ಗುರಿಸಾಧಿಸುವ ಛಲ..... ಪುಸಿ ಹೋಗದು
ಗುರಿಸಾಧಿಸುವ ಛಲ..... ಪುಸಿಹೋಗದು
ಗುರಿ ಸಾಧಿಸುವ ಛಲಗಾರ ಎಂದೂ ಸೋಲನ್ನು ಸುಲಭದಲ್ಲಿ ಒಪ್ಪೊಕೊಳ್ಳಲಾರ. ಎಷ್ಟು ಸಲ ಸೋತರೂ ಗೆದ್ದರೆ ಬರುವೆ ಎಂಬ ಹುಮ್ಮಸಿನಿಂದಲೇ ಕಣಕ್ಕೆ ಇಳಿಯುತ್ತಾನೆ. ಕೊನೆಗೆ ಒಂದು ದಿನ ಗೆದ್ದು ಬರುತ್ತಾನೆ.
ಪ್ರಯತ್ನಶೀಲ ಪುರುಷ "ಗುರಿ ಸಾಧಿಸಲು ಸೋಲುಗಳೆ ಮೊದಲು ಮೆಟ್ಟಲುಗಳು" ಎಂದೇ ಭಾವಿಸಿರುತ್ತಾನೆ. ಕೊನೆಗೆ ಉತ್ತುಂಗಕ್ಕೇರುವವನೂ ಆ ಪ್ರಯತ್ನಶೀಲನೆ.
ಆನುಭಾವಿಕರೊಂದು ಕಥೆ....
ಊರ್ಧ್ವರೇತಸ್ಕರಾದ, ವಿರಕ್ತ ಶಿಖಾಮಣಿಗಳಾದ, ತ್ರಿಕಾಲಜ್ಙಾನಿಗಳಾದ ಋಷಿಗಳೊಬ್ಬರು ಕಾಡಿನಲ್ಲಿ ಸಂಚಾರ ಮಾಡುತ್ತಿರುತ್ತಾರೆ. ಆಷಾಢ ಮಾಸ. ಘೋರ ಮಳೆ. ಮಾರ್ಗಮಧ್ಯದಲ್ಲಿ ಅನೇಕ ತರಹದ ಅನೇಕ ವೃಕ್ಷಗಳು. ಅಲ್ಲಿ ಒಬ್ಬ ದುಷ್ಟ ಒಂದು ಪುಟ್ಟ ವೃಕ್ಷ ಕಿತ್ತುವ ಪ್ರಯತ್ನದಲ್ಲಿ ಇರುತ್ತಾನೆ.
ಋಷಿಗಳು ಕೇಳುತ್ತಾರೆ... ಯಾಕೋ ಗಿಡ ಕೀಳ್ತಾ ಇದ್ದೀ ನಾಚಿಕೆ ಆಗುದಿಲ್ವೆ ..
ದುಷ್ಟ.. ಆ ಗಿಡ ಯಾವದಕ್ಕೂ ಉಪಯೋಗಕ್ಕೆ ಬರುವದಿಲ್ಲ. ಅದಕ್ಕಾಗಿ ಕಿತ್ತಿಹಾಕುವೆ ..
ಋ.. ಒಂದು ನಿಮಿಷ ಎಂದು ಹೇಳಿ. ಆ ಗಿಡದ ಮುಂದೆ ನಿಂತು ೫ ನಿಮಿಷ ಕಣ್ಣುಮುಚ್ಚಿ ನಿಂತು, ನಂತರ ಹೇಳುತ್ತಾರೆ. ಈ ಗಿಡದ ಜೊತೆ ಮಾತಾಡಿದೆ. ಮುಂದೆ ಅದು ಅತಿ ದೊಡ್ಡ ವೃಕ್ಷವಾಗಿ ಬೆಳೆದು, ಹು ಹಣ್ಣು, ನೆರಳು ಮುಂತಾದವುಗಳನ್ನು ಕೊಟ್ಟು ಹಾದಿ ಹೊಕರಿಗೆ ಅನುಕೂಲ ಮಾಡಿಕೊಳ್ಳುವ ಗುರಿ ಹೊಂದಿದೆ ಅಂತೆ. ಆದ್ದರಿಂದ ಕಿತ್ತಬೇಡ ಎಂದು.
ದು... ನೀವೇನು ದೊಡ್ಡ ಸರ್ವಜ್ಙರೇನು..?? ನೋಡೇ ಬಿಡೋಣ ಎಂದು ಆ ಗಿಡವನ್ನು ಕಿತ್ತಿ ಎಸೆದು ಹೇಳುತ್ತಾನೆ. ನಾ ಗಿಡವನ್ನು ಕಿತ್ತಿ ಬಿಟ್ಟೆ. ನಿಮ್ಮ ಮಾತು ಪುಸಿ ಆಯಿತು ಎಂದು ಗಹಗಹಿಸಿ ನಗುತಾನೆ.
ನಂತರ ಇಬ್ಬರೂ ಒಂದು ಪಟ್ಟಣ ಸೇರುತ್ತಾರೆ. ೧೫ ದಿನಗಳವರೆಗೆ ಘೋರ ಮಳೆ. ಅಲ್ಲಿಯೇ ಸಿಕ್ಕು ಹಾಕಿಕೊಳ್ಳುತ್ತಾರೆ. ನಂತರ ತಮ್ಮ ಕೆಲಸ ಮುಗಿದ ಮೇಲೆ ತಿರುಗಿ ಇಬ್ಬರೂ ಆ ಮಾರ್ಗದಲ್ಲೇ ಸಾಗುತ್ತಿರುತಾರೆ. ಆಗ..
ಋ.. ಹೆ ದುಷ್ಟ ಅಲ್ಲಿ ನೋಡು, ಉತ್ತಮ ಗುರಿ ಹೊಂದಿದ ಆ ವೃಕ್ಷ ಈ ೧೫ ದಿನಗಳಲ್ಲಿ ಹೇಗೆ ಉತ್ತಮವಾಗಿ ಬೆಳದಿದೆ ಎಂದು. ದುಷ್ಟ ಆಶ್ಚರ್ಯದಿಂದ ನೋಡುತ್ತಾ ಕುಳಿತ..
ಋ.. ವೃಕ್ಷದ ಸನಿಹ ಹೋಗಿ ಯಾರು ನೆಟ್ಟರು ನಿನ್ನ ಎಂದು ಕೇಲದರೆ. ಅದು ಉತ್ತರಿಸಿತು.. ನನ್ನ ಗುರಿ ನನ್ನ ಛಲ ನನಗೆ ಅನೇಕ ಮಾರ್ಗಗಳನ್ನು ಒದಗಿಸಿತು. ಮಳೆಗೆ ಹರಿದು ಮಣ್ಣು ಬಂತು. ಘಾಳೆಗೆ ಎದ್ದು ನಿಂತೆ. ನಿರಂತರ ಮಳೆಗೆ ಬೆಳೆದು ದೃಢವಾಗಿದ್ದೇನೆ ಎಂದು. ಮುಂದೊಂದು ದಿನ ಹೆಮ್ಮರವಾಗಿ ಸಾವಿರಾರು ಜನರಿಗೆ ಅನುಕೂಲನಾಗುವೆ ಅನುಗ್ರಹಿಸಿ ಎಂದು....
ದು.. ಈ ಮಾತುಕಥೆಯನ್ನು ಕೇಳಿದ ದುಷ್ಟ, ದುಷ್ಟನಾಗಿದ್ದರೂ ಮನಸ್ಸು ಎನ್ನುವದೊಂದಿದೆ ಅಲಾ.. ಮತ್ತೆ ಕೀಳಲು ಮನಸ್ಸೊಪ್ಪಲಿಲ್ಲ. ಬಿಟ್ಟ ಹೋದ.... ಅನೇಕ ವರ್ಷಗಳ ತರುವಾಯ ಅದೇ ವೃಕ್ಷದ ಬಿಲದಲ್ಲಿ ಋಷಿಗಳು ತಪಸ್ಸಿಗೆ ಕುಳಿತರೆ, ದುಷ್ಟ ತಾ ಅಲ್ಲಿಯೇ ರಾತ್ರಿ ಮಲಗಲು ಆಶ್ರಯತಾಣ ಮಾಡಿಕೊಂಡ. ತಾನೂ ಸಜ್ಜನನಾದ.
ಇದು ಆ ವೃಕ್ಷದ ಉತ್ತಮ ಗುರಿ, ಸಾಧಿಸುವ ಛಲ, ಇದರಿಂದ ತನ್ನ ಗುರಿಯನ್ನು ಸಾಧಿಸಿಬಿಟ್ಟಿತು. ಅದರಿಂದ ಆದ ಪ್ರಯೋಜನ ನೂರಾರು. ಅದರಲ್ಲಿ ಉತ್ತಮವಾದದ್ದು ದುಷ್ಟನೂ ಸಜ್ಜನನಾದ....
ವೃಕ್ಷವೇ ಸಾಧಿಸಿರುವಾಗ, ಮನುಷ್ಯರಾದ ನಾವು ಉತ್ತಮ ಗುರಿ ಇಟ್ಟುಕೊಳ್ಳೋಣ. ಸೋಲು ಎದುರಾದರೂ "ಸೋಲೆ ಗೆಲುವಿನ ಮೂಲ" ಎಂದು ನಂಬಿ ಸಾಧಿಸಿಕೊಳ್ಳೋಣ.
ನ್ಯಾಸ...
Comments