*ಅವಧೂತ ಜಯಣ್ಣ*
ನಾನು ಕಂಡ ಅತ್ಯಂತ ಸಾತ್ವಿಕ ಸಜ್ಜನ ನಿಃಸ್ಪೃಹ ವ್ಯಕ್ತಿ ಎಂದರೆ ನನ್ನ ಅತ್ಯಂತ ಆತ್ಮೀಯ ಮಿತ್ರ ಹಾಗೂ ಶಿಷ್ಯ *ಸಿರಿವಾರ ಜಯಣ್ಣ* ಅಂದರೆ ತಪ್ಪಾಗದು.
ತನ್ನ ಇಳೆ ಹಾಗೂ ಇಳಿ ವಯಸ್ಸುಗಳಲ್ಲಿ ಉತ್ತಮ ವಿರಕ್ತ ಅವಧೂತ ಜೀವನ ನಡೆಸಿದವ ಜಯಪ್ಪ. ತನ್ನ ಜೀವಮಾನದಲ್ಲಿ ಸಾಧನೆಯನ್ನು ಉಳಿದು ಇನ್ಯಾವದನ್ನೂ (ಹೊಲ ಮನೆ ಹಣ ) ತನ್ನದು ಎಂದು ಮಾಡಿಕೊಳ್ಳದ ತನ್ನ ಹೆಸರಿನಿಂದ ಇಟ್ಟುಕೊಳ್ಳದ ಸಾದಕ ನಮ್ಮ ಜಯಣ್ಣ.
ವಿಜಯರಾಯರ ಸಮಗ್ರ ಸುಳಾದಿಗಳ ಆಳವಾದ ಅಧ್ಯನ ಮಾಡಿದವ, ಸುಳಾದಿಗಳನ್ನು ಪ್ರಕಾಶಿಸಿದವ, ತೀರ್ಥಕ್ಷೇತ್ರಗಳನ್ನು ಸಂಚರಿಸಿದವ, ನಿರಂತರ ಜಪ ತಪ ಅಧ್ಯಯನ ಹಾಗೂ ಉಪಸನಾಶೀಲ ಇಂದು ನನ್ನನ್ನು ಅಗಲಿದ್ದು ಬಹಳೇ ಖೆದಕರ ಸಂಗತಿ. ಅವನಿಗೆ ಉತ್ತಮ ಸದ್ಗತಿಯಾಗಲಿ.
ಜೀವಮಾನದಲ್ಲಿ ಮೂರುಬಾರಿ ಇಪ್ಪತ್ತುನಾಲ್ಕು ಲಕ್ಷ ಗಾಯತ್ರೀಜಪ ಮಾಡಿದ ಉತ್ತಮ ತಪಸ್ವೀ. ಅವನೇ ತಿಳಿಸಿದ ಹಾಗೆ ಒಂದುಬಾರಿ ಬದರಿಯಲ್ಲಿ, ಮತ್ತೊಂದು ಬಾರಿ ತಿರುಪತಿಯಲ್ಲಿ ಮುಗದೊಂದು ಬಾರಿ ೮೦ ವರ್ಷದ ಜೀವನದಲ್ಲಿ.
ನನ್ನ ಜೊತೆಗೆ ಎಲ್ಲ ಜ್ಙಾನಸತ್ರಗಳಿಗೂ ಭಾಗವಹಿಸುತ್ತಿದ್ದ. ಬದರಿಗೆ ಹೋದಾಗ ನಮ್ಮೆಲ್ಲರನ್ನು ಕಳುಹಿಸಿ ಇಪ್ಪತ್ತು ದಿನಗಳವರೆಗೆ ಇದ್ದು ನಿರಂತರ ಜಪ ಮಾಡಿದ ಧೀರ. ಅದೂ ತನ್ನ ಎಪ್ಪತ್ತನೇಯ ವಯಸ್ಸಿನಲ್ಲಿ.
ಕಲಬುರ್ಗಿಗೆ ಬರುವದು ನನ್ನ ಭೆಟ್ಟಿಗಾಗಿಯೇ. ಬಂದು ಮಾತಿಗೆ ಕುಳಿತರೆ ಸಾಧನೆಯ ವಿಷಯದ ಮಾತುಗಳನ್ನುಳಿದು ಬೇರೆ ಮಾತಾಡಿದ ಕ್ಷಣವನ್ನೂ ನಾನು ನೋಡಿಲ್ಲ. ಅಷ್ಟು ಸಾಧನೆಯ ರುಚಿ.
ನಿತ್ಯವೂ ನೂರೆಂಟು ಸಾಲಿಗ್ರಾಮ ಸಹಸ್ರ ಗಾಯತ್ರೀಜಪ ತಪ್ಪಿಸುವದಿಲ್ಲ ಎಂಬ ಮಾತೇ ಅನೇಕ ನಮ್ಮ ಬಳಿ ಪಾಠಕ್ಕೆ ಬರುವವರಿಗೆ ಸ್ಫೂರ್ತಿಯಾಗಿರುತ್ತಿತ್ತು.
ಜಯಣ್ಣನ ಮಗ ಚಿ ಗೋಪಾಲದಾಸ ಅವರ ಅನೇಕ ಚರ್ಯೆಗಳನ್ನು ಸಂಗ್ರಹಿಸಿ ಪುಟ್ಟ ಸೇವೆಯನ್ನು ಸಲ್ಲಿಸಿದ್ದಾನೆ. ಬದರೀ ಕಾಶೀ ಅಯೋಧ್ಯಾ ಇತ್ಯಾದಿ ಊರುಗಳಲ್ಲಿ ಜರುಗಿದ ಎಲ್ಲ ಚರ್ಯೆಗಳನ್ನೂ ಜಯಪ್ಪ ನನ್ನ ಮುಂದೇ ಕಾಲಕಾಲಕ್ಕೆ ತಿಳಿಸಿದ್ದಾನೆ. ನಮ್ಮೀರ್ವರ ಸಂಬಂಧ ನಾಲ್ವತ್ತು ವರ್ಷಕ್ಕೂ ಮಿಗಿಲಾದ ಸಂಬಂಧ. ನಮ್ಮ ಮಣ್ಣೂರಿನ ಅವಧಾನಿ ಮಧ್ವಾಚಾರ್ಯರ ಶಿಷ್ಯ.
ದೇವರು ಗುರುಗಳು ಅವನಿಗೆ ಅನುಗ್ರಹಿಸಲಿ.
ಪಂ ಅವಧಾನಿ ರಾಮಾಚಾರ್ಯ.
ಮುಕ್ಕಾಂ ವಿಜಯಪುರ.
Comments
ಅವಧೂತರಿಗೆ ಅವಧೂತರೇ ಮಿತ್ರರಾಗುವದು....