Posts

*ನಿಷ್ಕಲಷ ಪ್ರೀತಿಯೊಂದೇ ಅಭ್ಯುದಯದ ರಾಜಮಾರ್ಗ*

Image
*ನಿಷ್ಕಲಷ ಪ್ರೀತಿಯೊಂದೇ ಅಭ್ಯುದಯದ ರಾಜಮಾರ್ಗ* ಅಭ್ಯುದಯ ಎಲ್ಲರಿಗೂ ಬೇಕು. ಆದರೆ ನಿಷ್ಕಲ್ಮಷ ಪ್ರೀತಿ ಯಾರಿಗೂ ಬೇಡ. ಇದು ಇಂದಿನ ಅವಸ್ಥೆ. ಪ್ರೀತಿಯಿಲ್ಲದೆ ಅಭ್ಯುದಯ ಆಗದು. ಅಭ್ಯುದಯಕ್ಕೆ ಪ್ರೀತಿ ಸ್ನೇಹ ಭಕ್ತಿ ಇವುಗಳು ಅನಿವಾರ್ಯ.  *ಮಹಾಶಕ್ತಿಗಳ ನಡುವೆ ನಾನಿದ್ದೇನೆ* ನನ್ನಷ್ಟು ಸುಭದ್ರಸ್ಥಿತಿಯಲ್ಲಿ ಯಾರಿರಲಿಕ್ಕಿಲ್ಲ. ಸುಭದ್ರಸ್ಥಿಯನ್ನು ಹಾಳುಮಾಡಿಕೊಂಡತಹ ಮೂರ್ಖನೂ ಯಾರಿರಲಿಕ್ಕಿಲ್ಲ. *ಅಣುವಿಕಿಂತಲೂ ಅಣುವಾದ ದೇವ ಒಂದೆಡೆ ಇದ್ದಾನೆ, ಮಹತ್ತಿಗಿಂತಲೂ ಮಹಾನ್ ಆದ ಅದೇ ದೇವ ಮತ್ತೊಂದೆಡೆ ಇದ್ದಾನೆ- ಇವರೀರ್ವರ ಮಧ್ಯದಲ್ಲಿ ನಾನು ಇದ್ದರೂ ಇಲ್ಲದಂತೆ ಇದ್ದೇನೆ*  ತುಂಬ ವಿಚಿತ್ರ ಅನಿಸತ್ತೆ.  *ಹಿತೈಷಿ ಪ್ರಬಲ ಶಕ್ತಿಗಳು ಅಕ್ಕಪಕ್ಕದಲ್ಲಿ ಇರುವಾಗ ನಾನೇಕೆ ದುರ್ಬಲ* ಆ ಪ್ರಬಲಶಕ್ತಿಗಳನ್ನು ಪ್ರೀತಿಸದೇ ಇರುವದೇ ಎನ್ನ ದೌರ್ಬಲ್ಯಕ್ಕೆ ಕಾರಣ. "ಒಂದೆಡೆ ಅಂತರಾತ್ಮ. ಮತ್ತೊಂದೆಡೆ ಪರಮಾತ್ಮ" ಈಬ್ಬರನ್ನೂ ಪ್ರೀತಿಸದೇ ಇರುವದರಿಂದಲೇ ನನ್ನ ಅವಸ್ಥೆ ಆಚೆಯೂ ಇಲ್ಲ, ಈಚೆಯೂ ಇಲ್ಲ. ಅಂತರಪಿಶಾಚಿಯ ಅವಸ್ಥೆಯಾಗಿದೆ.  ನಾವು ದೇವರನ್ನು ಪ್ರೀತಿಸಿದರೂ ದೇವರು ನನ್ನನ್ನು ಪ್ರೀತಿಸಬೇಕು ಅಲ್ಲವೆ.. ದೇವರು ನನ್ನನ್ನು ಪ್ರೀತಿಸುವದೇ ಇಲ್ಲ... ನಾನೆಂದರೆ ಅವನಿಗೆ ತಾತ್ಸಾರ....  ದೇವರು ನನ್ನನ್ನು ಪ್ರೀತಿಸುವದಿಲ್ಲ ಎಂಬುವದು ಸಾಧ್ಯವೇ ಇಲ್ಲ. ದೇವರಲ್ಲಿ ಎನ್ನ ಬಗ್ಗೆ ಪ್ರೀತಿ ...

*ಧರ್ಮ ಬಿಡುವ ಅನೇಕ ಪ್ರಸಂಗಗಳು.....*

Image
*ಧರ್ಮ ಬಿಡುವ ಅನೇಕ ಪ್ರಸಂಗಗಳು.....*  ಜೀವನ ಜೀವನದ ಮೂಲಭೂತವಾದದ್ದು ಧರ್ಮ.  ಧರ್ಮ‌ವನ್ನು ರಕ್ಷಿಸಲೇಬೇಕು, ಧರ್ಮದಿಂದಲೇ ಪಡೆಯಬೇಕು. ಏನೆಲ್ಲ ಸಿಗುತ್ತಿದೆ ಧರ್ಮವಿರುವದರಿಂದ. ಏನೆಲ್ಲ ಸಿಗುತ್ತಿಲ್ಲ ಧರ್ಮ ಇಲ್ಲದಿರುವದರಿಂದ. ಹುಟ್ಟು ಸಾವು ಕೀರ್ತಿ ಅಪಕೀರ್ತಿ ಅನ್ನ ಉಪವಾಸ ಮನೆ ಮಂದಿರ ಆಸ್ತಿ ಆಂತಸ್ತು ದೇವರು ಜ್ಙಾನ ಭಕ್ತಿ ಮುಕ್ತಿ ಹೀಗೆ ಪಡೆದ, ಪಡೆಯಬಹುದಾದ ಎಲ್ಲವೂ ಧರ್ಮದಿಂದಲೇ. ಅಷ್ಟೆ ಅಲ್ಲ ಮಳೆ ಘಾಳಿ ಬಿಸಿಲು ಇವೆಲ್ಲವೂ ಕಾಲಕ್ಕೆ ತಕ್ಕ ಹಾಗೆ ಆಗುವದೂ ಧರ್ಮದಿಂದಲೇ. ಅಂತೆಯೇ ನಮ್ಮ ಜೀವನದಲ್ಲಿ ಧರ್ಮಕ್ಕೆ ಅಷ್ಟು ಪ್ರಾಶಸ್ತ್ಯ‌ . ಅಂತೆಯೇ ಶಾಸ್ತ್ರ *ಧರ್ಮಾದ್ಭವಂತಿ ಭೂತಾನಿ......*  ಎಂದು ಹೇಳಿತು.  ಧರ್ಮಾಚರಣೆ  ಅನಿವಾರ್ಯವಾಗಿದ್ದರೂ, ಧರ್ಮ ಮಾಡಲಾಗುವದಿಲ್ಲ. ಅನೇಕಬಾರಿ ಲೋಪಮಾಡುವ ಪ್ರಸಂಗಗಳು ಎದುರಾಗುತ್ತವೆ.. ಅವುಗಳು ಹೀಗೆ.... ಅತಿಯಾದ ಸಮೃದ್ಧಿ, ಪರಲೋಕದ ಭೀತಿ ಇಲ್ಲದಿರುವಿಕ, ಅತಿಯಾದ ಆಸೆ, ನಾಸ್ತಿಕತಾ, ಉನ್ಮತ್ತತನ, ಇತ್ಯಾದಿಗಳು ತಾಂಡವ ಆಡುತ್ತಿರುವಾಗ ಧರ್ಮ ಮೂಲೆಗುಂಪಾಗುವದು ಸಹಜ. ೧) *ಅತಿಯಾದ ಸಮೃದ್ಧಿ..* ದಾರಿದ್ರ್ಯ ಧರ್ಮಕ್ಕೆ ಉತ್ತಮ ವೇದಿಕೆ, ಶ್ರೀಮಂತಿಕೆ ಧರ್ಮ ಕೆಡಿಸಲು ಅಥವಾ ಬಿಡಲು ವೇದಿಕೆಯಾಗುತ್ತದೆ. ಧರ್ಮ ಏನನ್ಬಾದರೂ ಪಡೆಯಲು ಬೇಕು, ಎಲ್ಲದರ ಸಮೃದ್ಧಿ ಇರುವಾಗ ಧರ್ಮದ ಅವಶ್ಯಕತೆಯಾದರೂ ಏನಿದೆ.. ?? ಧರ್ಮ ಮಾಡಿದೆ ಇದ್ದರೂ ನಡೆಯತ್ತೆ ಎಂಬ...

*ನನ್ನೊಟ್ಟಿಗೆ ಮಾತಾಡಲು ಸಮಯವಿದೆಯಾ....*

Image
*ನನ್ನೊಟ್ಟಿಗೆ ಮಾತಾಡಲು ಸಮಯವಿದೆಯಾ....* ಮಾತಾಡಲು ಸಮಯ ಪ್ರೀತಿ ಇದ್ದಾಗೆ ಇರುತ್ತದೆ. ಪ್ರೀತಿ ಇಲ್ಲದಾದಾಗ ಸಮಯವಿದ್ದರೂ ಮಾತಾಡಲು ಆಗದು. ಹೀಗಿರುವಾಗ "ನನ್ನೊಟ್ಟಿಗೆ ಮಾತಾಡಲು ಸಮವಿದೆಯಾ..." ಅಂದರೆ "ನನಗಂತೂ ಇಲ್ಲ" ಎಂದು ಹೇಳುವೆ. ಸಮಯವಿಲ್ಲ ಎನ್ನುವದಕ್ಕಿಂತಲೂ ಮಾತಾಡಲು ಆಗದು ಎಂದು ಹೇಳಬಹುದು.  ನನ್ನೊಟ್ಟಿಗೆ ನಾನೇ ಮಾತಾಡುವದು ಎಂದರೇ ಏನು..?? ನಾನು ಇಂದು ಯಾರೆಲ್ಲರ ಜೊತೆಗೆ ಮಾತಾಡುತ್ತೇನೆ, ಆ ಎಲ್ಲರೂ ಒಂದರ್ಥದಲ್ಲಿ ಬಾಡಗಿದಾರರೆ, ನಾನು ಮಾತಾಡಲೇ ಬೇಕಾದ, ನನ್ನೊಟ್ಟಿಗೇ ಕ್ಷಣಬಿಡದೆ ಇರುವ ಯಜಮಾನ ಅಂದರೆ ನನ್ನ ಪಾಲಿಗೆ ನಾನೆ. ಹೀಗಿರುವಾಗ ನನ್ನೊಟ್ಟಿಗೇ ಇರುವ ನನ್ನ ಜೊತೆಗೆ ಮಾತಾಡುವ ಮನಸ್ಸು ಮಾಡಿಲ್ಲ. ಮಾತಾಡಿಲ್ಲ. ಒಂದರ್ಥದಲ್ಲಿ ನನ್ನನ್ನು ನಾನು ಮರೆತಿದ್ದೇನೆ.  ಪ್ರೀತಿಸಿದಾಗ, ಜೊತೆಗೆ ಇರುವದು ಮಾತಾಡುವದು ಸಹಜ, ದ್ವೇಶದ ಕಿಡಿಹತ್ತಿದಾಗ ದೂರಾಗುವದೂ ಅಷ್ಟೇ ಸಹಜ. ಪ್ರೀತಿ ಮಾಡಿದರೂ, ದ್ವೇಶ ಮಾಡಿದರೂ, ತಿರಸ್ಕಾರ ಮಾಡಿದರೂ, ಆದರ ಸತ್ಕಾರ ತೋರಿಸಿದರೂ, ಅವಮಾನ ಮಾಡಿದರೂ ನನ್ನ ಕ್ಷಣ ಬಿಡದೆ ನನ್ನೊಟ್ಟಿಗೆ ಇರುವವನು *ನಾನು ಮಾತ್ರ.*  ಹೀಗಿರುವಾಗ ನನಗಾಗಿ, ನನ್ನ ಹಿತಕ್ಕಾಗಿ, ನನ್ನೊಟ್ಟಿಗೆ ಮಾತಾಡದಿರುವದು, ಮಾತಾಡಲು ಯೋಚಿಸಲು ಸಮಯವಿಟ್ಟಕೊಳ್ಳದಿರುವದು ನಿಜವಾಗಿಯೂ ಕೆಲೊಮ್ಮೆ ವಿಚಿತ್ರ ಎನಿಸಿದರೆ ಮತ್ತೆ ಕೆಲೊಮ್ಮ ಹಾಸ್ಯಾಸ್ಪದ ಎನಿಸುತ್ತದೆ..... ಮಾತು...

*ಪಾಂಡವರಲ್ಲಿ ಕೃಷ್ಣನಿಗೇಕೆ ಅಭಿಮಾನ....??*

Image
*ಪಾಂಡವರಲ್ಲಿ ಕೃಷ್ಣನಿಗೇಕೆ ಅಭಿಮಾನ....??* ಮಾನ ಅಭಿಮಾನಗಳು ಸಂಸಾರಿಗಳಿಗೆ ಮಾತ್ರ. ಸಂಸಾರದ ಗಂಧವೂ ಇಲ್ಲದ ಶ್ರೀಕೃಷ್ಣನಿಗೆ ಮಾನ ಅಭಿಮಾನಗಳು ಇಲ್ಲವೇ ಇಲ್ಲ. ಕೃಷ್ಣನನ್ನು ನೆನದರೆ ಮಾನಾಭಿಮಾನಗಳು ದೂರಾಗುತ್ತವೆ, ಹೀಗಿರುವಾಗ ಕೃಷ್ಣನಿಗೆಲ್ಲಿ ಮಾನಾಭಿಮಾನಗಳು.. ?? ಸರ್ವಥಾ ಇಲ್ಲವೇ ಇಲ್ಲ. ಇದು ಒಪ್ಪುವ ಕೇಳಿದ ಮಾತೆ. ಆದರೆ ಶ್ರೀಕೃಷ್ಣ ಪಾಂಡವರಮೇಲಂತೂ ತುಂಬ ಅಭಿಮಾನ ಮಾಡಿದ. ಅದಂತೂ ಸತ್ಯ. ಆ ಅಭಿಮಾನ ಯಾವ ನಿಮಿತ್ತಕವಾಗಿ ಮಾಡಿದ... ????  ಸೋದರತ್ತೆಯ ಮಕ್ಕಳು ಎಂಬ ಅಭಿಮಾನವೇ... ?? ಪಾಠ ಹೇಳಿಸಿಕೊಂಡ ಶಿಷ್ಯರು ಎಂಬ ಅಭಿಮಾನವೇ...?? ಮಹಾಬಲಿಷ್ಠರು ಎಂಬ ಅಭಿಮಾನವೆ...?? ಹಸ್ತಿನಾವತಿ ಎಂಬ ದೊಡ್ಡ ರಾಜ್ಯದ ಮುಂದಿನ ಪೀಳಿಗೆಯ ರಾಜರು ಎಂಬ ಅಭಿಮಾನವೆ....?? ಪಾಂಡವರೆಲ್ಲರೂ ಕೃಷ್ಣನಿಗೇ ಜೈ ಜೈ ಅಂತಾರೆ ಎಂಬ ಕಾರಣಕ್ಕಾಗಿ ಅಭಿಮಾನವೇ...?? ಯಾವ ಕಾರಣಕ್ಕೆ ಶ್ರೀಕೃಷ್ಣನಿಗೆ ಪಾಂಡವರ ಮೇಲೆ ಇಷ್ಟು ಅಭಿಮಾನ .... ??? ಎಂಬ ಪ್ರಶ್ನೆ ಬಂದರೆ ಮಹಾಭಾರತ ತುಂಬ ಸೊಗಸಾಗಿ ಉತ್ತರಿಸುತ್ತದೆ.  ಮಾನಾಭಿಮಾನಗಳು ಕೃಷ್ಣನಿಗೆ ಇವೆ ಅಂದರೆ ಇವೆ. ಇಲ್ಲ ಎಂದರೆ ಇಲ್ಲವೇ ಇಲ್ಲ. ಹಾಗಾದರೆ ಯಾವ ತರಹದ ಮಾನಾಭಿಮಾನವಿದೆ.. ಯಾವ ತರಹದ್ದು ಇಲ್ಲ...??  ಅತ್ತಿಯ ಮಕ್ಕಳು, ವಿದ್ಯಾಶಿಷ್ಯರು, ಬಲಿಷ್ಠರು, ದಾಸರು, ಮುಂದಿನ ಪೀಳಿಗೆಯ ರಾಜರು, ಎಲ್ಲ ನಿಜ. ಆದರೆ ಈ ಎಲ್ಲ ಕಾರಣಗಳನ್ನು ಇಟ್ಟು ಕೊಂಡು ಮಾನಾಭಿಮಾನವನ್ನು ಶ್ರ...

*ದುರುಪಯೋಗದಿಂದಲೇ ದುರಂತಗಳು*

Image
*ದುರುಪಯೋಗದಿಂದಲೇ ದುರಂತಗಳು* ಪರಮೋಪಕಾರಿ ಶ್ರೀಹರಿ. ಕೊಟ್ಟದ್ದನ್ನು ಉಪಯೋಗಿಸಿಕೊಳ್ಳದ ಬೇಜವಾಬ್ದಾರಿ ಮನುಷ್ಯ ನಾನು. ಉಪಯೋಗಿಸಿಕೊಳ್ಳದಿದ್ದರೆ ಸಾಮಸ್ಯೆ ಇರುತ್ತಿರಲಿಲ್ಲವೋ ಏನೋ, ಆದರೆ ದುರುಪಯೋಗ ಮಾಡ್ತಾ ಇದ್ದೇನಲ್ಲ, ಇದು ಮಾತ್ರ ಅತ್ಯಂತ ಘೋರ ದುರಂತಗಳಿಗೆ ನಾಂದಿ. ಬೇಡಿದ್ದು ಕೆಲವು. ಬೇಡದೇ ಕೊಟ್ಟದ್ದು ಅಪಾರ.  "ಕೊಟ್ಟದ್ದು ಅಥವಾ ಕೊಡವದು ಏನಿದೆ ಸಾಧಿಸಿಕೊಳ್ಳಲೇ ಹೊರತು, ದುರುಪಯೋಗ ಮಾಡಿಕೊಳ್ಳಲು ಅಲ್ಲವೇ ಅಲ್ಲ." ಆದರೆ ಇಂದು ಹಾಗಾಗದೆ "ಕೊಟ್ಟದ್ದೆಲ್ಲವನ್ನೂ ದುರುಪಯೋಗ ಮಾಡಿಕೊಳ್ಳುವಂತಾಗಿದೆ." ಶ್ರೀ ಕೃಷ್ಣ ಮತ್ತು ಅರ್ಜುನರು ರಥದಲ್ಲಿ ಕುಳಿತು ವಿಹಾರಕ್ಕಾಗಿ ತೆರಳಿರುತ್ತಾರೆ. ರಾಜ ಮಾರ್ಗದಲ್ಲಿ ಸಾಗುತ್ತಿರುವಾಗ, ಪಕ್ಕದ ಮೋರೆಯಲ್ಲಿ ಒಬ್ಬ ವ್ಯಕ್ತಿ ಬಿದ್ದಿರುತ್ತಾನೆ. ಅರ್ಜುನ ತುಂಬ ಕರುಣಾಳು. ಪಕ್ಕ ಹೋಗಿ ನೋಡುತ್ತಾನೆ ತುಂಬ ಕುಡಿದು ಘಟಾರಿನಲ್ಲಿ ಬಿದ್ದಿದಾನೆ. ಅವನನ್ನು ನೋಡಿ ಅರ್ಜುನ ಕೇಳಿದ 'ಕುಡಿತಕ್ಕೆ ಬಲಿಯಾಗಿ ಇಲ್ಯಾಕ ಬಿದ್ದಿದೀಯಾ..' ಎಂದು.  ಘಟಾರಿ ಮಾನವನ ಸಹಜ ಉತ್ತರ, ಕಳೆದ ತಿಂಗಳಿನ ವರೆಗೂ ನಾನೊಬ್ಬ ಕುಷ್ಠರೋಗಿ, ನನ್ನ ಈ ರೋಗವನ್ನು ಗುಣ ಮಾಡಿದ ದಯಾಮಯ ಶ್ರೀಕೃಷ್ಣ. ನಾನಿನ್ನೇನು ಮಾಡಲಿ... ಹೀಗೆ ಉತ್ತರಿಸಿದ. ಅಲ್ಲಿಯೇ ಕುಸಿದು ಬೀಳುವ ಸರತಿ ಅರ್ಜುನಂದು ಆಗಿರಬಹುದು. ಅಷ್ಟರಲ್ಲಿಯೇ ಒಬ್ಬ ಕಳ್ಳ ಓಡಿಬಂದ. ಅರ್ಜುನ ಅವನನ್ನು ಬಂಧಿಸಿದ. ಯಾಕೆ ಕಳ್ಳತ...

*ಎದ್ದಕೂಡಲೆ ಮದುವೆಯ ಚಿಂತೆ .....*

Image
*ಎದ್ದಕೂಡಲೆ ಮದುವೆಯ ಚಿಂತೆ .....* ಅಸಾಮಾನ್ಯನಾದ ವ್ಯಕ್ತಿ, ಸಾಮಾನ್ಯವಾಗಿ ತಾನು ಸಾಮಾನ್ಯ ಎಂದೇ ನಾಲಕು ಜನರೆದುರಿಗೆ ಪ್ರತಿಬಿಬಿಸ್ತಾನೆ ತೋರಿಸುತ್ತಾನೆ. ಇದಕ್ಕೆ ದೇವರೂ ಹೊರತಲ್ಲ. ನಿದ್ರೇಯೇ ಇಲ್ಲದ ಅಂತೆಯೇ *ನಿದ್ರಾರಹಿತ* ಎಂದೇ ಪ್ರಸಿದ್ಧನಾದ ದೇವ, ಸಾಮಾನ್ಯನ ಹಾಗೆ  ತಾನೂ *ನಾಲಕು ತಿಂಗಳು ಮಲಗಿದ್ದ* ಎಂದೇ ಎಲ್ಲರಿಗೂ ತೋರಿಸುತ್ತಾನೆ. ಸಾಮಾನ್ಯ ವ್ಯಕ್ತಿಯ ಅತಿ ದೊಡ್ಡ ಸಮಸ್ಯೆಗಳು ಎಂದರೆ ಒಂದು ಊಟದ ಚಿಂತೆ, ಇನ್ನೊಂದು ಮದುವೆಯ ಚಿಂತೆ. ದೇವರಿಗೊ ಈ ಎರಡರ ಸಮಸ್ಯೆಯೂ ಇಲ್ಲ. ಹಾಗಿದ್ದರೂ ಎರಡೂ ಕೆಲಸಗಳನ್ನೂ ಸಾಮಾನ್ಯರಂತೆ ಮಾಡಿ ತೋರಿಸುತ್ತಾನೆ.  ಶಯನೀ ಏಕಾದಶೀ ಆಷಾಢ ಶುಕ್ಲ ಏಕಾದಶಿಯ ದಿನ ಪುಣ್ಯಾತ್ಮ ಅಂದು ಮಲಗಿದ. ಎರಡು ತಿಂಗಳು ನಂತರ ಪರಿವರ್ತಿನೀ ಏಕಾದಶಿಯಂದು ಮಲಗಿದ ಭಂಗಿಯಿಂದ ಆ ಕಡೆ ಮೊರೆ ಮಾಡಿ ಮಲಗಿದ. ಮಲಗಿದ ದೇವರು ಏಳುವ ಮನಸ್ಸು ಮಾಡಿದಾಗ ಸರಿಯಾಗಿ ನೂರಿಪ್ಪತ್ತು ದಿನಗಳು ಕಳೆದವು. ಕಾರ್ತೀಕ ಮಾಸ ಉತ್ಥಾನ ದ್ವಾದಶಿಯಂದು ಎದ್ದ. ಸಾಮಾನ್ಯ ಮನುಷ್ಯನ ಸ್ವಭಾವ, ಏಳುವದಕ್ಕೆನೇ ಹೊಟ್ಟೆ ಚಿಂತೆ. ಹಾಗೆಯೇ ತೋರಿಸಿದ ದೇವ ಎದ್ದ ಕೂಡಲೇ ಖಾರ, ಉಪ್ಪು, ಪಲ್ಯೆಗಳು, ಹಣ್ಣುಗಳು ಮೊದಲು ಮಾಡಿ ರುಚಿ ರುಚಿಯ ಪದಾರ್ಥಗಳನ್ನು ಬೆಳಿಗಿನ ಝಾವ ಏಳು ಗಂಟೆಯಾಗುವದರಲ್ಲೇ ಉಂಡುಬಿಟ್ಟ. ಹೊಟ್ಟೆ ತುಂಬಿದ ಮೇಲೆ *ಮದುವೆಯ ಚಿಂತೆ..* ದ್ವಾದಶಿಯ ದಿನ ಏಳರೊಳಗೇ ಎದ್ದು ಊಟಮಾಡಿದ   ಸ್ವಾಮಿ, ಸಾಯಂಕಾ...

*ಅನ್ನ.....*

*ಅನ್ನ.....* ಇಂದು ಶುಕ್ರವಾರ. ಲಕ್ಷ್ಮೀ ದೇವಿಯ ವಾರ. ಲಕ್ಷ್ಮೀ ದೇವಿಯು ಅನ್ನಕ್ಕೆ ಅಭಿಮಾನಿ. ಒಂದಿನದ ಅನ್ನ ಸಿಗುವದು ತುಂಬ ಕಠಿನ.  *ಒಂದಿನ ಕವಳಕ್ಕೆ ಸಾವಿರ ಆಪತ್ತು* ಒಂದು ದಿನದ ಒಂದು ತುತ್ತಿನ ಅನ್ನಕ್ಕೆ ಸಾವಿರ ಆಪತ್ತುಗಳು ಇದು ದಾಸರ ಒಂದು ಮಾತು. ಶಾಸ್ತ್ರದ ಸಮ್ಮತವೂ ಹೌದು. *ಅನ್ನ* ಇಂದು ನಮಗೆ ದೇವರ ಕರುಣೆಯಿಂದ ಅನಾಯಾಸೇನ ದೊರಕಿದೆ. ಅಷ್ಟೇ ಅನಾಯಾಸೇನ ಚೆಲ್ಲುತ್ತೆವೆಯೂ ಸಹ.  ಒಂದು ತುತ್ತಿನ ಅನ್ನದ ಹಿಂದೆ ನೂರಾರು ಜನರ ಶ್ರಮವಿದೆ.  ತಿಂಗಳು ಶ್ರಮಪಟ್ಟು ಸಂಪಾದಿಸಿದ ಹಣವನ್ನು ಘಟಾರಿಗೆ ಎಸೆದರೆ ಹೇಗೋ ಹಾಗೆಯೇ ಅನ್ನವನ್ನು ಚೆಲ್ಲವದು ಎಂದರೆ.  *ತುತ್ತು ಅನ್ನವಿಲ್ಲದೇ ಬದುಕುವ ಜನ ಕೋಟಿ ಕೋಟಿ ಇದ್ದಾರೆ*  ಈ ಎಚ್ಚರ ಅನ್ನ ಚೆಲ್ಲುವಾಗ ಇರಬೇಕು ಅಷ್ಟೆ.... ನಮ್ಮ ಆತ್ಮೀಯರ ಹುಟ್ಟು ಹಬ್ಬ. Celebration ಆಗಲೇ ಬೇಕು. ಒಬ್ಬ ಬ್ರಾಹ್ಮಣನಿಗೆ ಊಟಕ್ಕೆ ಹಾಕಿ. ಹಾಕುವದಿಲ್ಲ ಬಿಟ್ಟುಬಿಡಿ.  ಆದರೆ ನೂರಾರು ರೂಪಾಯಿಯ  *ಕೇಕ್ ಮಾರಿಗೆ ತೆಲೆಗೆ ಹಚ್ಚಿ ಆ ಕೇಕ್ ಅನ್ನು ಹಾಳು ಮಾಡುವದು ಸರ್ವಥಾ ಬೇಡ.*  ತಿಂದು enjoy ಮಾಡಿ, ಇಲ್ಲವೇ ಮತ್ತೊಬ್ಬರಿಗೆ ಹಂಚಿ. ಕೇಕ್ ಇಲ್ಲದೇ ಜನ್ಮದಿನವನ್ನು ಆಚರಿಸುವ ಸಾವಿರ ಸಾವಿರ ಮಂದಿ ಇದ್ದಾರೆ. ನೂರಾರು ಜನರ ಪರಿಶ್ರಮ ಕಸದ ಪಾಲು ಆಗುವದು ಸರ್ವಥಾ ಬೇಡ. ಮೊನ್ನೆ ಇದೇ ವ್ರತದಲ್ಲಿ ಒಂದು ಕಡೆ ಊಟಕ್ಕೆ ಹೋಗಿದ್ದೆ. ಊಟಕ್ಕೆ ಹೋಗುವದೇ ತುಂಬ ಕಡ...