*ದೂರ ಮಾಡುವರೇನೇ ರಂಗಯ್ಯನ.....!!!*

*ದೂರ ಮಾಡುವರೇನೇ ರಂಗಯ್ಯನ.....!!!*

ರಂಗ ಎಮ್ಮ ಅಂತರಂಗ. ಅಂತರಂಗನ ಪ್ರೇರಣೆ ಇರುವದರಿಂದಲೇ ನಾವು ರಂಗಾಯಣದಲ್ಲಿ ಕುಣಿತಾ ಇದ್ದೇವೆ. ರಂಗನ ಪ್ರೇರಣೆ ಇಲ್ಲದರೆ ಹೆಣಕ್ಕಿರುವ ಬೆಲೆಯೂ ಇಲ್ಲದಂತೆ ಇರುತ್ತಿದ್ದೆವು. ಅಂತೆಯೇ ಅಂದಿನ ಯಾವ ಜ್ಙಾನಿಯೂ ಕ್ಷಣಕಾಲ ದೇವರನ್ನು ದೂರ ಮಾಡಿದ್ದು ಕೇಳುವದೇ ಇಲ್ಲ. 

*ರಂಗನ ಉಪಕಾರ*

ಕ್ಷಣ ಬಿಟ್ಟೂ ರಂಗ ನಮ್ಮನಗಲಿ ಇರಲಾರ. ನಿರಂತರ ದೇಹೇಂದ್ರಿಯಮನಸ್ಸುಗಳನ್ನು ಪ್ರೇರಿಸುತ್ತಾ ಇರುವ. ನಮ್ಮ ಆಪತ್ತಿಗೆ ಇರುವ. ನಮ್ಮ ರಕ್ಷಣೆಗೆ ಕಟಿ ಬದ್ಧನಾಗಿ ಇರುವ. ನನ್ನಲ್ಲಿ ನಾನು ಬಳಿಸುವ ಕೋಟಿ ಕೋಟಿ ಪದಾರ್ಥಗಳ ಲ್ಲಿ ಪ್ರೇರಿಸಿ ಇದ್ದು  ನಮ್ಮನು ಸಾಕುವ ದೊರೆ ಶ್ರೀಹರಿ. 

*ದೂರ ಮಾಡಿದ್ದೇನೆ ರಂಗಯ್ಯನ...*

ಚಾರು ಮಂದಿಯ ಪ್ರೀತಿಯ - ಚಾರು ಮಾದಾರ್ಥಗಳ ಬಲೆಗೆ ಬಿದ್ದ ನಾನು ರಂಗಯ್ಯನ ದೂರ ಮಾಡುತ್ತಾ ಬಂದಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಮಿತಿ ಇಲ್ಲದ ಪ್ರಯತ್ನ ರಂಗನನ್ನು ದೂರ ಮಾಡಲು.  ಅವನು ಹೇಲಿದ್ದು ಕೇಳುವದಿಲ್ಲ. ಅವನ ಪೂಜೆ ಮಾಡಲ್ಲ. ಅವನಾಜ್ಙೆ ಪರಿಪಾಲಿಸಲ್ಲ. ಅವನಿಷ್ಟದಂತೆ ನಡೆಯುವದೇ ಇಲ್ಲ. ಅವನ ಪ್ರೀತಿಯಾಗುವ ಯಾವ ಕಾರದಯವೂ ಎನ್ನಿಂದಾಗುವದೇ ಇಲ್ಲ. 

*ದೇವರನ್ನು ಮನೆಗೆ ಕರೆದರೆ ತುಂಬ tension*

ಗೆಳೆಯರು ಎರಡು ವಿಧ. ಅವಿಜ್ಙಾತ ಗೆಳೆಯ ಒಬ್ಬನಾದರೆ ನಮಗೆ ಜ್ಙಾತನಾದ ಗೆಳೆಯ ಮತ್ತೊಬ್ಬ. ಎರಡನೇಯ ಗೆಳೆಯ ಪೂರ್ಣ ಅಡ್ಜಸ್ಟ ಆಗುವ. ಮೊದಲನೆ ಗೆಳೆಯನಿಗೆ ನಾವು ಅಡ್ಜಸ್ಟ್ ಆಗಬೇಕು. 

ಮೊದಲ ಗೆಳೆಯ ಮನೆಗೆ ಬಂದರೆ ಅವಿನಿಗೆ ಸ್ನಾನ ಮಾಡಿ ಕಾಫಿ ಕೊಟ್ಟರೂ ಕುಡಿಯುವ. ಸ್ನಾನವಾಗದೇ ಕೊಟ್ಟರೂ ಕುಡಿಯುವ. ಎಂಜಲ ಟೇಬಲ್ ಮೇಲಿಟ್ಟರೂ ಕುಡಿಯುವ. Plastic ವಾಟಗದಲ್ಲಿ ಕೊಟ್ಟರೂ ಕುಡಿಯುವ. ನಾವು ಸ್ವಲ್ಪ ರುಚಿ ನೋಡಿ ಕೊಟ್ಟರೂ ಕುಡಿಯುವ. ಆದರೆ....

ಮೊದಲ ಅವಿಜ್ಙಾತ ಮಿತ್ರ ರಂಗ ಹಾಗಲ್ಲ. ಅವನನ್ನು  ನಮ್ಮ ಮನೆಗೆ ಕರೆದರೆ, ತಣ್ಣೀರು ಸ್ನಾನ, ಪೂಜೆ ಆಗುವವರೆಗೆ ಉಪವಾಸ. ವದ್ದಿ ಉಡುವದು, ಇದ್ದಲಿವಲಿ ಮೇಲೆ ಅನ್ನ, ನಲ್ಕಾರು ಮಂತ್ರ ಕಲಿಕೆ, ತುಳಸಿ ಹೂ, ಅದೂ ದೇವರಿಗೇ ಮೀಲಾಗಿರೋದು. ಹೀಗೆ ಒಂದಲ್ಲ ಎರಡಲ್ಲ ನೂರು ವಿಹಿತಾಚರಣೆಗೆ ಬದ್ಧನು ನಾನಾಗಬೇಕು.  ಅವನಿಗೇ ಅಡ್ಜಸ್ಟ್ ನಾವಾಗವೇಕು. ಇನ್ನೊಂದು ದೊಡ್ಡ ಸಮಸ್ಯೆ *ದೇವರನ್ನು ಮನೆಗೆ ಕರೆದರೆ "ನಾವೆಲ್ಲಿ ದೇವರವರು , ದೇವರ ಭಕ್ತ ಎಂದಾಗಿಬಿಡ್ತೇನೋ ಎಂಬ" ಹೆದುರಿಕೆ ಜೊತೆಗೆ....* ಹೀಗಿರುವಾಗ ...... 

*ನಮಗ ಅಡ್ಜಸ್ಟ್ ಆಗುವ ಗೆಳೆಯರೇ ನಮಗೆ ಸರಳ, ಅವರನ್ನೇ ಕರದರಾಯ್ತು* ಅಂತ ಈ ದೇವನನ್ನು ಮರೆತು ಅವರುಗಳನ್ನು ಕರೆಯುತ್ತಾ, ಈ ರಂಗನನ್ನು ದೂರ ಮಾಡುತ್ತಾ ಸಾಗುತ್ತಿದೆ ಇಂದಿನ ಈ ಜಗತ್ತು‌.

*ದೇವರನ್ನೇ ದೂರ ಮಾಡಿದ್ದರ ಮಹಾ ಫಲ......*

ದೇವರನ್ನು ದೂರ ಮಡಿದ್ದರ ಫಲ ಇಂದು ಉಣ್ಣುತ್ತಾ ಇದ್ದೇವೆ. ಗೆಳೆಯರನ್ನು ಸಂಪಾದಿಸಿಕೊಳ್ಳುವದು ಎಷ್ಟು ಸುಲಭವೋ ಅದಕ್ಕೂ ಅತ್ಯಂತ ಸರಳವಾಗಿ ಗೆಳೆಯರನ್ನು ದೂರಮಾಡುವದೂ ಕರಗತವಾಗಿ ಬಿಟ್ಟಿದೆ ಇಂದಿನ ಈ ಜಗಕ್ಜೆ. ಎಷ್ಟೇ ಉಪಕಾರ ಮಾಡಿರಲು "ನನಗೆ ಅನುಕೂಲನಾಗಿ ಇರುವದಾದರೆ, ನಾನು ಹೇಳಿದ ಹಾಗೆ ಬಾಲ ಅಳ್ಳಾಡಸ್ತಾ ಇರೋದರೆ ಇರು, ಇಲ್ಲವಾದರೆ ನಿನ್ನ ಮಾರಿನೂ ನೋಡಲ್ಲ" ಅನ್ನುವಷ್ಟು ಕ್ರೂರರು ಆಗಿರುವದೇ ಅವಿಜ್ಙಾತ ಸಖನಾದ ದೇವರನ್ನು ದೂರ ಮಾಡಿದ್ದರ ಫಲ ಎಂದರೆ ತಪ್ಪಾಗದು. 

*ರಂಗಯ್ಯನ ದೂರ ಮಾಡುವದು ಬೇಡವೇ ಬೇಡ...*

ಅಂತರಂಗದ ರಂಗನನ್ನು ದೂರ ಮಾಡದೇ ಅವನನ್ನೆ ಗೆಳೆಯನನ್ನಾಗಿ ಪ್ರೀತಿಸಿ, ನಿತ್ಯ ಮನೆಗೆ ಕರೆದು, ಅರ್ಘ್ಯ ಪಾದ್ಯ ಅಭಿಷೇಕ ನೈವೇದ್ಯಗಳನ್ನು ಸಮರ್ಪಿಸಿದೆವು ಎಂದಾದರೆ ಜಗತ್ತೇ ನಮ್ಮ ಗೆಳಯನಾಗಿ ಬೆನ್ನಹಿಂದೆ ಓಡಿಬರತ್ತೆ. ಅಂತೆಯೇ ದಾಸರು ನುಡಿದರು *ದೂರ ಮಾಡುವರೇನೇ ರಂಗಯ್ಯನ* ಎಂದು.

*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*