ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್
ನವವಿಧ ಭಕ್ತಿಯ ಚಿಂತನೆ : ( ಅರ್ಚನಂ )
ಅರ್ಚಿತ: ಸಂಸ್ಮ್ರುತೊ ಧ್ಯಾತ: ಕೀರ್ತಿತ: ಕಥಿತ: ಶ್ರುತ:|
ಯೋ ದದಾತ್ಯಮೃತತ್ತ್ವಂ ಹಿ ಸ ಮಾಂ ರಕ್ಷತು ಕೇಶವ: ||
ಆಚಾರ್ಯರು ತಾವು ಸ್ವತಃ: ಕೇಶವ ಮೂರ್ತಿಯನ್ನು ಕೊಕ್ಕಡ ಕ್ಷೇತ್ರದಲ್ಲಿ ಬರಗಾಲ ಬಂದಾಗ ಅಲ್ಲಿಯ ಜನರಿಗೆ ಅನುಗ್ರಹಿಸದರು. ಇದು ಆಚಾರ್ಯರು ಕೊಟ್ಟ ಶ್ರೀಕೃಷ್ಣಾಮೃತಮಹಾರ್ಣವ ಗ್ರಂಥದ ಮಂಗಳಾಚರಣ ಶ್ಲೋಕ.
ನವವಿಧ ಭಕ್ತಿ ಕೇಶವನಲ್ಲಿ ಮಾಡಬೇಕು ಎನ್ನುವ ಹಾಗೆ ಈ ಶ್ಲೋಕ ಮೂಡಿಬಂದಿದೆ.
ಶ್ರವಣ ( ಶ್ರುತ:)
ಕೀರ್ತನ (ಕೀರ್ತಿತ: ಕಥಿತ:)
ಸ್ಮರಣಂ ( ಸಂಸ್ಮ್ರುತ:)
ಅರ್ಚನಂ, ವಂದನಂ ... (ಅರ್ಚಿತ:)
ಮತ್ತೆ ಆತ್ಮನಿವೇದನಂ (ಧ್ಯಾತ:)
ಈ ಗ್ರಂಥದಲ್ಲಿ ಪ್ರತಿ ಶ್ಲೋಕವೂ ಪರಮಾತ್ಮನ ಅರ್ಚನೆ ಮಾಡಲೇಬೇಕು ಎನ್ನುವ ಪ್ರಮಾಣಗಳನ್ನು ಸಂಗ್ರಹಿಸಿದ್ದಾರೆ.
ತೇ ನರಾ: ಪಶವೋ ಲೋಕೇ ಕಿಮ್ ತೇಷಾಮ್ ಜೀವಿತೇ ಫಲಂ |
ಯೈರ್ನ ಲಬ್ಧಾ ಹರೇರ್ದೀಕ್ಷಾ ನಾರ್ಚಿತೋ ವಾ ಜನಾರ್ಧನ :||
ಯಾರು ಜನಾರ್ಧನನನ್ನ ಆರಾಧನೆ ಮಾಡುವುದಿಲ್ಲವೋ , ಹರಿ ದೀಕ್ಷೆ ಹೊಂದುವುದಿಲ್ಲವೋ, ಅವರು ಬದುಕಿದ್ದು ಏನು ಫಲ? ಅಂತಹ ಜನರು ಪಶುಗಳಿಗೆ ಸಮಾನರು.
ನೀಚ್ಚ್ಚ ಸುಭಕುತಿಯೊಳಚ್ಯುತಅಂಘಿ)ಗ | ಳರ್ಚಿಸಿ ಮೆಚ್ಹಿಸುತ ಅಚ್ಚರದಿ || ...ಫಲವಿದು ಬಾಳ್ದುದಕೆ
ನಿಶ್ಚಯವಾಗಿ (ಸು- ಸಮೀಚೀನ ಜ್ಞಾನದಿಂದ) ಬಂದ ಭಕ್ತಿ ಯಿಂದ ಅಚ್ಯುತನ ಪಾದಗಳನ್ನು ಅರ್ಚಿಸಿ , ಪರಮಾತ್ಮ ಮೆಚ್ಚುವಂತೆ ಬಾಳುವುದೇ ಬದುಕಿನ ಸಾರ್ಥಕತೆ ಎಂದು ಶ್ರೀಜಗನ್ನಾಥದಾಸರು ಹೇಳುತ್ತಾರೆ.
ಆದರೆ ಅರ್ಚನೆ ಬಾಹ್ಯವಾಗಿ ಮೊದಲು ತದನಂತರ ಅಂತರಂಗ ಎಂದು ಹೇಳುತ್ತಾರೆ. ತಂತ್ರಸಾರದಲ್ಲಿ ಆಚಾರ್ಯರು ಬಾಹ್ಯವಾಗಿ ಅರ್ಚನೆ ಮತ್ತು ಬಿಂಬ ಆವಾಹನೆ ಮತ್ತು ಅಂತರಂಗ ಅರ್ಚನೆ ಎಲ್ಲವೂ ಜೋಡಣೆ ಮಾಡಿದ್ದಾರೆ. ಎರಡೂ ಅತ್ಯಗತ್ಯ.
ಅರ್ಚತ ಪ್ರಾರ್ಚಾತ ಪ್ರಿಯ ಮೇಧಾಸೂ ..ಋ.ಸಂ
ಎಂದು ಆಚಾರ್ಯರು ಕರ್ಮನಿರ್ಣಯದಲ್ಲಿ ಮನುಷ್ಯರನ್ನ ಅರ್ಚನೆ ಮಾಡಬಾರದು. ಮಾಡುವುದಾದರೆ ಪರಮಾತ್ಮನನ್ನ ಮಾತ್ರ ಮಾಡಬೇಕು. ಅರ್ಚನೆ ಇಲ್ಲಿ ಯಜ್ಞದಿಂದ ಆರಾಧನೆ ಮಾಡಬೇಕು ಎಂದು ಈ ಪ್ರಮಾಣ ಶ್ಲೋಕ ತಿಳಿಸುತ್ತಾರೆ.
ಅಪರೋಕ್ಷ ಜ್ಞಾನ ಬರುವವರೆಗೂ ಪ್ರತೀಕ ಉಪಾಸನೆ (ಮೂರ್ತಿ ಅಂತರ್ಗತ ಅರ್ಚನೆ) ಮಾಡಲೇಬೇಕು ಎಂದು ಆಚಾರ್ಯರು ತಿಳಿಸುತ್ತಾರೆ.
ಸ್ವರ್ಗಾಪವರ್ಗಯೋ: ಪುಂಸಾಂ ರಾಸಾಯಾಮ್ ಭುವಿ ಸಂಪದಾಂ |
ಸರ್ವಾಸಾಮಪಿ ಸಿದ್ದೀನಾಮ್ ಮೂಲಂ ತಚ್ಚರಣಾರ್ಚನಂ | - ಭಾಗವತ - ೧೦-೮೧-೧೯
ಭಗವಂತನ ಚರಣಗಳ ಅರ್ಚನೆ ಮಾಡುವುದು ಎಲ್ಲಾ ಸಂಪಾದಕ್ಕೂ (ಮೋಕ್ಷ, ಸ್ವರ್ಗ,ಪಾತಾಳ ಲೋಕದಲ್ಲಿ ಇರುವ ಸಂಪದ) ಮೂಲ ಕಾರಣವಾಗಿದೆ.
ಕೃಷ್ಣ ಭಗವದ್ ಗೀತೆಯಲ್ಲಿ ........ಸ್ವಕರ್ಮಣಾ ತಮರ್ಭ್ಯಚ್ಯಾ ಸಿದ್ಧಿಮ್ ವಿಂದತಿ ಮಾನವ: ||
ತಮ್ಮ ಸ್ವಾಭಾವಿಕ ಕರ್ಮಗಳ ಮೂಲಕ ಮನುಷ್ಯ ಪರಮಾತ್ಮನ ಅರ್ಚನೆ ಮಾಡುವದರಿಂದ ಪರಮಸಿದ್ಧಿ ಹೊಂದುತ್ತಾನೆ. ಅಂದರೆ, ನಾವು ಮಾಡುವ ದೈನಂದಿನ ವಿಹಿತ ಕರ್ಮಗಳು ಪರಮಾತ್ಮನಿಗೆ ಸಮರ್ಪಣೆ ಮಾಡುವುದು ಕೂಡ ಅರ್ಚನೆ ಎಂದು ತಿಳಿಯಬೇಕು.
ಭರತ ತೋರಿಸುಕೊಟ್ಟ ಅರ್ಚನೆ :
ತತ್ರ ರಾಜಾಸನಮ್ ದಿವ್ಯಮ್ ವ್ಯಜನಮ್ ಛತ್ರಮೇವ ಚ | ... ವಾಲ್ಮೀಕಿ ರಾಮಾಯಣ
ಭರತನು ದಿವ್ಯ ಸಿಂಹಾಸನ ಮೇಲೆ ಶ್ರೀರಾಮ ಪಾದುಕೆಗಳನ್ನು ಇಟ್ಟು, ಛತ್ರ ಚ್ಚಾಮರ ಅಲಂಕೃತ ಸಿಂಹಾಸನದಲ್ಲಿ ಶ್ರೀರಾಮನು ವಿರಾಜಮಾನನಾಗಿದ್ದಾನೆ ಎಂದು ಸ್ಮರಿಸಿ ಪ್ರದಕ್ಷಿಣೆ ಮಾಡಿದ. ಭರತನು ಈ ಪ್ರಕಾರ ಚಾಮರ ಸೇವೆ ಮತ್ತು ಪೂಜೆ ಮಾಡುತ್ತಲೇ ರಾತ್ರಿಯನ್ನು ಕಳೆದ. ಎಂತಹ ಭಕ್ತಿ ಭರತನದು.
ಅಪರೋಕ್ಷ ಜ್ಞಾನಿಗಳಲ್ಲಿ, ಮನುಷ್ಯೋತ್ತಮರಲ್ಲಿ, ದೇವತೆಗಳಲ್ಲಿ ಅರ್ಚನೆ (ಬಾಹ್ಯ ಮತ್ತು ಅಂತರಂಗ) ಸ್ವಾಭಾವಿಕವಾಗಿ ಇರುತ್ತದೆ ಎಂದು ಸ್ಮರಿಸಬೇಕು. ಇದನ್ನು ಸಾಮಾನ್ಯ ಮನುಷ್ಯರಾದ ನಾವು ಸಾಲಿಗ್ರಾಮಾದಿಗಳಲ್ಲಿ ಭಗವಂತನ ಅಭೇದ ಚಿಂತನೆ ಮಾಡಿ ಅರ್ಚನೆ ಮಾಡಬೇಕು. ಮುರ್ತಿಯಲ್ಲಿ ಆದರೆ ಬಿಂಬ ರೂಪ ಆವಾಹನೆ ಮಾಡಿ ಪೂಜೆ ಮಾಡಬೇಕು.
ನವವಿಧ ಭಕ್ತಿಯ ಚಿಂತನೆ : (ವಂದನಂ)
ಭಕ್ತಿ ಉತ್ಕೃಷ್ಟವಾದರೆ ಭಕ್ತನು ತನ್ನನ್ನು ತಾನು ಮರೆತು ಸಾಷ್ಟಾಂಗ ಮಾಡುತ್ತಾನೆ. ನಾವು ಅಭ್ಯಾಸ ಮಾಡುತ್ತೇವೆ ಆದರೆ ಅದು ಸಹಜವಾಗಿ ಬರಬೇಕು.
ಬಧಾಂಜಲಿಪುಟ: ಸಮ್ಯಗ್ದಕ್ಪ: ಕೃತ್ವಾ ಭುಜಾಂತರೇ |
ಶ್ರುತ್ವಾ ವಿಷ್ಣು ಕಥಾಮ್ ಪುಣ್ಯಮ್ ತಥಾ ಸಂಕೀರ್ಥಯೇದ್ದರಿಂ ||
ಪ್ರಣಮೆದ್ದಂಡ ವದ್ಭೂಮಾವುಥಾಯೋತ್ಹಾಯ ತನ್ಮನಾ: |
ಸ್ವಾಧಾಯವದನ: ಕುರ್ಯಾದಷ್ಟಾoಗೇನ ನಮಸ್ಕ್ರಿಯಾಮ್ || ... ಸ್ಮೃತಿ
ಎರಡು ಕೈಗಳನ್ನು ಜೋಡಿಸಿ ವಿಷ್ಣು ಕಥೆಯನ್ನು ದಕ್ಷತೆ ಇಂದ ಕೇಳಬೇಕು. ಮಧ್ಯ-ಮಧ್ಯದಲ್ಲಿ ಹರಿನಾಮಸ್ಮರಣ ಮಾಡುತ್ತಿರಬೇಕು. ಶ್ರೀಹರಿಯನ್ನು ಸ್ಮರಿಸುತ್ತಾ ಎದ್ದು ಆಗಾಗ್ಗೆ ನಿಲ್ಲುತ್ತಾ ಸಾಷ್ಟಾಂಗ ಮಾಡುತ್ತಿರಬೇಕು.
ದೇಹದಮೂಲಕ, ವಚನದ ಮೂಲಕ ವಿಷ್ಣುವನ್ನು ವಂದಿಸುತ್ತಿರಬೇಕು. ನಾವು ವಿಘ್ನ ನಿವಾರಣೆಗಾಗಿ ವಿನಾಯಕನನ್ನ ವಂದಿಸುತ್ತೇವೆ. ಆಚಾರ್ಯರಿಗೆ ವಿಘ್ನವೆ ಇಲ್ಲವಾದರೂ ಲೋಕ ಶಿಕ್ಷಣೆಗಾಗಿ ತಮ್ಮ ಸ್ವರೂಪ ಗುರುಗಳಾದ ವೇದವ್ಯಾಸರುಗೆ ಗ್ರಂಥದ ಆದಿಯಲ್ಲಿ ವಂದಿಸುತ್ತಾರೆ.
"ವಂದೇ ವಂದ್ಯಮ್ ಸದಾನಂದಮ್ ವಾಸುದೇವಂ ನಿರಂಜನಂ.." ಎಂದು ಅನೇಕ ಸ್ತೋತ್ರಗಳ ಮಾಲಿಕೆಗಳನ್ನು ಆಚಾರ್ಯರು ನಮಗೆ ಕೊಟ್ಟಿದ್ದಾರೆ. ಆಚಾರ್ಯರು ಸದಾಕಾಲ ಶ್ರೀವಿಷ್ಣುವನ್ನೇ ನೋಡುತ್ತಿರುವುದರಿಂದ ಅವರಿಗೆ ಎಲ್ಲಾಕಡೆ ನಮಸ್ಕಾರಾದಿಗಳನ್ನು ಮಾಡುತ್ತಿದ್ದಾರೆಂದು ಮಧ್ವವಿಜಯದಲ್ಲಿ ಉಲ್ಲೇಖಿಸಿದ್ದಾರೆ.
ಯಾವುದೇ ದೇವತೆಗಳ (ಗಣಪತಿ,ಶಿವ,ಪಾರ್ವತಿ .. ಮುಂತಾದ) ಮಂದಿರಕ್ಕೆ ಹೋದಾಗ, ನಾವು ಸಾಷ್ಟಾಂಗ ಮಾಡುವಾಗ, ಅಂತರ್ಯಾಮಿತ್ವದಿಂದ ಶ್ರೀವಿಷ್ಣುವಿಗೆ ಸಾಷ್ಟಾಂಗ ಮಾಡಬೇಕು. ದೇವತೆಗಳು ಪರಮಾತ್ಮನ ಅಧೀನ ಎನ್ನುವ ಅನುಸಂಧಾನದಿಂದ ನಮಸ್ಕಾರಾದಿಗಳನ್ನು ಮಾಡಬೇಕು. ಇಲ್ಲದಿದ್ದಲ್ಲಿ ಆ ದೇವತೆಗಳು ಆ ನಮಸ್ಕಾರಾದಿಗಳನ್ನು ಸ್ವೀಕರಿಸುವುದಿಲ್ಲ. ಅದು ನಿಷ್ಪಲವೇ ಸರಿ.
ಕೆಲವರು ಹಾದಿಯಲ್ಲಿ ನಮಸ್ಕರಿಸುದು, ವಂದೇ ಕಯ್ಯಿಂದ ಹೃದಯಕ್ಕೆ ಮುಟ್ಟುವುದು, ಸೆಲ್ಯೂಟ್ ತರ ಮಾಡುವುದು ಕಂಡು ಬರುತ್ತದೆ. ಅವರಿಗೆ ನರಕ ಕಾದಿದೆ ಎಂದು ತಿಳಿಯಬೇಕು..
ಏಕೇನ ಪಾಣಿನಾ ಯೋ ವೈ ಪ್ರಣಮೇದ್ದೇವಮಚ್ಯುತಂ |
ತಸ್ಯ ದಂಡ ಕರಚ್ಚೇದ ಇತಿ ವೇದವಿದೋ ವಿದು: || ಭಾಗವತ
ಯಾರು ಒಂದೇ ಕಯ್ಯಿಂದ, ದೋಷದೂರನಾದ ವಿಷ್ಣುವಿಗೆ ನಮಸ್ಕರಿಸುತ್ತಾನೋ , ಅವನ ಕೈಗಳನ್ನು ಕತ್ತರಿಸುವುದೇ ಶಿಕ್ಷೆಯೆನಿಸುತ್ತದೆ. ಈ ವಿಷಯವನ್ನು ವೇದವನ್ನು ತಿಳಿದ ಜ್ಞಾನಿಗಳು ಹೇಳುತ್ತಾರೆ.
ಅದಕ್ಕಾಗಿ, ಎರಡು ಕೈಗಳಿಂದ ದೇವರನ್ನು ನಮಸ್ಕರಿಸಬೇಕು. ಆದರೆ, ಬರೀ ತೋರಿಕೆಗೆ ನಮಸ್ಕಾರಾದಿಗಳನ್ನು ಮಾಡಿದರೂ ಸಹ ಪುಣ್ಯಬರುವುದು ಎಂದು ಯಮದೇವರು ಸೂಚಿಸುತ್ತಾರೆ.
ಶಾಠ್ಯೇನಾಪಿ ನಮಸ್ಕಾರಂ ಕುರ್ವತ: ಶಾಂನ್ಗಪಾಣಯೇ |
ಶತ ಜನ್ಮಾರ್ಜಿತಮ್ ಪಾಪಂ ನಶ್ಯತ್ಯೇವ ನ ಸಂಶಯ: || ಯಮವಚನ
ಭಕ್ತಿಯಿಲ್ಲದೆ ಶಾಠ್ಯೇದಿಂದ ಶ್ರೀಹರಿಗೆ ನಮಸ್ಕಾರಾದಿಗಳನ್ನು ಮಾಡಿದರೂ, ನೂರು ಜನ್ಮಗಳಲ್ಲಿ ಮಾಡಿದ ಪಾಪವನ್ನು ಕಳೆದು ಕೊಳ್ಳುವನು.
ನೃತ್ಯತಾಂ ಶ್ರೀಪತೇರಗ್ರೇ ಕರಸಂಸ್ಪೋಟನಾದಿಭಿ: |
ಉಡ್ಡಿಯಂತೆ ಶರೀರಸ್ಥ ಮಹಾಪಾತಕಪಕ್ಷಿಣ:||
ಶ್ರೀಹರಿ ಮುಂದೆ ನೃತ್ಯ ಮಾಡುವಾಗ , ಯಾರು ಜೋರಾಗಿ ಕೈ ಚಪ್ಪಾಳಿ ಹಾಕುತ್ತ ಭಕ್ತಿ ಉದ್ರೇಕ ವ್ಯಕ್ತಪಡಿಸುತ್ತಾರೋ , ಅವರ ಶರೀರದಲ್ಲಿ ಇರುವ ಮಹಾ ಪಾತಕ ಪಕ್ಷಿಗಳು ಓಡಿಹೋಗುತ್ತವೆ.
ಗೀತೆಯಲ್ಲಿ ಅರ್ಜುನ ಕೃಷ್ಣನ ವಿಶ್ವರೂಪನೋಡಿ ಹೀಗೆ ಹೇಳುತ್ತಾನೆ.
ನಮ: ಪುರಸ್ತಾದಥ ಪೃಷ್ಠತಸ್ತೇ
ನಮೋSಸ್ತು ತೇ ಸರ್ವತ ಯೇವ ಸರ್ವ |
ಅನಂತವೀರ್ಯಾಮಿತ ವಿಕ್ರಮಸ್ತ್ವಂ
ಸರ್ವಂ ಸಮಾಪ್ನೋಷಿ ತತೋSಸಿ ಸರ್ವ: ||
ಹೇ ಅನಂತ ಸಾಮರ್ಥ್ಯಉಳ್ಳವನೇ ! ನಿನಗೆ ಮುಂದಿನಿಂದ, ಹಿಂದಿನಿಂದಲೂ ನಮಸ್ಕಾರವು. ಹೇ ಗುಣಪೂರ್ಣನೆ ! ನಿನಗೆ ಎಲ್ಲಾಕಡೆಯಿಂದಲೂ ನಮಸ್ಕಾರ. ಏಕೆಂದರೆ ನೀನು ಜಗತ್ತಲ್ಲಿ ಎಲ್ಲಾ ಕಡೆ ವ್ಯಾಪಿಸಿರುವೆ.
ನಮೋಸ್ತು ರಾಮಾಯ ಚ ಲಕ್ಷಣಾಯ |
ನಮೋಸ್ತು ದೇವೈ ಜನಕಾತ್ಮ ಜಾಯೈ |
ನಮೋಸ್ತು ರುದ್ರೇನ್ದ್ರ ಯಮಾನಿಲೆಭ್ಯೋ |
ನಮೋಸ್ತು ಚಂದ್ರಾರ್ಕ ಮರುದ್ಗಣೇಭ್ಯ ||
ಲಕ್ಶ್ಮಣ ಸಹಿತನಾದ ಶ್ರೀ ರಾಮನಿಗೆ ನನ್ನ ನಮಸ್ಕಾರ. ಜನಕನ ಮಗಳಾದ ಮತ್ತು ಶ್ರೀರಾಮನ ಪತ್ನಿಗೆ ನನ್ನ ನಮಸ್ಕಾರಗಳು. ರುದ್ರ,ಯಮ ಮತ್ತು ಪ್ರವಾಹ ವಾಯುವಿಗೆ ನನ್ನ ನಮಸ್ಕಾರ. ಚಂದ್ರನಿಗೆ, ಸೂರ್ಯನಿಗೆ ಮಾತು ಮರುದ್ಗಣಕ್ಕೆ ನನ್ನ ನಮಸ್ಕಾರಗಳು.
ಭರತಮಾಡಿದ ದಂಡ ಪ್ರಣಾಮ :
ಮಾತುರ್ಮೇ ದುಷ್ಕೃತಂ ಕಿಂಚಿತ್ಸ್ಮುರ್ತುo ನಾರ್ಹಸಿ ಪಾಹಿ ನ:|
ಇತ್ಯುಕ್ತ್ವಾ ಚರ ರಾ ಚರ ಚರಣೌ ಭ್ರಾತು: ಶಿರಸ್ಯಾಧಾಯ ಭಕ್ತಿತ:|
ರಾಮಸ್ಯ ಪುರತ: ಸಾಕ್ಷಾದ್ದಂಡವತ್ಪತಿತೋ ಭುವಿ:|| ಅಯೋಧ್ಯಾಕಾಂಡ
ನನ್ನ ತಾಯಿಯಾ ಏನೆಲ್ಲಾ ಅಪರಾಧವಿದೇಯೋ, ಅದನ್ನು ಮರೆತು ಬಿಡು ಮತ್ತು ನಮ್ಮನ್ನ ರಕ್ಷಿಸು. ಹೀಗೆ ಹೇಳಿ ಭರತ ಅಣ್ಣನಾದ ಶ್ರೀರಾಮನ ಚರಣಗಳನ್ನು ಭಕ್ತಿಪೂರ್ವಕ ನಮಿಸಿ, ದಂಡದಂತೆ ಭೂಮಿಯಮೇಲೆ ಬಿದ್ದುಬಿಟ್ಟನು.
,.....................
ನವವಿಧ ಭಕ್ತಿಯ ಚಿಂತನೆ : (ದಾಸ್ಯo)
ಸಾಧಕನಲ್ಲಿ ದಾಸ ಭಾವ ಬಾರದೆ ಇದ್ದರೆ, ವಿಶ್ವಪ್ರಯತ್ನ ಮಾಡಿದರು ಅದು ದೇವರ ಪ್ರೀತಿಗೆ ಬರುವುದಿಲ್ಲ. ನಮ್ಮ ದಾಸತ್ವಕ್ಕೆ ಹರಿ ಇಚ್ಛೆ ಬೇಕು. ಸಾಧಕನು ಸಾಧನ ಮಾರ್ಗದಲ್ಲಿ ಉಚ್ಚಸ್ಥಾನದಲ್ಲಿರಬೇಕು."ದಾಸೋಹಂ ತವ ದಾಸೋಹಂ" ಎನ್ನಬೇಕಾದರೆ "ಮಮ ಸ್ವಾಮಿ ಹರೀರ್ನಿತ್ಯಂ ಸರ್ವಸ್ಯ ಪತಿರೇವ ಚ" - ಪರಮಾತ್ಮ ನನ್ನ ಸ್ವಾಮೀ ಮತ್ತು ಎಲ್ಲರ ಸ್ವಾಮಿ ಎನ್ನುವ ಅನುಸಂಧಾನ ಅಧ್ಯಯನದಿಂದ ಶಾಸ್ತ್ರ ಯುಕ್ತಿಗಳಿಂದ ಧೃಡ ಪಡಿಸಿರಬೇಕು.ನಮಗೆ ಕಂಡ ಹರಿದಾಸರೆಲ್ಲರೂ ಅಪರೋಕ್ಷಜ್ಞಾನಿಗಳು ಮತ್ತು ಅಪರೋಕ್ಷ ಜ್ಞಾನಿಗಲ್ಲೆಲ್ಲರೂ ದಾಸರೇ.
ನಮ್ಮ ಸ್ವಾಶ ಉಚ್ಛ್ವಾಸಗಳು ನಮಗೆ ತಿಳಿಯದೆ ಹೇಗೆ ಪ್ರಾಣ ದೇವರು ನಡಿಸುವಂತದ್ದೋ, ಅದೇ ತರಹ ಪರಮಾತ್ಮನ ಬ್ರಹ್ಮತ್ವ(ಗುಣ ಪೂರ್ಣತ್ವ) ಮತ್ತು ಸ್ವಾಮಿತ್ವ(ನನಗೆ ಮತ್ತು ಎಲ್ಲರಿಗೂ) ಅನುಸಂಧಾನ ಅಪ್ರಯತ್ನ ಪೂರಕವಾಗಿ ಬಂದರೆ ಅದು ದಾಸತ್ವದ ನಿರ್ವಚನ.
ದಾಸನಲ್ಲಿ ಲಜ್ಜೆ ಇರಕೂಡದು. ಭಯ ಇರಕೂಡದು. ಆದರೆ ಕೆಟ್ಟ ಕೆಲಸಬಗ್ಗೆ ಲಜ್ಜೆ ಬೇಕು.
"ಲಜ್ಜೆ ಬಿಟ್ಟು ಕುಣಿಯೋರೆಂದು ಕಾಗದ ಬಂದಿದೆ , ಹೆಜ್ಜೆ ಹೆಜ್ಜೆ ಗೆ ಹರಿ ಎನ್ನಿರೆಂಬೋ ಕಾಗದ ಬಂದಿದೆ |"
"ಆರು ವಂದಿಸಲೇನು ಆರು ನಿಂದಿಸಲೇನು |"
"ಆರ ಗೊಡವೆ ಏನೋ , ನರಕದ ದಾರಿ ತಪ್ಪಪರೇನೋ | ಬಾರಿ ಬಾರಿಗೆ ಸರ್ವೇಶನ ನಾಮವ | ಸಾರಿ ಸಾರಿಗೆ ಕೈಮುಗಿದು ಕೊಂಡಾಡೊ|"
"ನಾಚಿಕೆ ಗೊಳಬೇಡ ಮನದಲಿ ಯೋಚಿಸಿ ಕೆಡಬೇಡ|"
ಎನ್ನುವ ದಾಸರ ಪದಗಳು ನಮ್ಮನ್ನು ಎಚ್ಚಿರಗೊಳಿಸುತ್ತವೆ.
ಜೀವರಲ್ಲಿ ಶ್ರೇಷ್ಠತಮದಾಸರು ವಾಯುದೇವರು."ದಾಸೋಹಂ ಕೊಸಲೇಂದ್ರಸ್ಯ" ಎಂದು ಮೂಲ ಗುರುಗಳಾದ ಹನುಮಂತ ದೇವರು ತಮ್ಮನ್ನ ರಾವಣನ ಆಸ್ಥಾನದಲ್ಲಿ ಪರಿಚಯ ಮಾಡಿಕೊಂಡದ್ದು. ಹನುಮಂತದೇವರು ರಾಮನಲ್ಲಿ ಕೇಳಿಕೊಂಡದ್ದು ಪ್ರತಿಕ್ಷಣದಲ್ಲಿ ಪರಮಾತ್ಮನ ಮೇಲೆ ಭಕ್ತಿ ಬೆಳೆಯಲಿ (ಪ್ರವರ್ಧತಾಂ ಭಕ್ತಿರಲಂ ಕ್ಷಣೇ ಕ್ಷಣೇ".) ಇದು ದಾಸರ ಲಕ್ಷಣ.
ದಾಸತ್ವ ಪಡೆದವರ ಬಗ್ಗೆ ಯಮ ದೇವರು ತನ್ನ ಯಮದೂತರಿಗೆ ಹೀಗೆ ತಿಳಿಸಿದನಂತೆ.
ಮುಟ್ಟ ಬೇಡಿ ಮುಟ್ಟ ಬೇಡಿ ಮುರಹರನ ದಾಸರನು |
ಕಟ್ಟು ಮಾಡಿದನಂತೆ ಯಮ ತನ್ನ ದೂತರಿಗೆ || - ಕನಕ ದಾಸರು
ನರಹರಿತೀರ್ಥರು, ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು, ಶ್ರೀರಾಘವೇಂದ್ರಸ್ವಾಮಿಗಳು ಅನೇಕ ಶ್ರೇಷ್ಠ ಯತಿಗಳು ತಮ್ಮ ಅದ್ವಿತೀಯ ಪಾಂಡಿತ್ಯ ಮಾತ್ರದಿಂದಲೇ ದೇವರನ್ನ ಮೇಚುವುದು ಸಾಧ್ಯವಿಲ್ಲ ಎಂದು ದಾಸಪದಗಳಿಂದ ಅರ್ಚಿಸಿದ್ದಾರೆ. ಅವರ ದಾಸತ್ವಕ್ಕೆ ಭಕ್ತಿಗೆ ದೇವರು ಕುಣಿದಿದ್ದಾನೆ. ಸುಧಾ ಓದಬೇಕು ಪದ ನೋಡಬೇಕು ಎನ್ನುವ ಗಾಧೆ ಸುಳ್ಳ್ಳಲ್ಲ. ಸುಧಾ ಓದಿದರೂ ದಾಸಪದಕ್ಕೆ ಬಂದರೆ ಮಾತ್ರ ಓದಿದ್ದು ಸಾರ್ಥಕ್ಯ ಇಲ್ಲದಿದ್ದರೆ ಒಣ ಪಾಂಡಿತ್ಯವೇ ಸರಿ.
ದಾಸನಾಗುವುದಕ್ಕೆ ಶ್ರೀಕನಕ ದಾಸರು ಕೊಟ್ಟ ಉತ್ತರ
ಎಲ್ಲಿಂದ ಬಂದೆ ಮುಂದೆತ್ತ ಪಯಣ |
ಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ ?
.
.
ಧರೆಯೊಳಗೆ ವರಕಾಗಿ ನೆಲಯಾದಿಕೇಶವನ |
ಸಿರಿ ಚರಣಕಮಲವನು ನೆರೆನಂಬಿ ಸುಖಿಸೋ ||
ನಿವರ್ತಯಿತ್ವಾ ರಾಮಂ ಚ ತಸ್ಯಾಹಂ ದೀಪ್ತತೇಜಸ:|
ದಾಸಭೂತೋ ಭವಿಷ್ಯಾಮಿ ಸುಸ್ಥಿತೇನಾಂತರಾತ್ಮನ || ವಾಲ್ಮೀಕಿ ರಾಮಾಯಣ
ನಾನು ರಾಮನನ್ನು ಮರಳಿ ಕರೆತರುತ್ತೇನೆ. ಆ ದೇದೀಪ್ಯಮಾನವಾದ ತೇಜಸ್ವಿ ಮಹಾಪುರುಷನ ದಾಸನಾಗಿ ಸುಸ್ಥಿರ - ಶಾಂತ ಚಿತ್ತದಿಂದ ಜೀವನ ಕಳೆಯುವೆನು. - ಎಂದು ಭರತ ತನ್ನ ತಾಯಿಮುಂದೆ ನುಡಿಯುತ್ತಾನೆ.
ದಾಸ - ಸ್ವಾಮೀ ಸ್ನೇಹ ನಿತ್ಯ, ಮೋಕ್ಷದಲೂ ಸಹ ಈ ಭೇದ ಇದ್ದೆ ಇರುತ್ತದೆ.
......................
ನವವಿಧ ಭಕ್ತಿಯ ಚಿಂತನೆ : (ಸಖ್ಯo)
ಸ್ನೇಹತರಲ್ಲಿ ಒಬ್ಬರನ್ನು ಮತ್ತೊಬ್ಬರು ಚೆನ್ನಾಗಿ ತಿಳಿದಿರುತ್ತಾರೆ. ಒಬ್ಬ ಸ್ನೇಹಿತ ಅಸಡ್ಡೆ ಮಾಡಿದರೆ ಇನ್ನೊಬ್ಬ ಕೂಡ ಅಸಡ್ಡೆ ಮಾಡುತ್ತಾನೆ. ಇದು ಈ ಜಗತ್ತಿನಲ್ಲಿ ಇರುವ ಸ್ನೇಹಿತರ ಲಕ್ಷಣ. ಆದರೆ, ಅನಾದಿ ಕಾಲದಿಂದ ಜೀವ ಮತ್ತು ಪರಮಾತ್ಮ ಒಬ್ಬರನ್ನು ಬಿಟ್ಟು ಒಬ್ಬರಿಲ್ಲ. ಪರಮಾತ್ಮ ಅತ್ಯಂತ ಸಖ ಎನ್ನುವ ಜ್ಞಾನ ಜೀವಕ್ಕೆ ಇಂದಿಗೂ ತಿಳಿದಿಲ್ಲ. ಇದು ಅಸಡ್ಡೆ ಅಲ್ಲದೆ ಇನ್ನೇನು ? ಆದರೂ, ಪರಮಾತ್ಮನು, ಈ ಜೀವಕ್ಕೆ ಬೇಕಾದ ಎಲ್ಲಾ ಇಷ್ಟಾ , ಆಇಷ್ಟಗಳ ವಿಷಯಸುಖಗಳನ್ನು ಅರಿತು ಆಯಾ ಕಾಲದಲ್ಲಿ ಒದಗಿಸಿ ಸಂತೋಷ ಪಡಿಸುತ್ತಾನೆ. ಇಂತಿಹ "ಸಖ" ಲೋಕದಲ್ಲಿ ಕಾಣಲು ಅಸಾಧ್ಯ. ನಮ್ಮ ಅನಾದಿ ಸಖ ಪರಮಾತ್ಮ, ನಮ್ಮನ್ನು ಅನಾದಿಕಾಲದಿಂದ ಅರಿತಿದ್ದಾನೆ. ನಮ್ಮನ್ನು ಅನೇಕ ಯೋನಿಯಲ್ಲಿ ಜೊತೆಯಾಗಿ ಇದ್ದು ನಮ್ಮನ್ನು ಕ್ಷಣ ಕ್ಷಣದಲ್ಲಿ ತನ್ನ ಪ್ರೇರಣಾ ಶಕ್ತಿಯಿಂದ ಜೀವಗತಿಯನ್ನು ನೋಡಿಕೊಂಡಿದ್ದಾನೆ. ಈ ಗೆಳೆಯಗೆ, ಏನು ಕೊಟ್ಟರೆ ಸಾರ್ಥಕವಾಗುತ್ತದೆ ? ಅವನನ್ನು ಭಕ್ತಿಯಿಂದ ಸಖ ಎಂದು ಉಪಾಸನೆ ಮಾಡುವುದು ಬಿಟ್ಟರೆ, ಇನ್ನೇನು ಮಾಡಬಹುದು.
ಸಖ್ಯ ಭಕ್ತಿಯ ಪ್ರಾಪ್ತಿಗಾಗಿ ಭಗವಂತನ ಅತ್ಯಂತ ಸಖ'ರ ಸಂಗ ,ಅವರ ಸೇವೆ , ಅವರ ಜೀವನ ಚರಿತ್ರೆಗಳ ಅಧ್ಯಯನ ಮತ್ತು ಅವನ ಗುಣಗಳ ಚಿಂತನೆ ಶ್ರವಣ ಮಾಡಬೇಕು.
ಈ ಸಖ್ಯ ಭಕ್ತಿಯ ಉದಾಹರಣೆ ವಿಭೀಷಣ, ಸುಗ್ರೀವ, ಉದ್ದವ, ಅರ್ಜುನ , ಸುದಾಮ , ವ್ರಜ ಸಖರು, ಗೋಪಿಯರು ಮುಂತಾದ ಅಧಿಕಾರಿಗಳು.
ಉದ್ದವನಿಗೆ ಶ್ರೀಕೃಷ್ಣನಲ್ಲಿ ಆಳವಾದ ಸ್ನೇಹ ಇತ್ತು. ಅದರಿಂದಾಗಿ, ಕೃಷ್ಣ ಗೋಪಿಕರಿಗೆ, ಮತ್ತು ತನ್ನ ತಂದೆ ತಾಯಂದರಿಗೆ ಸಂದೇಹ ಕಳಿಸಲು ಉದ್ಧವನ್ನ ಆರಿಸುತ್ತಾನೆ.
ವೃಷ್ಣೀನಾo ಪ್ರವರೋ ಮಂತ್ರಿ ಕೃಷ್ಣಸ್ಯ ದಯಿತ: ಸಖಾ|
ಶಿಷ್ಯೋ ಬೃಹಸ್ಪತೇ: ಸಾಕ್ಷಾದುದ್ದವೋ ಬುದ್ದಿಸತ್ತಮ: | ಭಾಗವತ
ಯದುವಂಶದ ಶ್ರೇಷ್ಠಮಂತ್ರಿ, ಬೃಹಸ್ಪತಿಯ ಸಾಕ್ಷಾತ್ ಶಿಷ್ಯ ಹಾಗು ಬುದ್ದಿವಂತ ಉದ್ದವನು ಭಗವಾನ್ ಶ್ರೀಕೃಷ್ಣನ ಪರಮಪ್ರಿಯ ಸಖನಾಗಿದ್ದನು.
ಅರ್ಜುನನ ಸಖ್ಯಭಾವವನ್ನು ಭಗವಂತನು ಸ್ವಯಂ ಘೋಷಿಸುತ್ತಾನೆ.
'ಭಕ್ತೋSಸಿ ಮೇ ಸಖಾ ಚೇತಿ ' ನೀನು ನನ್ನ ಭಕ್ತ ಮತ್ತು ಸಖನಾಗಿರುವೆ.
ಅನಾದಿ ಗೆಳೆತನ ತನ್ನ ಜೀವರಾಶಿಗಳಿಗೆ ಇದ್ದಮೇಲೆ, ಸಾಕ್ಷಾತ್ ಇಂದ್ರನ ಅವತಾರ ಅರ್ಜುನ ಪರಮ ಸಖ ಎಂದೇ ಹೇಳಬೇಕು. ಇಂದ್ರ ತಾನು ಇಂದ್ರ ಪದವಿಯಲ್ಲಿ ಇರೋ ಕಾರಣ ಈ ಸಖ ಶ್ರೀಕೃಷ್ಣನೇ ಅಲ್ಲವೇ.
ಅಶ್ವತ್ತಾಮನ ಮೂಲಕ ಉತ್ತರೆಯ ಗರ್ಭಸ್ಥ ಬಾಲಕ ಪರೀಕ್ಷಿತನು ಸತ್ತು ಹುಟ್ಟಿದಾಗ ಭಗವಾನ್ ಶ್ರೀಕೃಷ ಹೇಳುವ ಮಾತು ರೋಮಾಂಚವಾಗುತ್ತದೆ.
ಯಥಾಹಂ ನಾಭಿಜಾನಾಮಿ ವಿಜಯೇನ ಕದಾಚನ |
ವಿರೋಧಂ ತೇನ ಸತ್ಯೇನಾ ಮೃತೋ ಜೀವತ್ವಯಮ್ ಶಿಶು: |
ಒಂದು ವೇಳೆ ನಾನು ತಿಳಿದಂತೆ, ಅರ್ಜುನನೊಂದಿಗೆ ಎಂದೂ ಕೂಡ ಮಿತ್ರತೆಯಲ್ಲಿ ಯಾವುದೇ ವಿರೋಧ ಉಂಟಾಗಲು ಬಿಡದಿದ್ದರೆ, ಅಂದರೆ ಎಂದಿಗೂ ವಿರೋಧ ಮಾಡಿಲ್ಲ ಎಂತಾದರೆ , ಈ ಸತ್ತಿರುವ ಶಿಶು ಬದುಕಲಿ.
ಇದು ಅವನ ಕಾರುಣ್ಯ ಅಲ್ಲದೆ ಇನ್ನೇನು.?
ಸುಗ್ರೀವ ಶ್ರೀರಾಮನನ್ನು ಸಖ್ಯವಾಗಿ ಸ್ವೀಕಾರಮಾಡಿದ್ದೂ ಒಳಿತು ಆಗಿದ್ದು ಸುಗ್ರೀವನಿಗೆ ಹೊರತು, ಶ್ರೀರಾಮ ಸುಗ್ರೀವನಿಂದ ಏನು ಪಡೆದ ? ಶ್ರೀರಾಮನೇ ಸಮುದ್ರ ದಾಟಿ, ರಾವಣನ ಕೊಂದು ತನ್ನ ಕಾರ್ಯ ತಾನು ಮಾಡಿಕೊಂಡ. ಆದರೆ, ತನ್ನ ಸಖ್ಯ ಮತ್ತು ಸಹಭೋಗ ಕೊಟ್ಟಿದು ಹನುಮಂತನಿಗೆ ಅಲ್ಲವೇ.
ಸುದಾಮ ತಾನು ಬಂದದ್ದು ಕಾರಣ ಹೇಳದೆ, ಸಂಕೋಚದಿಂದ ಹಿಂದುರುವಾಗ, ಅವನಿಗೆ ಶ್ರೀಕೃಷ್ಣ ಅನುಗ್ರಹ ಮಾಡಿದ್ದು ಅತ್ಯಂತ ಸಖ್ಯ ಮತ್ತು ಪ್ರೇಮ ಭಾವದಿಂದ. ಶ್ರೀಕೃಷ್ಣನಲ್ಲಿ ಯಾಚನೆ ಮಾಡದಿದ್ದರೂ ತನ್ನ ಭಕ್ತರ ಆಗು ಹೋಗುಗಳು ಅವನಿಗೆ ಗೊತ್ತೇ ಇದೆ.
ಆದುದರಿಂದ, ಭಗವಂತನನ್ನೇ ತನ್ನ ಏಕಮಾತ್ರ ಪರಮ ಪ್ರಿಯತಮ ಮಿತ್ರ ಎಂದು ತಿಳಿದು ತನ್ನ ಸರ್ವಸ್ವವೂ ಅವನೇ ಎಂದು ಒಪ್ಪಿಕೊಂಡು ಪರಮ ಪ್ರೇಮ ಭಾವದಿಂದ ಸಖ್ಯ ಭಕ್ತಿಯನ್ನು ಮಾಡಬೇಕು.
............
ನವವಿಧ ಭಕ್ತಿಯ ಚಿಂತನೆ : (ಆತ್ಮನಿವೇದನಂ)
ಇಲ್ಲಿಯವರೆಗೂ ಶ್ರವಣ, ಕೀರ್ತನ, ಸ್ಮರಣ , ಪಾದಸೇವನ, ಅರ್ಚನ, ವಂದನ, ದಾಸ್ಯಮ್ , ಸಖ್ಯಮ್ ಎನ್ನುವ ಭಕ್ತಿಯ ಅಂಗಗಳು ನೋಡಿದೆವು. ಆತ್ಮನಿವೇದನಂ ಉತ್ಕೃಷ್ಟವಾದ ಹಂತ ಎಂದು ಹೇಳಬಹುದು.
ಭಾಗವತದಲ್ಲಿ 9 ಸ್ಕಂದಗಳ ನವವಿಧ ಭಕ್ತಿಯ ತೋರಿದ ತನ್ನ ಭಕ್ತರ ಕಥೆ ಆದಮೇಲೆ ಶ್ರೀಕೃಷ್ಣನ ದಶಮ ಸ್ಕಂದ ಬರುತ್ತದೆ. ಮೊದಲು ತನ್ನ ಭಕ್ತರ ಮಹಿಮೆ ಆದಮೇಲೆ ಕೃಷ್ಣನ ಮಹಿಮೆ. "ಭಕುತಜನ ಮುಂದೆ ನೀನವರ ಹಿಂದೆ" ಎನ್ನುವಂತೆ ಭಕ್ತಿಯ ಪರಾಕಾಷ್ಠೆ ಏನು ಅಂದರೆ ಅದು ಕೃಷ್ಣನ ಆಗಮನ.
ಗೋಪಿಗಿತೇ ಆತ್ಮನಿವೇದನಂ ಎಂದು ಹೇಳಬಹುದು. ಗೋಪಿಯರು ಎಂದಿಗೂ ಇಂದಿಗೂ ಮಾಡುವಂತದ್ದು ಉಪಕಾರಸ್ಮರಣೆ. ಅವರು ಹೇಳುತ್ತಾರೆ :
विषजलाप्ययाद्व्यालराक्षसा-
द्वर्षमारुताद्वैद्युतानलात् ।
वृषमयात्मजाद्विश्वतोभया-
दृषभ ते वयं रक्षिता मुहुः ॥ ३॥
ಹೇ ಸರ್ವೋತ್ತಮನೇ, ನೀನು ನಮ್ಮನ್ನು ಕಷ್ಟಗಳಿಂದ, ಭಯಾನಕ ರಾಕ್ಷಸರಿಂದ ರಕ್ಷಿಸಿದಲ್ಲವೇ. ಒಂದು ಬಾರಿ ಅಲ್ಲ ಅನೇಕ ಬಾರಿ. ಕಾಳಿಂಗ ತಂಗಿದ್ದ ವಿಷದ ಮಡುವಿನಿಂದ,ಭಯಾನಕ ಮಳೆಗಳಿಂದ, ಮನುಷ್ಯರನ್ನು ತಿನ್ನುವ ಭಯಾನಕ ರಾಕ್ಷಸರಿಂದ, ಇಂದ್ರನ ಆರ್ಭಾಟದಿಂದ ಹೊಂದಿದ ಪ್ರಕೃತಿಯ ಕ್ಷೋಭದಿಂದ,ವೃಷಭ,ವ್ಯೋಮಾಸುರ (ಮಯಾಸುರನ ಮಗ), ಅಘಾಸುರ ಮುಂತಾದ ಅತಿ ಅಪಾಯಕಾರಿ ಅಸುರರಿಂದ ನಮ್ಮನ್ನು ನೀನು ರಕ್ಷಿಸಿರುವೆ.
ಹೀಗೆ ಕೃಷ್ಣನ ಹೋಗುಳುತ್ತಾ, ಕೊನೆಯಲ್ಲಿ ಅವರು ಬಂದ ರೀತಿಯನ್ನು ಹೇಳುತ್ತಾರೆ.
पतिसुतान्वयभ्रातृबान्धवा-
नतिविलङ्घ्य तेऽन्त्यच्युतागताः ।
गतिविदस्तवोद्गीतमोहिताः
कितव योषितः कस्त्यजेन्निशि ॥ १६॥
ಹೇ ಅಚ್ಯುತ, ನಾವು ಇಲ್ಲಿ ನಡು ರಾತ್ರಿಯಲ್ಲಿ ನಿನ್ನ ಕೊಳಲ ಧ್ವನಿ ಕೇಳಿ ಬಂದದ್ದು ನಿನ್ನನ್ನು ದರ್ಶನ ಪಡೆಯಲು ಮಾತ್ರ. ನೀನು ನಮ್ಮನ್ನು ಮೋಸಮಾಡಿ ಒಂಟೆ ಯಾಗಿ ಬಿಟ್ಟುಹೊಗಿದಿಯ.ನಾವು ನಮ್ಮ ಗಂಡಂದರನ್ನ, ಬಂಧು ಬಾಂಧವರನ್ನ , ಮಕ್ಕಳನ್ನ. ದೊಡ್ಡವರನ್ನ , ಅಣ್ಣಂದರಿನ್ನ ತೊರೆದು ಇಲ್ಲಿ ನಿನ್ನನ್ನು ನೋಡಲು ಬಂದೆವು. ಇದು ಆತ್ಮನಿವೇದನ. ಇದನ್ನೇ ಕನಕ ದಾಸರು ನುಡಿದರು "ತೊರೆದು ಜೀವಿಸ ಬಹುದೇ ಹರಿ ನಿನ್ನ ಚರಣಗಳ.." ಇಲ್ಲಿ ದ್ವಂದ್ವ ಇಲ್ಲ. ಲೋಕದ ಮೋಹದ ಕೈ-ಚಳಕ ಇವರ ಮೇಲೆ ನಡೆಯುದಿಲ್ಲ. ಹರಿ ಸರ್ವೋತ್ತಮ ಪ್ರಕೃಷ್ಟವಾದ ಜ್ಞಾನ ಮತ್ತು ಅವನು ಕೊಟ್ಟ ಅನುಗ್ರಹವೇ ನಮ್ಮ ಜೀವನ ಎನ್ನುವುದು ಜೀವನದ ಉಸಿರು.
ಕೃಷ್ಣ ಹೇಳಿದ " ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕ ಶರಣಂ ವ್ರಜ |.." ಅವೈಷ್ಣವ ಧರ್ಮಗಳನ್ನ ಬಿಟ್ಟು ನನಿಗೆ ಯಾರು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೋ ಅವರಿಗೆ ಮೋಕ್ಷ ಕೊಡುತ್ತೇನೆ" ಎನ್ನುವುದು ಕೃಷ್ಣನ ಪ್ರತಿಜ್ಞೆ.
ಯಾವ ಭಕ್ತರು ಆತ್ಮನಿವೇದನಕ್ಕೆ ನಿದರ್ಶನ ? ಗೋಪಿಯರು, ಬಲಿ ಮಹಾರಾಜ, ರಾಮ ಆನುಜ ಲಕ್ಷ್ಮಣ ಮತ್ತು ಭರತ ಮುಂತಾದವರು ಪರಮ ಭಕ್ತರೆನಿಸಿದ್ದಾರೆ.
ತಸ್ಮೈ ತದ್ ಭರತೋ ರಾಜ್ಯಮಾಗತಾಯಾತಿಸತ್ಕೃತಂ |
ನ್ಯಾಸಂ ನಿರ್ಯಾತಯಾಮಾಸ ಯುಕ್ತ: ಪರಮಯಾ ಮುದಾ || ವನಪರ್ವ ಮಹಾಭಾರತ
ಮಹಾಭಾರತದಲ್ಲಿಯೂ ಭರತನ ಆತ್ಮನಿವೇದನ ತೋರಿಸಿದ್ದಾರೆ ವ್ಯಾಸರು. "ಭರತನು ಕಾಡಿನಿಂದ ಮರಳಿ ಬಂದಿರುವ ಶ್ರೀರಾಮಚಂದ್ರನಿಗೆ ತುಂಬಾ ಹರ್ಷದಿಂದ ಅತ್ಯಂತ ಸತ್ಕಾರಪೂರ್ವಕ ಒಪ್ಪಿಸಿದನು."
ಇಲ್ಲಿ ನಾವು ಗಮನಿಸಿದ ಬೇಕಾದ ಅಂಶವೆಂದರೆ, ಲಕ್ಷ್ಮಣನು ತನ್ನ ಪತ್ನಿಯನ್ನ ತೊರೆದು ಶ್ರೀರಾಮನ ಸೇವೆಗಾಗಿ ತನ್ನನ್ನು ತಾನು ಸಮರ್ಪಿಸಿದ. ಇದು ಆತ್ಮನಿವೇದನೆ ಅಲ್ಲದೆ ಇನ್ನೇನು.
ಗಜೇಂದ್ರ, ಪ್ರಹ್ಲಾದ, ಹನುಮ, ಭರತ, ಲಕ್ಶ್ಮಣ, ಅಕ್ರೂರ, ಬಲಿ,ಅರ್ಜುನ , ಭೀಮ, ಶ್ರೀಮಧ್ವಾಚಾರ್ಯರು ಇನ್ನು ಅನೇಕ ಭಗವದ್ಭಕ್ತರು ತಮ್ಮನ್ನು ತಾವು ದೇವರಿಗೆ ಸಮರ್ಪಣೆ ಮಾಡಿದ್ದಾರೆ. ಅವರೆಲ್ಲರ ಸ್ಮರಣೆ ಮಾಡುವುದರಿಂದ ನಮ್ಮ ಮೋಕ್ಷದ ದಾರಿ ಸುಗುಮವಾಗುತ್ತದೆ
ಇನ್ನೊಂದು ಅರ್ಥದಿಂದ ,
ನಮ್ಮ ದೈನಂದಿನ ಕರ್ಮಗಳನ್ನು ದೇವರಿಗೆ ಸಮರ್ಪಣೆ ಮಾಡಬೇಕು. ನಮ್ಮ ಆಯುಷ್ಯನ್ನು ಮೂರು ಭಾಗ ಮಾಡಿ , ಪ್ರಾತಃ: ಸವನ , ಮಾಧ್ಯಂದಿನ ಸವನ ಮತ್ತು ಸಾಯಂ ಸವನ ಎಂದು ನಮ್ಮ ಆಯುಷ್ಯನ್ನು ದೇವರಿಗೆ ಸಮರ್ಪಣೆ ಮಾಡಬೇಕು. ಸಮರ್ಪಣೆ ಹೇಗೆ ಮಾಡಬೇಕು ? ನಮ್ಮ ವಿಹಿತ ಪುಣ್ಯ ಕರ್ಮಗಳನ್ನು ದೇವರಿಗೆ ಪೂಸಿದ ಗಂಧವೆಂದು , ನಾವು ಮಾಡಿದ ಅನಂತ ಪಾಪ ಕರ್ಮಗಳು ದೇವರಿಗೆ ಪಾದುಕೆ ಎಂದು, ಅದನ್ನು ಮೆಟ್ಟಿ ನಮಗೆ ಪಾಪ ಕಡಿಮೆ ಮಾಡುತ್ತಾನೆಂದು ದಿನದಲ್ಲಿ ಪ್ರತಿಕ್ಷಣದಲ್ಲಿ ನೆನೆಯುತ್ತ ಅವನಿಗೆ ಸಮರ್ಪಣೆ ನಡಿಸಬೇಕು.
ನಾವು ಮಾತಾಡುವ ಕರ್ಮದಲ್ಲಿ ಅನೇಕ ಶಬ್ದ ಉಚ್ಚಾಟನೆ ನಡೆಯುತ್ತೆ. ಆದರೆ ಸರ್ವ ಶಬ್ದವಾಚ್ಯ ನಾದ ಶ್ರೀಹರಿ ನೆನೆಯದೆ ಮಾತಾಡಿರುತ್ತೇವೆ. ಅದರ ಪಾಪ ನಿವಾರಣೆಗೆ ಅವನನ್ನ ಪ್ರತಿಮಾತು ಮುಗಿಸಿದಾಗ ಆ ಶಬ್ದಗಳನ್ನು ದೇವರಿಗೆ ಸಮರ್ಪಣೆ ಮಾಡಬೇಕು. ಇದು ಅಪರೋಕ್ಷ ಜ್ಞಾನಿಗಳು ಮಾಡುತ್ತಾರೆ. ನಾವು ಈ ವಿಷಯವನ್ನು ತಿಳಿದರೆ ಸಾಕು ಮುಂದೆ ನಮಗೆ ಅದರ ದಾರಿ ಸಿಗುತ್ತದೆ.
ನಮ್ಮ ಉಪಾಸನೆ ಹೇಗಿರಬೇಕು
ಕುಂತಿ ತನ್ನ ಜೀವನದಲ್ಲಿ ದೇವರು ಮಾಡಿದ ಕಾರುಣ್ಯ, ಪರಿಹರಿಸಿದ ಕಷ್ಟಗಳು, ನೆನೆಯುತ್ತ ಭಾವುಕವಾದ ಸ್ತುತಿ, ಕುಂತಿ ಸ್ತುತಿ. ಅಲ್ಲಿ ದೇವರ ಗುಣಗಳನ್ನು ತನ್ನ ಜೀವನದಲ್ಲಿ ಹೊಂದಾಣಿಕೆ ಮಾಡುವುದು.ನಮ್ಮ ಕಷ್ಟಗಳನ್ನು ದೇವರು ಹೇಗೆ ಪರಿಹರಿಸಿದ್ದಾನೆ ಅದು ನಮ್ಮ ಮತ್ತು ದೇವರ ನಡುವೆ ನಡೆಯುವ ಸಂಬಂಧ. ಈ ಚಿಂತನೆ ನಡೆಸಿ ಅವನಿಗೆ ಕೃತಜ್ಞತೆ ದೃಷ್ಟಿಯಿಂದ ನಾಹಂ ಕರ್ತಾ ಅನುಸಂಧಾನದಿಂದ ಸಮರ್ಪಣೆ.
ಗೋಪಿಕೆಯರು ಮಾಡಿದ್ದು ಇದೇನೇ.ಅವರು ತಮಗೆ ಗೋಕುಲದಲ್ಲಿ ಬಂದ ರಾಕ್ಷಸರ ಸಂಹಾರ ನೆನೆಯುತ್ತಾರೆ. ಇಂದ್ರನಿಂದ ಬಂದ ಮಳೆ ಆಪತ್ತು ಕಳೆದಿದ್ದು... ಹೇಗೆ ಅವರ ಉಪಾಸನೆ....
Comments