Posts

*ದಾನವೇ ಜಯಕೆ ದಿವ್ಯ ಉಪಾಯ..*

Image
*ದಾನವೇ ಜಯಕೆ ದಿವ್ಯ ಉಪಾಯ..* ಸೋಲಿಗೆ ಕಾರಣವಾದ ಕಷ್ಟಗಳನ್ನು ಎತ್ತಿಕಟ್ಟಿ,  ಅಪಜಯವನ್ನು ಸೊಳಿಸಿ,  ಅಪಮೃತ್ಯುವನ್ನು ಓಡಿಸಿ, ರೋಗಗಳನ್ನು ಹೆಣ ಎತ್ತಿ, ಪಾಪಗಳನ್ನು ಕಳಚಿ, ಗೆಲವು ನಮ್ಮದಾಗಿಸಲು ಒಂದು ಸುಂದರ ಉಪಾಯ *ಅದು ದಾನ.* ಅಂತೆಯೇ ಹಿಂದಿನ ರಾಜಾಧಿರಾಜರುಗಳು ನಿತ್ಯವೂ ದಾನ ಮಾಡುತ್ತಿದ್ದರು. ಇಂದಿನ ರಾಜಸ್ಥಾನದಲ್ಲಿ ಇದ್ದು ವಿದ್ವಾಂಸರ ಪೋಶಿಸುವ ಜವಬ್ದಾರಿ ಪೆತ್ತ ಅನೇಕ ಯತಿಗಳು, ಆಚಾರ್ಯರುಗಳು, ಸದ್ಗೃಹಸ್ಥರು ನಿತ್ಯ, ಮಾಸಿಕ, ವಾರ್ಷಿಕ  ವಿಭಾಗಗಳನ್ಬು ಮಾಡಿಕೊಂಡು ದಾನಮಾಡುವ ಪಾರಿಪಾಕವನ್ನು ಉಳಿಸಿದ್ದಾರೆ. *ಇಂದಿನ ಆಪತ್ತಿನಲ್ಲಿ ದಾನ...*  ಅನ್ನ ಮತ್ತು ಹಣ ಇಂದು ಅನಿವಾರ್ಯ. ಇಂದಿನ ಈ ಸ್ಥಿತಿಯಲ್ಲಿ ಹಣ ಸಂಪಾದನೆ ನಿಂತಿದೆ. ತುತ್ತಿನ ಅನ್ನಕ್ಕೆ ಕಷ್ಟವಾಗಿದೆ. ಈ ಪರಿಸ್ಥಿತಯಲ್ಲಿಯ "ಒಂದು ರೂಪಾಯಿಯ ದಾನ, ಒಂದು ತುತ್ತಿನ ದಾನ ಮಹಾಮೇರುವಿಗೆ ಸಮ" ಎಂದರೆ ತಪ್ಪಾಗದು.  *ದಾನಂ ಧೃವಂ ಫಲತಿ* ಯೋಗ್ಯರಿಗೆ ಪಾತ್ರರಿಗೆ ಕೊಡುವ ದಾನ ಶೀಘ್ರದಲ್ಲಿ ಸ್ಥಿರವಾದ ಫಲ ತಂದು ಕೊಡತ್ತೆ.  ಯೋಗ್ಯರಾದ , ವಿಷ್ಣು ಭಕ್ಯರಾದ , ತಪೋನಿಷ್ಠರಾದ, ಸದಾಚಾರಿಗಳಾದ, ನಿರಂತರ ಪಾಠಪ್ರವಚನ ದೀಕ್ಷಾಬದ್ಧರಾದ, ನಮ್ಮ ಕರ್ನಾಟಕ ಆಂಧ್ರ ತೆಲಂಗಾನಾ ಮಹಾರಾಷ್ಟ್ರ ತಮಿಳುನಾಡು ಈ ಪ್ರಾಂತಗಳಲ್ಲಿ ನೂರಾರು ವಿದ್ವಾಂಸರು, ಪುರೋಹಿತರು, ಪೂಜಾದಿಗಳಲ್ಲಿಯೇ ರತರಾದ ಸದ್ಗೃಹಸ್ಥರು ಸಿಗುತ್ತಾರೆ....

*ಮಾಡಿದ್ದೇ ಉಣ್ಣುವದು...*

Image
* ಮಾಡಿದ್ದೇ ಉಣ್ಣುವದು...* ಉಣ್ಣುವದು ಎನ್ನುವದೇನಿದೆ ನಾವು ಮಾಡಿದ್ದೇ. ನಾನು ಮಾಡದಿರುವದು ನನ್ನಿಂದ ಉಣ್ಣುವದಾಗುವದಿಲ್ಲ. ಇನ್ನೊಬ್ಬರು ಮಾಡಿದ್ದೂ ನಾನು ಉಣ್ಣುವದಾಗುವದಿಲ್ಲ.  ಏನು ಉಣ್ಣುವ ಹೆಬ್ಬಯಕೆ ಇದೆ ಅದೇ ಮಾಡುವದು ಶ್ರೇಷ್ಠ.  *ಒಂದು ಸುಂದರ ಕಥೆ...* ಸೋಮಕ ರಾಜ. ಆ ರಾಜನಿಗೆ ನೂರು ಜನ ಹೆಂಡತಿಯರು. ಒಬ್ಬರಿಗೂ ಸಂತಾನವಿರಲಿಲ್ಲ. ಕೊನೆಗೆ ಮುಪ್ಪು ಬರುವ ಹಂತ ಬಂದಾಗ ಒಂದು ಸಂತಾನವಾಗುತ್ತದೆ. "ಜಂತು" ಎಂದು ನಾಮಕರಣ ಮಾಡುತ್ತಾರೆ.  ಹೀಗಾದ ಪ್ರಸಗದಲ್ಲಿ ಒಬ್ಬ ದುಷ್ಟ ಪುರೋಹಿತ ಬಂದು ಹೇಳುವ ಈ "ಜಂತು"ವನ್ನು ಹೋಮದಲ್ಲಿ ಬಲಿಯಾಗಿಸಿ ಅವನ ಹವನದ ಹೊಗೆಯನ್ನು ನಿನ್ನ ನೂರು ಜನ ಹೆಂಡತಿಯರು ಸ್ವೀಕರಿಸಿದರೆ ನಿನಗೆ ನೂರು ಜನ ಮಕ್ಕಳಾಗುತ್ತಾರೆ ಎಂದು. ಉತ್ಸಾಹಿತನಾದ ರಾಜ ಆ ಕ್ರಮದಲ್ಲಿಯೇ ಯಾಗ ಮಾಡಿ, ಹಿರೆಯ ಮಗನನ್ನು ಕೊಂದು, ಯಾಗಪೂರ್ಣ ಗೊಳಿಸಿ, ತಾನೂ ನೂರು ಜನ ಮಕ್ಕಳನ್ನು ಪಡೆಯುತ್ತಾನೆ.  *ಪುತ್ ನರಕದಿಂದ ರಕ್ಷಿಸುವವ ಪುತ್ರ* ಪುತ್ ಎಂಬ ನರಕದಿಂದ ಪಾರು ಮಾಡುವ ಮಗ ಹಿರೆಯ ಮಗ. ಅವನನ್ನೇ  ಸಂಹರಿದ್ದಕ್ಕೆ ಮಹಾ ಘೋರ ನರಕ ರಾಜನಿಗೆ. ಸಂಹಾರಕ್ಕೆ ಪ್ರೇರಕ ಗುರುವಿಗೂ ಘೋರ ನರಕ.  *ಇಬ್ಬರಿಗೂ  ನರಕದಲ್ಲಿ ಭೆಟ್ಟಿ...* ನರಕದ ದುಃಖದಲ್ಲಿ ಮುಳುಗಿದ ಗುರುವಿನ ಘೋರ ದುಃಖವನ್ನು ಕಂಡು ಮರುಗಿದ ರಾಜ. ನನಗಾಗಿ  ಯಾಗ ಮಾಡಿಸಿದ್ದಾರೆ  ಗುರ...

*ಸತ್ಯಸಂಧತೀರ್ಥ ಸದ್ಗುರುಂ ಭಜೇನಿಶಮ್*

Image
*ಸತ್ಯಸಂಧತೀರ್ಥ ಸದ್ಗುರುಂ ಭಜೇನಿಶಮ್* ಜ್ಙಾನಿಕುಲಚಕ್ರವರ್ತಿಗಳಾದ ಶ್ರೀಶ್ರೀ ೧೦೦೮ ಶ್ರೀ ಸತ್ಯಸಂಧತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ.  ಶಾಪಾನುಗ್ರಹ ಶಕ್ತರು, ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಹೆದ್ದೊರೆ, ಅಯೋಗ್ಯನಾದ ನನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಂತೆ ಮಾಡಿದ ಕರುಣಾಳು, ಇಂದಿಗೂ ಲಕ್ಷ ಲಕ್ಷ ಭಕ್ತರಿಗೆ ಅನುಗ್ರಹ ಮಾಡುತ್ತಿರುವ ಕಾಮಧೇನು. ಕುನ್ನಿಯಾದ ಎನ್ನ ಮೆಲೆಯೂ ನಿರಂತರ ಅನುಗ್ರಹಿಸಿ ಹರಿಸುತ್ತಿರುವ ಮಹಾಗುರು *ಶ್ರೀಶ್ರೀ ಸತ್ಯಸಂಧ ತೀರ್ಥ ಶ್ರೀಪಾದಂಗಳವರು.*  ಕಳೆದ ಅನೇಕ ವರ್ಷಗಳಿಂದ ತಪ್ಪದೇ ಕರೆಸಿಕೊಳ್ಳುತ್ತಿದ್ದರು. ಈ ಬಾರಿ ಹೋಗುವದು ನನ್ನಿಂದ ಆಗಲಿಲ್ಲ ಎಂಬ ದುಃಖವಂತೂ ಇದ್ದೇ ಇದೆ. ಮನೆಯಲ್ಲಿಯೇ ವಿಶೇಷವಾಗಿ ಆರಾಧನೆ ಮಾಡುವ ಪ್ರಯತ್ನ ನಾವೆಲ್ಲರೂ ಮಾಡೋಣ.  *ಸತ್ಯಭೋಧರ ಅಂತರಂಗರು...* ಶ್ರೀಸತ್ಯಬೋಧತೀರ್ಥ ಶ್ರೀಪಾದಂಗಳವರಿಂದ ಇಪ್ಪತ್ತು ವರ್ಷ ಆಯುಷ್ಯವನ್ನು ಪಡೆದರು. ಭಗವತ್ಪ್ರೀತಿ ಸಾಧನ ಮಹಾ ವಿದ್ಯೆಯನ್ನು ಪಡೆದರು. ಮಹಾ  ಸಂಸ್ಥಾನವನ್ನೂ ಕರುಣಿಸಿದರು. ಮುಂದೇ ಸರ್ವಸ್ವವನ್ನೂ ಪಡೆದುಕೊಂದರು. ನಮ್ಮ ಇಂದಿನ ಆರಾಧ್ಯ ಮುನಿಗಳಾದ   *ಮಹಿಷಿ ಸ್ವಾಮಿಗಳು.*  *ಅಷ್ಟೈಶ್ವರ್ಯಂ ಸತ್ಯಸಂಧಂ ನಮಾಮಿ* ಪಂಢರ ಪುರಕ್ಕೆ ಹೋಗುವ ಮಾರ್ಗಮಧ್ಯದಿ ಪಂಢರಪುರೀಶನಿಗೆ ಮುದ್ರೆ ಕೊಟ್ಟ ಧೀರವಿಠ್ಠಲರಿವರು. ಉತ್ತರದ ಸಂಚಾರದಲ್ಲಿರುವಾಗ ಗಯಾ ...

ಶ್ರೀ ಶನೈಶ್ಚರ ಕೃತ ಶ್ರೀ ನೃಸಿಂಹ ಸ್ತುತಿಃ

Image
*|| ಶ್ರೀ ಶನೈಶ್ಚರ ಕೃತ ಶ್ರೀ ನೃಸಿಂಹ ಸ್ತುತಿಃ ||* ಅನೈಶ್ಚರ ಜಯಂತೀ ಅಂಗವಾಗಿ ಎಲ್ಲ ವಿಷ್ಣುಭಕ್ತರೂ ವಿಶೇಷವಾಗಿ ಇಂದು ಈ ಸ್ತೋತ್ರವನ್ನು ಪಾರಾಯಣ ಮಾಡಲೇಬೇಕು. ಶನೈಶ್ಚರಾಂತರ್ಯಾಮಿ, ವಾಯ್ವಂತರ್ಯಾಮಿ ನರಸಿಂಹದೇವರ ಕೃಪೆಗೆ ಪಾತ್ರರಾಗೋಣ. ನಮ್ಮೆಲ್ಲರ ಕಷ್ಟ ಆಪತ್ತು ವಿಘ್ನ ಸಮಸ್ಯೆ ಎಲ್ಲದರಿಂದಲೂ ಪಾರಾಗೋಣ. ಸುಲಭೋ ಭಕ್ತಿ ಯುಕ್ತಾನಾಂ ದುರ್ದರ್ಶೋ ದುಷ್ಟ ಚೇತಸಾಮ್ | ಅನನ್ಯ ಗತಿಕಾನಾಮ್ ಚ ಪ್ರಭುಃ ಭಕ್ತೈಕ ವತ್ಸಲಃ | ಪ್ರಣಮ್ಯ ಸಾಷ್ಟಂಗಮಶೇಷ ಲೋಕ ಕಿರೀಟ ನೀರಾಜಿತ ಪಾದಪದ್ಮಮ್ || || ಶ್ರೀ ಶನಿರುವಾಚ || ಯತ್ಪಾದಪಂಕಜ ರಜಃ ಪರಮಾದರೇಣ ಸಂಸೇವಿತಂ ಸಕಲ ಕಲ್ಮಷರಾಶಿನಾಶಮ್ |  ಕಲ್ಯಾಣ ಕಾರಕ ಮಶೇಷ ನಿಜಾನುಗಾನಂ  ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೧|| ಸರ್ವತ್ರ ಚಂಚಲತಯಾ ಸ್ಥಿತಯಾಹಿ ಲಕ್ಷ್ಮ್ಯಾ ಬ್ರಹ್ಮಾದಿವಂದ್ಯಪದಯಾ ಸ್ಥಿರಯಾನ್ಯ ಸೇವಿ | ಪಾದಾರವಿಂದ ಯುಗಲಂ ಪರಮಾದರೇಣ ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೨|| ಯದ್ರೂಪಮಾಗಮ ಶಿರಃ ಪ್ರತಿಪಾದ್ಯ ಮಾದ್ಯ ಆಧ್ಯಾತ್ಮಿಕಾದಿ ಪರಿತಾಪಹರಂ ವಿಚಿಂತ್ಯಮ್ | ಯೋಗೀಶ್ವರೈರಪಗತಾಖಿಲ ದೋಷ ಸಂಘೈಃ ಸತ್ವಂ ನೃಸಿಂಹ ಮಯಿ ದೇಹಿ ಕೃಪಾವಲೋಕಂ  ||೩|| ಪ್ರಹ್ಲಾದ ಭಕ್ತವಚಸಾ ಹರಿರಾವಿರಾಸ ಸ್ತಂಭೇ ಹಿರಣ್ಯಕಶಿಪುಂ ಯ ಉದಾರಭಾವಃ | ಊರ್ವೋರ್ನಿದಾಯ ತದುರೋ ನಖರೈರ್ದದಾರ ಸತ್ವಂ ನೃಸಿಂಹ ಮಯಿ ದೇಹ...

*"ನೀನು ಕತ್ತೆ" ಎಂದು ಬಯ್ದಾಗ ಕತ್ತೆಯೇ ಆಗಿಬಿಡುತ್ತೇನೆಯಾ....??*

Image
*"ನೀನು ಕತ್ತೆ"  ಎಂದು ಬಯ್ದಾಗ  ಕತ್ತೆಯೇ ಆಗಿಬಿಡುತ್ತೇನೆಯಾ....??* ಯಾವುದೇ ವಸ್ತುವಿನ ಸ್ವೀಕಾರವಾಗುವುದು ಯಾವಾಗ ಅಂದರೆ ಆ ವಸ್ತುವಿನಲ್ಲಿ "ನನ್ನದು" ಎಂಬ ಭಾವನೆ ಇದ್ದಲ್ಲಿ ಮಾತ್ರ. "ನನ್ನದು" ಎನ್ನವದು ಇಲ್ಲವೆಂದಾದಾಗ ಯಾವದನ್ನೂ ನಾನು  ಸ್ವೀಕರಿಸುವದಿಲ್ಲ. ಹೀಗಿರುವಾಗ  "ನನ್ನದು" ಎಂದು ಸ್ವೀಕರಿಸುವಾಗ ಮಾತ್ರ ಸ್ವಲ್ಪ ಏಕಾಗ್ರತೆವಹಿಸಿ ಯೋಚನಾಪೂರ್ಣವಾಗಿ ಸ್ವೀಕರಿಸುವದು ಅನಿವಾರ್ಯ. "ಪ್ರತಿಶತಃ ಅನೇಕಬಾರಿ ಯಾವದನ್ನು ನಾನು ನನ್ನದು ಎಂದು ಸ್ವೀಕರಿಸುತ್ತೇನೆ, ಅದು ನಾನೇ ಆಗಿರುತ್ತೇನೆ". ಏಕೆಂದರೆ  ಅದರಲ್ಲಿ "ನನ್ನದು" ಎಂಬ ಭಾವನೆ ಇದೆ ಆದ್ದರಿಂದ. ಈ ಶರೀರವನ್ನು ನಾನು "ನನ್ನದು" ಎಂದು ತಿಳಿದಿದ್ದೇನೆ ಆದ್ದರಿಂದ ಈ ಶರೀರಕ್ಕೆ ಏನು ಆದರೂ "ನನಗೇ ಆಯಿತೋ ಎಂಬಂತೆ ಫೀಲ್ ಆಗುತ್ತೇನೆ." ಇದು ಉದಾಹರಣೆ ಮಾತ್ರ. ಹಾಗೆಯೇ ಪ್ರತಿಯೊಂದರಲ್ಲಿಯೂ ....  ಇಂದು ಒಂದು ಉಪನ್ಯಾಸ ಕೇಳುತ್ತಿದ್ದೆ. ಅಲ್ಲಿ ತುಂಬ ಸುಂದರವಾಗಿ ಒಂದು ಕಥೆ ಹೇಳುತ್ತಿದ್ದರು. *ನೀನು ಕತ್ತೆ* ಎಂದು ಬಯ್ದರೆ ಅವನು ಕತ್ತೆ ಯಾಗುತ್ತಾನೆಯಾ... ?? ಸರ್ವಥಾ ಇಲ್ಲ ತಾನೆ....  *ನೀನು ಕತ್ತೆ* ಎಂದು ಬಯ್ದಾಗ ಅವನು ಕತ್ತೆಯಾಗುವ ಎಂದೇ ನಾನು ಉತ್ತರಿಸುತ್ತೇನೆ. ಅದು ಹೇಗೇ ಸ್ವಾಮಿ...... ???? ಯಾರೋ ಏನೋ ಬಯ್ದ ಮಾತ್ರಕ್ಕೆ ಅದು ಅವನೇ ಆಗುವದು ಹ...

*"ಅಹಂ" ಎಂಬ ಚಕ್ರವ್ಯೂಹ.......*

Image
*"ಅಹಂ" ಎಂಬ ಚಕ್ರವ್ಯೂಹ.......* ಜೀವನ ಇದು ಶಿಕ್ಷೆ ಅಲ್ಲ. ಶಿಕ್ಷೆ ಎಂದು ಆಗಲೇ ಬಾರದು. ಜೀವನ ಪಾಠವೇ ಪ್ರತಿದಿನವೂ ಹೊಸಪಾಠ ಆಗಬೇಕು. ಪ್ರತಿವ್ಯಕ್ತಿಗಳೂ ಹೊಸ ಗುರುವೇ ಆಗಬೇಕು.  ಜೀವನ ಕಲಿಸುವ ಯಾವ ಪಾಠಗಳಲ್ಲಿಯೂ ಪುಸ್ತಕಗಳು ಇರುವದಿಲ್ಲ. ಗುರುಗಳು ಶಿಷ್ಯರು ಮಾತ್ರ ಬಂದು ಹೋಗುತ್ತಿರುತ್ತಾರೆ....  ನಮ್ಮ ನಾನಾ ತರಹದ  ಸಂಬಂಧಗಳಲ್ಲಿ ಸಾಮರಸ್ಯ ಇರುವಾಗ, ಜೀವನದಲ್ಲಿಯೂ ಸಾಮರಸ್ಯವಿರುತ್ತದೆ. ಇಲ್ಲವಾದಲ್ಲಿ ಇಲ್ಲ. ಸಂಬಂಧಗಳಲ್ಲಿ ಸಾಮರಸ್ಯವನ್ನು ಕಂಡುಕೊಳ್ಳುವ ಕಲೆಯನ್ನು "ಬಾಗಿದ ಮನಸ್ಸು" ನಮಗೆ ಕಲಿಸಿಕೊಟ್ಟರೆ, ಸಾಮರಸ್ಯಕೆಡುವಂತಹ ಕಲೆಯನ್ನು "ಅಹಂ" ಕಲಿಸುತ್ತದೆ.   *ಶಿಷ್ಯ ಗುರುಗಳ ಬಳಿ ಬಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಬಗೆ...*  "ಅಹಂ" ಹೇಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತದೆ. ತುಂಬ ವಿಚಿತ್ರ. ಒಂದು ಸುಂದರ ಕಥೆ.  ಶಿ..) ಗುರುಗಳೇ !!  "ನಾನು ದುಷ್ಟರ ಸಹವಾಸದಿಂದ ನಾನೊಬ್ಬನೇ  ಕುಡಿತದ ಚಟಕ್ಕೆ ಬಿದ್ದು ಹಾಳಾಗುತ್ತಿದ್ದೇನೆ" ಬೇಸರದ ಸಂಗತಿ ಏನೆಂದರೆ ಅವರೆಲ್ಲರೂ ನಿಮ್ಮ ಶಿಷ್ಯರೇ....!! ನಿಮ್ಮ ಯಾವ ಉಪದೇಶವನ್ನೂ ಪಾಲಿಸುತ್ತಿಲ್ಲ....  ತಿಳಿಸಿ ಬುದ್ಧಿ ಹೆಳಿ.  ಗುರು) ಶಿಷ್ಯೋತ್ತಮ ಯಾವ ಉಪದೇಶವನ್ನು ನನ್ನ ಶಿಷ್ಯರು ಪಾಲಿಸುತ್ತಿಲ್ಲ... ?? ಸ್ವಲ್ಪ ಬಿಡಿಸಿ ಹೇಳುತ್ತೀಯಾ... ಶಿಷ್ಯ..) ಓಹ್ ಗುರುಗಳ...

*"ರಕ್ಷತೀತ್ಯೇವ ವಿಶ್ವಾಸಃ ತದೀಯೋಹಂ ಸ ಮೇ ಪತಿಃ"*

Image
*"ರಕ್ಷತೀತ್ಯೇವ ವಿಶ್ವಾಸಃ ತದೀಯೋಹಂ ಸ ಮೇ ಪತಿಃ"*  ರಕ್ಷಕನಾದ ದೇವನೊಬ್ಬನು ಇದ್ದಾನೆ. ನಮ್ಮನ್ನು ಎಡಬಿಡದೇ ರಕ್ಷಿಸುತ್ತಾನೆ ಎಂಬ ಪೂರ್ಣ ಭರವಸೆ ಇರಲೇಬೇಕು. ಇಂದಿನ ದಿನಗಳಲ್ಲಿ "ಹಣವೇ ನಮ್ಮನ್ನು ರಕ್ಷಿಸುವದು" ಎಂಬ ಭ್ರಾಂತಿ ಹೋಗಿ, ದೇವರೇ ನಮ್ಮನ್ನು ರಕ್ಷಿಸುತ್ತಾನೆ ಎಂಬ ಭರವಸೆ ಮೂಡಿಸುವ ದಿನಗಳು.  *ನಾನೂ ಒಂದು ಸಾಕ್ಷಿ....* ಬೆಂಗಳೂರಿನಲ್ಲಿ ಆರವತ್ತು ದಿನಗಳ ವರೆಗೆ ಸಿಕ್ಕು ಹಾಕಿಕೊಂಡೆ.‌ ಹೇಗೆ ನನ್ನ ರಕ್ಷಣೆ ಎಂದು ಸ್ವಲ್ಪ ಗಲಿಬಿಲಿ ಇತ್ತು. ಆದಾಯ ಇಲ್ಲ. ಮನೆ ಇಲ್ಲ. ಏನೂ ಇಲ್ಲ ಎಂಬ ಟೆನ್ಶೆನ್ ಇತ್ತು. ಆದರೆ ದೇವ ಹೇಗೆ ರಕ್ಷಿಸಿದ ಎನ್ನುವದು ಗೊತ್ತೇ ಆಗಲಿಲ್ಲ. ಈ ರಕ್ಷಣೆಯಲ್ಲಿ  ಕೈಚಾಚಿ  ರಕ್ಷಿಸಿದ ಅನೇಕ  (ಪಂ. ಕಟ್ಟಿ ಆಚಾರ್. ಪಂ ವಿದ್ಯಾಧೀಶಾಚಾರ್. ಪಂ ನರಸಿಂಹಾಚಾರ್. ಪಂ. ಆಲೂರು ಶ್ರೀನಿವಾಸಾಚಾರ್. ಪಂ ವಾದಿರಾಜಾಚಾರ್. ಪಂ. ವಸಿಷ್ಠಾಚಾರ್. ಪಂ ಸರ್ವೋತ್ತಮಾಚಾರ್. ಹಾಗೂ ಇನ್ನೂ ಅನೇಕ ಪಂಡಿತರುಗಳು, ಆತ್ಮೀಯರು, ಮಿತ್ರರು. )  ಮಹನೀಯರುಗಳು ಇದ್ದಾರೆ. ಈ  ಎಲ್ಲ ಮಹನೀಯರುಗಳ ಮುಖಾಂತರ ರಕ್ಷಿಸಿದ.  ಆಸ್ಚರ್ಯಮಾಡಿಕೊಳ್ಳಲೂ ಸಮಯಸಿಗದ ಹಾಗೆ, ತಿಳಿಯದ ಹಾಗೆ ಅತ್ಯಂತ ಸುಲಭ ರೀತಿಯಲ್ಲಿ ಆರವತ್ತು ದಿನಗಳನ್ನು ಕಳೆದು, ಸುಸೂತ್ರ ನನ್ನ ಮನೆಗೆ ಕಳುಹಿಸಿದ. ನಮ್ಮ ದೇವ. ಹೀಗೆ ನೆನೆಯಲು ಕೌಶಲ ಕೊಟ್ಟವರು ನಮ್ಮ ಹಿರಿಯರು ಹಾಗೂ ಗುರುಗಳು. ಈ ಸೌಅಗ್ಯ ಸಿಕ್ಕಿದ್ದ...