ಮನಸ್ಸು ಒಂದು ಅದ್ಭುತ....


 ಮನಸ್ಸು ಒಂದು ಅದ್ಭುತ....


ಮನಸ್ಸೇ ಒಂದು ಅದ್ಭುತ. ಮನಸದಸು ಇದ್ದರೆ ಮಾತ್ರ ಜೀವನಿಗೆ ಜೀವ ಎನ್ನಬಹುದು. ಮನಸ್ಸು ಇಲ್ಲದವ ಸತ್ತಂತಯೇ ಸರಿ. ಮನಸ್ಸಿನಲ್ಲಿಯೇ ದೇವ ಕಾಣುವ. ಮನಸ್ಸಿನಿಂದಲೇ ತಮಸ್ಸಾಧನೆಯೂ. ಮನಸ್ಸು ಏನೂ ಮಾಡಲು ಸಮರ್ಥ. ಅಂತೆಯೇ ಮನಸ್ಸು ಒಂದು ಅದ್ಭುತ. 


ಈ ಮನಸ್ಸನ್ನು ನಿಯಮಿಸುವವರು ಅನೇಕರು. ಲಕ್ಷ್ಮೀ ಭ್ರಹ್ಮ ಗರುಡ ಶೇಷ ರುದ್ರ ಉಮಾ ಇಂದ್ರ ಕಾಮ ಅನಿರುದ್ಧ ಮುಂತಾದ ಮಹಾ ಘಟಾನುಘಟಿ ದೇವತೆಗಳಲ್ಲರೂ ಸೇರಿ ನಿಯಮಿಸುವವರು. ಆ ಕಾರಣದಿಂದಲೂ  ಅದ್ಭುತ ಪದಾರ್ಥವೇ ಮನಸ್ಸು.


ಅನಾದಿಯಿಂದ ಪ್ರತಿಕ್ಷಣದಲ್ಲಿಯೂ ಹೊಸ ಹೊಸ ಕಾರ್ಯಗಳನ್ನು ಮಾಡುತ್ತಾ ಇರುತ್ತವೆ.  ಅದೆಲ್ಲವೂ ಸಂಸ್ಕಾರರೂಪದಲ್ಲಿ ಮನಸ್ಸಿನಲ್ಲಿ store ಆಗಿ ಇರುತ್ತವೆ. ಆ ಎಲ್ಲ ಸಂಸ್ಕಾರಗಳು ಕಾಲಕಾಲಕ್ಕೆ ಅಭಿವ್ಯಕ್ತಿ ಆಗುತ್ತಾ ಇರುತ್ತವೆ. ಮನಸ್ಸಿನಿಂದ ದೂರಾಗುವ ಮರೆಯುವ ವಸ್ತು ಈ ಜಗದಲ್ಲಿ ಯಾವದೂ ಇಲ್ಲ. ಇಂದಿನ ಇಂಟರ್ನೆಟ್ ಕಿಂತಲೂ ನೂರುಪಟ್ಟು ಅಲ್ಲ ಸಾವಿರಪಟ್ಟು ಹೆಚ್ಚು ವೇಗದ ವಸ್ತು ಒಂದಿದೆ ಎಂದರೆ ಅದು ಮನಸ್ಸೇ.


*ವಾಯುದೇವರು*


ಜೀವ ತಾಯಿಯ ಗರ್ಭದಲ್ಲಿ ಇರುವಾಗ ಹಾಗೂ ಹೊರಬಂದ ಮೇಲೆ ಆರು ತಿಂಗಳವರೆಗೆ ಮನಸ್ಸು ಮೊದಲು ಮಾಡಿ ಎಲ್ಲ ಇಂದ್ರಿಯಗಳನ್ನು ನಿಯಮಿಸುವವರು ವಾಯುದೇವರು. ಆ ಕಾರಣದಿಂದಲೇ ಗರ್ಭದಲ್ಲಿ ಇರುವಾಗ ಈ ಗರ್ಭಾವಸ್ಥೆಯ ದುಃಖಕ್ಕೆ ಕಾರಣವಾದ ಹಿಂದೆ ಮಾಡಿದ ಅನೇಕ ಕರ್ಮಗಳನ್ನು ನೆನಪು ಹಾಕಿ, ಈ ಕರ್ಮಗಳನ್ನು ಮತ್ತೆ ಮಾಡುವದಿಲ್ಲ ಎಂದೆ ಪ್ರತಿಜ್ಙೇ ಮಾಡುತ್ತಿರುತ್ತಾನೆ ಜೀವ.  ಹೀಗೆ ವಾಯುದೇವರು ಮನಸ್ಸಿನ ಎಲ್ಲ ಭಾವನೆಗಳನ್ನು ವ್ಯಾಪಾರಗಳನ್ನು ನಿಯಮಿಸುತ್ತಾರೆ.


*ಲಕ್ಷ್ಮೀ ದೇವಿ*


ಮನಸ್ಸಿನ ಒಂದು ಭಾಗ "ಚೇತನಾ" ಇದಕ್ಕೆ ಅಭಿಮಾನಿ ಲಕ್ಷ್ಮೀದೇವಿ. ಈ ಚೇತನಾಕ್ಕೆ ದೇಹವ್ಯಾಪ್ತಿಯನ್ನು ಕೊಟ್ಟು ಅದರ ಮುಖಾಂತರ ದೇಹದ ಯಾವುದೇ ಮೂಲೆಗೆ ಆಗುವ ಸುಖದುಃಖಗಳನ್ನು ಜೀವನಿಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಾಳೆ.


*ಬ್ರಹ್ಮ*


ಮತ್ತೊಂದು ಭಾಗ "ಚಿತ್ತ" ಇದಕ್ಕೆ ಅಭಿಮಾನಿಗಳು ಬ್ರಹ್ಮದೇವರು.  ಎಲ್ಲವನ್ನು ನೆನಪಿಡುವಂತೆ ಮಾಡುತ್ತಾರೆ.  ಅನುಭವಿಸಿದ ಸುಖ ವನ್ನು ಆಗಾಗ ನೆನಿಪಿಗೆ ಕೊಟ್ಟು ಮತ್ತೆ ಸುಖಿಸುವಂತೆ ಮಾಡುತ್ತಾರೆ. ಜೊತೆಗೆ ಆದ ದುಃಖವನ್ನು ಮರೆಸಿಯೂ ಬಿಡುತ್ತಾರೆ. 

ಆಡಿದ ಮಾತು ಮರೆತು, ಆಡಿದ್ದೇ ಆಡುತ್ತಾ ಕೂತರೆ ಹುಚ್ಚ ಎನ್ನುತ್ತಾರೆ ಜನ. ಹಾಗಾಗದಿರುವಂತೆ ನೋಡಿಕೊಳ್ಳುತ್ತಾರೆ. ಸರಿಯಾದ ಪ್ರಸಂಗದಲ್ಲಿ ನೆನೆಪೇ ಆಗದಿದ್ದರೂ ಅಪಾಹಾಸಕ್ಕೆ ಗುರಿಯಾಗಬೇಕಾಗುತ್ತದೆ ಹಾಗೂ ಮಾಡುವದಿಲ್ಲ ಬ್ರಹ್ಮದೇವರು. ಈ ತರಹದ ಲಕ್ಷ ಲಕ್ಷ ವ್ಯಾಪಾರಗಳನ್ನು ಮಾಡುತ್ತಾರೆ.


*ರುದ್ರದೇವರು*


ಯಾವುದೇ ಕೆಲಸ ತೃಪ್ತಿ ತರಬೇಕಾದರೆ "ನಾನು ಮಾಡಿದೆ" ಎಂಬ ಅರಿವಿರಬೇಕು. ಇನ್ನೊಬ್ಬರು ಮಾಡಿದ ಕೆಲಸಕ್ಜೆ ನನಗೆ ಅಷ್ಟು ತೃಪ್ತಿಯೂ ಆಗಲಾರದು. 

ಈ ಸಂಸಾರಕ್ಕೆ ಕಾರಣವಾಗುವದು ನಾನು ಮಾಡಿದೆ ಎಂಬ "ಅಹಂಭಾವ." ಈ ಅಹಂಭಾವವನ್ನು  ತಂದುಕೊಡುವವರು ರುದ್ರದೇವರು. 

ಮನಸ್ಸಿನ ಇನ್ನೊಂದು ಕೆಲಸ "ಸಂಶಯ ವಿಪರ್ಯಯ" ಅಂದರೆ ಇದು ಮಾಡೋಣವೇ, ಬಿಡೋಣವೇ ಎನ್ನುವ ಮನಸ್ಸಿನ ಹೊಯ್ದಾಟಗಳು. ಆ ತರಹದ ಮನಸ್ಸಿನ ವ್ಯಾಪರವನ್ನೂ ಮಾಡುವವರು ರುದ್ರದೇವರು. 


*ಉಮಾದೇವಿ*


ಯಾವುದೇ ಕೆಲಸವಿದ್ದರೂ ಆ ಕಾರ್ಯದಲ್ಲಿ ನಿರ್ಣಯ judgement ತೆಗೆದುಕೊಳ್ಳುವದು ಮನಸ್ಸಿನ ಒಂದು ಭಾಗ ಬುದ್ಧಿ. ಈ ಬುದ್ಧಿಗೆ ಅಭಿಮಾನಿ ಉಮಾದೇವಿ.


*ಗರುಡ - ಶೇಷದೇವರು*


ವೈದಿಕ ಶಾಸ್ತ್ರ ಓದುವ ಮನಸ್ಸಿಗೆ ಅಭಿಮಾನಿ ಗರುಡದೇವ. ಪುರಷರಿಂದ ರಚಿತವಾದ ಪೌರುಷೇಯ ಶಾಸ್ತ್ರ ಓದುವ ಮನಸ್ಸಿಗೆ ಶೇಷದೇವ.


*ಇಂದ್ರ ಕಾಮದೇವರುಗಳು*


ಯಜ್ಙಯಾಗಮಾಡುವ ಮನಸ್ಸಿಗೆ ಇಂದ್ರದೇವ. ಸಂಸಾರ ರತಿರೂಪ ಮನಸ್ಸಿಗೆ ಕಾಮ ಹೀಗೆ ಅನೇಕ ದೇವತೆಗಳು ಒಂದು ಮನಸ್ಸನ್ನು ನಿಯಮಿಸಿ ನಮ್ಮನ್ನು ಪೋಷಿಸುತ್ತಾರೆ.


ಈ ಎಲ್ಲ ದೊಡ್ಡ ದೊಡ್ಡ ದೇವತೆಗಳು ನಮ್ಮಿಂದ ಒಂದು ಕಾಸನ್ನೂ ಪಡೆಯುವದಿಲ್ಲ. ಕೇವಲ ದೇವರ ಆಜ್ಙೆಯೆಂದು ನಿರಂತರ ವ್ಯಾರವನ್ನು ಮಾಡುತ್ತಿರುತ್ತಾರೆ.


ಈ ಎಲ್ಲ ದೇವತೆಗಳಲ್ಲಿ  ಒಬ್ಬರ ಅನುಗ್ರಹ ತಪ್ಪಿದರೂ ನಮ್ಮ ಅವಸ್ಥೆ ಹೇಳತೀರದು. ಈ ಎಲ್ಲ ದೇವತೆಗಳ ಅನುಗ್ರಹವಿದ್ದರೆ ದಾರಿಬಿಟ್ಟು ಹೋಗಲಾರದು ಮನಸ್ಸು. ಅನುಗ್ರಹ ತಪ್ಪಿತೂ ಎಂದಾದರೆ ಇನ್ನೊಬ್ಬರ ಪದಾರ್ಥದ ಮೇಲೆ ಕಣ್ಣುಹಾಕಿಸಿ ಭಾರೀ ಅವಮಾನಕ್ಕೂ ಈಡು ಮಾಡಿಸಿಬಿಡುತ್ತಾರೆ. ಅನುಗ್ರಹ ತಪ್ಪದಿರುವಂತೆ ಆ ಎಲ್ಲ ದೇವತೆಗಳನ್ನು ಸ್ಮರಿಸೋಣ. ಸಂತೋಷಗೊಳಿಸೋಣ. ಮಾಡಿದ ಅನುಗ್ರಹವನ್ನು ನೆನೆಸೋಣ.


*✍🏽ನ್ಯಾಸ...*

ಗೋಪಾಲದಾಸ

ವಿಜಯಾಶ್ರಮ, ಸಿರಿವಾರ.

Comments

Unknown said…
Very well explained in simple terms . Good read . 🙏🏻🙏🏻🙏🏻

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*