ಇಂದು ಯುವಕರ ಅವಸ್ಥೆ ಹೀಗೇಕೆ ..
*ಶಾಂತಿ ಇಲ್ಲ...*
ಹಿಂದೆ ಬಡತನದಲ್ಲಿಯೂ ಯುವಕರಲ್ಲಿ ಶಾಂತತೆ ಅಡಗಿತ್ತು. ಇಂದಿನ ಮಹಾ ಶ್ರೀಮಂತಿಕೆಯಲ್ಲಿ ಹುಡುಕಿದರೂ ಶಾಂತಿ ದೊರೆಯುತ್ತಿಲ್ಲ ಏಕೆ... ??
*ವಿದ್ಯೆಯಿಲ್ಲ*
ಹಿಂದೆ ತಂದೆ ತಾಯಿಗಳನ್ನು ಬಿಟ್ಟು ಗುರುಗಳ ಹತ್ರ ದೂರದಲ್ಲಿ ಹೋಗಿ ಗುರು ಸೇವೆಯನ್ನೇ ಮಾಡುತ್ತಿದ್ದರೂ ವಿದ್ಯೆ ಹರೆದು ಬರುತ್ತಿತ್ತು ವಿ ವಿದ್ಯೆಗೋಸ್ಕರ ಕೋಟಿಕೋಟಿ ಹಣ ವ್ಯಚ್ಚ ಮಾಡಿದರೂ ನಮ್ಮ ವಿದ್ಯೇ ಏಕಿಲ್ಲ... ??
*ಸಮಾಧಾನ ದೂರಮಾತೇ.....*
ಹಿಂದು ಏನಿಲ್ಲದಿದ್ದರೂ ಸಮಾಧಾನ ತೃಪ್ತಿ ಇರುತ್ತಿತ್ತು. ಇಂದು ಏನೆಲ್ಲ ಇದ್ದರೂ ಸಮಾಧಾನ ತೃಪ್ತಿಗಳು ಏಕೆ ಮರೀಚಿಕೆಯಾಗಿವೆ.... ? ಯುವಕರು ಕೇಳಿದ್ದು ಕೊಡಲು ಪಾಲಕರು ಸಮರ್ಥರಿದ್ದಾರೆ, ಕೊಟ್ಟೇಕೊಡುತ್ತಾರೆ. ಸ್ವಯಂ ತಮಗೇನು ಬೇಕು ಅದನ್ನು ಪಡೆಯಲು ಸಮರ್ಥರೂ ಆಗಿದ್ದಾರೆ ಹಾಗಿದ್ದರೂ......
*ನೆಮ್ಮದಿ ಹೇಳಿಕೊಳ್ಳಲು ಮಾತ್ರ..*
ಸಮಯ ಹೇಗೆ ಕಳೆಯಲಿ ಎಂಬ ಚಿಂತೆ ಹಿಂದಿದ್ದರೂ ನೆಮ್ಮೆದಿ ಮನೆ ಮಾತಾಗಿತ್ತು. *ಕ್ಷಣವನ್ನೂ ಖಾಲಿ ಇಡಬಾರದು* ಎನ್ನುವಷ್ಟರಮಟ್ಟಿಗೆ ವ್ಯಸ್ತರಾದ ನಮಗೆ ಇಂದಿಗೂ ಮನೆ ಮಠ ಮಂದಿರ ಕಛೇರಿ ಮಾರ್ಕೆಟು ಎಲ್ಲಿ ಹುಡುಕಿದರೂ ನೆಮ್ಮೆದಿ ಸಿಗುತ್ತಿಲ್ಲ ಏನಕೆ.... ????
*ಏಳಿಗೆ ನಿಲಕದ್ದು..*
ಏಳಿಗೆ ಉನ್ನತಿ ಎಂಬ ಪದವೇ ನಿಲುಕದಮಾತಾಗಿದೆ. ಉನ್ನತಿಗೆ ಹೋಗುವದು ದೂರದ ವಿಚಾರ. ಉನ್ನತಿ ಅಂದರೆ ಏನು ಇಂದಿನ ಯುವಕರಿಗೆ ಗೊತ್ತೇ ಇಲ್ಲ.
*ಉನ್ನತಿಯ ಆಸೆಪಡಲೂ ಆಗದ ಅವಸ್ಥೆ..*
ನಮಗೆ ಉನ್ನತಿ ಆಗಿದೆ ಎಂಬುವದು ಇಲ್ಲ. ಉನ್ನತಿಯ ನೂರಾರು ಕನಸುಗಳೂ ಕಂಡರೂ ಈಡೇರುವ ಭರವಸೆ ಸರ್ವಥಾ ಇಲ್ಲ. ಹಾಗಾಗಿ ಮಹೋನ್ನತಿಯ ಕನಸು ಕನಸಾಗಿಯೇ ಉಳಿದಿವೆ, ಅಷ್ಟೇ ಆಗದೇ ಕೆಲೊಮ್ಮೆ ನುಚ್ಚುನೂರೂ ಆಗುತ್ತಿವೆ. .....
*ಇಷ್ಟಾರ್ಥಗಳು ಈಡೇರುತ್ತಿಲ್ಲ, ಈಡೇರಿದ ಇಷ್ಟಾರ್ಥ ಬಾಲಿಶ..*
ಇಂದು ಧಾರ್ಮಿಕ ಮಂದಿರಗಳು ತುಂಬ. ಧರ್ಮಬೋಧಕರು ಅನೇಕ. ಧಾರ್ಮಿಕತೆಯ ಮಾತೂ ಹೆಚ್ಚು. ಹೀಗಿದ್ದರೂ ನಮ್ಮ ಯಾವುದೇ ತರಹದ ಇಷ್ಟಾರ್ಥಗಳೂ ಈಡೇರುತ್ತಿಲ್ಲ. ಮೂಗಿಗೆ ಬೆಣ್ಣೆ ಸವರಿದ ಹಾಗೆ ಬಾಲಿಶವಾದ ತುಚ್ಛವಾದ ಕೆಲವು ಮಾತ್ರ ಇಷ್ಟಾರ್ಥಗಳು ಈಡೇರಿದಂತೆ ಕಾಣಿಸುತ್ತವೆ ಏಕೆ..... ???
*ಹೀಗೆಲ್ಲ ಆಗಲು ಕಾರಣಗಳೇನು . ? ಇವೆಲ್ಲದಕ್ಕೂ ಹೊಣೆಗಾರ ಯಾರು ?*
ಉತ್ತರ ಸಹಜ ಮತ್ತು ಸರಳ
* ತಪಸ್ಸು ಇಲ್ಲದಿರುವಿಕೆ. ತಪಸ್ಸನ್ನೇ ಮಾಡದ ನಾನೇ ನೇರ ಹೊಣೆಗಾರ.*
ಆರಕ್ಷಣೆಯ ತೊಡರಿನಲ್ಲಿ ಸಿಲುಕಿದ ಎಮಗೆ, ಸರ್ವವಿಧದಿಂದಲೂ ರಕ್ಷಣೆ ಕೊಡುವ ಏಕೈಕ ಉಪಾಯ ಅದು ಗಾಯತ್ರೀ ಜಪದ ತಪಸ್ಸು ಮಾತ್ರ.
ಬ್ರಾಹ್ಮಣರ ಮೂಲ ಗಾಯತ್ರೀ. ಗಾಯತ್ರಿಯಿಂದಲೇ ಸರ್ವಸಿದ್ಧಿ. ಗಾಯತ್ರಿಯಿಂದಲೇ ವಿಷ್ಣುಪ್ರೀತಿ.
ವಿಷ್ಣು ಪ್ರೀತಿಯೇ ನಮ್ಮ ಉನ್ನತಿಗೆ ಮೂಲ. ಗಾಯತ್ರೀ ಇಂದಲೇ ಸರ್ವಸ್ವ. ಗಾಯತ್ರೀಯಿಂದಲೂ ಸರ್ವವೂ ಸಿದ್ಧ.
*ಜಗತ್ತಿನಲ್ಲಿ ಅಸಾಧ್ಯ ಎಂದೇನಿದೆ ಅದನ್ನು ಸಾಧಿಸಲು ಇರುವ ಒಂದೇ ಒಂದು ಉಪಾಯವೆಂದರೆ ಅದು ಕೇವಲ ತಪಸ್ಸು.* ಅಂತಹ ತಪಸ್ಸು ಯುವಕರಿಗೆ ಇಂದು ಬೇಡವಾಗಿದೆ. ಮೋಬೈಲ್ ಅಲ್ಲಿ ಹತ್ತುಗಂಟೆ ಕಳೆಯಲು ಸಿದ್ಧ, ೪೫ ನಿಮಿಷದ ಗಾಯತ್ರಿ ಜಪಿಸೋ ಅಂದರೆ ಮೂಗು ಮುರಿಯುವ.
ಯುವಕ ತಾನು ತಪಸ್ಸು ಮಾಡಲು ತೊಡಗಿದರೆ ಹಿರಿಯರೇ ಮೊದಲ ಅಡ್ಡಗಾಲು ಹಾಕುವವರು. ಇದು ಇನ್ನೂ ಘೋರ ಅಪಾಯದ ಸಂಗತಿ.
ನನಗೆ ನನ್ನ ಹಿತ ಬೇಕಿದ್ದರೆ ಇಂದು ನಾನು ಸ್ವಾರ್ಥಿಯಾಗಿ,ಯಾರ ಮಾತಿಗೂ ಕಿವಿಗೊಡದೆ ನಮ್ಮ ಹಿತ ನಮ್ಮ ಏಳಿಗಾಗಿ ತಪಸ್ಸಿನಲ್ಲಿ ಒಂದು ಘಂಟೆಯಾದರೂ ಕಳಿಯಲು ಸಿದ್ಧನಾಗಲೇಬೇಕು.
ಸಕಲ ಯೋಗ್ಯ ಸತ್ಪುರುಷ ಅಧಿಕಾರಿ ಪುರುಷರೆಲ್ಲರೂ *ಗಾಯತ್ರೀಜಪ-* ಹಾಗೂ ಸ್ತ್ರೀಯರೆಲ್ಲರೂ *ರಾಮಕೃಷ್ಣ ಜಪ* ವನ್ನು ಆರಂಭಿಸೋಣ. ಆರಂಭಿಸಿದ್ದರೆ ಮುಂದೊರಿಸೋಣ. ಕಳೆದುಕೊಂಡ ವೈಭವ ಮತ್ತೆ ಪಡೆಯೋಣ.
ಎಲ್ಲರ ಜೊತೆಗೆ ಹರಟೆ ಹೊಡೆಯಲು ತುಂಬಾ ಸಮಯವಿದೆ, ದೇವರೊಟ್ಟಿಗೆ ಹರಟೆ ಕುಟ್ಟುವ ಸಮಯವಿಲ್ಲವಾ.... ???? ಖಂಡಿತಾ ಇದೆ. *ಆ ಸಮಯ ಜಪ ಸಮಯವೇ* ಆಗಿದೆ. ಅಂತಹ ಜಪ ಬಿಡೋಣವೇ. ... ??
ಹೆಚ್ಚೆಚ್ಚು ಯುವಕರಿಗೆ ಲೇಖನ ತಲುಪಿಸೋಣ. ಯಾರೊಬ್ಬ ಜಪಕ್ಕೆ ತಪಸ್ಸಿಗೆ ಅಣಿಯಾದರೂ ಸಾಕು. ಆ ಒಬ್ಬ ವ್ಯಕ್ತಿ ತಾಪಡೆದ ಜಪದ ಫಲ, ವೈಭವ ನಮ್ಮಂತಹ ನೂರು ಮಂದಿಗೆ ದಾರಿದೀಪವಾಗಬಹುದು.
*✍🏼✍🏼ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments