೆ ಜೊತೆಗೆ ಶಾಸ್ತ್ರಾಧ್ಯನದಲ್ಲಿರುವ ಆದರ ಹಾಗೂ ನಿಷ್ಠೆ, ಜೊತೆಗೆ ಸಮಗ್ರ ಸುಧಾ ಗ್ರಂಥದ ಅಧ್ಯಯನದಿಂದಲೇ ನನ್ನ ಉದ್ಧಾರ, ನನಗೆ ಸರ್ವಸ್ವ ಎಂಬ ವಿಶ್ವಾಸ ಭರವಸೆಗಳು,  ನಿರಂತರ  ಹನ್ಬೆರಡು ಜದಿನಾಲಕು  ವರ್ಷಗಳವರೆಗೆ ಅಖಂಡಿತವಾಗಿ ಅಧ್ಯಯನ ಮಾಡಿದಾಗ *ಒಲೆದು ಬರುವ ಗ್ರಂಥ - ಶ್ರೀಮನ್ಯಾಯಸುಧಾ ಗ್ರಂಥ.*  

*ಪಂಡಿತರುಗಳು \ ವಿದ್ಯಾರ್ಥಿಗಳು*

 ಜೀವನದ ಎಲ್ಲ ಸಮಯವನ್ನೂ ಅಧ್ಯಯನದಲ್ಲಿ ಮೀಸಲಿಟ್ಟು, ಇಪ್ಪತ್ತು, ಮೂವತ್ತು, ನಾಲವತ್ತು ವರ್ಷಗಳ ನಿರಂತರ ಪರಿಶ್ರಮದಿಂದ  ಶ್ರೀಮನ್ಯಾಸುಧಾಗ್ರಂಥದಲ್ಲಿ ನಿಷ್ಣಾತರಾದ ಮಹಾ ಮಹಾ ವಿದ್ವಾಸರುಗಳು,  ಕರ್ಣನ ಬಾಣಗಳಂತೆ ನಿರಂತರ ಪ್ರಶ್ನೆಗಳ ಸುರಿಮಳೆಯನ್ನು ಸುರಿಸಿದರೂ, ಆ ಎಲ್ಲ ಪ್ರಶ್ನೆಗಳಿಗೆ ಸಂಜಸವಾದ, ಸಮರ್ಪಕವಾದ, ಪರೀಕ್ಷಕರಾದ ಪಂಡಿತರು ಹಾಗೂ ಶ್ರೀಶ್ರೀಗಳವರು ತಲೆತೂಗುವಂತೆ ಅತ್ಯಂತ ಸಮರ್ಥರೀತಿಯಿಂದ ಅರ್ಜುನನ ಬಾಣಗಳಂತೆ  ಉತ್ತರಿಸುವ ಕೌಶಲ ವಿದ್ಯಾರ್ಥಿಯದಾಗಿರುತ್ತದೆ. ಈ ಪ್ರಶ್ನೋತ್ತರವನ್ನು ನೋಡಿದರೆ ಸಾಮಾನ್ಯರಾದ ನಮ್ಮೆಲ್ಕರ ಕಣ್ಣಾಲಿಗಳನ್ನು ತಡಿಯಲೇ ಆಗುವದಿಲ್ಲ. ಆನಂದಾಶ್ರು ಸುರಿತಾನೇ ಇರುತ್ತದೆ.....

*ತ್ರಿವಿಕ್ರಮನ ವಿಕ್ರಮ*

ನಿನ್ನೆಯ ದಿನ ಮೊದಲಿಗೆ *ತ್ರಿವಿಕ್ರಮ, ಶ್ರೀಧರ ಮಿಟ್ಟಿ, ಹಾಗೂ ವೆಂಕಟೇಶ* ಎಂಬ  ವಿದ್ಯಾರ್ಥಿಗಳು, ಶ್ರೀಮನ್ಯಾಸುಧಾ ಗ್ರಂಥದ ಅತ್ಯಂತ ಪ್ರಧಾನ ಘಟ್ಟವಾದ  *ಜಿಜ್ಙಾಸಾಧಿಕರಣ ಮೊದಲಾದ ಮೂರು ಅಧಿಕರಣಗಳ ಹಾಗೂ ಚತುರ್ಥಾಧ್ಯಾಯದ*  ಅನುವಾದ ಪರೀಕ್ಷೆಯಿಂದ  ತನ್ನ ವೈಭವದ  ವಿಕ್ರಮವನ್ನು  ತೋರಿಸಿದಾಗ, ಮುಂದೆ ಬರುವ ಒಂದೊಂದು ವಿದ್ಯಾರ್ಥಿಯ ವಿಕ್ರಮ ಇನ್ಬೆಷ್ಟು  ಇರಬಹುದು ಎಂದು ನೋಡಲು ಉತ್ಸಾಹ ಉಕ್ಕಿ ಬರುತಿದೆ.   ಪ್ರಕೃತ  *ತತ್ವಜ್ಙ* ಎಂಬ ವಿದ್ಯಾರ್ಥಿಯ ಪರಿಕ್ಷೆ ಅನುವಾದ ಆರಂಭವಾಗಿದೆ, ನಾನು ಹೊರಡಬೇಕಿದೆ, ಹಾಗಾಗಿ ಈ ಲೇಖನ ಇಲ್ಲಿಗೆ ಮುಗಿಸಿ, ಮತ್ತೆ ಮುಂದಿನ ವಿಷಯವನ್ನು ನಾಳೆ ತಿಳಿಯೋಣ....

*✍🏽✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*