ಕಾರ್ತಿಕ ಆರತೀ ಕಾಲಕ್ಕೆ ಪಠಿಸುವ ಸ್ತೊತ್ರ
ಕಾರ್ತಿಕ ಆರತೀ ಕಾಲಕ್ಕೆ ಪಠಿಸುವ ಸ್ತೊತ್ರ ಸ್ತೋತ್ರವನ್ನು ಭಗವಾನ್ ಶ್ರೀ ಕೃಷ್ಣನಿಗೆ ಪ್ರಾತಃ ಕಾಲ ಹಾಗು ಸಂಧ್ಯಾ ಕಾಲದ ಸಮಯ ಜ್ಯೋತಿ ಬೆಳಗುವ ವೇಳೆ ಪಠಿಸಬೇಕು . ಈ ಸ್ತೋತ್ರದ ವೈಶಿಷ್ಟ್ಯತೆ ಏನೆಂದರೆ ಇದರಲ್ಲಿ ಪರಮಾತ್ಮನ ದಶಾವತಾರದ ಬಗ್ಗೆ ವಿವರಿಸಲಾಗಿದೆ. ಮತ್ಸ್ಯಾಕೃತಿಧರ ಜಯದೇವೇಶ ವೇದವಿಭೋದಕ ಕೂರ್ಮಸ್ವರೂಪ । ಮಂದರಗಿರಿಧರ ಸೂಕರರೂಪ ಭೂಮಿವಿಧಾರಕ ಜಯದೇವೇಶ ।।೧।। - ಮತ್ಸ್ಯಾವತಾರ ,ಕೂರ್ಮಾವತಾರ ,ವರಾಹವತಾರ ಕಾಂಚನಲೋಚನ ನರಹರಿರೂಪ ದುಷ್ಟಹಿರಣ್ಯಕ ಭಂಜನ ಜಯ ಭೋ । ಜಯ ಜಯ ವಾಮನ ಬಲಿವಿಧ್ವಂಸಿನ್ ದುಷ್ಟಕುಲಾಂತಕ ಭಾರ್ಗವರೂಪ ।।೨।। - ನೃಸಿಂಹಾವತಾರ ,ವಾಮನವತಾರ ,ಪರಶುರಾಮಾವತಾರ ಜಯವಿಶ್ರವಸಃ ಸುತವಿಧ್ವಂಸಿನ್ ಜಯ ಕಂಸಾರೇ ಯದುಕುಲತಿಲಕ । ಜಯವೃಂದಾವನಚರ ದೇವೇಶ ದೇವಕಿನಂದನ ನಂದಕುಮಾರ ।।೩।। -ರಾಮಾವತಾರ ,ಕೃಷ್ಣಾವತಾರ ಜಯಗೋವರ್ಧನಧರ ವತ್ಸಾರೇ ಧೇನುಕಭಂಜನ ಜಯ ಕಂಸಾರೇ । ರುಕ್ಮಿಣಿನಾಯಕ ಜಯ ಗೋವಿಂದ ಸತ್ಯಾವಲ್ಲಭ ಪಾಂಡವ ಬಂಧೋ ।।೪।। - ಕೃಷ್ಣಾವತಾರ ಖಗವರವಾಹನ ಜಯಪೀಠಾರೇ ಜಯ ಮುರಭಂಜನ ಪಾರ್ಥಸಖೇತ್ವಮ್ । ಭೌಮವಿನಾಶಕ ದುರ್ಜನಹಾರಿನ್ ಸಜ್ಜನಪಾಲಕ ಜಯದೇವೇಶ ।।೫।। - ಕೃಷ್ಣಾವತಾರ...