ನೋವು ಬೇಕಾ.. ?? ಬೇಕು ಬೇಡ.*

 

*ನೋವು ಬೇಕಾ.. ??  ಬೇಕು ಬೇಡ.*


ನೋವು ಇದೊಂದು ವಿಚಿತ್ರ ಪದಾರ್ಥ. ಯಾರನ್ನೂ ಬಿಟ್ಟಿಲ್ಲ. ಯಾರು ನೋವನ್ನು ಮೆಟ್ಟಿದ್ದಾರೆ ಅವರಂತೂ ಜಗತ್ತನ್ನು ಗೆದ್ದಿದ್ದಾರೆ. 


ಆಯುಷ್ಯವನ್ಬೆಲ್ಲ ನೋವನಲ್ಲೇ ಕಳೆಯುವಂತಹ ಅನೇಕ ಜನರನ್ನು  ನಾವು ಕಾಣುತ್ತೇವೆ.  ಕಾಣುವ ಸಕಲದರಲ್ಲಿಯೂ ನೋವನ್ನೇ ಅನುಭವಿಸುತ್ತಾರೆ. ಛಳಿ ಇದ್ದರೆ ಏನ ಚಳಿ ಮಾರಾಯ್ರೇ ಸಾಕಾಯ್ತಪಾ ಅಂತಾರೆ, ಬಿಸಿಲು ನೋಡಿನೂ ಉರಿಬಿಸಿಲು ಅಂತಾರೆ, ಮಳೆಬಂದರೂ ನೋವು ಅನುಭವಿಸುತ್ತಾರೆ, ಮಳೆ ಬಿಸಿಲು ಛಳಿ ಇರದೆ ಇನ್ನೇನು ಇರಬೇಕು... ?? ಅದು ನೋವು ಉಣ್ಣುವ ಅವರ ಪರಿಪಾಕವಷ್ಟೇ. 


ಪ್ರತಿಯೊಬ್ಬ ಜೀವನೂ *ಅನಿರ್ವಚನೀಯ ವೈಭವದ ಸಂಪತ್ಕುಮಾರರು* ಆಗಿದ್ದಾರೆ.  ಚಿನ್ಬದ ಗಣಿಯಲ್ಲಿ ಚಿನ್ನ ಹುದುಗಿದಂತೆ, ಎಲ್ಲ ವೈಭವಗಳೂ ಪ್ರತಿಯೊಬ್ಬರಲ್ಲಿಯೂ ಹುದುಗಿ ಕುಳಿತಿದೆ. ಅರಿವು ಇಲ್ಲವಷ್ಟೆ. 


ವಿಚಿತ್ರವೆಂದರೆ ತಮ್ಮ ಕಾಲಮೇಲೆ ತಾವೇ ಕಲ್ಲು ಹಾಕಿಕೊಂಡು ಶಪಿಸಿವದು ದೇವರನ್ನು. ಇನ್ನೊಬ್ವರಿಗೆ ಬಯ್ಯುವದು ಆಡುವದರಿಂದ ಕ್ಷುದ್ರ ಆನಂದವನ್ನು ಅನುಭವುಸುವದು ಇವರ ಗಾಳವಾಗಿದೆ. ಪರಮಶುದ್ಧ ಆನಂದದ ಗಣುಯಾದ ದೇವರೇ ತಮ್ಮ ಮನೆಯಲ್ಕಿ ಬಂದು ಕುಳಿತಿದ್ದರೂ, ಆ ದೇವರನ್ನು ನಿಂದಿಸುತ್ತಾ ಮನೆಯ ಮುರುಕ ರಾವಣನ ತೋಳ್ ತೆಕ್ಜೆಗೆ ಧಾವಿಸುತ್ತಾರೆ. ಅಂತಹವರಿಗೆ ನೋವೇ ಕೊನೆಯ ಗತಿ. ಏನೆಲ್ಲವಿದ್ದರೂ ಅದರಲ್ಲು ನೋವೇ ಕಾಣುವ ಗತಿ ಅವರದಾಗಿಬಿಡುತ್ತದೆ.  ಈ ತರಹದ ವಿನಾರಣ ನೋವುಗಳನ್ನು ಅಪ್ಪಿಕೊಳ್ಳುವದು ಸರ್ವಥಾ ಬೇಡ. 


ನೋವು ಕಳೆದುಕೊಳ್ಳಲು ನಮ್ಮ ಅಂತರಂಗದೊಳಗೇ ಮುಳುಗೋಣ. ಅನಂತ ಆನಂದ ನಿಧಿತನ್ನು ಸಂಶೋಧಿಸೋಣ. ಸಂಶೋಧನೆಯಲ್ಲಿ ತೊಡಗಿದರೆ ಸಾಕು ನೋವು ಶಾಂತವಾಗುತ್ತದೆ. ಮುಖ ಅತ್ಯಂತ ಪ್ರಶಾಂತವಾಗುತ್ತದೆ. 


ಅನಂತ ಆನಂದ ನಿಧಿಯ ಸಂಶೋಧನೆಯ ಫಲವೇನೆಂದರೆ ನೋವೆಂಬ ಮುಖವಾಡವನ್ನೇ ಕಿತ್ತಿಬಿಸಾಡುವದು. ನೋವನ್ನು ಕಿತ್ತಿಬಿಸಾಡಲು ಹೊರಟವರಿಗೆ ವ್ರತ ಉಪವಾಸ ಜ್ಙಾನ ಮಡಿ ಮೈಲಿಗಿ ಭಕ್ತಿ  ಧರ್ಮ ಕರ್ಮ ದಾರಿದ್ರ್ಯ ರೂಪವಾದ ನೋವುಗಳೇ ಎದರು ಬರುವದು.  ಆ ನೋವನ್ನು ಸಜ್ಜನರು ಪ್ರೀತಿಯಿಂದ ಸ್ವಾಗಿತಿಸುವವರು. ಏಕೆಂದರೆ ನೋವಿನಲ್ಲೇ ದೇವರ ನೆನಪು, ನೊವಿದ್ದರೆ ನಲಿವನ್ನು ಅನುಭವಿಸಲು ಸಾಧ್ಯ. 


ಈ ತರಹದ ನೊವುಗಳು ಇರುವದು ಎಂದರೆ ಎಂದರೆ *ಭಗವಂತ ನಮ್ಮ ಮೇಲೆ ಸುರಿಸುವ ಅನಂತ ಪ್ರೇಮವೇ ಸರಿ* ಈ ಪ್ರೇಮವನ್ನು ಅನುಭವಿಸಿದವ ಅನಂತ ಆನಂದದ ನಿಧಿಯನ್ನೇ ಸಂಪಾದಿಸಿಬಿಡುವ.


ಸಾಧನೆಗೆ ದೇವರ ಸ್ಮರಣೆಗೆ ಅನುಕೂಲವಾದ, ಅಥವಾ ಸಾಧನೆಯನ್ನೋ ದೇವರ ಸ್ಮರಣೆಯನ್ನೋ ತಂದು ಕೊಡುವ ನೋವುಗಳು ಸರ್ವಥಾ ಇರಲಿ, ಆದರೆ ವಿನಾಕಾರಣ ಏನಿದ್ದರೂ ಗೋಳಾಡುವದು ಏನಿದೆ ಅದರಿಂದ ದೂರಾಗೋಣ. ಆ ಗೊಳಾಡುವಿಕೆಯಿಂದ ದೇವರೂ ಇಲ್ಲ ಸಾಧನೆಯೂ ಇಲ್ಲ. ನೆಮ್ಮದಿಯಂತೂ ಸರ್ವಥಾ ಇಲ್ಲವೇ ಇಲ್ಲ.... ..


*✍🏽✍🏽✍ನ್ಯಾಸ..*

ಗೋಪಾಲದಾಸ.

ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*