*ಗುಣಗಳ ಗಣಿಯ ಹೆಬ್ಬಾಗಿಲಿಗೆ ತಾಳ್ಮೆಯೇ ಹೊಸ್ತಿಲು*
*ಗುಣಗಳ ಗಣಿಯ ಹೆಬ್ಬಾಗಿಲಿಗೆ ತಾಳ್ಮೆಯೇ ಹೊಸ್ತಿಲು* ಪಡೆಯಲೇ ಹುಟ್ಟಿದವರು ನಾವು. ಪಡೆಯಲು ಇರಬೇಕು, ಪಡೆಯುವ ಪದಾರ್ಥದ ಮೇಲೆ ಪ್ರೀತಿ. ಪ್ರೀತಿ ಇದ್ದರೆ ಪಡೆಯುವ ಹಂಬಲ. ಪಡೆಯುವ ಪದಾರ್ಥದ ಮೇಲೆ ಪ್ರೀತಿ ಹುಟ್ಟುವದು ತುಂಬ ವಿರಳ. ಪ್ರೀತಿ ಹುಟ್ಟುವದು ದೃಢವಾಗುವದು *ತಾಳ್ಮೆ* ಇರುವಲ್ಲಿ ಮಾತ್ರ. *ತಾಳ್ಮೆ* ಪ್ರೀತಿಗೊಂದೇ ತವರು ಅಲ್ಲ, ಎಲ್ಲ ಗುಣಗಳಿಗೂ ತವರು *ತಾಳ್ಮೆ* ಎಂದರೆ ತಪ್ಪಾಗದು. ತಾಳ್ಮೆ ಇಲ್ಲದವನಿಗೆ ಪ್ರೀತಿಸಲಾಗದು, ಪ್ರೀತಿಯೇ ಇಲ್ಲದಿರೆ ಪಡೆಯುವ ಮನಸ್ಸೇ ಬರದು. ಪಡೆಯುವದಂತೂ ದೂರದ ಮಾತು. "ಪ್ರೀತಿಯಿಲ್ಲದ ವಸ್ತು ನಮ್ಮಲ್ಲಿ ಇದ್ದರಷ್ಟೆ, ಇಲ್ಲದಿದ್ದರೂ ಅಷ್ಟೆ." ತಾಳ್ಮೆ ಇರುವಲ್ಲಿ ಪ್ರೀತಿಯಿದೆ. ಪ್ರೀತಿ ಯಾವದೆಲ್ಲದರ ಮೇಲಿದೆಯೋ ಅದೆಲ್ಲದಕ್ಕೂ ನಾನು ಒಡೆಯನೆಂದೆನಿಸಿಕೊಳ್ಳವಹುದು. *ಪಡೆಯಲು ಇಚ್ಛೆ ಇದ್ರೆ ಸಾಲದೆ... ??* ಒಬ್ಬ ವ್ಯಕ್ತಿಯಲ್ಲಿ Athletic ಓಟಗಾರ ಆಗುವ ಬೇಕಾದ ಶಕ್ತಿಯೂ ಇದೆ. ಅಂತೆಯೇ ಓಟಗಾರನಾಗಲು ಇಚ್ಛೇ ಪ್ರಬಲವಾಗಿದೆ. ಇಚ್ಛೆ ಇದ್ರೆ ಸಾಲದು. ಅಪಾರ ಇಚ್ಛೆ ಶಕ್ತಿ ಇದೆ ಎಂದ ಮಾತ್ರಕ್ಕೆ "ಅಂಬೆಗಾಲು ಇಡುವದಕ್ಕೂ ಮೊದಲೇ, ಇಪ್ಪತ್ತು ಮೈಲು ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲವಷ್ಟೆ." ಮೊದಲು ನಿಲ್ಲಬೇಕು, ಮೇಲೆರಬೇಕು, ನಡಿಯಬೇಕು. ಈಗಿನ ಸಾಮರ್ಥ್ಯವೇನು ?? ಇನ್ನೆಷ್ಟು ಪ್ರಗತಿ ಸಾಧಿಸಬೇಕು...?? ಇಷ್ಟೆಲ್ಲ ಯೋಚಿಸದೆ ಧುಮಕಿದರೆ ಕೈ...