ಸಮರ್ಪಣೆಯಿಂದ ಶುದ್ಧಿ....
*ಸಮರ್ಪಣೆಯಿಂದ ಶುದ್ಧಿ....*
*ದೇಹೇಂದ್ರಿಯಃ ಪ್ರಾಣ ಮನಾಂಸಿ ಚೇತನೈಃ
ಸಹೈವ ತಸ್ಮೈ ಅತಿಸೃಜ್ಯ ನೇಮುಃ.
ತ್ವದೀಯಮೇತನ್ನಿಖಿಲಂ ವಯಂ ಚ
ನ ತ್ವಸ್ಮದೀಯಂ ಕ್ವ ಚ ಕಿಂಚನೇಶ.
ಸ್ವತಂತ್ರ ಏಕೋಸಿ ನ ಕಶ್ಚಿದನ್ಯಃ
ಸರ್ವತ್ರಪೂರ್ಣೋಸಿ ಸದೇತಿ ಹೃಷ್ಟಾಃ..
ಅನ್ನ ವಸ್ತ್ರ ವಸತಿ ಮೊದಲಾದ ಎಲ್ಲ ಪದಾರ್ಥ ಗಳನ್ನು ದೇವರಿಗೆ ಸಮರ್ಪಿಸಿ ನಾವು ಬಳಿಸುವದು ಒಂದು ಪದ್ಧತಿ, ಈ ತರಹದ ಸಂಪ್ರದಾಯವನ್ನು ನಾವು ಕಾಣುತ್ತೇವೆ. ಅನುಸರಿಸುತ್ತಾ ಬಂದಿದ್ದೇವೆ.
ಯಾಕೆ ದೇವರಿಗೆ ಸಮರ್ಪಿಸುವದು.. ??
ಪದಾರ್ಥಗಳ ಶುದ್ಧಿ ಒಂದೆಡೆಯಾದರೆ, ಸಮರ್ಪಿಸಿದ ಪದಾರ್ಥ ನೂರ್ಮಡಿಯಾಗಿ ಬರಲಿ ಎಂಬ ಸ್ವಾರ್ಥ ಮತ್ತೊಂದೆಡೆ, ದೇವರೇ ಕೊಟ್ಟದ್ದನ್ನು, ದೇವರಿಗೆ ಸಮರ್ಪಿಸುವದರಿಂದ, ಆ ದೇವರಿಗೇ ತುಂಬ ಪ್ರೀತಿ. ಹೀಗೆ ಅನೇಕ ಕಾರಣಗಳಿಂದ ಸಮರ್ಪಿಸುವದು ಅತ್ಯಂತ ಸೂಕ್ತ. ಇದರ ತರುವಾಯ ಮತ್ತೊಂದು ಕಾರಣ "ನಾವು ದಾಸರು, ನೀನು ಸ್ವಾಮಿ" ಎಂದೂ ತೋರಿಸಿಕೊಳ್ಳುವದೂ ಸೇರಿದೆ ಸಮರ್ಪಣೆಯಲ್ಲಿ. ಹಾಗಾಗಿ ಎಲ್ಲವನ್ನೂ ಸಮರ್ಪಿಸಿಯೆ ಭೋಗಿಸುತ್ತೇವೆ.
ಯಾರಿಗೂ ಏನೂ ಸಮರ್ಪಿಸದ, ಕೇವಲ ಮೀಸಲು ಆದ ಪದಾರ್ಥ ಗಳನ್ನು ಸೇವಿಸುವವ ದೇವರು. ದೇವರಂತೆಯೇ ನಾವೂ ಯಾರಿಗೂ ಸಮರ್ಪಿಸದೆ ಬೋಗಿಸಿದರೆ ನಾವೂ ದೇವರಂತೆಯೇ, ನನಗೂ ದೆವರಿಗೂ ಬಹಳೇನು ವ್ಯತ್ಯಾಸವಿಲ್ಲ ಎನ್ನುವದನ್ನು ನೇರ ಹೇಳದಿದ್ದರೂ indirect ಆಗಿ ಹೇಳಿದಂತೆಯೇ. ಆದ್ದರಿಂದ ದೆವರುಗೆ ನಿವೆದಿಸಿಯೇ ಭೋಗಿಸುವದು.
ಯಾರಿಗೂ ನೈವೇದ್ಯ ಮಾಡದ ಅನ್ನವನ್ನು ಭೋಗಿಸುವವ ದೇವರು, ಹಾಗೆಯೇ ನಾವೂ ದೇವರಿಗೆ ನೈವೇದ್ಯ ಮಾಡದೇ, ಯಾರಿಗೂ ನಿವೇದಿಸದೇ ಅನ್ನವನ್ನು ಭೋಗಿಸಿದರೆ ದೇವರಂತೆಯೇ ನಾನು ಎಂದು ಹೇಳಿದಂತೆಯೇ ಸರಿ... ನಾನು ದೇವರಂತೆ ದೇವರಿಗೆ ಸಮನಲ್ಲ, ದೇವರ ಭೃತ್ಯ ದಾಸ ಎಂದು ಸಾರಿಕೊಳ್ಳಬೇಕಿದ್ದರೆ ನೈವೇದ್ಯ ಮಾಡಿಯೇ ಊಟ ಮಾಡುವದು ಭೋಗ ಮಾಡುವದು ಅತ್ಯಂತ ಪರಮ ಸೂಕ್ತ. ಕೇವಲ ಊಟ ಮಾತ್ರವಲ್ಲ, ವಸ್ತ್ರ, ವಸತಿ, ಧನ, ಕನಕ, ಮಕ್ಕಳು ಮಡದಿ ಎಲ್ಲವನ್ನೂ ಸಮರ್ಪಿಸಿಯೇ ಭೋಗಿಸುವದು.
ಅರ್ಪಿಸಿದ ಪದಾರ್ಥಗಳ ಶುದ್ಧಿಗೋಸ್ಕರ ಇರಬೇಕು ಪ್ರೀತಿ...
ದೇವರಿಗೆ ಏನು ಪದಾರ್ಥಗಳನ್ನು ಸಮರ್ಪಿಸುತ್ತೇವೆಯೋ ಆ ಎಲ್ಲ ಪದಾರ್ಥಗಳೂ ಶುದ್ಧವಾಗಿ ಉಳಿಯುತ್ತವೆ, ಆ ಎಲ್ಲ ಪದಾರ್ಥಗಳೂ ಮಹತ್ವವನ್ನು ಪಡೆದುಕೊಳ್ಳುತ್ತವೆ. ಆ ಪದಾರ್ಥ ಗಳನ್ನು ದೇವರೂ ಇನ್ನೂ ಶುದ್ಧಗೊಳಿಸುತ್ತಾನೆ.
ಪ್ರೀತಿ ಇದೆ ಎಂದಾದರೆ ಸಮರ್ಪಿಸುವ ಪದಾರ್ಥಗಳಲ್ಲಿ ಶುದ್ಧತೆ Quality ಇರತ್ತೆ. ಶುದ್ಧವಾದ refined ಪದಾರ್ಥ ಗಳನ್ನೇ ಸಮರ್ಪಿಸಿದಾಗ, ದೇವರು ಆ ಪದಾರ್ಥವನ್ನು ಪ್ರೀತಿಯಿಂದ ಸ್ವೀಕರಿಸಿ, ತನ್ನ ಕುಡಿನೋಟದಿಂದಲೇ ಇನ್ನೂ refined ಮಾಡಿ, ಅನಂತ ಮಡಿ ಮಾಡಿ ನಮಗೇ ಕೊಡುವ. ಹಾಗಾಗಿ ಪದಾರ್ಥಗಳನ್ನು ದೇವರಿಗೆ ಸಮರ್ಪಿಸಿಯೇ ಭೋಗಿಸಬೇಕು.
ನಾವು ಭೋಗಿಸುವದನ್ನು ದೇವರಿಗೆ ಸಮರ್ಪಿಸಬೇಕಾ.. ??
ನಾವು ಭೋಗಿಸುವದನ್ನು ದೇವರಿಗೆ ಸಮರ್ಪಿಸಬೇಕು ಎನ್ನುವದಕ್ಕಿಂತಲೂ, ದೇವರಿಗೆ ಸಮರ್ಪಿಸಿರುವದೇ ನಾವು ಭೋಗಿಸುವದು ಏನಿದೆ ಇದು ಉತ್ತಮ ಪಥ.
ನಾನು jeans ಧರಿಸುತ್ತೇನೆ ಅದನ್ನು ದೇವರಿಗೆ ಸಮರ್ಪಿಸುವದು ಅಲ್ಲ. ನಾನು ಈರುಳ್ಳಿ ತಿನ್ನುವೆ ಅದನ್ನು ಸಮರ್ಪಿಸುವದು ಅಲ್ಲ. ನಾನು nonweg ತಿಂತೆನೆ ಅದನ್ನು ಸಮರಗಪಿಸುವದು ಅಲ್ಲವೇ ಅಲ್ಲ. ಹಾಗಾದರೆ ದೇವರು ಏನನ್ನು ತಿನ್ನುತ್ತಾನೆ, ಯಾವದು ಶಾಸ್ತ್ರ ವಿಹಿತ, ಯಾವದರಿಂದ ದೇವರಿಗೆ ಪ್ರೀತಿ ಇದೆ ಅದನ್ನು ಸಮರ್ಪಿಸಿ ನಾವು ಅದನ್ನೇ ಭೋಗಿಸುವದು ಅತ್ಯಂತ ಸೂಕ್ತ. ದೇವರಿಗೆ ನೈವೇದ್ಯ ನಾಡಿದ್ದು ಒಂದು ನಾ ತಿನ್ನುವದೂ ಮತ್ತೊಂದು ಆದರೆ ಅದರಿಂದ ಹೊಟ್ಟೆ ತುಂಬೀತು. ಆದರೆ ಅದು ದಾಸ್ಯಭಾವವನನು ಪ್ರತಿಬಿಂಬಿಸುವದಿಲ್ಲ.
ನನ್ನದು ಎಂದು ಏನೆಲ್ಲ ಇದೆ, ಆ ಎಲ್ಲವೂ ದೇವರದ್ದೇ ಹಾಗಾಗಿ ಅದೆಲ್ಲವನ್ನೂ ನಿತ್ಯವೂ ಸಮರ್ಪಿಸಬಹುದು. *ದೇಹ, ಇಂದ್ರಿಯ, ಪ್ರಾಣ, ಮನಸ್ಸು, ಜೀವ, ಹೆಂಡತಿ, ಮಕ್ಕಳು, ತಂದೆ, ತಾಯಿ, ಗುರು, ಧನ, ಕನಕ, ಭೂಮಿ, ಮನೆ, ಮಠ, ಸಹನೆ ಭಕ್ತಿ ಮೊದಲಾದ ಗುಣಗಳು, ಕೀರ್ತಿ ಯಶಸ್ಸು ಪುಣ್ಯ* ಹೀಗೆ ಎಲ್ಲವನ್ನೂ ನಿತ್ಯ ಅನುಕ್ಷಣ ಸಮರ್ಪಿಸಬೇಕು. ಹಿಂದೆ ಮಾಡಿದ, ಇಂದು ಮಾಡಿದ, ಮುಂದೆ ಮಾಡುವ ಎಲ್ಲವನ್ನೂ ಸಮರ್ಪಿಸುವದೇ.
ಸಮರ್ಪಿತ ಎಲ್ಲ ಪದಾರ್ಥಗಳೂ ಯಾವಾಗ ದೇವರದು ಆದವೋ ಆ ಕ್ಷಣದಿಂದಲೇ ಆ ಪದಾರ್ಥಗಳಿಗೆ ಪಾವಿತ್ರ್ಯತೆ, ಶುದ್ಧತೆ, ಸಾರ್ಥಕತೆ ಒದಗಿ ಬರತ್ತೆ. ಆ ಪದಾರ್ಥಗಳನ್ಬೇ ನಮಗೆ ಅನಂತ ಮಾಡಿ ಮಾಡಿ ಕೊಡುತ್ತಾನೆ ಎಂದರೆ "ಅನಂತಪಟ್ಟು ಶುದ್ಧವಾದ, ಸಾರ್ಥಕವಾದ, ಪವಿತ್ರವಾದ ಪದಾರ್ಥ ಗಳೇ" ನಮ್ಮವು ಆಗುತ್ತವೆ.
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುಧ್ಯಾತ್ಮನಾ ವಾ ಅನುಸೃತಃ ಸ್ವಭಾವಮ್.
ಕರೋತಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಾಯೆತಿ ಸಮರ್ಪಯೇತ್ ತತ್..
ಹೀಗೆ ಇಂದಿನಿಂದ ನಾವು ಏನಕ್ಕೆ ಎಲ್ಲವನ್ನೂ ಸಮರ್ಪಿಸಬಾರದು.... ??? ಸಮರ್ಪಿಸುವ ವಿಚಾರವಂತೂ ಮಾಡೋಣ...
*✍🏽✍🏽✍🏽ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ ಸಿರವಾರ.
Comments