ನೀನು ಕೊಟ್ಟ ಸ್ವತಂತ್ರದ ಫಲ ನಿನಗೆ ಅರ್ಪಿಸುವೆನೆಂದು - ಬಂದೇ ಬಂದೇ ಸ್ವಾಮಿ*
*ನೀನು ಕೊಟ್ಟ ಸ್ವತಂತ್ರದ ಫಲ ನಿನಗೆ ಅರ್ಪಿಸುವೆನೆಂದು - ಬಂದೇ ಬಂದೇ ಸ್ವಾಮಿ*
ಇಂದು ದಾಸಶ್ರೇಷ್ಠ ಗೋಪಾಲ ದಾಸರ ಆರಾಧನಾ ಮಹೋತ್ಸವ. ಗೋಪಾಲ ದಾಸರು ಭಕ್ತಿಯಲ್ಲಿ ಮಿಂದೆದ್ದವರು. ಅಂತೆಯೇ ಭಕ್ತಿಯಲಿ ಭಾಗಣ್ಣನೆಂದು ಪ್ರಸಿದ್ಧರು.
ಸುಳಾದಿ ಹಾಡು ಪದ ಉಗಾಭೋಗ ಗದ್ಯ ಹೀಗೆ ನಾನಾತರಹದಿಂದ ಕೀರ್ತನೆಗಳನ್ನು ರಚಿಸಿ ದಾಸಸಾಹಿತ್ಯವನ್ನು ಪ್ರಬುದ್ಧ ಪಡಿಸಿದ ಪುಣ್ಯಾತ್ಮರು ಗೋಪಾಲದಾಸರು. ಅವರ ಕೃತಿಗಳು ತಿಳಿಯಲೂ ಹಾಗೂ ಹಾಡಲೂ ತುಂಬ ಕಠಿಣ. ಅಂತೆಯೇ ಇಂದಿನ cd ಯುಗದಲ್ಲಿಯೂ ಅವರ ಕೆಲ ಕೃತಿಗಳು ಮಾತ್ರ ಪ್ರಸಿದ್ದ. ಉಳಿದ ಕೃತಿಗಳು ಪುಸ್ತಕದಲ್ಕಿ ಮಾತ್ರ.
ಅನೇಕಕೃತಿಗಳಲ್ಲಿ ಒಂದು ಕೃತಿ "ಬಂದೇ ಬಂದೇ ಸ್ವಾಮಿ" ಎಂಬುವದೂ. ಆ ಕೃತಿಯಲ್ಲಿ ನಾವೆಲ್ಲ ಯಾವ ಕಾರಣಕ್ಕೆ ಭೂಮಿಗೆ ಬಂದಿದ್ದು...?? ಅದರಲ್ಲೂ ಮಾಧ್ವರಾಗಿ ಹುಟ್ಟಿದ್ದು.. ?! ಎನ್ನುವದನ್ನು ತುಂಬ ಸರಳವಾಗಿ ಮನ ಮುಟ್ಟುವಂತೆ ತಿಳಿಸಿಕೊಟ್ಟಿದ್ದಾರೆ.
ನೀನೇ ಎನಗೆ ಅತ್ಯಾಪ್ತ. ಅನಿಮಿತ್ತ ಬಂಧು, ಎಲ್ಲೆಡೆ ವ್ಯಾಪ್ತ. ಸದ್ಗುಣಪೂರ್ಣ. ಅಂತಹ ನಿನ್ಬ ಅಡೆದಾವರೆಗೆ ನಾನು ಬಂದಿದ್ದು ನಿನ್ನ ದರ್ಶನಕ್ಜೆ ಮಾತ್ರ.
ಹೇ ಭಕ್ತವತ್ಸಲ...!!!
ನಾನು ನಾದಿಯಿಂದ ಅನಂತ ಪಾಪಗಳನ್ನು ಮಾಡಿದ್ದೇನೆ. ಆ ಎಲ್ಲ ಪಾಪಗಳನ್ನೂ ನಿನ್ನೆದುರಿಗೆ ಒಪ್ಪಿಕೊಳ್ಳುವೆ. ವಾತ್ಸಲ್ಯದಗಣಿಯಾದ ನೀನು ಆ ಎಲ್ಲ ಪಾಪಗಳನ್ನು ಮನ್ನಿಸಬಾರದೇ...!!
ನಾನು ಮಾಡಿದ ಪಾಪಗಳು ನನ್ನ ಪ್ರಾರಬ್ಧಕರ್ಮದಿಂದ ನೀನೇ ಎನ್ನಲ್ಲಿ ನಿಂತು ಮಾಡಿಸಿದ್ದು ತಾನೆ.. ಹೀಗಿರುವಾಗ ಇನ್ನುಮುಂದೇ ಈ ಪಾಪಗಳನ್ನು ಯಾಕೆ ಮಾಡಿಸುತ್ತೀಯಾ...!! ನಿಲ್ಲಿಸಿಬಿಡು. ನಾನೂ ಈ ಪಾಪಗಳಲ್ಕಿ ಅಭಿಯುಕ್ತನಾಗಲಾರೆ. ನೀನೂ ಪ್ರೇರಿಸ ಬೇಡ ಎಂದು ಪ್ರಾರ್ಥಿಸಲು ಬಂದೇ ಬಂದೇ.
*ನೀನು ಕೊಟ್ಟ ಸ್ವತಂತ್ರದ ಫಲ ನಿನಗೆ ಅರ್ಪಿಸುವೆನೆಂದು - ಬಂದೇ ಬಂದೇ ಸ್ವಾಮಿ....*
ಏನು ಬೇಡಲಿಕ್ಕಾಗಿ ನಾನು ಬಂದಿಲ್ಲ, ಏನನ್ನೂ ಕೇಳಲ್ಲಿಕ್ಕಾಗಿ ಬಂದಿಲ್ಲ. ನಿನ್ನಿಂದ ನಿಯಮಿತವಾದ ನೀನೇ ದಯಪಾಲಿಸಿದ, ಜೀವನ ಸ್ವರೂಪಭೂತವಾದ ನನ್ನ ಅಗಾಧವಾದ , ನನ್ನ ಸಾಧನೆಗೆ ಅತ್ಯಮೂಲ್ಯವಾದ ಏನು ಕರ್ತೃತ್ವವಿದೆ, ಆ ಕರ್ತೃತ್ವ ಶಕ್ತಿಯಿಂದ ನಾನು ಅನಾದಿಯಿಂದ ಮಾಡಿದ ಅನಂತ ಸತ್ಕರ್ಮಗಳೇನಿವೆ ಆ ಎಲ್ಲ ಕರ್ಮಗಳನ್ನೂ ನಿನಗೆ ಸಮರ್ಪಿಸಲು ಬಂದಿದ್ದೇನೆ. ಎಂದು ಸೊಗಸಾಗಿ ಮನಮುಟ್ಟುವಂತೆ ತಿಳಿಸಿ ಅನುಗ್ರಹಿಸುತ್ತಾರೆ.
ಸತ್ಕರ್ಮಗಳೆಲ್ಲವೂ ನಿನ್ನ ಪೂಜೆಯೇ. ಶಾಸ್ತ್ರದಲ್ಲಿ ನಿಷೇಧಿಸಲ್ಪಟ್ಡ ಯಾವೆಲ್ಲ ಕರ್ಮಗಳನ್ನು ನಾನು ಬಿಟ್ಟಿದ್ದೇನೆ, ಪಾಪಕರ್ಮಗಳನ್ನು ಮಾಡುವದನ್ನು ನಿಲ್ಕಿಸಿದ್ದೇನೆ ಅದೆಲ್ಲವೂ ನಿನ್ನ ಪೂಜೆಯೇ.
ಯಾವೆಲ್ಲ ಪಾಪಕರ್ಮಗಳು ಎನ್ನಿಂದ ಘಟಿಸಿವೆ, ಅವೆಲ್ಲವನ್ನೂ ಅಪ್ಪಿಕೊಳ್ಳದೇ ಒಪ್ಪಿಕೊಳ್ಳುವೆ. ನೀನು ಮನ್ನಿಸು ಎಂದು ಬೆಡಲು ನಾನಿಲ್ಲಿಗೆ ಬಂದೇ ಬಂದೇ ಎಂದು ದಾಸರಾಯರು ಕೊಂಡಾಡುತ್ತಿದ್ದಾರೆ. ಅಂತಹ ಶ್ರೇಷ್ಠ ಹರಿದಾಸರಾದ, ಗೋಪಾಲದಾಸರನ್ನು ಚಿಂತಿಸಿ ಧೇನಿಸಿ, ಸ್ತುತಿಸಿ, ಕೀರ್ತನೆಗಳನ್ನು ಕಲಿಯುವ ಪ್ರತಿಜ್ಙಿಸಿ ಆರಾಧನೆಯನ್ನು ವೈಭವದಿಂದ ಮಾಡಿ ಅವರ ಅನುಗ್ರಹ ಪಡೆದುಕೊಳ್ಳೋಣ.....
*✍🏽ನ್ಯಾಸ..*
ಗೋಪಾಲ ದಾಸ
ವಿಜಯಾಶ್ರಮ, ಸಿರಿವಾರ
Comments