*ಅಷ್ಟಕ್ಕ ಇಷ್ಟಾದರೆ, ಇಷ್ಟಕ್ಕೆ ಇನ್ನೆಷ್ಟು*
*ಅಷ್ಟಕ್ಕ ಇಷ್ಟಾದರೆ, ಇಷ್ಟಕ್ಕೆ ಇನ್ನೆಷ್ಟು*
ಅತೀ ಕ್ಷುದ್ರವಾದ ಚಟಗಳಲ್ಲಿ ಕಳ್ಳತನವೂ ಒಂದು. ಹೀಗೆ ನೋಡ್ತಾ ನೋಡ್ತಾ ಮೋಬೈಲ್ ಚಾರ್ಜರ್ ತನ್ನ ಚೀಲದಲ್ಲಿ ಹಾಕ್ಕೊಂಡು ಬಿಡುತ್ತಾನೆ. ಯಾರೂ ನೋಡಿಲ್ಲ ಎಂದು ಬೀಗುತ್ತಾನೆ. ಆದರೆ ಅವನ ಅಪಕೀರ್ತಿ ಮಾತ್ರ ಜಗದೆಲ್ಲ ಹರಡಿರುತ್ತದೆ.
ಕಳ್ಳತನ ಒಂದು ಸರಳವಾದ ದುಬಾರಿ ಬೆಲೆ ತೆತ್ತಬೆಕಾದ ವ್ಯಾಪಾರ. ಒಂದೇ ಕ್ಷಣದಲ್ಲಿ ಬಂದು ಹೋಗುವ ಕೆಲಸ. ಅದರಲ್ಲೂ ದೇವತೆಗಳ ಗುರುಗಳ ಮಿತ್ರನ ಹಣವನ್ನು ಕದ್ದರೆ "ದೇವದ್ರವ್ಯ ವಿನಾಶೇನ ಬ್ರಹ್ಮಸ್ವ ಹರಣೇನ ಚ. ಕುಲಾನ್ಯಕುಲತಾಂ ಯಾತಿ" ಎಂದು ಅವನ ಕುಲವೇ ನಾಶವಾಗುತ್ತದೆ ಎನ್ನುತ್ತದೆ ಮಹಾಭಾರತ.
ಒಂದು ಕಾಲದಲ್ಲಿ ಒಬ್ಬ ಸದಾಚಾರಿ ಸಜ್ಜನ ಶ್ರೀಮಂತ ಬ್ರಾಹ್ಮಣ. ಅವನ ಮನೆಯಲ್ಲಿ ಸಮೃದ್ಧವಾದ ಐಶ್ವರ್ಯ. ಒಂದು ದಿನ ಒಬ್ಬ ಶಿಷ್ಯನಾದ ಆತ್ಮಿಉಯ ಮಿತ್ರನೂ ಆದ ಒಬ್ಬ ವ್ಯಕ್ತಿ ಕಳ್ಳ ಹಿತ್ತಲ ಬಾಗಿಲಿನಿಂದ ಮನೆ ನುಗ್ಗಿದ. ನುಗ್ಗಿದವನೇ ಭಂಗಾರ ಬೆಳ್ಳಿ ಮೊದಲಾದ ಅನೇಕ ಒಡವೆ ಪಾತ್ರ ಮುಂತಾದವುಗಳನ್ನು ದೋಚಿ ಗಡಿಬಿಡಿಯಿಂದ ಹಿತ್ತಲಬಾಗಿಲಿನಿಂದ ಓಡಿ ಪರಾರಿ ಆಗ್ತಿದ್ದ.
ಓಡುತ್ತಿರುವಾಗ ದನದ ಕೊಟ್ಟಿಗೆ, ಆ ಕೊಟ್ಟಿಗೆಯಲ್ಲಿ ಹೈನ ಮತ್ತು ಕೃಷಿಗೆ ಬೇಕಾದ ದನ ಎತ್ತು ಕೋಣ ಎಮ್ಮೆ ಎಲ್ಲವನ್ನು ಸಾಕಿದ್ದ ಯಜಮಾನ.
ಒಡವೆಗಳನ್ನಯ ಕದ್ದ ಕಳ್ಳ ಹಿಂಬಾಗಿಲಿನಿಂದ ಆ ಎಲ್ಲ ದನಗಳ ಮಧ್ಯದಲ್ಕಿ ಓಡುತ್ತಿರುವಾಗ, ಒಂದು ಎಮ್ಮೆ ತಾಕಿ ಧೊಪ್ಪ ಎಂದು ಕೆಳಗೆ ಬಿದ್ದ. ಎಮ್ಮೆ ಬೀಳಿಸಿತು.
ಬಿದ್ದ ಕಳ್ಳ ಘಾಬರಿಯಿಂದ ಆಚೆ ಈಚೆ ನೋಡುತ್ತಿರುವಾಗ ಯಾರೋ ನಕ್ಕ ಶಬ್ದವಾಯಿತು. ಮತ್ತೆ ತಿರುಗಿ ನೋಡಿದ ಮತ್ತೂ ನಗು ಹೆಚ್ಚಾಯ್ತು. ಮತ್ತೆ ನುಗುವವರು ಯಾರೆಂದು ಹುಡುಕಿದ ಒಂದು ಎಮ್ಮೆ ನಗ್ತಾ ಇತ್ತು. ಕೊನೆಗೆ ನಗುವವರು ಸಿಕ್ಕರು.
ಹೇ ಎಮ್ಮೆ !!! ಯಾಕೋ ನಗ್ತಾ ಇದ್ದೀ ಏನಾಗಿದೆ ಧಾಡಿ ಎಂದು ಜೋರು ಮಾಡಿದ ಕಳ್ಳ. ಆಗ ಆ ಎಮ್ಮೆ ಉತ್ತರಿಸಿತು *ಅಷ್ಟಕ್ಕ ಇಷ್ಟಾದರೆ, ಇಷ್ಟಕ್ಕೆ ಇನ್ನೆಷ್ಟು* ಎಂದು.
ಕಳ್ಳನಿಗೆ ಕಳ್ಳತನ ಮಾಡಿದಾನೆ ಅದಕ್ಕೇ ಘಾಬರಿ. ನಕ್ಕ ಧ್ವನಿ ಕೇಳಿ ಬೆವತೆ ಬಿಟ್ಟಿದ್ದ. ಈ ಪ್ರಶ್ನೆ ಕೇಳಿ ಒದ್ದಿನೇ ಮಾಡಿಕೊಂಡ. ಏನು ಏನು *ಅಷ್ಟಕ್ಕ ಇಷ್ಟಾದರೆ, ಇಷ್ಟಕ್ಕೆ ಇನ್ನೆಷ್ಟು* ಹೀಗೆಂದರೆ ಗೊಗರೆದ.
ಕೊಣ ಉತ್ತರಿಸಿತು.
ಇದೆ ಯಜಮಾನ ಮನೆಯಲ್ಕಿ ನಾನು ಹಿಂದೆ ಸೇವಕನಾಗಿದ್ದೆ. ಆಗ ತುಂಬ ಕೆಲಸ. ಬಿಸಲುಗಾಲ. ಆಯಾಸ ಹೆಚ್ಚಾಗಿ ತಡೆಯದೆ ನೀರಡಿಕೆ ಆದಾಗ, *ಯಜಮಾನನಿಗೆ ಹೇಳದೆ ನೀರು ಕುಡುದು ಬಿಟ್ಟೆ* ಆ ಕಾರಣದಿಂದಲೇ ನಾನು ನಿತ್ಯ ಹಾಲು ಸುರಿಸುವ ಎಮ್ಮೆಯಾಗಿ ಇವನ ಮನೆಯಲ್ಲೇ ಹುಟ್ಟಿ ಬಂದಿದೀನಿ.
ನಾ ಹೇಳದೆ ನೀರು ಕುಡಿರುವದಕ್ಕೇ ಇಷ್ಟ ಅವಸ್ಥೆಯಾದರೆ, ಭಂಗಾರ ಬೆಳ್ಳಿ ಮೊದಲಾದ ಒಡವೆಗಳನ್ನು ಕದ್ದರೆ ಇನ್ನೇನಾಗಬಹುದು ಎಂದು ಒಮ್ಮೆ ಸ್ವಲ್ಪ ಯೋಚಿಸಿ ಸಾಮಾಗಳನ್ನು ಕದ್ದು ಒಯ್ಯಿ. ಅದರಲ್ಲೂ "ಈ ಯಜಮಾನ ನಿನಗೆ ಮಿತ್ರನೂ ಹೌದು. ಗುರುವೂ ಹೌದು. ತೀ ಎತ್ತಿಕೊಂಡ ಒಡವೆ ದೇವರ ಪದಾರ್ಥಗಳೂ ಆಗಿವೆ" ಎಂದು ಹೇಳಿ ಎಮ್ಮೆ ಶಾಂತವಾಯಿತು.
ಪದಾರ್ಥಗಳನ್ನು ಒಯ್ಲೋ ಬೇಡೋ ಎಂದು ವಿಚಾರಿಸುವದರಲ್ಲೇ ಕೋಳಿ ಕೂಗಿತು. ಯಜಮಾನ ಬಂದ. ಅವನನ್ನು ಬಂಧಿಸಿದ......
ಆದ್ದರಿಂದ ಕ್ಷಣದಲ್ಲಿ ಆಗಿ ಹೋಗುವ ಕಳ್ಳತನಕ್ಕೆ ಇಡೀ ಜೀವನ ಪಶ್ಚಾತ್ತಾಪ ಪಟ್ಟರೂ ಸಿಗುವದು ಅಪಕೀರ್ತಿ ಅನರ್ಥಗಳು ಮಾತ್ರ. ಆ ಕ್ಷಣವನ್ನು ಹೇಗಾದರೂ ಮಾಡಿ ವಿವೇಕದಿಂದ ತಪ್ಪಸಿಕೊಂಡರೆ, ದೊಡ್ಡ ಅನರ್ಥದಿಂದ ಪಾರಾಗಬಹುದು.....
*✍🏻✍🏻✍🏻ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments