ಓ!! ವಿವೇಕಾತ್ಮನೇ ವಿವೇಕವನ್ನೀಯು...*
ಓ!! ವಿವೇಕಾತ್ಮನೇ ವಿವೇಕವನ್ನೀಯು...*
ಆತ್ಮಮನಸ್ಸು, ಮನಸ್ಸಿನಲ್ಲಿ ವಿವೇಕತೆಯ ಜಾಲ ಹರಡಿಸುವವನು ಶ್ರೀಹರಿ. ಅವನೇ ವಿವೇಕಾತ್ಮ. ಶ್ರೀಹರಿ ಬಿಂಬ. ನಾವು ಪ್ರತಿಬಿಂಬರು. ಪ್ರತಿಬಿಂಬರು ಸರ್ವಥಾ ಬಿಂಬನ ಅಧೀನ. "ನಡದು ನಡೆಸುವ, ನುಡಿದು ನಿಡಿಸುವ" ಇತ್ಯಾದಿ ಇತ್ಯಾದಿ...
ದೇವರನ್ನು ಕಾಣುವದು ಬಾಹ್ಯ ಇಂದ್ರಿಯಗಳಿಗೆ ಸಾಮರ್ಥ್ಯವಿರದು. ಕೇವಲ ಮನಸ್ಸಿಗೆ ಮಾತ್ರ ಸಾಧ್ಯವಿದೆ. ಬಾಹ್ಯ ಪದಾರ್ಥಗಳನ್ನು ನೋಡುವದು ಕಣ್ಣು. ಆದರೆ ಆ ಕಣ್ಣಿನಗೆ ನೂರಾರು ಪದಾರ್ಥಗಳ ಗೊಂದಲವುಂಟು ಮಾಡಿದರೆ, ತೋರಿಸುವ ಕಣ್ಣು ಕಾಣಿಸಲು ಅಸಮರ್ಥವಾಗುತ್ತದೆ. ಹಾಗೆಯೇ ದೇವರನ್ನೇ ಕಾಣುವ ಮನಸ್ಸಿಗೆ ಕೋಟಿ ಕೋಟಿ ಪದಾರ್ಥಗಳ ಸಂಬಂಧಗಳನ್ನು ಹಚ್ಚಿಸಿದಾಗ, ಗೊಂದಲವೋ ಗೊಂದಲವಾಗಿ ಯಾವದನ್ನು ಕಾಣಬೇಕೋ ಅದನ್ನು ಬಿಟ್ಟು ಕಂಡದ್ದು ಕಾಣಲು ತೊಡಗುತ್ತದೆ.
*ನಮ್ಮೊಳಗೆ ದೇವನಿದ್ದಾನೆ. ಪ್ರೇರಕನಾಗಿ ನಿಂತಿದಾನೆ. ನಮ್ಮ ಪರಮ ಹಿತೈಷಿಯಾಗಿಯೇ ಇದ್ದಾನೆ. ಆ ದೇವರನ್ನು ಕಾಣುವ ನಮ್ಮ ಮನಸ್ಸು ಗದ್ದಲದಿಂದ ತುಂಬಿರುವದರಿಂದ ಅವನ ದಿವ್ಯ ಧ್ವನಿ ಕೇಳದಾಗಿದೆ, ಚುರುಕು ಓಡಾಟ ಕಾಣದಾಗಿದೆ...... ಯಾವದು ಹಿತ, ಯಾವದು ಅಹಿತ ಎಂಬ ವಿವೇಕ ಪೂರ್ಣನಾಗಿ ಯೋಚಿಸಿ, ಮೌನವೆಂಬ ಝರಡಿ ಹಿಡಿದಾಗ ಒತ್ತಡಗಳೆಂಬ ಎಲ್ಲ ಅಲೋಚನೆಗಳೂ ಕಸದ ಬುಟ್ಟಿಗೆ ಸೇರುತ್ತವೆ. ಆಗ ಧ್ಯಾನ. ಆ ಧ್ಯಾನದಲ್ಲಿ ದೇವರೇ ದೇವರು .. ನೀನೇ ನೀನು. ಕೇಳುವದು, ನೋಡುವದು, ಮೂಸುವದು, ಸ್ಪರ್ಶಿಸುವದು ಎಲ್ಲವೂ ದೇವರನ್ನೇ......*
ಆತ್ಮಘಾತುಕ ವಿಚಾರಗಳನ್ನು ಸೆದೆಬಡಿಬೇಕು....
ಒಂದು ಬಾರಿ ಒಂದು ವಿಷಯ ಮನಸ್ಸಿನಲ್ಲಿ ಕುಳಿತಾಗ, ಅದನ್ನು ಮನಸ್ಸಿನಿಂದ ಹೊರ ಹಾಕಲು ಸಾಧ್ಯವೆ.. ?? ಖಂಡಿತ ಸಾಧ್ಯವಿದೆ. ಮನಸ್ಸು ತುಂಬ ವಿಚಿತ್ರ. ಅದರ ಶಕ್ತಿ ಅತ್ಯದ್ಭುತ. ಭಾವನಾತ್ಮಕವಾಗಿ ಒಮ್ಮೆ ಒಂದು ಸಲ ಒಂದು ವಿಷಯ ಜೋಡಣೆ ಆಯಿತೂ ಎಂದಾದರೆ ಅದು ಎಂದಿಗೂ ಮರಿಯುವದಿಲ್ಲ. ಸಿಗದಾದಾಗ ಕ್ಷಣ ಕ್ಷಣಕ್ಕೂ ಚಡಪಡಿಸುತ್ತದೆ. ಆದರೆ ಒಂದೇ ಒಂದು ಬಾರಿ ಅತ್ಯಂತ ಕಠಿಣ ಶ್ರಮದಿಂದ ಮರೆತುಬಿಡುವ ಚಟ ಹಾಕಿತೂ ಎಂದಾದರೆ, ಇನ್ನೆಂದೂ ಮರೆಯದ ಹಾಗೆ ಉಳಿಸಿಕೊಳ್ಳುವದಿಲ್ಲ. ಇದು ಮನಸ್ಸಿನ ಶಕ್ತಿ.. ಮನಸ್ಸಿನ ಸ್ವಭಾವ....
ಮನಸ್ಸಿನಲ್ಲಿ ಹಿತ ಅಹಿತ ಪದಾರ್ಥಗಳ ಪಟ್ಟಿಯನ್ನು ಅತ್ಯಂತ ವಿವೇಕದಿಂದ ಮಾಡಬೇಕು. ಕಸದಂತೆ ಇರುವ, ಅಹಿತವಾದ, ಆತ್ಮಘಾತುಕವಾದ ಪದಾರ್ಥಗಳನ್ಮು ತುಂಬ ಕಠಿಣ ಪರಿಶ್ರಮದಿಂದಲೇ ಒಂದೊಂದರಂತೆ ದೂರ ಮಾಡಬೇಕು. ದೂರ ಮಾಡುವ ಹವ್ಯಾಸ ಬೆಳೆದಂತೆ, ದೂರ ಮಾಡುವ ಚಟ ಬೆಳಿಯುತ್ತದೆ. ಆಗ ಕೇವಲ ಹಿತವಾದ ಅಂದರೆ ಪರಮ ಹಿತೈಷಿಯಾದ ದೇವರೇ ಒಬ್ಬ ಮನಸ್ಸಿನಲ್ಲಿ ಉಳಿಯುವ.
ಭಾರವಾದ ಎಲ್ಲವೂ ಹೊರಹಾಕಿದಂತೆ ಆಗುತ್ತದೆ. ಆತ್ಮನಿಗಿಂತಲೂ ಹಗುರಾದ ಪರಾಮಾತ್ಮನನ್ನು ಈ ಮನಸ್ಸಿಗೆ ಹೊರಲು ಅತ್ಯಂತ ಸುಲಭ. ಒಳಗಣ್ಣು ತೆರೆದರೆ ದೇವರೇ... ಒಳಗಿವಿ ತೆರೆದರೇ ದೇವರ ಶಬ್ದವೇ... ಒಳ ವಾಗಿಂದ್ರಯ ತೆರೆದರೆ ದೇವರ ಸ್ತುತಿಯೇ... ಹೀಗೆ ಮನಸ್ಸಿನ traffick ಕಡಿಮೆ ಮಾಡಿಕೊಂಡು ಗಮ್ಯವನ್ನು ಅತಿಶೀಘ್ರದಲ್ಲಿ ತಲುಪಲು ಸಾಧ್ಯ. ದೇವರನ್ನು ತಲುಪಿಸುವ ವಿಧಾನವೇ ಧ್ಯಾನ ಎಂದೆನಿಸುಕೊಳ್ಳುತ್ತದೆ... ಇಷ್ಟೆಲ್ಲ ಪ್ರಕ್ರಿಯೆ ನಮ್ಮಿಂದ ಸಾಧ್ಯವೇ.... ?? ನನ್ನೊಬ್ಬನಿಂದ ಸರ್ವಥಾ ಸಾಧ್ಯವಿಲ್ಲ. ಗುರುಬಲ ಬೇಕು. *ವಿವೇಕಾತ್ಮ* ನ ಕರುಣೆ ಅವಶ್ಯವಾಗಿ ಬೇಕು........
ಇಪ್ಪತ್ತುನಾಲಕು ಘಂಟೆಯ ಧ್ಯಾನದ ಅಪೇಕ್ಷೆ ಈಗಂತೂ ಸರ್ವಥಾ ಇಲ್ಲ. ಕನಿಷ್ಠ ಒಂದೋ, ಎರಡೋ, ಐದೋ, ಹತ್ತೋ ನಿಮಿಷದ ಧ್ಯಾನ ಕೊಡು. ಆ ಧ್ಯಾನದಲ್ಲಿಯೇ ನಿನ್ನೆದುರಿಗೆ ಸುಖದುಃಖಗಳನ್ನು ತೋಡಿಕೊಳ್ಳುವದೋ, ಹಿತಾಹಿತವನ್ನು ಬೆಡಿಕೊಳ್ಳುವದೊ, ಝಗಳವಾಡುವದೋ, ಸಿಟ್ಟು ಮಾಡಿಕೊಳ್ಳುವದೋ, ಪ್ರೀತಿ ಅಂತಃಕರಣ ತೋರಿಸಿಕೊಳ್ಳುವದೋ, ಅಥವಾ ಕಣ್ಣೀರಿಟ್ಟು ಗೊಳೋ ಎಂದು ಅಳುವದೊ, ನೀ ದಯಪಾಲಿಸಿದ ವೈಭವವನ್ನು ಹಂಚಿಕೊಳ್ಳುವದೋ, ನಿನ್ನ ಮಹಿಮೆಯನ್ನು ಹುಚ್ಚೆದ್ದು ಹಾಡಿ ಹೊಗಳಲೋ, ನಿನನ್ನ ಹಾಗೂ ನಿನ್ನವರ ಶಕ್ತಿಯನ್ನು ತಿಳಿದು ಕೊಂಡಾಡಲೋ ಒಟ್ಟಾರೆಯಾಗಿ ಏನಿದ್ದರೂ ಅದು ನಿನ್ನೊಟ್ಟಿಗೆ ಮಾತ್ರ. ಈ ಧ್ಯಾನವೇ ನನ್ನ ಈ ದರಿದ್ರರೋಗಕ್ಕೆ ಮದ್ದು ಇದ್ದ ಹಾಗೆ ಉಪಯೋಗಿಸುತ್ತೇನೆ....
*ಓ ವಿವೇಕಾತ್ಮನೇ ಎನ್ನ ಕೂಗಿಗೆ ಓಗೊಡು... ನಿನಗೆ ಮೊರೆ ಬಂದಿರುವೆ... ಸಹಕರಿಸು.. ಕರುಣಿಸು... ಪ್ರೇರಿಸು... ಅನುಗ್ರಹಿಸು.... ನಿನಗೆ ಅನೇಕಾನೇಕ, ಕೋಟಿ ಕೋಟಿ, ಅನಂತಾನಂತ ವಂದನೆಗಳು. ನಮಸ್ಕಾರಗಳು....🌹🌹🌹*
*✍🏽✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ.. ಸಿರವಾರ.
Comments