*ಓ ಸುಲಭನೇ !!!! ನಿನ್ನಷ್ಟು ಸುಲಭರು ಯಾರು ಇರಲಿಕ್ಕಿಲ್ಲ ಅಲ್ವೇ....*
*ಓ ಸುಲಭನೇ !!!! ನಿನ್ನಷ್ಟು ಸುಲಭರು ಯಾರು ಇರಲಿಕ್ಕಿಲ್ಲ ಅಲ್ವೇ....* ಹಿತವಾದದ್ದು ಒಳಿತಾದದ್ದು ಅಂತ ಏನಿದೆ ಅದು ಎಂದಿಗೂ ದುರ್ಲಭವೇ. ಅಹಿತವಾದದ್ದು ಕೆಟ್ಟದ್ದು ಅಂತ ಏನೇನಿದೆ ಅದೆಲ್ಲವೂ ಅತ್ಯಂತ ಸುಲಭವೇ. ಅಂತೆಯೇ ಧರ್ಮ ಅತ್ಯಂತ ದುರ್ಲಭ. ಸತ್ಯ ದುರ್ಲಭ. ದಯೆ ಕ್ಷಮೆ ದುರ್ಲಭವೇ. ಸಹನೆ ಅತೀ ದುರ್ಲಭ. ಜ್ಙಾನ ಇದುವೂ ದುರ್ಲಭವೇ. ಅಧರ್ಮ, ಅಜ್ಙಾನ, ದ್ವೇಶ, ಮಾತ್ಸರ್ಯ, ಮೊದಲಾದ ಎಲ್ಲವೂ ಅತ್ಯಂತ ಸುಲಭವೇ ಆಗಿದೆ ಇಂದಿನ ಕಾಲದಲ್ಲಿ..... ಇಂದಿನ ಕಾಲದಲ್ಲಿ ನಮ್ಮ ಬ್ರಾಹ್ಮಣ ಯುವಕರಿಗೆ ಓದು ದುರ್ಲಭ, ಕೆಲಸ ದುರ್ಲಭ, ಧರ್ಮ ದುರ್ಲಭ, ಮದುವೆ ದುರ್ಲಭ, ಸೌಖ್ಯ ದುರ್ಲಭ, ಹಣ ದುರ್ಲಭ, ಪ್ರತಿಷ್ಠೆ ಕೀರ್ತಿಗಳೂ ದುರ್ಲಭ, ಶಾಂತಿ ಸಮಾಧಾನ ದುರ್ಲಭ, ಸಂಧ್ಯಾವಂದನೆ ಪೂಜೆ ಮಹಾದುರ್ಲಭ, ಪಾಠ ಉಪನ್ಯಾಸಗಳಂತೂ ಹೇಳತೀರದಷ್ಟು ದುರ್ಲಭ. ಹೀಗೆ ಇಂದಿನ ಯುವಕರು ಪಡೆಯಬೇಕಾದದ್ದು ಏನೇನಿದೆ ಅದೆಲ್ಲವೂ ದುರ್ಲಭವೇ ಆಗಿದೆ. ಉತ್ತಮ ಸ್ನೇಹಿತರು ಸಿಗುವದು ದುರ್ಲಭ. ಸ್ನೇಹ ಬೆಳಿಸಿಕೊಳ್ಳುವದು ಇನ್ನೂ ದುರ್ಲಭ. ಸ್ನೇಹ ಉಳಿಸಿಕೊಳ್ಳುವದಂತೂ ಮಹಾ ದುರ್ಲಭ. ಇದೇರೀತಿ ಬಂಧುಗಳು, ಕುಲ, ಸಮಾಜ, ಕುಲ ಗುರುಗಳು, ಆಪ್ತರು, ಹಿತೈಷಿಗಳು, ಮಾರ್ಗದರ್ಶಕರು, ಪ್ರತಿಯೊಂದೂ ದುರ್ಲಭವೇ..... *ಕೆಟ್ಟದ್ದನ್ನು ಹೇಳುವವರು ನೂರು ಜನರು ಸಿಗಬಹುದು, ಸಿಕ್ಕೇ ಸಿಗುತ್ತಾರೆ. ಒಳಿತನ್ನು ಹೇಳುವವರು ಸಿಗಲ್ಲ. ಸಿಕ್ಕರೂ ಮಾತು ಕೇಳಲು ಮನಸ್ಸೇ ಆಗಲ್ಲ.... ಅನಾಯಾ...