*ಪಡೆಯಲು ಬೇಕು ಚಡಪಡಿಕೆ-- ಪ್ರಯತ್ನಗಳು*
*ಪಡೆಯಲು ಬೇಕು ಚಡಪಡಿಕೆ-- ಪ್ರಯತ್ನಗಳು*
ಒಂದು ವಸ್ತುವನ್ನು ಪಡೆಯುವ ಇಚ್ಛೆ ಇದ್ದರೆ ಆ ವಸ್ತು ಸಿಗುವವರೆಗೂ ಪ್ರಯತ್ನವಿರಬೇಕು, ಸಿಗದಾದಾಗ ಚಡಪಡಿಸಬೇಕು. ಈ ಎರಡು ಭಾವಗಳು ಇದ್ದಾಗ ವಸ್ತು ಸಿಗುವ ಸಂಭವ ಹೆಚ್ಚು.
ಧರ್ಮದ ಫಲ ಉಣ್ಣುವ ಬಯಕೆ ಇರುವ ನಮಗೆ, ಧರ್ಮಕಾರ್ಯದಲ್ಲಿ ಹಾಗೂ ಫಲಸಿಗುವ ವರೆಗೆ ನಿರಂತರ ಪ್ರಯತ್ನ ಖಂಡಿತ ಬೇಕು. ಒಂದಿನ ಧರ್ಮಲೋಪವಾದಾಗ ಅಷ್ಟೇ ಚಡಪಡಿಕೆಯೂ ಇರಬೇಕು. .
ಗುರುಗಳು ಒಂದೆಡೆ ಧ್ಯಾನಾಸಕ್ತರಾಗಿ ಕುಳಿತಿರುತ್ತಾರೆ ಆ ಪ್ರಸಂಗದಲ್ಲಿ ಶಿಷ್ಯ ಬಂದು ವಿನಂತಿಸುತ್ತಾನೆ, "ನಾನು ದೇವರನ್ನು ಕಾಣಬೇಕು. ದರ್ಶನ ಮಾಡಿಸುತ್ತೀರಾ" ಎಂದು.
ಗುರುಗಳು ಹೇಳುತ್ತಾರೆ ಖಂಡಿತ ಮಾಡಿಸುತ್ತೇನೆ. ನಾಳೆಗೆ ಬಾ ಎಂದು ಹೇಳುತ್ತಾರೆ. ಶಿಷ್ಯ ನಾಳೆಗೆ ಬಂದ. ಗುರುಗಳು ನಾಡದ್ದು ಬಾ ಎಂದುರು. ಬಂದ ಶಿಷ್ಯ.. ಐದು ದಿನಬಿಟ್ಟು ಬಾ ಎಂದರು. ಬಂದ ಪುಣ್ಯಾತ್ಮ. ಹತ್ತು ಬಿಟ್ಟು ಬಾ ದರ್ಶನ ಮಾಡಿಸುತ್ತೇನೆ ಎಂದರು. ಹತ್ತು ದಿನದ ನಂತರ ಬಂದೇ ಬಿಟ್ಟ. ಗುರುಗಳು ತಿಂಗಳು ಬಿಟ್ಟು ಬಾ ಎಂದರು... ರೋಸಿ ಹೋದ ಶಿಷ್ಯ ಪುನಹ ಬಾರಲೇ ಇಲ್ಲ.
ಗುರುಗಳು.. ) ಮೂರು ತಿಂಗಳ ತರುವಾಯ ಶಿಷ್ಯನಿದ್ದೆಡೆಗೆ ಧಾವಿಸಿದ ಗುರುಗಳು ಶಿಷ್ಯನಿಗೆ ಕೇಳುತ್ತಾರೆ.. "ಏನೋ ಪುನಹ ಬಾರಲೇ ಇಲ್ಲ. ದೇವರು ದರ್ಶನ ಕೊಟ್ಟೇಬಿಟ್ಟನೋ ಏನು.. ??" ಎಂದು.
ಶಿಷ್ಯ..) ಒಂದು ಸಣ್ಣಕೆಲಸ, "ದೇವರ ದರ್ಶನ ಮಾಡಿಸ್ರಿ" ಎಂದರೆ ಇಷ್ಟ ಓಡಾಡಿಸಿದ್ರಿ. ನೀವು ಬೇಡ ನಿಮ್ಮ ದೇವರೂ ಬೇಡ ಎಂದು ಅರಾಮಿದ್ದೀನಿ ನೋಡ್ರಿ ಎಂದು.
ಗುರುಗಳು.. ) "ಹಾ ಮಗನೇ" ಇಂತಹ ಭಾವನೇ ಮೂಡಿರುವದಕ್ಜೇ ನಿನಗೆ ದೇವರು ಸಿಕ್ಕು ಬರಲಿಲ್ಲ. ಮೂವತ್ತು ದಿನ, ಬಿಡದೇ ದಿನಕ್ಕೆ ಹತ್ತು ಗಂಟೆ ಪ್ರಯತ್ನ ಮಾಡಿದರೇನೆ ಕೊನೆಗೆ *ಹಣ* ಸಿಗುವದು. ಇಲ್ಲದಿದ್ದರೆ ಇಲ್ಲ. ಹೀಗಿದ್ದಾಗ ಎರಡು ಮೂರು ದಿನ ಬಂದು ಕೇಳಿದ ಮಾತ್ರಕ್ಕೆ ದೇವ ಸಿಗನು. ಸಿಗುವವರೆಗೂ ಪ್ರಯತ್ನಿಸು ಎಂದರು.
ಶಿಷ್ಯ..) ಗುರುಗಳೇ... !! ಹಾಗಾದರೆ ಏನು ಮಾಡಿದರೆ ದೇವರ ದರ್ಶನ ಆದೀತು.. ?? ಹೇಳಿ ಎಂದನು.
ಗುರು..) ಬಾ ದೇವರ ದರ್ಶನ ಮಾಡಿಸ್ತೀನಿ ಎಂದು ಶಿಷ್ಯನನ್ನು ಕರೆದುಕೊಂಡು ನದಿಗೆ ತೆರಳುತ್ತಾರೆ ಗುರುಗಳು. ಆ ನದಿಯಲ್ಕಿ ಅವನ ಕುತ್ತಿಗೆ ಹಿಡಿದು ನೀರಲ್ಲಿ ಮುಳುಗಿಸುತ್ತಾರೆ. ಒಂದೇ ಕ್ಷಣದಲ್ಲಿ ವಿಲಿವಿಲಿ ವದ್ಯಾಡಿ ಚಡಪಡಿಸಿ ಎದ್ದು ಜಿಗಿದು ಗುರುಗಳಿಗೆ ಬಯ್ಯಲು ಆರಂಭಿಸುತ್ತಾನೆ.
ಗುರುಗಳು...) ಅವನ ಅವಸ್ಥೆ ಕಂಡು ಹೇಳುತ್ತಾರೆ, ಶಿಷ್ಯ..!! *ಸಿಗಲೇ ಬೇಕಾದ ಉಸಿರು ಕ್ಷಣಕಾಲ ಸಿಗದಿದ್ದಾಗ ಏನು ಚಡಪಡಿಸಿದೀ ನೋಡು, ಆ ಚಡಪಡಿಕೆ ದೇವರು ಸಿಗದಿದ್ದಾಗ ಇದ್ದಿದ್ದರೆ ದೇವ ನಿನಗೆ ಸಿಕ್ಕು ಬರುತ್ತಿದ್ದ.*
ದೇವರು ಸಿಗುವವರೆಗೆ ಪ್ರಯತ್ನವೂ ಇಲ್ಲ. ದೇವರು ಸಿಗದಿದ್ದಾಗ ಚಡಪಡಿಕೆಯೂ ಇಲ್ಲ ಎಂದಾದಮೇಲೆ ನಿನಗೆ ಇನ್ಬೆಂದು ದೇವರು ಸಿಗುವದು ಸಾಧ್ಯವಿಲ್ಲ. ಅವನ ದರ್ಶನದ ಆಸೆಗೆ ತಿಲಾಂಜಲಿ ಇಡುವದೊಂದೇ ಉಳಿದಿರುವದು. ಎಂದು ಹೇಳಿದವರೇ ಹೊರಟುಹೋದರು ಗುರುಗಳು.
ಮುಂದಿನ ವಿಚಾರ ನಮ್ಮದು......
*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments