*ಹಠ....*
*ಹಠ....* ಹಠ ಸಾಧಿಸಬೇಕೋ ?? ಅಥವಾ ಹಠವನ್ನು ಬಿಡಬೇಕೋ... ?? ಎಂಬೆರೆಡು ಪ್ರಶ್ನೆಗೆ ಹಠಸಾಧಿಸಲೇಬೇಕು, ಹಠವನ್ನು ಬಿಡಲೇಬೇಕು. ಎಂಬೀರಿತಿಯಾಗಿಯೇ ಉತ್ತರ ಪಡೆಯಬಹುದು. ಹಠ ಜೀವನದ ಯಶಸ್ಸು ಅಯಶಸ್ಸುಗಳೆರಡಕ್ಕೂ ಬೇಕು. ಹಠದಲ್ಲಿ ಎರಡು ವಿಧ. ಯೋಗ್ಯವಾದ ಹಠ ಮತ್ತು ಅಯೋಗ್ಯವಾದ ಹಠ. ಯೋಗ್ಯ ಹಠ ಅವಶ್ಯವಾಗಿ ಬೇಕು. ಅಯೋಗ್ಯ ಹಠ ಅವಷ್ಯಬಿಡಲೇಬೇಕು. ಈ ಎರೆಡೂ ತರಹದ ಚಿತ್ರಣವನ್ನು ರಾಮಾಯಣ ಸುಂದರವಾಗಿ ಚಿತ್ರಿಸುತ್ತದೆ. ೧) ವಿಶ್ವಾಮಿತ್ರ. ೨) ತ್ರಿಶಂಕು. ವಿಶ್ವಾಮಿತ್ರರು ಒಂದುಕಡೆ ಅಯೋಗ್ಯಹಠವನ್ನು ಮಾಡಿ ಸೋತು ಹತಾಶರಾಗಿ, ಪ್ರಾಯಶ್ಚಿತ್ತಮಾಡಿಕೊಂಡು ಆ ಹಠವನ್ನು ಉಳಿಸಿಕೊಂಡೇ ಮಾರ್ಗವನ್ನು ಯೋಗ್ಯರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಾರೆ. ಯಶಸ್ವಿಯೂ ಆಗುತ್ತಾರೆ. ವಸಿಷ್ಠರಿಂದ ಆಗದ ಕಾರ್ಯ ನಾನು ಮಾಡುವೇ ಎಂದೇ ಹಠದಲ್ಲಿ ಬಿದ್ದು ಕಾರ್ಯ ಮಾಡುತ್ತಾರೆ "ಸಶರೀರವಾಗಿಯೇ ಸ್ವರ್ಗಕ್ಕೆ ಕಳುಹಿಸುತ್ತಾರೆ" ಸಾಧ್ಯವಾಗದಿರುವಾಗ, ತಮ್ಮ ಪುಣ್ಯವನ್ನೇ ಧಾರೆಯೆರೆದು ಕೊಡಲೂ ಸಿದ್ಧರಾಗುತ್ತಾರೆ. ಮತ್ತೊಂದು ಸ್ವರ್ಗವನ್ಬೇ ನಿರ್ಮಿಸಿ ಯಶಸ್ವಿಯೂ ಆಗುತ್ತಾರೆ. ತಮ್ಮ ಸಾವಿರ ವರ್ಷದ ತಪಸ್ಸನ್ನೇ ಹಾಳುಮಾಡಿಕೊಂಡು ಬಿಡುತ್ತಾರೆ. ಇದು ವಿಶ್ವಾಮಿತ್ರರ ಒಂದುತರಹದ ಅವಸ್ಥೆಯಾದರೆ. ೨) ತ್ರಿಶಂಕುವಿನ ಅವಸ್ಥೇಯೇ ಬೇರೆಯಾಗುತ್ತದೆ. *ತೀರ ಅಯೋಗ್ಯವಾದದ್ದು ಈ ಮಾನವ ದೇಹದಿಂದ ಸ್ವರ್ಗಸುಖವನ್ನು ಅನುಭವಿಸುವದು.* ಇಂತ...