*ನಮ್ಮ ಪಾಲಿನ ಕರುಣೆಯ ಸಾಕಾರಮೂರ್ತಿಗಳು*

 *ನಮ್ಮ ಪಾಲಿನ ಕರುಣೆಯ ಸಾಕಾರಮೂರ್ತಿಗಳು*


*ಪರಮಪೂಜ್ಯ ಉತ್ತರಾದಿಮಠಾಧೀಶರು (ಶ್ರೀಶ್ರೀ ೧೦೦೮ ಶ್ರೀಸತ್ಯಾತ್ಮತಿರ್ಥರು)* ಮತ್ತು *ಪೂಜ್ಯ ಮಾಹುಲೀ (ಪಂ. ವಿದ್ಯಾಸಿಂಹಾಚಾರ್ಯರು) ಆಚಾರ್ಯರು* ಈವರೀರ್ವರೂ ನಮ್ಮ ಪಾಲಿನ ಕರುಣೆಯ ಎಂದೂ ಬತ್ತದ ಕಡಲುಗಳು. 


*ಅಂದು - ಇಂದು*


ಈ ಎರಡು ವರ್ಷಗಳಲ್ಲಿ ಭೀಕರ ಕಷ್ಟಗಳು ಎದುರಾದವು. ಎಲ್ಲರೂ ಅನುಭವಿಸಿದರು. ಅದರಲ್ಲಿ *ಈ ಕರೋನಾ ರಾಕ್ಷಸ* ನಿಂದ ಬಹಳೇ ಕಷ್ಟವನ್ನು ಅನುಭವಿಸಬೇಕಾಯ್ತು. ಇಂದಿಗೆ ಮತ್ತೆ ಹೊಸತರಹದ *ಕರೋನಾ ಸಂಕಟ* ಆರಂಭವಾಗಿದೆ.


ಈ ರಾಕ್ಷಸ ದೇಶ, ದೇಶದ ಉನ್ನತ ನಾಗರಿಕರಿಂದಾರಂಭಿಸಿ ಸಣ್ಣ ವ್ಯಕ್ತಿಯವರೆಗೂ ಯಾರನ್ನೂ ಬಿಡಲಿಲ್ಲ. ಎಲ್ಲರನ್ನೂ ಪೀಡಿಸಿದ. ತುತ್ತಿನ ಅನ್ನಕ್ಕೂ ಕುತ್ತು ತಂದ. ಒಂದು ಕಾಸಿಗೂ ಬಾಯಿಬಿಡಿಸಿದ. ರೋಗಿಯನ್ನು ನೋಡಲೂ ಆಗಲಿಲ್ಲ. ವೈದ್ಯರು ಸಿಗಲಿಲ್ಲ. ವೈದ್ಯಕೀಯ ಸಲಕರಣೆಗಳು ಸಿಗಲಿಲ್ಲ. ಎಷ್ಟೋ ಜನರಿಗೆ ಸರಿಯಾದ ಸಮಯಕ್ಕೆ ಕರ್ಮಗಳನ್ನೂ ಮಾಡಲಾಗಲಿಲ್ಲ. ಅತ್ಯಂತ ಘೋರವಾಗಿ ಎಲ್ಲರನ್ನೂ ಇನ್ನಿಲ್ಲದಂತೆ ಪೀಡಿಸಿದ. 


ಈ ತರಹದ ಘೋರವಾದ ಪ್ರಸಂಗದಲ್ಲಿ *ಪರಮ ಪೂಜ್ಯರಾದ ಮಹಾಸ್ವಾಮಿಗಳು ಹಾಗೂ ಪೂಜ್ಯರಾದ ಆಚಾರ್ಯರು* ತುಂಬ ಕಳಕಳಿಯಿಂದ ಸಮಾಜದ ಎಲ್ಲ‌ಜನರಿಗೂ ಮಾರ್ಗದರ್ಶನ ಮಾಡಿದರು. ಸಮಾಜದ ಜನರಿಗೋಸ್ಕರ ಜಪ ತಪಗಳನ್ನು ಸ್ವಯಂ ತಾವು  ಮಾಡಿದರು, ಶಿಷ್ಯರೆಲ್ಲರಿಂದ ಮಾಡಿಸಿದರು, ಇಂದಿಗೂ ದೇವರಲ್ಲಿ ಪ್ರಾರ್ಥನೆ ಮೊದಲು ಮಾಡಿ ಏನೆಲ್ಲ ಸಾಧ್ಯವಿದೆ ಎಲ್ಲವನ್ನೂ ಸ್ವಯಂ ಮಾಡುತ್ತಿದ್ದಾರೆ, ಪ್ರತಿಯೊಬ್ಬರಿಂದಲೂ ಮಾಡಿಸುತ್ತಿದ್ದಾರೆ. ಈ ಮುಖಾಂತರ ನಾಡಿನ ಸಮಸ್ತ ಆಸ್ತಿಕ ಸಮಾಜಕ್ಕೆ ಭಾರೀ ಧೈರ್ಯಕೊಡುವ, ಅನುಗ್ರಹ ಮಾಡುವ ಪ್ರಯತ್ನಮಾಡುತ್ತಿದ್ದಾರೆ. 


ಕಳೆದ ಕೆಲ ದಿನಗಳಲ್ಲಿ ಬಂದ *ಪೂಜ್ಯ ಮಾಹುಲೀ ಆಚಾರ್ಯರ "ಅಚ್ಯುತಾನಂತಗೋವಿಂದ" ನಾಮಸ್ಮರಣೆಯ ಎರಡು ನಿಮಿಷದ ವಿಡಿಯೋ ಕೇಳುತ್ತಾ ಇದ್ದರೆ, ನಾಮಸ್ಮರಣರೂಪ ತಪಸ್ಸು  ಮಾಡಲೇಬೇಕು, ಎಂದಿಗೂ ಬಿಡಲೇವಾರದು ಎಂದು ದೃಢವಾಗುತ್ತದೆ. (ಈ ಮಾತು ಸ್ವಯಂ ನನಗೆ ಇನ್ನೂರು ಮುನ್ನೂರು ಜನ ಹೇಳಿದಾರೆ.)  "ಕರೋನಾ ರಾಕ್ಷಸನನ್ನು " ಸೆದೆಬಡಿಯಲು ದೇವ ಬಂದೇ ಬರುತ್ತಾನೆ ಇಲ್ಲವೋ ತನ್ನ ದಯೆಯನ್ನಾದರೂ ಕಳಿಸುತ್ತಾನೆ* ಎಂಬ ಭಾವ ದೃಢವಾಗುತ್ತದೆ. 


ಇಂದು *ಪರಮಪೂಜ್ಯ ಮಹಾಸ್ವಾಮಿಗಳ ಉಪದೇಶ ಕೇಳಿದರೆ ದೇವರೇ ಬಂದು ನಮ್ಮ ರಕ್ಷಣೆಗೆ ನಿಲ್ಲವ ಎಂಬ ಭರವಸೆ ನಮಗಾಗುತ್ತದೆ.*  ಈ ರಾಕ್ಷಸನನ್ನು ಸೆದೆಬಡೆಯಲು ಕೇವಲ ನಮ್ಮ ಪ್ರಾರ್ಥನೆ ಮಾತ್ರವಲ್ಲ, ನಿಮ್ಮ ಪ್ರಾರ್ಥನೆಯೂ ಅವಶ್ಯಕ ಎಂದೇ ಭಾವಿಸಿ, ಎಲ್ಲ ಭಕ್ತರಿಗೂ *ರಾಮ ಕೃಷ್ಣಮಂತ್ರ ಹಾಗೂ ಗಾಯತ್ರೀ ಮಂತ್ರಗಳ* ಉಪದೇಶವನ್ನು ಮಾಡಿ ಧೈರ್ಯ ತುಂಬಿದ್ದಾರೆ. 


ಅಷ್ಟಲ್ಲದೇ......


ನಂಬಿದ ಎಲ್ಲ ಶಿಷ್ಯರಿಗೂ ತಂದೆ ತಾಯಿ ಹೇಗೆ ಮಕ್ಕಳನ್ನು ಪೋಶಿಸಬೇಕೋ ಹಾಗೆಯೇ *ಏನೇ ಸಮಸ್ಯೆಗಳು ಇದ್ದರೂ ನಮಗೆ ತಿಳಿಸಿ* ನಾವು ಹಣ ಧನ, ಧಾನ್ಯ, ವೈದ್ಯರು, ಇರುವ ವ್ಯವಸ್ಥೆ ಏನು ಬೇಕೋ ಎಲ್ಲವನ್ನೂ ನಾವು ಒದಗಿಸಿಕೊಡುತ್ತೇವೆ ಎಂದು ಹೇಳುವ ಮುಖಾಂತರ ಎಲ್ಲ ಶಿಷ್ಯ ಸಮುದಾಯಕ್ಕೇನೇ *ಕರುಣಾಮೂರ್ತಿಗಳಾಗಿ ನಿಂತಿದಾರೆ.*


ಅಂದು ಮೊದಲ ಕರೋನಾ ಅಲೆ ಇದ್ದಾಗಲೂ *ಕರುಣೆಯ ಹಸ್ತ ಕನ್ಯಾಕುಮಾರಿಯವರೆಗೂ ಚಾಚಿದ್ದರು.* ಇಂದಿನ ಎರಡನೆಯ ಅಲೆ ಬಂದಾಗಲೂ ಇನ್ನೂ ವಿಸ್ತರಿಸಿ *ಔದಾರ್ಯದ ಹಸ್ತ ಹಿಮಾಲಯದ ಎತ್ತರದವರೆಗೂ ಪಸರಿಸಿದ್ದಾರೆ* ಇಂತಹ ಗುರುವರ್ಯರುಗಳು ಇರುವದೇ ನಮ್ಮ ಭಾಗ್ಯ ಸೌಭಾಗ್ಯ. ಆ ಈರ್ವರಿಗೂ ನನ್ನ ಅನಂತ ವಂದನೆಗಳು.. 🙏🏽🙏🏽


*ಉನ್ನತ ಪ್ರಾರ್ಥಿತಾಶೇಷ ಸಂಸಾಧಕಮ್*


ಭಕ್ತರ ಗುಂಪಿನ ಉನ್ನತ ವರ್ಗದಲ್ಲಿ ಇರುವ ಈ *ಈರ್ವರು ಗುರುವರೇಣ್ಯರುಗಳು* ನಮ್ಮೆಲ್ಲರ  ಪರವಾಗಿ ಹಾಗೂ ವಿಶೇಷವಾಗಿ ನನ್ನ ಪರವಾಗಿ ಮಾಡುವ ಪ್ರಾರ್ಥನೆಗೆ ದೇವ ಓಗೊಡುವದಿಲ್ಲ ಎಂಬುವದಿಲ್ಲವೇ‌ ಇಲ್ಲ.  ಸಿದ್ಧಿಯನ್ನು ಸಮೃದ್ಧಿಯನ್ನು ಕೊಟ್ಟೇಕೊಡುವ.


*ಭಾರವೋ ಭಯಗಳು ಬಂದರೋ ನಿಲ್ಲವು, ಹಾರಿಹೋಗುವವು ದಶದಿಕ್ಕುಗಳಿಗೆ*


 ಎಂಥಹ ರಾಕ್ಷಸರಿಂದಲೂ ಭಯಗಳು ಬರುವದಿಲ್ಲ. ಬಂದರೆ ನಿಲ್ಲುವದಿಲ್ಲ. ದಿಕ್ಕಪಾಲಾಗಿ ಓಡಿಹೋಗುತ್ತವೆ" ಹೀಗಿರುವದು ವಿಷ್ಣುಭಕ್ತರಿಗೆ" ಎಂದು ದಾಸರ ಮಾತು. ಈ ಮಾತನ್ನು *ಪರಮಪೂಜ್ಯ ಮಹಾಸ್ವಾಮಿಗಳು ಹಾಗೂ ಪೂಜ್ಯ ಆಚಾರ್ಯರು* ಈರ್ವರೂ‌ "ಜಪ ಮಾಡಿರಿ, ಪಾರಾಯಣ ಮಾಡಿರಿ, ಪಾಠಪ್ರವಚ ಇದ್ದಲ್ಲೆ ಮಾಡಿರಿ, ಪೂಜೆಮಾಡಿರಿ, ತಪಸ್ಸುಮಾಡಿರಿ, ಭಾಗವತ ಮಹಾಭಾರತ ರಾಮಾಯಣ ಉಪನ್ಯಾಸಗಳನ್ನು ಮಾಡಿರಿ" ಇತ್ಯಾದಿ ಆದೇಶ ಮಾಡುವ ಮುಖಾಂತರ  *ಭಕ್ತರಾಗಿ* ಎಂಬ ಸ್ಪಷ್ಟ ಆದೇಶವನ್ನು ಮಾಡಿದ್ದಾರೆ. ಭಕ್ತರಿಗಿರುವ ಲಾಭ ಅತ್ಯುನ್ನತ. 


ಜಪ ಪಾರಾಯಣ ಪೂಜೆ ಧ್ಯಾನ ಇತ್ಯಾದಿಗಳನ್ನು ಮಾಡೋಣ. ದೇವರ ಗುರುಗಳ ಪೂರ್ಣ ಅನುಗ್ರಹಕ್ಕೆ ಪಾತ್ರರಾಗೋಣ.


*ಭಕ್ತರಾದರೆ ಮಾತ್ರ ಸಾಲದು - ಎಚ್ಚರಿಕೆಯ ನಡೆಯೂ ಅತ್ಯವಶ್ಯಕ*


ಕೇವಲ ಭಕ್ತರಾದರೆ ಸರ್ವಥಾ ಸಾಲದು. "ಅತ್ಯಂತ ಎಚ್ಚರಿಕೆ ಹೆಜ್ಜೆ ಇಡುವದು ಅತ್ಯಂತ ಅನಿವಾರ್ಯ, ಹಾಗೂ ಆರೋಗ್ಯದ ಕಡೆಗೆ ಗಮನಕೊಡುವದೂ ಅಷ್ಟೇ ಅವಶ್ಯಕ" ಎಂದೂ ಸ್ಪಷ್ಟವಾಗಿ ಆದೇಶವನ್ನು ಮಾಡಿದ್ದಾರೆ. 


*ಈ ಎಲ್ಲ ಆದೇಶವನ್ನು ಪಾಲನೆ ಮಾಡೋಣ. ಆರೋಗ್ಯಭಾಗ್ಯವನ್ನು ಪಡೆದುಕೊಳ್ಳೋಣ ನೂರುಕಾಲ ಬಾಳೋಣ*


*ಜೈ ಅಚ್ಯುತ !! ಜೈ ಅನಂತ !! ಜೈ ಗೋವಿಂದ*


*✍🏽✍🏽ನ್ಯಾಸ..*

ಗೋಪಾಲದಾಸ

ವಿಜಯಾಶ್ರಮ, ಸಿರಿವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*