ಗೆಳೆತನ ತುಂಬ ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ.


 *ಗೆಳೆತನ ತುಂಬ  ಸೂಕ್ಷ್ಮ* ಗೆಳೆತನ ಇದೊಂದು ಮಧುರ ಬಾಂಧವ್ಯ.


ಒಳ್ಳೆಯ ಗೆಳಯರು ಸಿಗುವದೇ ಕಠಿಣ. ಸನ್ಮಾರ್ಗ ತೋರುವವರು, ಸಾಧನೆ ಮಾಡಿಸುವವರು ತುಂಬ ವಿರಳ. ಸನ್ಮಾರ್ಗ ತೋರುವ ಅಥವಾ ಮೆಲೆತ್ತರಕ್ಜೆ ಬೆಳಿಸುವ ಗೆಳೆಯ ಸಿಕ್ಕಾಗ ಆ ಗೆಳೆತನ ಉಳಿಸಿಕೊಳ್ಳುವದು ತುಂಬ ಕಠಿಣ.


 ಗೆಳತನದಲ್ಲಿ ತಗ್ಗು ಬಗ್ಗುವಿಕೆಗಳು ಇವೆ. ನಾನು ನನ್ನದು ಎಂಬವುಗಳಿಗೆ ಅಲ್ಲಿ ಆಸ್ಪದವಿಲ್ಲ. ನನ್ನದೇ ಆಗಬೇಕು ಎಂಬ ದರ್ಬಾರವೂ ಇಲ್ಲ.  ಅಂದರೆ ದುಃಖವಿಲ್ಲ. ಹೊಗಳಿದರೆ ಹುಮ್ಮಸ್ಸಿಲ್ಲ. ಮೊದಲೇ ಮಾತಾಡಬೇಕು ಎಂಬ ಬಿಗುಮಾನವಿಲ್ಲ. ಆಡುವ ಮಾತುಗಳಲ್ಲಿ ಚುಚ್ಚುವಿಕೆ ಇಲ್ಲ. ಆಡುವ ಮಾತು ಚೇತೋಹಾರಿ ಮಾತುಗಳೇ. ಗೆಳೆತನದ ಗಟ್ಟಿತನದಮುಂದೆ ಎಂತಹ ಕಷ್ಟ ಆಪತ್ತುಗಳ ಸರಣಿಗಳು ಬಂದರೂ ತುಂಡು ತುಂಡು ಆಗಿಹೋಗುತ್ತವೆ. 


ಗೆಳತನದಲ್ಲಿ ಆಸೆ ಆಕಾಂಕ್ಷೆಗಳಿಗೆ ಆಸ್ಪದವಿಲ್ಲ. ತ್ಯಾಗ ಅಡಗಿದೆ. ಸಹನೆ ತುಂಬಿದೆ. ಪೂರ್ಣ ಸಮರ್ಪಣಾಭಾವ ನರನಾಡಿಗಳಲ್ಲಿ ಹೊಕ್ಕಿರುತ್ತದೆ. ವಿಶ್ವಾಸ ಪೂರ್ಣ. ಸ್ನೇಹ ಪ್ರೇಮ ನಿರಂತರ ಇಂಪಾದ ಶೃತಿಗಾನವಾಗಿರುತ್ತದೆ. 


ಗೆಳೆತನದಲ್ಲಿ ಕ್ಷಣದ ಮೌನ ಭರ್ಚಿಯಂತೆ ಚುಚ್ಚತ್ತೆ. ಅತಿ ಪುಟ್ಟ ಸಂಶಯ ದೃಢ ಬಾಂಧವ್ಯವನ್ಬೇ ಅಲುಗಾಡಿಸಿಬಿಡತ್ತೆ. 


ಗೆಳೆತನದಲ್ಲಿ ಒಂದುಬಾರಿ ತಪ್ಪು ತಿಳುವಳಿಕೆ ಉದಯಿಸಿತೋ ಅದು ಕೆಲ ದಿನಗಳಲ್ಲಿ ಹೆಮ್ಮರವಾಗಿ ಗೆಳೆತನಕ್ಜೆ ಅಡ್ಡವಾಗಿ ಮಾಹಾ ಗೋಡೆಯಂತೆ ಬೆಳದು ನಿಲ್ಲತ್ತೆ. 


ಆಪತ್ತಿನಲ್ಲಿ ಗೆಳೆಯ. ದುಃಖದಲ್ಲಿ ಗೆಳೆಯ. ಕಷ್ಟಗಳು ಎದುರಾದಾಗ ಗೆಳೆಯ. ಅಪವಾದಗಳು ಬಂದಾಗ ಗೆಳೆಯ. ಸುಖವಾದಾಗ ಗೆಳೆಯ. ಯಶಸ್ಸು ಸಿಕ್ಕಾಗ ಗೆಳೆಯ. ಉನ್ಮತ್ತನಾಗಿ ದಾರಿತಪ್ಪಿದಾಗ ಗೆಳೆಯ. ಮಾರ್ಗದರ್ಶಕ ಗೆಳೆಯ. ಧರ್ಮಬೋಧಕ ಗೆಳೆಯ.  ಧರ್ಮ ಕರ್ಮಗಳಲ್ಲಿ ಗೆಳೆಯ. ಹೀಗೆ ಪ್ರಿಯೊಂದರಲ್ಲೂ  ಗೆಳೆಯ ಬೇಕು. 


ಈ ಎಲ್ಲತರಹದ ಗೆಳೆತನಕ್ಕೆ ಸುಧಾಮ ಕೃಷ್ಣರು ಒಂದೆಡೆ ನಿದರ್ಶನರಾದರೆ, ಮತ್ತೊಂದೆಡೆ *ಕೃಷ್ಣ ಪಾಂಡವರು.*


*ಕೃಷ್ಣನ ಉಸಿರು ಪಾಂಡವರಾದರೆ, ಪಾಂಡವರ ಜೀವ ಕೃಷ್ಣ* ಹಾಗಾಗಿಯೇ ರಾಜಸೂಯದಲ್ಲಿ ಕೃಷ್ಣ. ವನವಾಸದಲ್ಲಿ ಕೃಷ್ಣ. ಯುದ್ಧದಲ್ಲಿ ಕೃಷ್ಣ. ಬ್ರಹ್ಮಾಸ್ತ್ರ ಬಂದಾಗ ಕೃಷ್ಣ. ರಾಜ್ಯ ದೊರೆತಾಗ ಕೃಷ್ಣ. ಅನುದಿನ ಅನುಕ್ಷಣ ಮನಸ್ಸಿನಲ್ಲ ಸದಾ ವಿರಾಜ ಮಾನ ಕೃಷ್ಣ. ಅಂತೆಯೇ *ಅವಿಜ್ಙಾತ ಸಖ ಶ್ರೀಕೃಷ್ಣ* ನಿಜವಾದ ಸಖ ಶ್ರೀಕೃಷ್ಣ ಮಾತ್ರ. *ಸುಖವಾಗಲಿ ಬಹು ದುಃಖವಾಗಲಿ ಸಖ ನೀನಾಗಿರು ಪಾಂಡುರಂಗ* 


*ಮರೆತರೂ, ಅವಮಾನಿಸಿದರೂ, ಅಂದರೂ ಮರೆಯಾಗದವ ಗೆಳೆಯ*


ಕೃಷ್ಣ ದೇವರು ಎನ್ನುವದನ್ನೇ ಮರೆತ ಧರ್ಮ. ಕೃಷ್ಣನನ್ನು ಅವಮಾನಿಸಿದ ಅರ್ಜುನ. ಕೃಷ್ಣನೂ ಎಮ್ಮ ದಾಸನಾಗಲಿ ಎಂದು ಕರ ಕೊಡಲು ಆಜ್ಙಾಪಿಸಿದ ನಕುಲ. ಕೃಷ್ಣನಿಂದಲೇ ಕುಲ ನಶಿಸಿತು ಎಂದ ಸಹದೇವ. ಹೀಗೆಲ್ಲ ಅವಸ್ಥೆ ಬಂದರೂ  ಕೃಷ್ಣ ಮಾತ್ರ ನಾ ಎಂದಿಗೂ ಮರೆಯಾಗದ ಗೆಳೆಯ ಅಂದರೆ ಶ್ರೀಷ್ಣ ಮಾತ್ರ. ಅಂತೆಯೇ ಕೃಷ್ಣ ಅವಿಜ್ಙಾತ ಸಖ.


ಇಂತಹ ಕೃಷ್ಣನ ಗೆಳೆತನ ಸಾಧಿಸೋಣ. ಕೃಷ್ಣ ಸನ್ನಿಧಾನವಿರುವ ದೇವತೆಗಳೆ ಗೆಳತನ ಪಡೆಯೋಣ. ಕೃಷ್ಣನ ವಿಭೂತಿರೂಪದಂತಿರುವ ಗುರುಗಳ ಗೆಳೆತನ ದೃಢ ಮಾಡಿಕೊಳ್ಳೋಣ. ಈ ಕೃಷ್ಣನ ಅನೇಕ ಗುಣಗಳನ್ನು ಹೊಂದಿದ ಗೆಳೆಯರ ಗೆಳೆತನ ಸಂಪಾದಿಸಿಕೊಳ್ಳೋಣ.


*ಗೆಳೆತನದ ದಿನದ ಹಾರ್ದಿಕ ಶುಭ ಹಾರೈಕೆಗಳು* ಕೋರುವ


*✍🏼✍🏼✍🏼ನ್ಯಾಸ*

ಗೋಪಾಲ ದಾಸ

(ವಿಜಯಾಶ್ರಮ, ಸಿರವಾರ)

Comments

Popular posts from this blog

*ಕೃಷ್ಣಾಷ್ಟಮೀ ಸಂಕಲ್ಪ ಸ್ನಾನ ಪೂಜೆ ಅರ್ಘ್ಯ ಸಮರ್ಪಣ - ಮಂತ್ರಗಳು*

* ಅನಿಷ್ಟ ಪರಿಹರಿಸಿಕೊಳ್ಳಲು, ಪುಣ್ಯಘಳಿಸಲು ಒಂದು ಸದವಕಾಶ*