*ಜಾಹ್ನವೀ ಲೋಕಪಾವನೀ.....*
*ಜಾಹ್ನವೀ ಲೋಕಪಾವನೀ.....* ಭಗವಂತನ ನಿವಾಸಭೂತವಾದ ಮೇರು, ಮಂದರ, ಗಂಧಮಾದನ, ಕೈಲಾಸ, ಮೊದಲಾದ ಬೆಟ್ಟಗಳಿಗೆ ದ್ವಾರಭೂತವಾಗಿದೆ ಹರಿದ್ವಾರ. ವಿಶಾಲಾ ಕ್ಷೇತ್ರದಲ್ಲಿ ವಿರಾಜಮಾನನಾದ ಶ್ರೀನರನಾರಯಣರ ವಾಸಸ್ಥಾನವಾದ ಬದರಿಗೆ ದ್ವಾರಭೂತವಾಗಿದೆ ಹರಿದ್ವಾರ. *ಮೋಕ್ಷಪ್ರದ ಕ್ಷೇತ್ರ* ಹರಿದ್ವಾರ ಇದು ಭಗವಂತನಿಂದ ತುಂಬಿದ ಕ್ಷೇತ್ರ. ದಕ್ಷಿಣದ ಊರಿನಲ್ಲಿರುವ ದೇವಸ್ಥಾನದಲ್ಲಿ ಪ್ರತಿಮೆಯಲ್ಲಿ ಮಾತ್ರ ಭಗವತ್ಸನ್ನಿಧಾನವಾದರೆ, ಉತ್ತರದಲ್ಲಿಯ ಪ್ರತಿ ಊರಿಗೆ ಊರೇ ದೇವರ ಪ್ರತಿಮೆ. ಅಲ್ಲೆಲ್ಲ ದೇವರ ಸನ್ನಿಧಾನ. ಸಂಸಾರದ ಮಾಯೆಯನ್ನು ನಾಶಮಾಡಿ ಮೋಕ್ಷಕೊಡುವಂತಹ ಕ್ಷೇತ್ರವಾಗಿರುವದರಿಂದ ಈ ಕ್ಷೆತ್ರ ಮಾಯಾಪುರಿ ಎಂದೇ ಪ್ರಸಿದ್ಧಿ ಪಡೆದ ಕ್ಷೇತ್ರ. *ವಿಷ್ಣುಪದೀ* ಹರಿದ್ವಾರ ಇಂತಹ ದೊಡ್ಡಕ್ಷೇತ್ರವಾಗಲು ಮೂಲ ಕಾರಣ *ಗಂಗೆ.* ಗಂಗೆ ಹರಿಯುವ ಕ್ಷೇತ್ರಗಳೆಲ್ಲವೂ ಭಗವತ್ ಕ್ಷೇತ್ರವೇ. ಆ ಗಂಗೆ ಹುಟ್ಟಿ ಬಂದದ್ದೇ ಭಗವತ್ಪಾದದಿಂದ. ಭಗವತ್ಪಾದವನ್ನು ಆಶ್ರಯಿಸಿದವರೇ ದೊಡಗಡವರಾಗುತ್ತಿರುವಾಗ, ಭಗವತ್ಪಾದದಿಂದ ಹುಟ್ಡಿ ಅಲ್ಲಿಯೇ ಮುಕ್ತಿ ಪಡೆಯುವ ಗಂಗೆ ಜಗತ್ತಿನಲ್ಲಿಯೇ ಮಹಾನ್ ನದಿ ಆಗಿ ವಿರಾಜಮಾನಳಾದಳು. *ಗಂಗೆಯ ಜನನ* ಗಂಗೆಯ ಹುಟ್ಟು ಒಳಗಿನ ಹೊರಗಿನ ಅಂಧಕಾರವನ್ನು ನಾಶಮಾಡುವ ಭಗವತ್ಪಾದದಿಂದ. ಭಗವತ್ಪಾದದಿಂದ ಹುಟ್ಟಿದ ಕಾರಣವೇ ಗಂಗೆ ಪರಮ ಪವಿತ್ರ. ಗಂಗೆ ಬ್ರಹ್ಮಾಂಡದ ಹೊರೆಗೆ ಇದ್ದವಳು. ಒಳಗೆ ಧಾವಿಸಿಬಂದವಳು. ಎಲ್ಲೆಡ...