ಆಯುಧಗಳಿವೆ - ಉಪಯೋಗಿಸುತ್ತಿಲ್ಲವೇಕೆ... ??*
*ಆಯುಧಗಳಿವೆ - ಉಪಯೋಗಿಸುತ್ತಿಲ್ಲವೇಕೆ... ??* ಓ ಆಯುಧ !! ಪ್ರತಿಯೊಂದು ಆಪತ್ತಿಗೂ ನೀನೇ ಒಂದು ದೊಡ್ಡ ಆಯುಧ, ನೀನು ಎನ್ನ ಬಳಿ ಇರಲಾಗಿ ನಿನ್ನನ್ನೂ ಬಳಿಸದೆ ಬಿಟ್ಟರೆ ನನಗೆ ಸೋಲಲ್ಲದೇ ಮತ್ತಿನ್ನೇನೂ..... ಒಂದೇ ಏಟಿಗೆ ಇಷ್ಟೊಂದು ಪರೀಕ್ಷೆಗಳು ಎದುರಾದರೆ ನಾನೇನು ಮಾಡಲು ಸಾಧ್ಯ... ??? ಈ ಪ್ರಶ್ನೆ ಆಪತ್ತಿನಲ್ಲಿ ಸಿಲುಕಿದ ಎಲ್ಲರದೂ ಆಗಿರುವದೇ. ನನಗೂ ಅನೇಕಬಾರಿ ಬಂದದ್ದೂ ಇದೆ... ಗುಬ್ಬಚ್ಚಿಯ ಹಾಗೆ ಕಾಸು ಕಾಸು ಗೂಡಿಸಿದೆ, ಸಾಲ ತಗೆಸಿದೆ ಕೊನೆಗೆ ಮನೆ ಕಟ್ಟಿದೆ. ಭರ್ಜರಿ ವಾಸ್ತು ಮಾಡಿದೆ. ಮನೆ ಆಯಿತು ಕೆರಿಯರ್ ಸೆಟ್ ಮಾಡ್ಕೋಬೇಕು ಅಂದೆ.. ಅಷ್ಟರಲ್ಲೆ ಮಕ್ಕಳು ಆದರು. ಕೈಲಿ ಹಣವಿಲ್ಲ. ಬಂದ ಎಲ್ಲ ದುಡ್ಡು ಸಾಲದ ಕಂತಿಗೇ ಹೋಗುತ್ತದೆ. ಈ ಪ್ರಸಂಗದಲ್ಕೇ ಟ್ರಾನ್ಸ್ಫರ್ ಆಯ್ತು.. ಎಕ್ಸ್ಟ್ರಾ ದುಡಿಯೋಣ ಅಂದರೆ ಮನೆಯಲ್ಲಿ ಕಿರಿಕಿರಿ. ನನ್ನಿಂದ ಉಪಯೋಗವಿಲ್ಲ ಎಂದಾಕ್ಷಣಕ್ಕೆ ನನ್ನ ಆತ್ಮೀಯರೆಲ್ಲರೂ ಪಲಾಯನ ಮಾಡಿದರು. ಹೀಗೆ ಮನೆಯಲ್ಕಿ ಒಂದರಮೇಲೆ ಒಂದು ಸಮಸ್ಯೆ.. ಈ ಸಮಸ್ಯೆಗಳು ನನ್ನ ಮೆಲೆಯೇ ಯಾಕೆ ಬರುತ್ತವೆ... ?? ಒಮ್ಮೆಲೆ ಈ ಸಮಸ್ಯೆಗಳು ಎಗರಿಬಂದರೆ ನಾನಾದರೂ ಏನು ಮಾಡಲಿ... ??? ಆ ದೇವರಿಗೆ ಸ್ವಲ್ಪಾನೂ ಕರುಣೆ ಇಲ್ಲವೆ.. ?? ಛೇ ನನ್ನ ಜನ್ಮಕ್ಕಿಷ್ಟು... ಮಜಾ ಏನೆಂದರೆ ಇಷ್ಟೆಲ್ಲ ಒದ್ದಾಡು ಮನುಷ್ಯ ಸಮಸ್ಯೆಗಳ ಪರಿಹಾರದ ಬಗ್ಗೆ ಒಂದು ಕ್ಷಣವೂ ಯೋಚಿ...