Posts

ನಾಗ ಸ್ತೋತ್ರಮ್

 *ನಾಗ ಸ್ತೋತ್ರಮ್* ಬ್ರಹ್ಮ ಲೋಕೇ ಚ ಯೇ ಸರ್ಪಾಃ  ಶೇಷನಾಗಃ ಪುರೋಗಮಾಃ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೧॥ ವಿಷ್ಣು ಲೋಕೇ ಚ ಯೇ ಸರ್ಪಾಃ  ವಾಸುಕೀ ಪ್ರಮುಖಾಶ್ಚ ಯೇ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೨॥ ರುದ್ರ ಲೋಕೇ ಚ ಯೇ ಸರ್ಪಾಃ  ತಕ್ಷಕ: ಪ್ರಮುಖಸ್ತಥಾ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೩॥ ಖಾಂಡವಾಸ್ಯ ತಥಾ ದಾಹೇ  ಸ್ವರ್ಗೇ ಚ  ಸಮಾಶ್ರಿತಾಃ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೪॥ ಸರ್ಪ ಸತ್ರೇ ಚ ಯೇ ಸರ್ಪಾಃ  ಆಸ್ತಿಕೇನಾಭಿ ರಕ್ಷಿತಃ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥5॥ ಪ್ರಲಯೇ ಚೈವ್ ಯೇ ಸರ್ಪಾಃ  ಕಾರ್ಕೋಟಕ ಪ್ರಮುಖಶ್ಚಯೇ |  ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥6॥ ಧರ್ಮ ಲೋಕೇ ಚ ಯೇ ಸರ್ಪಾಃ  ವೈತರಣ್ಯಾಂ ಸಮಾಶ್ರಿತಾಃ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೭॥ ಯೇ ಸರ್ಪಾಃ ಪರ್ವತೇ ಯೇಷು  ಧಾರಿ ಸಂಧಿಷು ಸಂಸ್ಥಿತಾಃ । ನಮೋಸ್ತು ತೇಭ್ಯಃ ಸುಪ್ರೀತಾಃ   ಪ್ರಸನ್ನಾಃ ಸಂತು ಮೇ  ಸದಾ ॥೮...

*ಅಧಿಕಮಾಸ "ಅಧಿಕಸ್ಯ ಅಧಿಕಂ ಫಲಮ್"*

Image
 *ಅಧಿಕಮಾಸ "ಅಧಿಕಸ್ಯ ಅಧಿಕಂ ಫಲಮ್" * ಅಧಿಕಮಾಸ ಇದು ಮಲಮಾಸ ಎಂದು ಪ್ರಸಿದ್ಧ. ಮಲಮಾಸದಲ್ಲಿ ಮಲ ಪಾಪಗಳನ್ನು,  ಕಷ್ಟ ದಾರಿದ್ರ್ಯ ಕಾರ್ಪಣ್ಯ  ಮುಂತಾದವುಗಳನ್ನು ಪರಿಹರಿಸಿಕೊಳ್ಳುವ ಮುಖಾಂತರ ಎಲ್ಲ ವಿಧ ಸೌಖ್ಯ ಸೌಭಾಗ್ಯಗಳನ್ನು ಪಡೆಯಲುಭೆಕಾದ ಸಾಧನೆಗಳನ್ನು ಮಾಡಿಸುವದಲ್ಲದೇ ವಿಷ್ಣುಭಕ್ತಿ ದ್ವಾರಾ ಮೊಕ್ಷಾದಿ ಪುರುಷಾರ್ಥಗಳನ್ನು ಕೊಡಿಸುವದರಲ್ಲೂ ಸಮರ್ಥವಾಗಿದೆ.  ಈ ಮಲ ಮಾಸದಲ್ಲಿ ವಿಹಿತವಾದವುಗಳು ಎಂದರೆ "ಯಜ್ಙ ದಾನ ತಪಸ್ಸು" ಇವುಗಳೇ.  ಯಜ್ಙ ವೈಶ್ವಾನರ ಯಜ್ಙ ಹಾಗೂ ಪವಮಾನ ಹೋಮ ಮೊದಲಾದ ಯಜ್ಙಗಳು ಹೀಗೆ ಎರಡು ವಿಧ. ಅನ್ನದಾನ ರೂಪವಾದ ವೈಶ್ವಾನರ ಯಜ್ಙವನ್ನು ಮಾಡುವದರಿಂದ ನನ್ನ (ದಾನಿಯ) ನೂರನೇಯ ತಲೆಮಾರಿನವರೆಗೂ ನೈವೇದ್ಯ ವೈಶ್ವದೇವದ ಅನ್ನವೇ ಹೊಟ್ಟೆಗೆ ಬೀಳುವಂತೆ ಮಾಡುತ್ತದೆ.  ಪವಮಾನ ಮೊದಲಾದ ಎಲ್ಲಯಾಗಗಳೂ ಬ್ರಹ್ಮಹತ್ಯೆ ಸುರಾಪಾನ ಸ್ವರ್ಣಸ್ತೇಯ ಅಭಕ್ಷ್ಯಭಕ್ಷಣ ಬಾಲಹತ್ಯೆ ಶಿಷುಹತ್ಯೆ ಬ್ರೂಣಹತ್ಯೆ ಸ್ತ್ರೀಹತ್ಯೆ ಮೊದಲಾದ ಎಲ್ಲ ಪಾಪಗಳನ್ನೂ ಪರಿಹರಿಸಲು ಸಮರ್ಥವಾಗಿದೆ. ದಾನ ಈ ದಾನವೂ ಎರಡು ವಿಧವಾಗಿದೆ. ಒಂದು ಅಪೂಪದಿಂದ ಆರಂಭಿಸಿ ಸ್ವರ್ಣ ರಜತ ಭೂ ತಿಲ ದೀಪ ಮೊದಲಾದ ನಾನಾತರಹದ ದಾನಗಳು. ಈ ಎಲ್ಲ ತರಹದ ದಾನಗಳಿಂದ ಒಂದು ದ್ರವ್ಯಶುದ್ಧಿ. ಶತ್ರುಪರಿಹಾರ. ತತ್ವಜ್ಙಾನ ಪ್ರಾಪ್ತಿ ಒಬ್ಬ ಬ್ರಾಹ್ಮಣನಿಗಾದರೂ ಉಪಯೋಗ ಹೀಗೆ ನಾನಾತರಹದ ಫಲಗಳು ಒಳಗೊಂಡಿವೆ.  ತಪಸ್ಸು  ಈ ತಪವೂ ಮೂರುವಿಧ. ...

ಗೆಳೆತನ ತುಂಬ ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ.

Image
 *ಗೆಳೆತನ ತುಂಬ  ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ. ಒಳ್ಳೆಯ ಗೆಳಯರು ಸಿಗುವದೇ ಕಠಿಣ. ಸನ್ಮಾರ್ಗ ತೋರುವವರು, ಸಾಧನೆ ಮಾಡಿಸುವವರು ತುಂಬ ವಿರಳ. ಸನ್ಮಾರ್ಗ ತೋರುವ ಅಥವಾ ಮೆಲೆತ್ತರಕ್ಜೆ ಬೆಳಿಸುವ ಗೆಳೆಯ ಸಿಕ್ಕಾಗ ಆ ಗೆಳೆತನ ಉಳಿಸಿಕೊಳ್ಳುವದು ತುಂಬ ಕಠಿಣ.  ಗೆಳತನದಲ್ಲಿ ತಗ್ಗು ಬಗ್ಗುವಿಕೆಗಳು ಇವೆ. ನಾನು ನನ್ನದು ಎಂಬವುಗಳಿಗೆ ಅಲ್ಲಿ ಆಸ್ಪದವಿಲ್ಲ. ನನ್ನದೇ ಆಗಬೇಕು ಎಂಬ ದರ್ಬಾರವೂ ಇಲ್ಲ.  ಅಂದರೆ ದುಃಖವಿಲ್ಲ. ಹೊಗಳಿದರೆ ಹುಮ್ಮಸ್ಸಿಲ್ಲ. ಮೊದಲೇ ಮಾತಾಡಬೇಕು ಎಂಬ ಬಿಗುಮಾನವಿಲ್ಲ. ಆಡುವ ಮಾತುಗಳಲ್ಲಿ ಚುಚ್ಚುವಿಕೆ ಇಲ್ಲ. ಆಡುವ ಮಾತು ಚೇತೋಹಾರಿ ಮಾತುಗಳೇ. ಗೆಳೆತನದ ಗಟ್ಟಿತನದಮುಂದೆ ಎಂತಹ ಕಷ್ಟ ಆಪತ್ತುಗಳ ಸರಣಿಗಳು ಬಂದರೂ ತುಂಡು ತುಂಡು ಆಗಿಹೋಗುತ್ತವೆ.  ಗೆಳತನದಲ್ಲಿ ಆಸೆ ಆಕಾಂಕ್ಷೆಗಳಿಗೆ ಆಸ್ಪದವಿಲ್ಲ. ತ್ಯಾಗ ಅಡಗಿದೆ. ಸಹನೆ ತುಂಬಿದೆ. ಪೂರ್ಣ ಸಮರ್ಪಣಾಭಾವ ನರನಾಡಿಗಳಲ್ಲಿ ಹೊಕ್ಕಿರುತ್ತದೆ. ವಿಶ್ವಾಸ ಪೂರ್ಣ. ಸ್ನೇಹ ಪ್ರೇಮ ನಿರಂತರ ಇಂಪಾದ ಶೃತಿಗಾನವಾಗಿರುತ್ತದೆ.  ಗೆಳೆತನದಲ್ಲಿ ಕ್ಷಣದ ಮೌನ ಭರ್ಚಿಯಂತೆ ಚುಚ್ಚತ್ತೆ. ಅತಿ ಪುಟ್ಟ ಸಂಶಯ ದೃಢ ಬಾಂಧವ್ಯವನ್ಬೇ ಅಲುಗಾಡಿಸಿಬಿಡತ್ತೆ.  ಗೆಳೆತನದಲ್ಲಿ ಒಂದುಬಾರಿ ತಪ್ಪು ತಿಳುವಳಿಕೆ ಉದಯಿಸಿತೋ ಅದು ಕೆಲ ದಿನಗಳಲ್ಲಿ ಹೆಮ್ಮರವಾಗಿ ಗೆಳೆತನಕ್ಜೆ ಅಡ್ಡವಾಗಿ ಮಾಹಾ ಗೋಡೆಯಂತೆ ಬೆಳದು ನಿಲ್ಲತ್ತೆ.  ಆಪತ್ತಿನಲ್ಲಿ ಗೆಳೆಯ. ದ...

ಓ!! ವಿವೇಕಾತ್ಮನೇ ವಿವೇಕವನ್ನೀಯು...*

Image
  ಓ!! ವಿವೇಕಾತ್ಮನೇ ವಿವೇಕವನ್ನೀಯು...* ಆತ್ಮ‌ಮನಸ್ಸು, ಮನಸ್ಸಿನಲ್ಲಿ ವಿವೇಕತೆಯ ಜಾಲ ಹರಡಿಸುವವನು ಶ್ರೀಹರಿ. ಅವನೇ ವಿವೇಕಾತ್ಮ.‌ ಶ್ರೀಹರಿ ಬಿಂಬ. ನಾವು ಪ್ರತಿಬಿಂಬರು. ಪ್ರತಿಬಿಂಬರು ಸರ್ವಥಾ ಬಿಂಬನ ಅಧೀನ. "ನಡದು ನಡೆಸುವ, ನುಡಿದು ನಿಡಿಸುವ" ಇತ್ಯಾದಿ ಇತ್ಯಾದಿ...  ದೇವರನ್ನು ಕಾಣುವದು ಬಾಹ್ಯ ಇಂದ್ರಿಯಗಳಿಗೆ ಸಾಮರ್ಥ್ಯವಿರದು. ಕೇವಲ ಮನಸ್ಸಿಗೆ ಮಾತ್ರ ಸಾಧ್ಯವಿದೆ. ಬಾಹ್ಯ ಪದಾರ್ಥಗಳನ್ನು ನೋಡುವದು ಕಣ್ಣು. ಆದರೆ ಆ ಕಣ್ಣಿನಗೆ ನೂರಾರು ಪದಾರ್ಥಗಳ ಗೊಂದಲವುಂಟು ಮಾಡಿದರೆ, ತೋರಿಸುವ ಕಣ್ಣು ಕಾಣಿಸಲು ಅಸಮರ್ಥವಾಗುತ್ತದೆ. ಹಾಗೆಯೇ ದೇವರನ್ನೇ ಕಾಣುವ ಮನಸ್ಸಿಗೆ ಕೋಟಿ ಕೋಟಿ ಪದಾರ್ಥಗಳ ಸಂಬಂಧಗಳನ್ನು ಹಚ್ಚಿಸಿದಾಗ, ಗೊಂದಲವೋ ಗೊಂದಲವಾಗಿ ಯಾವದನ್ನು ಕಾಣಬೇಕೋ ಅದನ್ನು ಬಿಟ್ಟು ಕಂಡದ್ದು ಕಾಣಲು ತೊಡಗುತ್ತದೆ.  *ನಮ್ಮೊಳಗೆ ದೇವನಿದ್ದಾನೆ. ಪ್ರೇರಕನಾಗಿ ನಿಂತಿದಾನೆ. ನಮ್ಮ ಪರಮ ಹಿತೈಷಿಯಾಗಿಯೇ ಇದ್ದಾನೆ.  ಆ ದೇವರನ್ನು ಕಾಣುವ ನಮ್ಮ ಮನಸ್ಸು ಗದ್ದಲದಿಂದ ತುಂಬಿರುವದರಿಂದ ಅವನ ದಿವ್ಯ ಧ್ವನಿ ಕೇಳದಾಗಿದೆ, ಚುರುಕು ಓಡಾಟ ಕಾಣದಾಗಿದೆ......  ಯಾವದು ಹಿತ, ಯಾವದು ಅಹಿತ ಎಂಬ ವಿವೇಕ ಪೂರ್ಣನಾಗಿ ಯೋಚಿಸಿ, ಮೌನವೆಂಬ  ಝರಡಿ ಹಿಡಿದಾಗ  ಒತ್ತಡಗಳೆಂಬ ಎಲ್ಲ ಅಲೋಚನೆಗಳೂ ಕಸದ ಬುಟ್ಟಿಗೆ ಸೇರುತ್ತವೆ. ಆಗ ಧ್ಯಾನ. ಆ ಧ್ಯಾನದಲ್ಲಿ ದೇವರೇ ದೇವರು .. ನೀನೇ ನೀನು. ಕೇಳುವದು, ನೋಡುವದು, ಮೂಸುವದು, ಸ...

*ಕನ್ನಡಿಯಲ್ಲಿ ಕಂಡ ಮುಖ..!!*

Image
  ಕನ್ನಡಿಯಲ್ಲಿ ಕಂಡ ಮುಖ..!!* ಕನ್ನಡಿಯಲ್ಲಿ ಕಾಣುವ ಮುಖ ಸಾಮಾನ್ಯವಾಗಿ ನೈಜ ಮುಖವನ್ನು ಮುಚ್ಚಿಟ್ಟದ್ದೇ ಆಗಿರುತ್ತದೆ. ಅದಾಗುವದು ಇನ್ನೊಬ್ಬರಗಿಂತಲೂ ನಾನು ಭಾರೀ ಎಂದು ತೋರಿಸಲೋ ಅಥವಾ ತಮ್ಮದರ ಮೇಲಿನ ಅಸಂತೃಪ್ತಿಯೋ.....  ನಾನು ಭಾರೀ ಎಂದು ತೋರಿಸುವದೇನಿದೆ ಅದು ಒಂದು ಸ್ಪರ್ಧೆ. ಸ್ಪರ್ಧೆ ಜಗತ್ತಿಗೆ ಹಿತವನ್ನುಂಟು ಮಾಡುವದೇ.. ಆದರೆ ಅಸಂತೃಪ್ತಿ ಏನಿದೆ ಕುಗ್ಗಿಸಿ ಹಾಕುವಂತಹದ್ದೇ.. ಇತರರು ಸಂತೋಷದಿಂದ ಇರುವದನ್ನು ನೋಡಿದಾಗ ಕೆಲವರಿಗೆ ಸಹಿಸಲೇ ಆಗುವದಿಲ್ಲ. ಬಾಡಿಗೆ ಮನೆಯಲ್ಲಿ ಇರುವವರು ಅನುಭವಕ್ಕೆ ತಂದು ಕೊಂಡಿರುತ್ತಾರೆ.  ಬಾಡಿಗೆ ಮನುಷ್ಯ ಏಸಿ, ಫ್ರಿಡ್ಜ ಮೊದಲಾದದ್ದನ್ನು ತಂದ ಎಂದರೆ, ಮಾಲೀಕ ಮನೆ ಬಾಡಿಗೆ ಏರಿಸಿಯೇ ಬಿಡುತ್ತಾನೆ. ಬಾಡಿಗೆಯ ಮಕ್ಕಳು ಉತ್ತೀರ್ಣರಾದರೂ ಎಂದಾದರೆ, ರಾತ್ರಿ ಹತ್ತಕ್ಕೇ ಲೈಟ್ ಆರಿಸಬೇಕು ಎಂದು ಫರ್ಮಾನು ಹೂಡುತ್ತಾನೆ. ಅಚ್ಚುಕಟ್ಟು ಮಡಿ ಮಾಡುವ ಮನುಷ್ಯ ಇದ್ದ ಎಂದರೆ ನೀರೇ ಬಿಡುವದಿಲ್ಲ... ಹೀಗೆ ಅನೇಕ... ಇದು ಕೇವಲ ದೃಷ್ಟಾಂತ... (ಯಾರ ವೈಯಕ್ತಿಕವೂ ಅಲ್ಲ.)  ಹೀಗೆ ಮತ್ಸರದ ಕೆಂಡದಲ್ಲಿ ಬೆಂದು ಬಳಲಿಹೋದ ಮಂದಿಯು  ಮನಸ್ಥಿತಿ ಹೇಗಿರಬಹುದು ಎಂದು ತಿಳಿಯಲು ಒಂದು ಸುಂದರ ಕಥೆ....  ಒಂದು ಓಫೀಸ್. ಅನೇಕರು ಕೆಲಸಗಾರರು. ಒಬ್ಬ ಸ್ಟೋರ್ ಕೀಪರ್ ಗೆ ಅಲ್ಲೊಂದೇನೋ ಕವರ್ ಸಿಗತ್ತೆ. ತಂದು ಮೆನೆಜರ್ ಕೈಲಿ ಕೊಡುತ್ತಾನೆ. ನೋಡಿದ ಮೇನೆಜರ್ ಎತ್ತಿ ಬಿಸಾಡಿ ಬಿಡ್ತಾನೆ....

*ಅವಧೂತ ಜಯಣ್ಣ*

Image
 * ಅವಧೂತ ಜಯಣ್ಣ* ನಾನು ಕಂಡ ಅತ್ಯಂತ ಸಾತ್ವಿಕ ಸಜ್ಜನ ನಿಃಸ್ಪೃಹ ವ್ಯಕ್ತಿ ಎಂದರೆ ನನ್ನ ಅತ್ಯಂತ ಆತ್ಮೀಯ ಮಿತ್ರ ಹಾಗೂ ಶಿಷ್ಯ *ಸಿರಿವಾರ ಜಯಣ್ಣ* ಅಂದರೆ ತಪ್ಪಾಗದು. ತನ್ನ ಇಳೆ ಹಾಗೂ ಇಳಿ ವಯಸ್ಸುಗಳಲ್ಲಿ ಉತ್ತಮ ವಿರಕ್ತ ಅವಧೂತ ಜೀವನ ನಡೆಸಿದವ ಜಯಪ್ಪ.  ತನ್ನ ಜೀವಮಾನದಲ್ಲಿ ಸಾಧನೆಯನ್ನು ಉಳಿದು ಇನ್ಯಾವದನ್ನೂ (ಹೊಲ ಮನೆ ಹಣ ) ತನ್ನದು ಎಂದು ಮಾಡಿಕೊಳ್ಳದ ತನ್ನ ಹೆಸರಿನಿಂದ ಇಟ್ಟುಕೊಳ್ಳದ ಸಾದಕ ನಮ್ಮ ಜಯಣ್ಣ. ವಿಜಯರಾಯರ ಸಮಗ್ರ ಸುಳಾದಿಗಳ ಆಳವಾದ ಅಧ್ಯನ ಮಾಡಿದವ, ಸುಳಾದಿಗಳನ್ನು ಪ್ರಕಾಶಿಸಿದವ, ತೀರ್ಥಕ್ಷೇತ್ರಗಳನ್ನು ಸಂಚರಿಸಿದವ, ನಿರಂತರ ಜಪ ತಪ ಅಧ್ಯಯನ ಹಾಗೂ ಉಪಸನಾಶೀಲ ಇಂದು ನನ್ನನ್ನು ಅಗಲಿದ್ದು ಬಹಳೇ ಖೆದಕರ ಸಂಗತಿ. ಅವನಿಗೆ ಉತ್ತಮ ಸದ್ಗತಿಯಾಗಲಿ.  ಜೀವಮಾನದಲ್ಲಿ ಮೂರುಬಾರಿ ಇಪ್ಪತ್ತುನಾಲ್ಕು ಲಕ್ಷ ಗಾಯತ್ರೀಜಪ ಮಾಡಿದ ಉತ್ತಮ ತಪಸ್ವೀ. ಅವನೇ ತಿಳಿಸಿದ ಹಾಗೆ ಒಂದುಬಾರಿ ಬದರಿಯಲ್ಲಿ, ಮತ್ತೊಂದು ಬಾರಿ ತಿರುಪತಿಯಲ್ಲಿ ಮುಗದೊಂದು ಬಾರಿ ೮೦ ವರ್ಷದ ಜೀವನದಲ್ಲಿ. ನನ್ನ ಜೊತೆಗೆ ಎಲ್ಲ ಜ್ಙಾನಸತ್ರಗಳಿಗೂ ಭಾಗವಹಿಸುತ್ತಿದ್ದ. ಬದರಿಗೆ ಹೋದಾಗ ನಮ್ಮೆಲ್ಲರನ್ನು ಕಳುಹಿಸಿ ಇಪ್ಪತ್ತು ದಿನಗಳವರೆಗೆ ಇದ್ದು ನಿರಂತರ ಜಪ ಮಾಡಿದ ಧೀರ. ಅದೂ ತನ್ನ ಎಪ್ಪತ್ತನೇಯ ವಯಸ್ಸಿನಲ್ಲಿ.  ಕಲಬುರ್ಗಿಗೆ ಬರುವದು ನನ್ನ ಭೆಟ್ಟಿಗಾಗಿಯೇ. ಬಂದು ಮಾತಿಗೆ ಕುಳಿತರೆ ಸಾಧನೆಯ ವಿಷಯದ ಮಾತುಗಳನ್ನುಳಿದು ಬೇರೆ ಮಾತಾಡಿದ ಕ್ಷಣವನ್ನೂ ನ...

ಇಂದು ಯುವಕರ ಅವಸ್ಥೆ ಹೀಗೇಕೆ ..

Image
  ಇಂದು ಯುವಕರ ಅವಸ್ಥೆ ಹೀಗೇಕೆ ..  *ಶಾಂತಿ ಇಲ್ಲ...* ಹಿಂದೆ ಬಡತನದಲ್ಲಿಯೂ ಯುವಕರಲ್ಲಿ ಶಾಂತತೆ ಅಡಗಿತ್ತು. ಇಂದಿನ ಮಹಾ ಶ್ರೀಮಂತಿಕೆಯಲ್ಲಿ ಹುಡುಕಿದರೂ ಶಾಂತಿ ದೊರೆಯುತ್ತಿಲ್ಲ ಏಕೆ... ??  *ವಿದ್ಯೆಯಿಲ್ಲ* ಹಿಂದೆ ತಂದೆ ತಾಯಿಗಳನ್ನು ಬಿಟ್ಟು ಗುರುಗಳ ಹತ್ರ ದೂರದಲ್ಲಿ ಹೋಗಿ ಗುರು ಸೇವೆಯನ್ನೇ  ಮಾಡುತ್ತಿದ್ದರೂ ವಿದ್ಯೆ ಹರೆದು ಬರುತ್ತಿತ್ತು ವಿ  ವಿದ್ಯೆಗೋಸ್ಕರ ಕೋಟಿಕೋಟಿ ಹಣ ವ್ಯಚ್ಚ ಮಾಡಿದರೂ ನಮ್ಮ ವಿದ್ಯೇ ಏಕಿಲ್ಲ... ?? *ಸಮಾಧಾನ ದೂರಮಾತೇ.....* ಹಿಂದು ಏನಿಲ್ಲದಿದ್ದರೂ ಸಮಾಧಾನ ತೃಪ್ತಿ ಇರುತ್ತಿತ್ತು. ಇಂದು ಏನೆಲ್ಲ ಇದ್ದರೂ ಸಮಾಧಾನ ತೃಪ್ತಿಗಳು ಏಕೆ ಮರೀಚಿಕೆಯಾಗಿವೆ.... ? ಯುವಕರು ಕೇಳಿದ್ದು ಕೊಡಲು ಪಾಲಕರು ಸಮರ್ಥರಿದ್ದಾರೆ, ಕೊಟ್ಟೇಕೊಡುತ್ತಾರೆ. ಸ್ವಯಂ ತಮಗೇನು ಬೇಕು ಅದನ್ನು ಪಡೆಯಲು ಸಮರ್ಥರೂ ಆಗಿದ್ದಾರೆ ಹಾಗಿದ್ದರೂ...... *ನೆಮ್ಮದಿ ಹೇಳಿಕೊಳ್ಳಲು ಮಾತ್ರ..* ಸಮಯ ಹೇಗೆ ಕಳೆಯಲಿ ಎಂಬ ಚಿಂತೆ ಹಿಂದಿದ್ದರೂ ನೆಮ್ಮೆದಿ ಮನೆ ಮಾತಾಗಿತ್ತು. *ಕ್ಷಣವನ್ನೂ ಖಾಲಿ ಇಡಬಾರದು* ಎನ್ನುವಷ್ಟರಮಟ್ಟಿಗೆ  ವ್ಯಸ್ತರಾದ ನಮಗೆ ಇಂದಿಗೂ ಮನೆ ಮಠ ಮಂದಿರ ಕಛೇರಿ ಮಾರ್ಕೆಟು ಎಲ್ಲಿ ಹುಡುಕಿದರೂ ನೆಮ್ಮೆದಿ ಸಿಗುತ್ತಿಲ್ಲ ಏನಕೆ.... ???? *ಏಳಿಗೆ ನಿಲಕದ್ದು..* ಏಳಿಗೆ ಉನ್ನತಿ ಎಂಬ ಪದವೇ ನಿಲುಕದಮಾತಾಗಿದೆ. ಉನ್ನತಿಗೆ ಹೋಗುವದು ದೂರದ ವಿಚಾರ. ಉನ್ನತಿ ಅಂದರೆ ಏನು ಇಂದಿನ ಯುವಕರಿಗೆ ಗೊತ್ತೇ ...