ಗುರಿಸಾಧಿಸುವ ಛಲ..... ಪುಸಿ ಹೋಗದು
ಗುರಿಸಾಧಿಸುವ ಛಲ..... ಪುಸಿಹೋಗದು ಗುರಿ ಸಾಧಿಸುವ ಛಲಗಾರ ಎಂದೂ ಸೋಲನ್ನು ಸುಲಭದಲ್ಲಿ ಒಪ್ಪೊಕೊಳ್ಳಲಾರ. ಎಷ್ಟು ಸಲ ಸೋತರೂ ಗೆದ್ದರೆ ಬರುವೆ ಎಂಬ ಹುಮ್ಮಸಿನಿಂದಲೇ ಕಣಕ್ಕೆ ಇಳಿಯುತ್ತಾನೆ. ಕೊನೆಗೆ ಒಂದು ದಿನ ಗೆದ್ದು ಬರುತ್ತಾನೆ. ಪ್ರಯತ್ನಶೀಲ ಪುರುಷ "ಗುರಿ ಸಾಧಿಸಲು ಸೋಲುಗಳೆ ಮೊದಲು ಮೆಟ್ಟಲುಗಳು" ಎಂದೇ ಭಾವಿಸಿರುತ್ತಾನೆ. ಕೊನೆಗೆ ಉತ್ತುಂಗಕ್ಕೇರುವವನೂ ಆ ಪ್ರಯತ್ನಶೀಲನೆ. ಆನುಭಾವಿಕರೊಂದು ಕಥೆ.... ಊರ್ಧ್ವರೇತಸ್ಕರಾದ, ವಿರಕ್ತ ಶಿಖಾಮಣಿಗಳಾದ, ತ್ರಿಕಾಲಜ್ಙಾನಿಗಳಾದ ಋಷಿಗಳೊಬ್ಬರು ಕಾಡಿನಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಆಷಾಢ ಮಾಸ. ಘೋರ ಮಳೆ. ಮಾರ್ಗಮಧ್ಯದಲ್ಲಿ ಅನೇಕ ತರಹದ ಅನೇಕ ವೃಕ್ಷಗಳು. ಅಲ್ಲಿ ಒಬ್ಬ ದುಷ್ಟ ಒಂದು ಪುಟ್ಟ ವೃಕ್ಷ ಕಿತ್ತುವ ಪ್ರಯತ್ನದಲ್ಲಿ ಇರುತ್ತಾನೆ. ಋಷಿಗಳು ಕೇಳುತ್ತಾರೆ... ಯಾಕೋ ಗಿಡ ಕೀಳ್ತಾ ಇದ್ದೀ ನಾಚಿಕೆ ಆಗುದಿಲ್ವೆ .. ದುಷ್ಟ.. ಆ ಗಿಡ ಯಾವದಕ್ಕೂ ಉಪಯೋಗಕ್ಕೆ ಬರುವದಿಲ್ಲ. ಅದಕ್ಕಾಗಿ ಕಿತ್ತಿಹಾಕುವೆ .. ಋ.. ಒಂದು ನಿಮಿಷ ಎಂದು ಹೇಳಿ. ಆ ಗಿಡದ ಮುಂದೆ ನಿಂತು ೫ ನಿಮಿಷ ಕಣ್ಣುಮುಚ್ಚಿ ನಿಂತು, ನಂತರ ಹೇಳುತ್ತಾರೆ. ಈ ಗಿಡದ ಜೊತೆ ಮಾತಾಡಿದೆ. ಮುಂದೆ ಅದು ಅತಿ ದೊಡ್ಡ ವೃಕ್ಷವಾಗಿ ಬೆಳೆದು, ಹು ಹಣ್ಣು, ನೆರಳು ಮುಂತಾದವುಗಳನ್ನು ಕೊಟ್ಟು ಹಾದಿ ಹೊಕರಿಗೆ ಅನುಕೂಲ ಮಾಡಿಕೊಳ್ಳುವ ಗುರಿ ಹೊಂದಿದೆ ಅಂತೆ. ಆದ್ದರಿಂದ ಕಿತ್ತಬೇಡ ಎಂದು. ದು......