*ಇನ್ನೊಬ್ಬರ ಸೋಲು ನೋಡುವದೇ ಎನ್ನ ಗುರಿಯಾದರೆ.......*
*ಇನ್ನೊಬ್ಬರ ಸೋಲು ನೋಡುವದೇ ಎನ್ನ ಗುರಿಯಾದರೆ.......* ಇನ್ನೊಬ್ಬರ ಸೋಲು ನೋಡುವದೇ ಎನ್ನ ಗುರಿಯಾದರೆ, ನಾನು ಗೆಲ್ಲುವದು ಎಂದು ?? ಅಥವಾ ನನ್ನ ಗೆಲುವು ಇನ್ನೊಬ್ಬರು ಎಂದು ನೋಡಿಯಾರು...?? ಸೋಲು ಗೆಲುವು, ಏಳು ಬೀಳುಗಳು ಸಹಜ. *ನನ್ನ ಗೆಲುವೇ ಆಗಬೇಕು, ಪರರ ಸೋಲುಗಳನ್ನೇ ಕಣ್ಣು ತುಂಬಿಸಿಕೊಳ್ಳಬೇಕು* ಎಂಬ ಹಠವೇನಿದೆ ತುಂಬ ಹಾಸ್ಯಾಸ್ಪದವೆನಿಸುತ್ತದೆ. ಇನ್ನೊಬ್ಬರನ್ನು ಸೋಲಿಸುವ ವಿಚಾರ ನಕಾರಾತ್ಮಕ ವಿಚಾರವೆನಿಸಿದರೆ, ನಮ್ಮ ಗೆಲುವಿನ ವಿಚಾರ ಸಕಾರಾತ್ಮಕವೆಂದನಿಸುತ್ತದೆ. ಸಕಾರಾತ್ಮಕ ವಿಚಾರ ಆರೋಗ್ಯದಾಯಕ ವಿಚಾರವೂ ಆಗಿದೆ. ಗೆಲುವಿನ ರುಚಿಯ ಮದವೇರಿದಾಗ, "ಪರರ ಸೋಲನ್ನೇ ಕಾಣಬೇಕು" ಎಂಬ ಭಾವ ಬರುತ್ತದೆ. ಇನ್ನೊಬ್ಬರ ಸೋಲನ್ನು ಕಾಣುವದರಲ್ಲೇ ಕಾಲ ಕಳೆದರೆ, ತಾನು ಗೆಲ್ಲುವದಕ್ಕೆ ಆಗುವದೇ ಇಲ್ಲ. ತನ್ನ ಗೆಲುವನ್ನು ಇನ್ನೊಬ್ಬರು ನೋಡಲೂ ಆಗುವದಿಲ್ಲ. ಇವೆರಡೂ ಅಷ್ಟೇ ನಿಶ್ಚಿತ. ದುರ್ಯೋಧನ ಪಾಂಡವರು ಹಸ್ತಿನಾವತಿ ಗೆ ಬಂದ ಕ್ಷಣದಿಂದ ಪಾಂಡವರ ಸೋಲನ್ನೇ ಬಯಸಿದ. ಅವರನ್ನು ಸೋಲಿಸುವದೇ ಗುರಿ ಮಾಡಿಕೊಂಡ. ಅವರನ್ನು ಸೋಲಿಸಲು ಪ್ರತಿಕ್ಷಣವೂ ಹೆಣಗಾಡಿದ. ಸೋಲಿಸಲಾಗಲಿಲ್ಲ. ಆದರೆ ತಾನು ಎಂದಿಗೂ ಗೆಲ್ಲಲಿಲ್ಲ. ತನ್ನ ಗೆಲುವನ್ನು ಜಗತ್ತು ಕಾಣಲೇ ಇಲ್ಲ. ಪಾಂಡವರನ್ನು ಸೋಲಿಸಲು ಮೀಸಲು ಇಟ್ಟ ತನ್ನ ಶಕ್ತಿಯನ್ನು ಬೆರೆಡೆ ಏನಾದರೂ ಬಳಿಸಿದ್ದರೆ ಕದಾಚಿತ್ ಕ...